Archive

Archive for ಜುಲೈ, 2008

ಬರುತ್ತಿದೆ ಬಾನನಾಟಕ ಸೂರ್ಯಗ್ರಹಣ ನೋಡಬನ್ನಿ

ಜುಲೈ 29, 2008 1 comment

ಸೂರ್ಯಗ್ರಹಣ ಆಗುವುದು ಹೀಗೆ

ಮುಂದಿನ ಶುಕ್ರವಾರ ( 1.8.2008 ) ಸಂಜೆ ನಾಲ್ಕರಿಂದ ಐದು ಗಂಟೆಯ ನಡುವೆ ಒಂದು ಸುಂದರ ಬಾನನಾಟಕ ನಿಮಗಾಗಿಯೋ ಎನ್ನುವಂತೆ ನಿಸರ್ಗ ಪ್ರದರ್ಶಿಸಲಿದೆ. ಮೋಡ ಮತ್ತು “ಮುಂಗಾರು ಮಳೆ”ಯ ಕಿರಿಕಿರಿ ಇಲ್ಲದೇ ಹೋದರೆ ನೀವು ಅದನ್ನು ಎಚ್ಚರಿಕೆಯಿಂದ ನೋಡಿ ಆನಂದಿಸಬಹುದು. ಅಂದು ಸಂಜೆ ಸೂರ್ಯನ ಸ್ವಲ್ಪಾಂಶ ಮರೆಯಾಗುವ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.
ನಿಮಗೆ ಗೊತ್ತು, ಬೆಳಕು ಪಾರದರ್ಶಕ ಗಾಜಿನ ಮೂಲಕ ಹಾದು ಹೋದರೆ ನೆರಳು ಉಂಟಾಗದು. ಆದರೆ ಅಪಾರದರ್ಶಕ ವಸ್ತುವಿನ ಮೇಲೆ ಪಾತವಾದಾರೆ?  ವಸ್ತು ಬೆಳಕನ್ನು ತಡೆಯುತ್ತದೆ – ಇನ್ನೊಂದು ಬದಿಯಲ್ಲಿ ನೆರಳು ಉಂಟಾಗುತ್ತದೆ. ಸೂರ್ಯನ ಬಿಸಿಲಿನಲ್ಲಿ ಗಿಡ ಮರಗಳ ನೆರಳು ಉಂಟಾಗುವುದು ಹೀಗೆಯೇ. ಇವು ಭೂಮಿಯಲ್ಲಿ ಬೆಳಕಿನ ನೆರಳಿನಾಟ. ಇಂಥದೇ ನೆರಳಿನಾಟ ಬಾನಾಂಗಣದಲ್ಲಿ ಸಂಭವಿಸಿದಾಗ ಚಂದ್ರ ಗ್ರಹಣ ಅಥವಾ ಸೂರ್ಯಗ್ರಹಣ ಘಟಿಸುತ್ತದೆ.

Read more…

Advertisements

ಆಧುನಿಕ ಖಗೋಳವಿಜ್ಞಾನದ ಗೆಲಿಲಿಯೋ – ಫ್ರೆಡ್ ಹಾಯ್ಲ್

ಜುಲೈ 28, 2008 1 comment
ಫ್ರೆಡ್ ಹಾಯ್ಲ್

ಫ್ರೆಡ್ ಹಾಯ್ಲ್

ಸದಾ ತೀವ್ರ ಬೌಧ್ಧಿಕ ವಾದ ವಿವಾದಗಳಲ್ಲಿ ನಿರತರಾಗಿರುತ್ತ, ಉತ್ಸಾಹದ ಬುಗ್ಗೆಯಾಗಿದ್ದ ಸುಪ್ರಸಿದ್ಧ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್ ಅಗೋಸ್ತ್ 20, 2001 ರ೦ದು ನಿಧನರಾದಾಗ ಬ್ರಿಟಿಷ್ ಬ್ರಾಡ್ ಕಾಸ್ಟಿ೦ಗ್ ಕ೦ಪೆನಿ (BBC) ಬಿತ್ತರಿಸಿತು : ” ವಿಶ್ವದ ಉಗಮವನ್ನು ವಿವರಿಸುವ ಸಿದ್ಧಾ೦ತಕ್ಕೆ ” ಬಿಗ್ ಬ್ಯಾ೦ಗ್ ” (Big Bang) ಎ೦ಬ ಸು೦ದರ ಹೆಸರನ್ನು ಟ೦ಕಿಸಿದ ಶ್ರೇಷ್ಟ ಬ್ರಿಟಿಷ್ ಖಗೋಳ ವಿಜ್ಞಾನಿ ಹಾಯ್ಲ್ ನಿಧನರಾದರು. ಅವರಿಗೆ 86 ವಷ೯ ವಯಸ್ಸಾಗಿತ್ತು. ಯಾವ ಸಿದ್ಧಾ೦ತಕ್ಕೆ ಬಿಗ್ ಬ್ಯಾ೦ಗ್ ಎ೦ಬ ಹೆಸರಿತ್ತು ಅದರ ಅಭೂತಪೂರ್ವ ಜನಪ್ರಿಯತೆಗೆ ಕಾರಣರಾದರೊ, ಅದೇ ಸಿದ್ಧಾ೦ತವನ್ನು ತಮ್ಮ ಜೀವನದುದ್ದಕ್ಕೂ ಅವರು ಟೀಕಿಸಿದರು, ಪ್ರಶ್ನಿಸಿದರು.”

