Archive

Archive for ಜುಲೈ, 2009

ಗ್ರಹಣ – ಬಡಿಯದಿರಲಿ ವೈಚಾರಿಕ ಪ್ರಜ್ಞೆಗೆ

ಜುಲೈ 21, 2009 12 comments

ಪೂರ್ಣ ಸೂರ್ಯಗ್ರಹಣ ಇರಾನಿನಲ್ಲಿ ನಡೆದಾಗ ಮತ್ತೆ ಸೂರ್ಯಗ್ರಹಣ ಬಂದಿದೆ. ಮತ್ತದೇ ಹಳೇ ರಾಗ – ಗ್ರಹಣ ವೀಕ್ಷಣೆ ಸರ್ವಥಾ ಸಲ್ಲ. ಆಹಾರ ನಿಶಿದ್ಧ – ಹಳೆ ಪೇಪರ್.. ಹಳೆ ಚಿಂದಿ..ಯ ಹಾಗೆ.

ಬೆಂಗಳೂರಲ್ಲಿ ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಜಟಾಪಟಿ ಶುರುವಾಗಿದೆಯಂತೆ.

ದೈವಜ್ಞರೊಬ್ಬರು ಅಪ್ಪಣೆ ಕೊಡಿಸಿದ್ದಾರೆ

ಮಹಾಭಾರತ ಯುದ್ಧ, ದ್ವಿತೀಯ ಜಾಗತಿಕ ಯುದ್ಧ, ಇಂದಿರಾಗಾಂಧಿಯ ಹತ್ಯೆ ನಡೆದಾಗ ಸೂರ್ಯಗ್ರಹಣ ಸಂಭವಿಸಿತ್ತು. ಗ್ರಹಣ ಕಾಲದಲ್ಲಿ ವ್ಯಕ್ತಿ ಹೆಚ್ಚು ವ್ಯಗ್ರನಾಗುತ್ತಾನೆ. ಅವನ ಮಾನಸಿಕ ಸ್ಥಿತಿಯಲ್ಲಿ ಏರು ಪೇರಾಗುತ್ತದೆ. ಹೆಚ್ಚು ಸೋಲುವ ಮನೋಭಾವ ಗೋಚರಿಸುತ್ತೆ. ಇದಕ್ಕೆಲ್ಲ ಪರಿಹಾರವೆಂದರೆ ಜನರು ಪೂಜೆ, ಯಜ್ಞಗಳಲ್ಲಿ ತೊಡಗುವುದು ಅಥವಾ ದೇವಸ್ಥಾನಕ್ಕೆ ತೆರಳಿ ಪರಿಹಾರ ಕಂಡುಕೊಳ್ಳುವುದು.

ಮತ್ತಷ್ಟು ಓದು…

ಭೂರಮೆಯ ತಾಜಾ ಸುಂದರಿ ವಾಲ್ಪಾರೈ

ಜುಲೈ 11, 2009 6 comments

ಗಣೇಶನ್ನಿತ್ಯ ಬದುಕಿನ ಏಕತಾನತೆಯಿಂದ ಒಂದಷ್ಟು ಬಿಡುಗಡೆಗೆ ಮನ ಹಾರೈಸುತ್ತಿತ್ತು. ಊಟಿ, ಮುನ್ನಾರ್, ಕೊಡೈಕನಾಲ್ ಪ್ರವಾಸೀ ತಾಣಗಳಾಗಿ ಸುಪ್ರಸಿದ್ಧ. ಇವುಗಳಿಗೆ  ಸ್ಟಾರ್ ವ್ಯಾಲ್ಯೂ ಬಂದಿದೆ – ಸ್ಟಾರ್ ಹೋಟೇಲುಗಳೊಂದಿಗೆ. ಅಲ್ಲಿಗೆ ಹೋದರೆ ಹೇಗೆ? ಅಲ್ಲಾದರೋ ಮೇ ತಿಂಗಳಿನಲ್ಲಿ ಜನಜಂಗುಳಿ ಗಿಜಿಗುಟ್ಟುತ್ತಿರಬಹುದು. ವಾಲ್ಪಾರೈ ಅಥವಾ  ಷೊಲೆಯಾರ್ ?  ಪ್ರವಾಸಿಗಳಿಗೆ ಹೆಚ್ಚು ತೆರೆದುಕೊಳ್ಳದ ಮತ್ತು ಹಾಗಾಗಿ ತಮ್ಮ ತಾಜತನ ಉಳಿಸಿಕೊಂಡ ರಮ್ಯ ತಾಣಗಳಿವು. ಊಟಿ ಮತ್ತು ಮುನ್ನಾರಿಗೆ  ಸಮೀಪವಿರುವ ಈ ತಾಣಗಳಿಗೆ ಕುಟುಂಬ ಸಮೇತ ಭೇಟಿ ನೀಡುವ ಅವಕಾಶ ದೊರೆತದ್ದು ಆತ್ಮೀಯರೂ ಬಂಧುಗಳೂ ಆದ ಗಣೇಶನ್ ಅವರಿಂದಾಗಿ.

