Archive

Archive for ಡಿಸೆಂಬರ್, 2011

ಬೆಳಕಿನ ವೇಗವ ಮೀರಲು ಹೊರಟ ಪೌಲಿಯ ದೆವ್ವ!

ಡಿಸೆಂಬರ್ 1, 2011 3 comments

ವಿಜ್ಞಾನ ಸಂತತವಾಗಿ ಬದಲಾಗುತ್ತಲೇ ಇರುತ್ತದೆ. ಏಕೆಂದರೆ ಇದು ಜ್ಞಾನ ಪ್ರವಾಹ. ಇಂದಿನ ಪರಿಕಲ್ಪನೆ ನಾಳೆಯ ದಿನ ತಪ್ಪು ಎಂದು ಸಾಬೀತಾಗಬಹುದು ಅಥವಾ ಅದಕ್ಕೆ ಇನ್ನಷ್ಟು ಪರಿಷ್ಕರಣೆಯ ಅವಶ್ಯಕತೆ ಬರಬಹುದು. ವಿಜ್ಞಾನ ಅದನ್ನು ಒಪ್ಪುತ್ತದೆ. ವಾಸ್ತವವಾಗಿ ಸವಾಲುಗಳು ಬಂದಾಗಲೆಲ್ಲ ವಿಜ್ಞಾನದ ಪ್ರವರ್ಧನೆಗೆ ಇನ್ನಷ್ಟು ಚಾಲನೆ ಬರುತ್ತದೆ. ಅಂಥದೊಂದು ಸವಾಲು ಬಂದಿದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. ೨೦೧೧, ಸಪ್ಟೆಂಬರ್ ೧೯ರಂದು ಸೆರ್ನ್ ಸಂಶೋಧನಾಲಯದ ವಿಜ್ಞಾನಿಗಳು ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿವೆ ಎಂದು ಘೋಷಿಸಿ ಅಚ್ಚರಿಯನ್ನು ತಂದರು. ಇದು ಸಾಧ್ಯವೇ? ಈ ನ್ಯೂಟ್ರಿನೋಗಳು ಅಂದರೆ ಏನು? ಅವುಗಳ ವೈಚಿತ್ರ್ಯ ಏನು? ಸೆರ್ನ್ ಪ್ರಯೋಗ ಏನು? ಪ್ರಯೋಗ ಫಲಿತಾಂಶ ಸರಿ ಎಂದಾದರೆ ಅದು ತರಬಹುದಾದ ಪರಿಣಾಮವೇನು? .. ಹೀಗೆ ಒಂದು ರೋಚಕ ಸುದ್ದಿಯ ಬೆಂಬತ್ತಿದಾಗ ರೂಪುಗೊಂಡಿತೊಂದು ಬರಹ. ಅದರ ಸಂಕ್ಷಿಪ್ತ ರೂಪ ಸುಧಾ ಪತ್ರಿಕೆಯಲ್ಲಿ  (೨೪ ನವೆಂಬರ್ ೨೦೧೧), ನಂತರ ವಿಸ್ಟ್ರುತ ವಾಗಿ ಕೆಂಡ ಸಂಪಿಗೆಯಲ್ಲಿ  (http://www.kendasampige.com/article.php?id=4918) ಬೆಳಕು ಕಂಡಿತು. ದಾಖಲೆಗಾಗಿ ಇಲ್ಲಿದೆ ನನ್ನ ಮನೆಯಲ್ಲಿ.  ನೀವು ಓದಿ ಪ್ರತಿಕ್ರಿಯಿಸಿ.  ಮತ್ತಷ್ಟು ಓದು…

Categories: ಅವಿಭಾಗೀಕೃತ