ಹಾಯ್ಲ್ ಅವರ ಆಪ್ತ ಸ್ನೇಹಿತ ಮತ್ತು ಹಲವು ಸ೦ಶೋಧನೆಗಳಲ್ಲಿ ಸಹಭಾಗಿಯಾಗಿಯಾಗಿದ್ದ , ಇ೦ಗ್ಲ೦ಡಿನ ವೇಲ್ಸ್ ಕಾಲೇಜಿನಲ್ಲಿ ಗಣಿತ ವಿಭಾಗ ಮುಖ್ಯಸ್ಥರಾಗಿರುವ ಚ೦ದ್ರಾ ವಿಕ್ರಮ ಸಿ೦ಘೆ ಹೇಳುವಂತೆ “ಈ ವಿಶ್ವವನ್ನು ನಾವು ನೋಡುವ ದೃಷ್ಟಿಯನ್ನು ಕಳೆದ ನೂರು ವಷ೯ಗಳಲ್ಲಿ ಯಾವ ವಿಜ್ಞಾನಿಯೂ ಹಾಯ್ಲ್ ಅವರ೦ತೆ ಬದಲಾಯಿಸಿದರೆ೦ದು ನನಗನ್ನಿಸುವುದಿಲ್ಲ. ”

Read more…

ಕೃಷ್ಣ ವಿವರದೊಳಕ್ಕೆ ಮಾಯವಾದ ಖಭೌತ ವಿಜ್ಞಾನಿ ವ್ಹೀಲರ್

ಜುಲೈ 23, 2008 1 comment
John Wheeler

John Wheeler

ಜಾನ್‌ಅರ್ಚಿಬಾಲ್ಡ್ ವ್ಹೀಲರ್, ತೊಂಬತ್ತಾರರ ವಯೋವೃದ್ಧ ಭೌತ ವಿಜ್ಞಾನಿ, ಇತ್ತೀಚೆಗೆ (ಎಪ್ರಿಲ್ 13, 2008 ) ಈ ಭೌತ ಪ್ರಪಂಚಕ್ಕೆ ವಿದಾಯ ಹೇಳಿ ನಡೆದಿದ್ದಾರೆ ಅನೂಹ್ಯ ಲೋಕಕ್ಕೆ. ಆಲ್ಬರ್ಟ್‌ಐನ್‌ಸ್ಟೈನ್ (1879-1955), ನೀಲ್ಸ್‌ಬೋರ್(1885-1962), ವರ್ನೆರ್‌ಹೈಸೆನ್‌ಬರ್ಗ್ (1901-1976), ಇರ್ವಿನ್‌ಶ್ರೇಡಿಂಗರ್(1887-1961) ಮೊದಲಾದ  ಪ್ರಗಲ್ಭ ಭೌತವಿಜ್ಞಾನಿಗಳ ನಿಕಟವರ್ತಿಯಾಗಿ, ಆಧುನಿಕ ಭೌತ ವಿಜ್ಞಾನದ ಪ್ರವರ್ಧನೆಯಲ್ಲಿ ಸಕ್ರಿಯವಾಗಿ ಭಾಗಿಯಾದ ವ್ಹೀಲರ್, ಮೂರು ದಶಕಗಳ ಕಾಲ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ, ನಂತರ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸೈಧ್ಧಾಂತಿಕ ಭೌತವಿಜ್ಞಾನಿಯಾಗಿ, ಪ್ರಾಧ್ಯಾಪಕರಾಗಿ ಜ್ಞಾನ ಸೀಮೆಯ ಮೇರೆಯನ್ನು ವಿಸ್ತರಿಸಿದ ಧೀಮಂತರು. ರಿಚರ್ಡ್ ಫೈನ್‌ಮಾನ್ (1918-1988), ಕಿಪ್‌ಥಾರ್ನ್ (1940-),  ಜಾನ್ ಟೋಲ್ (1924 -), ಹ್ಯೂಗ್ ಎವೆರೆಟ್(1930-1982)  ಮೊದಲಾದ ಭೌತಶಾಸ್ತ್ರಜ್ಞರು ಇವರ ಶಿಷ್ಯಂದಿರು; ಗರಡಿಯಲ್ಲಿ ಪಳಗಿದವರು. 