ಗಣೇಶನ್ ವಾಲ್ಪಾರೈನಿಂದ ಇಪ್ಪತ್ತು ಕಿಮೀ ದೂರದ  ಮನಂಬೋಲಿ  ಜಲವಿದ್ಯುದ್ ಗಾರದ   ಮುಖ್ಯಸ್ಥರು. ಅದೊಂದು ಕಿರು ವಿದ್ಯುತ್ ಘಟಕ. ಇದು ಕೊಯಂಬುತ್ತೂರಿನಿಂದ ಸುಮಾರು ನೂರಿಪ್ಪತ್ತು  ಕಿಮೀ ದೂರದಲ್ಲಿದೆ.   ಅವರು ಸಿಕ್ಕಾಗಲೆಲ್ಲ  ಹೇಳುತ್ತಿದ್ದರು, “ನೀವೊಮ್ಮೆ ಬರಬೇಕು ವಾಲ್ಪರೈನ ದಟ್ಟ  ಕಾನನದ ನಡುವೆ ಇರುವ ನಮ್ಮ ಮನೆಗೆ.” ಅವರ ಪ್ರೀತಿಯ ಕರೆಗೆ ಅಲ್ಲಿಗೆ ಹೋದ ಮೇಲೆ ಉದ್ಗರಿಸಿದ್ದು ಆಹಾ, ಸ್ವರ್ಗ ಬೇರೆ ಎಲ್ಲೂ ಇಲ್ಲ, ಇಲ್ಲಿದೆ’!

ಮತ್ತಷ್ಟು ಓದು…

Categories: ಪ್ರವಾಸ

ನಾರಾಯಣ ಮಾವ ಮತ್ತು ಮರಿಕೆ

ಜುಲೈ 7, 2009 2 comments
ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ವಿಜ್ಞಾನ ವಾಙ್ಮಯಕ್ಕೆ ಇವರು ಜಿಟಿಎನ್ – ಜಿಟಿನಾರಾಯಣ ರಾವ್.  ನಮಗೆ ಮರಿಕೆಯ ಮಂದಿಗೆ? ಮರಿಕೆಯ ಹಿರಿಯರಿಗೆ ನಾರಾಯಣ, ಮಕ್ಕಳಿಗೆ ನಾರಾಯಣ ಮಾವ, ಮರಿಮಕ್ಕಳಿಗೆ ನಾರಾಯಣಜ್ಜ.

ಇವರು ಮರಿಕೆಗೆ ಬರುತ್ತಾರೆಂದರೆ ನಮಗೆಲ್ಲ ಸಂಭ್ರಮ, ಉತ್ಸಾಹ, ಒಂದಷ್ಟು ದಿಗಿಲು – ಪುಂಖಾನುಪುಂಖವಾಗಿ  ಅವರೆಸೆಯುತ್ತಿದ್ದ ವಿಜ್ಞಾನ ಸಂಗೀತಾದಿ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ.

ಮರಿಕೆ ಇರುವುದು ಪುತ್ತೂರು ಪೇಟೆಯಿಂದ ಐದು ಕಿಮೀ ದೂರದಲ್ಲಿ, ಹಸಿರು ಹೊದ್ದು ಮಲಗಿರುವ ಬಲ್ಲೇರಿ ಕಾಡಿನ ಸನಿಹದಲ್ಲಿ.  ಜಿಟಿಎನ್ ಹುಟ್ಟಿದ್ದು ಮರಿಕೆಯಲ್ಲಿ (೩೦.೧.೧೯೨೬). ನನ್ನ ತಂದೆಯ ತಂದೆ – ಅಂದರೆ ಅಜ್ಜ ಸುಬ್ಬಯ್ಯರ ತಂಗಿ ವೆಂಕಟಲಕ್ಶ್ಮಿ  ಜಿಟಿಯವರ ತಾಯಿ. ಸಾಹಿತ್ಯದಲ್ಲಿ ಅಗಾಧ ಆಸಕ್ತಿ ಇದ್ದ ಅಜ್ಜ ಜಿಟಿಎನ್ ಅವರ ಮೇಲೆ ಗಾಢ ಪ್ರಭಾವ ಬೀರಿದರೆನ್ನುವುದನ್ನು ಆಗಾಗ ಹೇಳುತ್ತಿದ್ದರು ಮತ್ತು ಅದನ್ನು ತಮ್ಮ ಎನ್ ಸಿಸಿ ದಿನಗಳು, ಮುಗಿಯದ ಪಯಣ ಕೃತಿಗಳಲ್ಲಿ ದಾಖಲಿಸಿದ್ದಾರೆ.

ಮತ್ತಷ್ಟು ಓದು…