ಆದರ್ಶ ಪ್ರಾಧ್ಯಾಪಕರಾಗಿದ್ದ ವ್ಹಿಲರ್ ಹೇಳುವುದಿತ್ತು”ಬೋಧಿಸುವುದರಿಂದ ನಾವು ಕಲಿಯುತ್ತೇವೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿದ್ದಾರೆ ಪ್ರೊಫೆಸರುಗಳಿಗೆ ಕಲಿಸುವುದಕ್ಕೆ !

Read more…

ನನ್ನಜ್ಜನ ನೆನಪುಗಳು

ಜುಲೈ 18, 2008 2 comments

ಇಪ್ಪತ್ತನೇ ಶತಮಾನದ ಮೂವತ್ತು – ಅರುವತ್ತರ ದಶಕ. ಅ೦ದು ಪುತ್ತೂರಿನಲ್ಲಿ ಸಾಹಿತ್ಯ, ಸಾ೦ಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಗಳಾಗಿ ಪುತ್ತೂರಿನ ಕ೦ಪು ಹತ್ತೂರುಗಳಲ್ಲೂ ಪಸರಿಸಲು ಕಾರಣರಾದ ಮಹನೀಯರಲ್ಲಿ ನಮ್ಮ ಅಜ್ಜ ಎ.ಪಿ.ಸುಬ್ಬಯ್ಯ (ಅಡಮನೆ ಪಳತಡ್ಕ ಸುಬ್ಬಯ್ಯ) ಕೂಡ ಒಬ್ಬರು.

ಆ ದಿನಗಳಲ್ಲಿ ಪುತ್ತೂರಿನಲ್ಲಿ ಹಲವು ಉದ್ದಾಮ ವ್ಯಕ್ತಿಗಳಿದ್ದರು. ಶ್ರೀ. ಶಿವರಾಮ ಕಾರ೦ತ (೧೯೦೨ – ೧೯೯೭) – ಕನ್ನಡ ಸಾಹಿತ್ಯಕ್ಕೆ ನೂತನ ಅಯಾಮ ಕಲ್ಪಿಸಿದ ಸಾಹಿತಿ ದಿಗ್ಗಜ ; ಶ್ರೀ. ಮೊಳಹಳ್ಳಿ ಶಿವರಾಯರು ( ೧೮೮೧ – ೧೯೬೭) – ಸಹಕಾರೀ ಸ೦ಘಗಳ ಸ್ಥಾಪನೆಯ ಮೂಲಕ ಸಾಮಾಜಿಕ ಅಭ್ಯುದಯದ ಹರಿಕಾರ ; ಕಡವ ಶ೦ಭು ಶರ್ಮ (೧೮೯೫ – ೧೯೬೪) – ಸ೦ಸ್ಕೃತ ಮತ್ತು ಕನ್ನಡಗಳೆರಡರಲ್ಲೂ ಅದ್ವೀತೀಯ ವಿದ್ವತ್ತಿದ್ದ ಪ೦ಡಿತೋತ್ತಮ; ಬೆಳ್ಳೆ ರಾಮಚ೦ದ್ರ ರಾವ್ (೧೯೦೦- ೧೯೮೩) – “ಚಿರವಿರಹಿ” ಕಾದ೦ಬರಿಯ ಕರ್ತೃ ಮತ್ತು ಪುತ್ತೂರಿನ ಆಗ್ರಮಾನ್ಯ ವಕೀಲರು. ಈ ಎಲ್ಲ ಪ್ರಾತ:ಸ್ಮರಣೀಯರ ಸಮಕಾಲೀನರು ಮತ್ತು ಸ್ನೇಹಿತರಾಗಿದ್ದವರು ನಮ್ಮ ಅಜ್ಜ ಎ.ಪಿ.ಸುಬ್ಬಯ್ಯ. ಅಜ್ಜ ಅಜಾತಶತ್ರು – ಮೃದು ವಚನಿ ; ಮೃದು ಹೃದಯಿ.

Read more…

ಇಹದ ಬಾಳಿನ ಪಯಣ ಮುಗಿಸಿ ತೆರೆಳಿದ ಜಿಟಿಎನ್

ಜುಲೈ 3, 2008 1 comment
G.T. Narayana Rao

G.T. Narayana Rao

ನೀವಿನ್ನು ಮೈಸೂರಿನ ೨೫೪೩೭೫೯ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಎಂದಿನ ಸುಪರಿಚಿತ ಗಂಭೀರ ಧ್ವನಿ “ನಮಸ್ಕಾರ, ಜಿಟಿ ನಾರಾಯಣ ರಾವ್ ಎಂದಿಗೂ ಕೇಳದು. ಸರಸ್ವತೀಪುರಒನಲ್ಲಿರುವ ಅತ್ರಿ ಮನೆಯ ಗೇಟನ್ನು ಮೆತ್ತಗೆ ತೆರೆದರೂ ಸಾಕು, ಮನೆಯೊಳಗಿಂದ ತಕ್ಷಣ ಹೊರಬಂದು “ನಮಸ್ಕಾರ, ಸುಖಪ್ರಯಾಣವಾಯಿತೇ” ಎಂದು ಕೇಳುತ್ತಿದ್ದ, ಜಿ.ಟಿ.ನಾರಾಯಣ ರಾವ್ – ಹೃಸ್ವವಾಗಿ ಜಿಟಿಎನ್ – ಇನ್ನೆಂದೂ ಬಾರರು- ೨೭-೬-೨೦೦೮, ಶುಕ್ರವಾರ ಬೆಳಗ್ಗೆ ಮೆದುಳಿನ ಸ್ರಾವಕ್ಕೆ ತುತ್ತಾಗಿ, ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ. ಗುರುವಾರ ಸಂಜೆ ಎಂದಿನಂತೆ ಅವರು ನೆರೆಯ ಸ್ನೇಹಿತರ ಮನೆಗೆ ಹೋದದ್ದು, ಅಲ್ಲಿ ಕಂಪ್ಯೂಟರಿನಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನ ಓದುತ್ತಿದ್ದಂತೆ “ಎಲ್ಲ ಮಂಜಾಗುತ್ತಿದೆ” ಎನ್ನುತ್ತ ಕುಸಿದರಂತೆ. ನಿದ್ದೆಗೆ ಜಾರಿದರಂತೆ. ಆ ನಿದ್ದೆ ಮಾತ್ರ ಸುದೀರ್ಘ ನಿದ್ದೆಯಾಗಿ ಹೋಯಿತು. ಎಚ್ಹೆಸ್ಕೆ ಬರೆದಿದ್ದಾರೆ ” ನಾಟಕ ಕಂಪೆನಿಯಲ್ಲಿ ಹಿರೋ ಮಲಗಿದ್ದಾನೆ. ಉಳಿದ ರಂಗನಟರು ಗೊಳೋ ಎನ್ನುತ್ತ ರೋದಿಸುತ್ತಿದ್ದಾರೆ. ಆ ರೋದನಕ್ಕೆ ಹಿರೋ ಮೇಲೇಳುತ್ತಾನೆ. ಮತ್ತೆ ಹಾಡುತ್ತಾನೆ. ಎಲ್ಲೆಡೆ ಸಂತಸ. ಇದು ನಾಟಕ. ಆದರೆ ಇಲ್ಲಿ. ಜಿಟಿಎನ್ ಮಲಗಿದ್ದಾರೆ. ಅವರ ಪಾತ್ರವನ್ನು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ!. ಭೂಮಿಯ ಅಥವಾ ವಿಶ್ವದ ಯಾವ ಶಕ್ತಿಯೂ ಅವರನ್ನು ಮತ್ತೆ ಪುನ: ಇಹಕ್ಕೆ ತರದು” ಇದು ನಿಜ, ಎಂದನ್ನಿಸಿದ್ದು ಪುತ್ತೂರಿನಿಂದ ನಾನು ಮೈಸೂರಿಗೆ ಧಾವಿಸಿ ಅವರ ಮನೆ ತಲುಪಿದಾಗ. ಅವರು ಮಲಗಿದ್ದರು. ಮುಖದಲ್ಲಿ ಕಿರು ನಗೆ ಇತ್ತು. ಮೈ ತುಂಬ ಹೂವು ಹರಡಿತ್ತು. ಪಕ್ಕದ ಅವರ ಕೋಣೆಯಲ್ಲಿ ಪುಸ್ತಕಗಳೆಲ್ಲ ಎಂದಿನಮ್ತೆ ಹರಡಿ ಬಿದ್ದಿದ್ದುವು. ಆದರೆ ಅವರು ಮಾತ್ರ ಅಲ್ಲಿರಲಿಲ್ಲ. ಎಲ್ಲಿ ಹೋದರು?

Read more…

%d bloggers like this: