ಮುಖ ಪುಟ > 1, ವ್ಯಕ್ತಿ - ಜೀವನ > ರಾಮನ್ ಪರಿಣಾಮ ಕಂಡ ಕೆ ಎಸ್ ಕೃಷ್ಣನ್

ರಾಮನ್ ಪರಿಣಾಮ ಕಂಡ ಕೆ ಎಸ್ ಕೃಷ್ಣನ್

ಫೆಬ್ರವರಿ ೨೮ ಮತ್ತೆ ಬಂದಿದೆ – ವಿಜ್ಞಾನ ದಿನವೂ ಕೂಡ.ಈ ಬಾರಿ ರಾಮನ್ ಪರಿಣಾಮದ ರಾಮನ್ ಬದಲಿಗೆ ಆ ಆವಿಷ್ಕಾರದಲ್ಲಿ ಬಲು ಮುಖ್ಯ ಪಾತ್ರ ವಹಿಸಿದ ಅನನ್ಯ ಭೌತ ವಿಜ್ಞಾನಿ ಕೆ ಎಸ್ ಕೃಷ್ಣನ್ ಬಗ್ಗೆ ಬರೆದ ಲೇಖನ ಕೆಂಡ ಸಂಪಿಗೆ kendasampige.com ಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ನೀಡಿದ್ದೇನೆ. ಒಂದಿಷ್ಟು ಭೌತ ವಿಜ್ಞಾನದ ಬಗ್ಗೆ, ರೂಪಿಸಿದ ಭೌತ ವಿಜ್ಞಾನಿಯ ಬಗ್ಗೆ ಮಾತುಕತೆ!

ವಿಜ್ಞಾನದಲ್ಲಿ ಸಂಶೋಧನೆಗಳು ಬಹುಮಟ್ಟಿಗೆ ಏಕ ವ್ಯಕ್ತಿಯ ಸಾಹಸವಲ್ಲ. ಸಂಶೋಧನೆ ಹಲವು ಬಾರಿ ಸಾಂಘಿಕ ಪ್ರಯತ್ನ. ಇದಕ್ಕೊಂದು ಉದಾಹರಣೆ ರಾಮನ್ ಪರಿಣಾಮ.  ೧೯೨೮, ಫೆಬ್ರವರಿ ೨೮ರ ಸಂಜೆ. ಕಲ್ಕತ್ತಾದ ಬೌಬಝಾರ್ ಓಣಿಯಲ್ಲಿದ್ದ “ದಿಇಂಡಿಯನ್ ಎಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್” ಸಂಸ್ಥೆಯ ಕಛೇರಿಯಲ್ಲಿ  ಕಲ್ಕತ್ತಾ “ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ  ಸಿವಿರಾಮನ್ ಅಥವಾ ಚಂದ್ರಶೇಖರ ವೆಂಕಟರಾಮನ್ ತಾನು ಮತ್ತು ತನ್ನ ತನ್ನ ಸಹದ್ಯೋಗಿ ಕೆ.ಎಸ್.ಕೃಷ್ಣನ್ ಬೆಳಕಿಗೆ ಸಂಬಂಧಿಸಿದಂತೆ ನೂತನ ವಿದ್ಯಮಾನವೊಂದನ್ನು ಆವಿಷ್ಕರಿಸಿದ್ದೇವೆಂದು ಘೋಷಿಸುತ್ತ ಆ ಆವಿಷ್ಕಾರ ದ್ರವ ಪದಾರ್ಥದ ಅಣುಗಳ ರಚನಾ “ನ್ಯಾಸವನ್ನು ತಿಳಿಯಲು ಸಹಕಾರಿಯಾಗಲಿರುವ ಮಹತ್ವದ ಆವಿಷ್ಕಾರವಾಗಲಿದೆ ಎಂದರು.  ಅಂದು ರಾಮನ್ ಮತ್ತು ಕೃಷ್ಣನ್ ಜಂಟಿಯಾಗಿ ಆ”ಷ್ಕರಿಸಿದ “ದ್ಯಮಾನ ಮುಂದೆ “ರಾಮನ್ ಪರಿಣಾಮ” ಎಂಬ ಹೆಸರಿನಲ್ಲ್ಲಿ  ಸುಪ್ರಸಿದ್ಧವಾಯಿತು.

ರಾಮನ್ ಭೇಟಿ
ಕೆಎಸ್ ಕೃಷ್ಣನ್ ಅವರ  ಪೂರ್ಣ ಹೆಸರು ಕರಿಯಮಾಣಿಕ್ಯಂ ಶ್ರೀನಿವಾಸ ಕೃಷ್ಣನ್. ರಾಮನ್ ಅವರಿಗಿಂತ ಹತ್ತು ವರ್ಷ ಕಿರಿಯರು. ರಾಮನ್ ಜನಿಸಿದ್ದು ೧೮೮೮, ನವೆಂಬರ್ ೭ರಂದು ತಿರುಚಿನಾಪಳ್ಳಿಯಲ್ಲಿ. ಕೃಷ್ಣನ್ ಜನಿಸಿದ್ದು  ಕೊಡೈಕೆನಲ್ ಸಮೀಪದ ವಾಟ್ರಾಪ್ ಎಂಬ ಪುಟ್ಟ ಊರಿನಲ್ಲಿ, ಡಿಸೆಂಬರ್ ೪, ೧೮೯೮ರಂದು.   ರಾಮನ್ ಅವರದು ಶ್ರೀಮಂತ ಕುಟುಂಬ. ಆದರೆ ಕೃಷ್ಣನ್‌ಗೆ ಇಂಥ ಅದೃಷ್ಟ ಇರಲಿಲ್ಲ.  ಇವರ ತಂದೆ ಶ್ರೀನಿವಾಸ ಅಯ್ಯಂಗಾರ್ – ಶಾಲಾ ಉಪಾಧ್ಯಾಯರು. ತುಂಬು ಸಂಸಾರದ ತುಂಬ ಬಡತನವಿತ್ತು. ಆರ್ಥಿಕ ಸಂಕಷ್ಟದ ನಡುವೆಯೂ ಕೃಷ್ಣನ್ ಓದು ಮುಂದುವರೆತು.

ಗಣಿತ, ಭೌತಶಾಸ್ತ್ರ ಮತ್ತು ಸಾಹಿತ್ಯದಲ್ಲಿ  ಶಾಲಾ ದಿನಗಳಲ್ಲಿಯೇ ಪ್ರಖರ ಪ್ರತಿಭೆ ತೋರಿದವರು ಕೃಷ್ಣನ್. ತಂದೆ ಸಂಸ್ಕೃತದಲ್ಲಿ ಆಳ ವಿದ್ವತ್ತನ್ನು ಹೊಂದಿದವರು. ಹಾಗಾಗಿ ಬಾಲಕ ಕೃಷ್ಣನ್ ಅವರಲ್ಲೂ ಸಂಸ್ಕೃತದಲ್ಲಿ ಆಸಕ್ತಿ ಹುಟ್ಟಿತು. ಮಧುರೆಯ ಅಮೇರಿಕನ್ ಕಾಲೇಜು, ನಂತರ ಮದ್ರಾಸಿನ ಕ್ರಿಸ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಕ್ರಿಸ್ಚಿಯನ್ ಕಾಲೇಜಿನಲ್ಲಿ ರಸಾಯನ “ಜ್ಞಾನ ಪ್ರಾಧ್ಯಾಪಕರಾಗಿದ್ದ ಅಲೆಗ್ಸಾಂಡರ್ ಮೊಟ್ರಾಫ್ ತರುಣ ಕೃಷ್ಣನ್ ಅವರ ನಿಶಿತ ಪ್ರತಿಭೆಯನ್ನು ಗುರುತಿಸಿದರು. ಪದ” ವ್ಯಾಸಂಗ ಮುಗಿಯುತ್ತಲೇ (೧೯೧೮) ರಸಾಯನ ಶಾಸ್ತ್ರ ಪ್ರಯೋಗಾಲಯದಲ್ಲಿ ಪ್ರಯೋಗ ನಿರೂಪಕನಾಗಿ ಸೇರುವ ಅವಕಾಶ ಕೊಟ್ಟರು. ಕೃಷ್ಣನ್ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಬಂದ ಅವಕಾಶವನ್ನು ಒಪ್ಪಿಕೊಂಡರು.

ಕೇವಲ ಪ್ರಯೋಗಾಲಕ್ಕಷ್ಟೇ ಕೃಷ್ಣನ್ ತಮ್ಮನ್ನು ಸೀಮಿತಗೊಳಿಸಲಿಲ್ಲ. ಮಧ್ಯಾಹ್ನದ ಹೊತ್ತು, ಬಿಡುವಾದಾಗಲೆಲ್ಲ ಭೌತ ವಿಜ್ಞಾನದ ಬೇರೆ ಬೇರೆ ವಿಷಯಗಳ ಬಗ್ಗೆ ಸಂವಾದ – ನಡೆಸುತ್ತಿದ್ದರು. ಅವರ ಈ ಬಗೆಯ ಔಪಚಾರಿಕ ಸಭೆಗಳು ಕೆಲವೇ ದಿನಗಳಲ್ಲಿ ಅದೆಷ್ಟು ಹೆಸರಾತೆಂದರೆ ನೆರೆಯ ಪ್ರಸಿಡೆನ್ಸಿ ಮತ್ತು ಪಾಚಪ್ಪ ಕಾಲೇಜುಗಳಿಂದ ಆಸಕ್ತ ವಿದ್ಯಾರ್ಥಿಗಳು ಸೇರುತ್ತಿದ್ದರು. ತಾವು ಇಂಥ ಅನೌಪಚಾರಿಕ “ಕೃಷ್ಣನ್ ಸಂವಾದ” ಗಳಲ್ಲಿಯೇ ತರಗತಿಗಿಂತ ಅಧಿಕ ಭೌತ ವಿಜ್ಞಾನವನ್ನು ಕಲಿತೆವೆಂದು ಮುಂದೆ ಕೆಲವು ವಿದ್ಯಾರ್ಥಿಗಳು ನೆನಪಿಸಿಕೊಂಡದ್ದಿದೆ.

ಕಡಲ ಮೀನಿಗೆ ಬಾವಿಯ ಒಡಲು ಎಲ್ಲಿಗೆ ಸಾಕಾಗಬಹುದು! ಕೃಷ್ಣನ್ ಇನ್ನಷ್ಟು ಅವಕಾಶಕ್ಕಾಗಿ ಕಲ್ಕತ್ತದೆಡೆಗೆ ತೆರಳಿದರು – ಸಿವಿ ರಾಮನ್ ಭೇಟಿಗಾಗಿ (೧೯೨೦)

ಸ್ವಯಂ ಕೃಷ್ಣನ್ ತಮ್ಮ ಒಂದು ಲೇಖನದಲ್ಲಿ ಬರೆಯುತ್ತಾರೆ

“ವಿಜ್ಞಾನದ ಕಡೆಗೆ ನನ್ನ ಒಲವು ಮೂಡಿದ್ದು ನಾನು ನಾಲ್ಕನೇ ಫೊರ್ಮಿನಲ್ಲಿದ್ದಾಗ  (ಒಂಬತ್ತನೇ ತರಗತಿ). ಆ ನನ್ನ ಉಪಾಧ್ಯಾಯರು ವೃತ್ತಿಪರ ವಿಜ್ಞಾನಿಯಾಗಿರಲಿಲ್ಲ. ಆದರೆ ಅವರು ಸ್ಪಷ್ಟವಾಗಿ ಪಾಠ ಮಾಡುತ್ತ ವಿಜ್ಞಾನದ ರೋಚಕತೆಯನ್ನು ವಿವರಿಸುವಲ್ಲಿ ಮತ್ತು ಆಸಕ್ತಿಯನ್ನು ಮೂಡಿಸುವಲ್ಲಿ ಸಫಲರಾಗಿದ್ದರು.

ನಂತರದ ವರ್ಷದಲ್ಲಿ, “ಆರ್ಕಿ್ಮಿಡಿಸ್ ನಿಯಮ”ದ ಬಗ್ಗೆ ಒಂದು ಲೇಖನ ಬರೆದು ಕೊಡುವಂತೆ ತಿಳಿಸಿದಾಗ ನಾನು ಲೇಖನ ಬರೆದದ್ದಲ್ಲದೇ, ಅದರ ನಿಯಮವನ್ನು ಅನುಸರಿಸಿಕೊಂಡು ವಸ್ತುಗಳ ಸಾಂದ್ರತೆಯನ್ನು ಅಳೆಯುವ ಉಪಕರಣವನ್ನು ಕೂಡ ನಿರ್ಮಿಸಿದೆ. ಆದರೆ ಕೆಲವು ದಿನಗಳ ನಂತರ ನನಗೆ ತಿಳಿತು – ಅದೇ ಬಗೆಯ ಉಪಕರಣವನ್ನು ಬಹು ಹಿಂದೆಯೇ ನಿಕೋಲಸ್ ಎನ್ನುವಾತ ಉಪಜ್ಞಿಸಿದ್ದ. “ನಿಕೋಲಸ್ ಹೈಡ್ರೋಮೀಟರ್ ಎಂಬ ಹೆಸರಿನ ಉಪಕರಣ ಅದಾಗಿತ್ತು.

ಆದರೂ ಈ ಪ್ರಯತ್ನ ನನ್ನ ವಿಜ್ಞಾನ ಆಸಕ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡಿತು.ವಿಜ್ಞಾನದಲ್ಲಿ ಸಂಪೂರ್ಣವಾಗಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಆರಂಭಿಸಿದ್ದು ನನ್ನ ಕಾಲೇಜು ದಿನಗಳ ನಂತರ – ಆರೇಳು ವರ್ಷಗಳ ಬಳಿಕ. ಪ್ರೊ.ಸಿವಿ ರಾಮನ್ ಆಗ ಕಲ್ಕತ್ತ ವಿಶ್ವ ವಿದ್ಯಾಲಯದಲ್ಲಿ ಭೌತ ವಿಜ್ಞಾನ  ಪ್ರಾಧ್ಯಾಪಕರಾಗಿದ್ದರು. ನೇಚರ್, ಫಿಲಾಸಾಫಿಕಲ್ ಟ್ರಾನ್ಸಾಕ್ಷನ್ ಮತ್ತಿತರ ಸಂಶೋಧನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಸಂಶೋಧನ ಲೇಖನಗಳನ್ನು ಓದುತ್ತ ಹೋದಂತೆ ನಾನು ವೈಜ್ಞಾನಿಕ ಸಂಶೋಧನೆಯ ಕಡೆಗೆ ತಿರುಗಿದೆ. ಶ್ರೇಷ್ಠ ವಿಜ್ಞಾನಿಗಳ ಮತ್ತು ನಮ್ಮವರೇ ಆದ ರಾಮಾನುಜನ್, ರಾಮನ್ ಮೊದಲಾದವರ ಆ ಉತ್ಕೃಷ್ಟ ಸಂಶೋಧನ ಲೇಖನಗಳು ನನ್ನ ಕಣ್ಣು ತೆರೆಸಿದುವು. ವಿಜ್ಞಾನ, ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಂಶೋಧನಾ ಪ್ರಪಂಚದ ಕುರಿತಂತೆ ನನ್ನಲ್ಲಿ ಅವು ಗಾಢ ಆಸಕ್ತಿ ಮೂಡಿಸಿದುವು.

ಕಾಲೇಜಿನ ರಸಾಯನಶಾಸ್ತ್ರ ಪ್ರಯೋಗಾಲಯದ ಸಹಾಯಕ ಹುದ್ದೆಯನ್ನು ನಾನು ತ್ಯಜಿಸಿ ಭೌತ ವಿಜ್ಞಾನದಲ್ಲಿ ಸಂಶೋಧನೆಗೆಂದು ಕಲ್ಕತ್ತಕ್ಕೆ ಹೋದೆ ಮತ್ತು ರಾಮನ್ ಅವರನ್ನು ಭೆಟ್ಟಿಯಾದೆ. ಅವರು ನನ್ನನ್ನು ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲು ಒಪ್ಪಿದರೂ, ಕೂಡಲೇ ಸಂಶೋಧನೆಗೆ ತೊಡಗಲು ಹೇಳಲಿಲ್ಲ. ಎರಡು ವರ್ಷಗಳ ಕಾಲ ಸಂಶೋಧನೆಯ ಬೇರೆ ಬೇರೆ ಹಂತಗಳ ಕುರಿತಾಗಿ ತಿಳಿದುಕೊಳ್ಳುತ್ತ, ಭೌತ”ಜ್ಞಾನದ ಬಗ್ಗೆ ಇನ್ನಷ್ಟು ಒಳನೋಟ ದಕ್ಕಿದ ಮೇಲೆ ರಾಮನ್ ಅವರ ಸಂಶೋಧನಾ ತಂಡಕ್ಕೆ ಸೇರಲು ಸಾಧ್ಯವಾತು. ನನ್ನ ಅದೃಷ್ಟ – ಆ ಐದು ವರ್ಷಗಳು – ನನ್ನ ವಿಜ್ಞಾನ ಜೀವನದ ಪರಮ ಸಂಭ್ರಮದ ಋತುಗಳು”

ಕಲ್ಕತ್ತಾ ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರ ಅಧ್ಯಾಪಕರಾಗಿದ್ದ ರಾಮನ್ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವ”ಸಿ ಮರಳಿ ತವರಿಗೆ ರಾಮನ್ ಪ್ರಯಾಣಿಸುತ್ತಿದ್ದಾರೆ (೧೯೨೧, ಸಪ್ಟೆಂಬರ್ ತಿಂಗಳು). ಮೆಡಿಟರೇನಿಯನ್ ಸಮುದ್ರದ ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್ ಬೆರಗಾದರು. ಎಂಥ ನೀಲಿ – ಎಂಥ ಚೆಲುವು! ಬಾನಿನ ನೀಲಿ ಬಣ್ಣಕ್ಕೆ ವಾಯುಮಂಡಲದಲ್ಲಿರುವ ದೂಳಿನ ಕಣಗಳು ಮತ್ತು ಬಗೆ ಬಗೆಯ ಅನಿಲಗಳ ಪರಮಾಣುಗಳು ಹೇಗೆ ಕಾರಣವೆಂದು ಲಾರ್ಡ್ ರಾಲೆ ಅದಾಗಲೇ ಬಲು ಸುಂದರವಾಗಿ ವಿವರಿಸಿದ್ದ. ಆದರೆ ಸಮುದ್ರದ ನೀಲಿಗೆ ವಿವರಣೆ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ರಾಮನ್ ಆ ದಿಸೆಯಲ್ಲಿ ಅಧ್ಯಯನ ಆರಂಭಿಸಿದರು – ಅಲ್ಲೇ ಹಡಗಿನಲ್ಲಿ.

ತನ್ನೆದುರು ಹರಡಿ ಬಿದ್ದ ನೀಲಿ ಬಣ್ಣದ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಈ ನೀಲಿಗೆ ಕಾರಣವೆಂದು ಅವರಿಗನ್ನಿಸಿತು. ಸಮುದ್ರದ ನೀರನ್ನು ಕುಪ್ಪಿಗಳಲ್ಲಿ ಸಂಗ್ರ”ಸಿ, ತಮ್ಮೊಂದಿಗೆ ಸದಾ ಇರುತ್ತಿದ್ದ ರೋಹಿತ ದರ್ಶಕವನ್ನು ಬಳಸಿಕೊಂಡು ಹಡಗಿನಲ್ಲಿಯೇ ಪ್ರಯೋಗ ಮಾಡಿದರು.  ಹದಿನೈದು ದಿನಗಳ ಪಯಣ ಮುಗಿಸಿ ಹಡಗು ಮುಂಬುಯ ರೇವಿಗೆ ತಲಪುವ ಹೊತ್ತಿಗೆ ಪ್ರಯೋಗ ಫಲಿತಾಂಶಗಳು ಸಂಶೋಧನ ಲೇಖನಗಳಾಗಿದ್ದುವು.  ಅವು ಪ್ರತ್ಠಿತ “ನೇಚರ್” ಪತ್ರಿಕೆಯಲ್ಲಿ ಪ್ರಕಟಗೊಂಡುವು.

ದ್ರವ ಮಾಧ್ಯಮದಲ್ಲಿ ಬೆಳಕಿನ ಚದರಿಕೆಯ ಪರೀಕ್ಷೆಗಾಗಿ ರಾಮನ್ ತಮ್ಮ ಶಿಷ್ಯರನ್ನು ನಿಯೋಜಿಸಿದರು. ಚದರಿಕೆಯಾದ ಬೆಳಕಿನ ಧ್ರುವೀಕರಣದ (polarisation) ಬಗ್ಗೆ ಸ್ಪಷ್ಟ  ವಿವರಗಳಿಗಾಗಿ ರಾಮನ್ ಮತ್ತವರ ಶಿಷ್ಯಂದಿರು ಹೆಣಗಾಡುತ್ತಿದ್ದರು. ಒಂದು ದಿನ (೧೯೨೭) ಬೆಳಗ್ಗೆ ಕೃಷ್ಣನ್ ಅವರ ಕೊಠಡಿಗೆ ಬಂದ ರಾಮನ್ ಹೇಳಿದರಂತೆ “ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಕಳೆದ ಮೂರು ವರ್ಷಗಳಿಂದ ನಿರತನಾದ ನಿನ್ನನ್ನು ತುಸು ಪ್ರಾಯೋಗಿಕ ಕ್ಷೇತ್ರಕ್ಕೆ ಎಳೆಯುತ್ತಿದ್ದೇನೆ. ಒಬ್ಬ ವಿಜ್ಞಾನಿ ಸದಾ ಸಿದ್ಧಾಂತದಲ್ಲಿಯೇ ಮುಳುಗಿರುವುದು ತರವಲ್ಲ” ದ್ರವಗಳಲ್ಲಿ ಬೆಳಕಿನ ಚದರಿಕೆಯ ಐತಿಹಾಸಿಕ ಪ್ರಯೋಗಗಳಿಗೆ ಕೃಷ್ಣನ್ ತೊಡಗಿದ್ದು  ಹೀಗೆ. ರಾಮನ್ ಮಾತುಗಳು ವಿಜ್ಞಾನ ಲೋಕದಲ್ಲಿ ನನ್ನ  ಬೆಳವಣಿಗೆಗೆ ಆಗಾಧ ಪರಿಣಾಮ ಬೀರೆತೆಂದು ಕೃಷ್ಣನ್ ಆಗಾಗ ಸ್ಮರಿಸಿಕೊಳ್ಳುತ್ತಿದ್ದರು.

ಕೃಷ್ಣನ್ ಒಬ್ಬ ಅಪ್ಪಟ ವಿಜ್ಞಾನಿ. ಸಿದ್ಧಾಂತ ಮತ್ತು ಪ್ರಯೋಗಗಳೆರಡರಲ್ಲೂ ಅಪ್ರತಿಮ. ಗುರಿ ತಲಪುವ ತನಕ ವಿಶ್ರಾಂತಿ ಎಂಬುದಿರಲಿಲ್ಲ. ಅವರ  ಅವರ ಪ್ರಯೋಗಾಲಯದ ಬಾಗಿಲು ಸೂರ್ಯೋದಯದ ಮೊದಲೇ ತೆರೆಯುತ್ತಿತ್ತು – ಮುಚ್ಚಿಕೊಳ್ಳುತ್ತಿದ್ದುದು ನಟ್ಟಿರುಳಿನಲ್ಲಿ. ಆದರೆ ಸಂಜೆ ಹೊತ್ತು ಮಾತ್ರ ಕೃಷ್ಣನ್ ಫುಟ್ಬಾಲ್ ಆಟ ಆಡುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲವಂತೆ! ಇಂಗ್ಲೀಷ್, ಸಂಸ್ಕೃತ ಮತ್ತು ತಮಿಳು ಸಾಹಿತ್ಯಗಳಲ್ಲಿ ಆಳ ಪಾಂಡಿತ್ಯವಿದ್ದ ಕೃಷ್ಣನ್ ಇದ್ದಲ್ಲಿ ಸಂವಾದ ಬೇರೆಯೇ ಸ್ತರಕ್ಕೆ ಜಿಗಿಯುತ್ತಿತ್ತು. ಎಳೆಯರನ್ನು ಅನನ್ಯವಾಗಿ ಪ್ರೋತ್ಸಾಸುತ್ತಿದ್ದರು.

೧೯೨೭ರಲ್ಲಿ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ ಅಮೇರಿಕದ ಕಾಂಪ್ಟನ್ ಅವರಿಗೆ “ಕಾಂಪ್ಟನ್ ಪರಿಣಾಮ” ಕ್ಕಾಗಿ ದೊರೆತಿದೆ ಎಂಬ ಸುದ್ದಿಯನ್ನು ಕೃಷ್ಣನ್ ಅರುಹಿದಾಗ  ರಾಮನ್ ಹೇಳಿದರಂತೆ
” ಓಹ್, ಇದೊಂದು ಸಂತಸದ ಸುದ್ದಿ.. ನೋಡಿ, ಎಕ್ಸ್-ಕಿರಣಗಳಿಗೆ ಇದು ನಿಜವಾದರೆ ಅದಕ್ಕೆ ಸಂವಾದಿಯಾದದ್ದು ಗೋಚರ ಬೆಳಕಿನಲ್ಲೂ ಆಗಬಹುದು. ನಾವು ಅದೇ ದಿಸೆಯಲ್ಲಿ ಮುಂದುವರಿಯಬೇಕು. ಸರಿ ದಾರಿಯಲ್ಲಿ ಸಾಗುತ್ತಿದ್ದೇವೆ. ಅದು ಖಂಡಿತ ಸಿಗುತ್ತದೆ. ನೊಬೆಲ್ ಪ್ರಶಸ್ತಿ ನಮ್ಮ ಪಾಲಿಗೆ ದೊರೆಯಲಿದೆ” ಇದು ರಾಮನ್ ಅವರ ಆತ್ಮವಿಶ್ವಾಸದ ಒಂದು ಝಲಕು.

ನಿಜ, ಅಮೇರಿಕದ ಡೆನಿಸ್‌ಕಾಂಪ್ಟನ್ ಮಾಡಿದ್ದು ಘನ ದ್ರವ್ಯಗಳಲ್ಲಿ ಎಕ್ಸ್- ಕಿರಣಗಳ ಚದರಿಕೆಯನ್ನು ಮತ್ತು ಆ ಮೂಲಕ ಅವುಗಳ ಅಲೆಯುದ್ದ ಹೆಚ್ಚುವ ವಿಶಿಷ್ಟ ವಿದ್ಯಮಾನವನ್ನು. ಇದೇ ಬಗೆಯಲ್ಲಿ ಬೆಳಕಿ ಕಿರಣಗಳು ದ್ರವ ಮಾಧ್ಯಮದಲ್ಲಿ ಸಾಗುವಾಗ ಮಾಧ್ಯಮದ ಅಣು ಪರಮಾಣುಗಳಿಂದ ಚದರಿಸಲ್ಪಟ್ಟು ಅವುಗಳ ಅಲೆಯುದ್ದದಲ್ಲಿ ವ್ಯತ್ಯಾಸವಾಗಲಾರದೇ? ವಾಸ್ತವವಾಗಿ ಈ ದಿಸೆಯಲ್ಲಿ ಅದಾಗಲೇ ಸೈದ್ಧಾಂತಿಕ ಸೂಚನೆಗಳು ಒದಗಿದ್ದುವು. ೧೯೨೩ರಲ್ಲಿ ಜರ್ಮನಿಯ ಭೌತ ವಿಜ್ಞಾನಿಗಳಾದ ಸ್ಮೆಕೆಲ್, ಹೈಸೆನ್‌ಬರ್ಗ್ ಮತ್ತು ಕ್ರಾಮರ್ ಹಾಗೂ ೧೯೨೭ರಲ್ಲಿ ಡಿರಾಕ್, ಬೆಳಕಿನ ಕಿರಣವು ಪದಾರ್ಥದ ಮೂಲಕ ಹಾದುಹೋಗುವಾಗ ಚದರಿಕೆಯಿಂದ ಕಿರಣದ ಅಲೆಯುದ್ದದಲ್ಲಿ ವ್ಯತ್ಯಾಸವಾಗಬಹುದೆಂದು ಊಹಿಸಿದ್ದರು. ಇದನ್ನು ಬೆಂಬತ್ತಿದವರು ರಾಮನ್ ಮತ್ತು ಅವರ ಸಂಗಡಿಗರು. ಇವರಲ್ಲದೇ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವ ದ್ಯಾಲಯದಲ್ಲಿ ರಾಸ್, ರಷ್ಯಾದಲ್ಲಿ ಲ್ಯಾಂಡ್ಸ್‌ಬರ್ಗ ಮತ್ತು ಮ್ಯಂಡೆಲ್ಸ್ಟನ್ ತಂಡದಿಂದಲೂ ಬಿರುಸಿನಿಂದ ಪ್ರಯೋಗ ನಡೆಯುತ್ತಿತ್ತು. ಅಂದರೆ ಅಂತಾರಾಷ್ಟ್ರೀಯವಾಗಿ ಸಂಶೋಧನಾ ಪೈಪೋಟಿ – ತುರುಸಿನ ಸ್ಪರ್ಧೆ.

೧೯೨೮, ಫೆಬ್ರವರಿ ತಿಂಗಳಿನ ಮೊದಲ ವಾರದಿಂದಲೇ ಪ್ರಯೋಗಗಳು ಬಿರುಸಿನಿಂದ ಸಾಗಿದುವು. ಫೆಬ್ರವರಿ೨೮ರ  ಬೆಳಗ್ಗೆ ಹತ್ತರ ಹೊತ್ತಿಗೆ ತಮ್ಮ ಪ್ರಯೋಗದಲ್ಲಿ ರಾಮನ್ ಮತ್ತು ಕೃಷ್ಣನ್ ಯಶಸ್ಸು ಕಂಡರು. ದ್ರವ ಮಾದ್ಯಮದಲ್ಲಿ ಬೆಳಕಿನ ಅಲೆಗಳನ್ನು ಮಾಧ್ಯಮದ ಅಣುಗಳು ಚದರಿಸುವ ಮೂಲಕ ಬೆಳಕಿನ ರೋ”ತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ “ನೂತನ “ವಿದ್ಯಮಾನವನ್ನು ಅಂದು ಅವರಿಬ್ಬರು ಕಂಡರು. ರಾಮನ್ ತಮಗೆ ನೊಬೆಲ್ ಪ್ರಶಸ್ತಿ ಬಹು ಬೇಗನೆ ಲಭಿಸುತ್ತದೆಂದು ನಂಬಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. ೧೯೩೦ರ ನೊಬೆಲ್ ಪ್ರಶಸ್ತಿ ರಾಮನ್ನರಿಗೆ ಒಲಿಯಿತು.

ರಾಮನ್ ಪರಿಣಾಮದ ಆವಿಷ್ಕಾರದಲ್ಲಿ ಬಹು ದೊಡ್ಡ ಪಾತ್ರ ವಹಿಸಿದ ಕೃಷ್ಣನ್ ಅವರಿಗೂ ನೊಬೆಲ್ ಪ್ರಶಸ್ತಿ ನೀಡಬೇಕಿತ್ತೆನ್ನುವ ಅಭಿಮತವಿದೆ. ನೊಬೆಲ್ ಪ್ರಶಸ್ತಿ “ವಿಜೇತ ಎಸ್ ಚಂದ್ರಶೇಖರ್ ಹೇಳಿದ್ದಾರೆ
” ನನ್ನ ವೈಕ್ತಿಕ ಅಭಿಪ್ರಾಯವೆಂದರೆ ಇಬ್ಬರು ಶ್ರೇಷ್ಠ “ವಿಜ್ಞಾನಿಗಳಾದ ರಾಮನ್ ಮತ್ತು ಕೃಷ್ಣನ್ ನಡುವಿನ ಪರಸ್ಪರ ಸಹಕಾರ ಮತ್ತು ಉತ್ತೇಜನದಿಂದ ರಾಮನ್ ಪರಿಣಾಮದ ಆವಿಷ್ಕಾರವಾಯಿತು”

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಇದರ ನಿರ್ದೇಶಕರಾಗಿದ್ದ  ರಾಮಶೇಷನ್ (೧೯೨೩ – ೨೦೦೩) ಅವರೊಂದಿಗೆ ನಡೆದ ಸುದೀರ್ಘ ಸಂದರ್ಶನದಲ್ಲಿ ಕೃಷ್ಣನ್ ಹೇಳುತ್ತಾರೆ ” ರಾಮನ್ ಪರಿಣಾಮದ ಆ”ಷ್ಕಾರದಲ್ಲಿ ನಾನು ಭಾಗವ”ಸಿದ್ದೇನೋ ನಿಜ. ಪ್ರೊ.ರಾಮನ್ ನನಗೆ ಬೆಳಕಿನ ಚದರಿಕೆಯ “ದ್ಯಮಾನದ ಕುರಿತಂತೆ ಪ್ರಯೋಗ ನಡೆಸಲು ಸೂಚಿಸಿದರು. ಅವರ ನಿರ್ದೇಶನದಂತೆ ನಾನು ಪ್ರಯೋಗ ನಡೆಸಿದೆ, ಅಷ್ಟೇ. ” ಇದೇ ಸಂದರ್ಶನದಲ್ಲಿ ರಾಮನ್ ಬಗ್ಗೆ ಕೃಷ್ಣನ್ ಹೇಳಿದ್ದಾರೆ “ಪ್ರೊಫೆಸರ್ ರಾಮನ್ ೨೪ ಗಂಟೆಗಳ ವಿಜ್ಞಾನಿ – ಪ್ರಾಯಶ: ನಿದ್ದೆಯ ಹೊತ್ತನ್ನೊಂದು ಬಿಟ್ಟು. ಪ್ರತಿ ಕ್ಷಣವೂ ವಿಜ್ಞಾನದ ಬಗ್ಗೆ ಅವರು ಚಿಂತಿಸುತ್ತಿದ್ದರು; ಚರ್ಚಿಸುತ್ತಿದ್ದರು”

ಇದು ಕೃಷ್ಣನ್ ಅವರ ಸೌಜನ್ಯ. ರಾಮನ್ ತಮ್ಮ ಸಹದ್ಯೋಗಿಯಾಗಿದ್ದ ಕೃಷ್ಣನ್ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಿಸಿದ್ದರು. ನೊಬೆಲ್ ಪ್ರಶಸ್ತಿ ಸ್ವೀಕಾರ ಮಾಡುತ್ತ ಮಾಡಿದ ಉಪನ್ಯಾಸದಲ್ಲಿ ಕೃಷ್ಣನ್ ಅವರ ಕೊಡುಗೆಯನ್ನು ರಾಮನ್ ಸ್ಮರಿಸಿಕೊಂಡರು. ೧೯೩೦ರ ಸುಮಾರಿಗೆ ಆಂದ್ರ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದ ಪ್ರೊಫೆಸರ್ ಹುದ್ದೆಗೆ ಕೃಷ್ಣನ್ ಅರ್ಜಿ ಹಾಕಿದಾಗ ರಾಮನ್ ಶಿಫಾರಸ್ಸು ಪತ್ರ ಬರೆದರು ” ಒಂದೊಮ್ಮೆ ೧೯೩೦ರ ನೊಬೆಲ್ ಪ್ರಶಸ್ತಿಯನ್ನು ೧೯೨೧ರಿಂದ ಕಲ್ಕತ್ತಾದಲ್ಲಿ ಬೆಳಕಿನ ಚದರಿಕೆ ಬಗ್ಗೆ ನಡೆಸಿದ ಸಂಶೋಧನೆಗಳ ಬದಲಿಗೆ ೧೯೨೮ರ ಸಂಶೋಧನೆಯನ್ನಷ್ಟೇ ಗಮನಿಸಿ ನೀಡಿದ್ದಾದರೆ,  ಕೃಷ್ಣನ್  ಅವರಿಗೂ ನೊಬೆಲ್ ಪ್ರಶಸ್ತಿ ಅರ್ಹವಾಗಿಯೇ ಸಲ್ಲಬೇಕು”.

೧೯೨೮ರ ಕೊನೆಯಲ್ಲಿ ಡಾಕ್ಕಾ ವಿಶ್ವ”ದ್ಯಾಲಯದ ಪ್ರಾಧ್ಯಾಪಕತ್ವಕ್ಕೆ ಕೃಷ್ಣನ್ ಆಯ್ಕೆಯಾದರು. ಆ ದಿನಗಳಲ್ಲಿ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದವರು ಶ್ರೇಷ್ಠ ಭೌತ “ವಿಜ್ಞಾನಿಯಾದ ಸತ್ಯೇಂದ್ರನಾಥ ಬೋಸ್. ಢಾಕ್ಕಾದಲ್ಲಿ ಅವರಿದ್ದುದು ನಾಲ್ಕೈದು ವರ್ಷ ಮಾತ್ರ. ಮತ್ತೆ ಕಲಕತ್ತಕ್ಕೆ ಮರಳಿದರು. ೧೯೪೨ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ಈ ಎಲ್ಲ ವರ್ಷಗಳಲ್ಲಿ ಒಬ್ಬ ವಿಜ್ಞಾನಿಯಾಗಿ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಂಡರು. ಘನಸ್ಥಿತಿ ಭೌತ ವಿಜ್ಞಾನ (Solid state or condensed matter Physics )  ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರ ಸಂಶೋಧನ ಲೇಖನಗಳು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟುವು.

ದ್ರವ ಮತ್ತು ಘನವಸ್ತುಗಳಲ್ಲಿ ಅಣುಗಳ ಸಂರಚನೆಯನ್ನು ಕಾಂತೀಯ ಹಾಗೂ ದ್ಯುತಿ ತಂತ್ರಜ್ಞಾನದಿಂದ ಅರ್ಥೈಸಿಕೊಳ್ಳಲು ಕೃಷ್ಣನ್ ನಡೆಸಿದ ಪ್ರಯತ್ನಗಳು, ಲೋಹ ಮತ್ತು ಅವುಗಳ ಸಂಮಿಶ್ರಣಗಳಲ್ಲಿ ಮತ್ತು ರಚನೆಯಲ್ಲಿ ಉಂಟಾಗುವ ಬಿರುಕುಗಳ ಬಗ್ಗೆ  ನಡೆಸಿದ ಸಂಶೋಧನೆಗಳು, ದ್ರವ ಲೋಹಗಳ ಬಗೆಗಿನ ಅಧ್ಯಯನಗಳು ಕೃಷ್ಣನ್ ಅವರನ್ನು ಘನಸ್ಥಿತಿ ಭೌತ ವಿಜ್ಞಾನದ ಮುನ್ನೆಲೆಯ ವಿಜ್ಞಾನಿಯಾಗಿ ಗುರುತಿಸುವಂತೆ ಮಾಡಿದುವು. ಸಹಜವಾಗಿಯೇ ರಾಯಲ್ ಸೊಸೈಟಿಯ ಸದಸ್ಯತ್ವ ಮತ್ತು ಸರ್ ಪದವಿ,  ಪದ್ಮ ಭೂಷಣ ಇತ್ಯಾದಿ ಪ್ರಶಸ್ತಿಗಳ ಮಾಲೆ ಇವರನ್ನು  ಅರಸಿಕೊಂಡು ಬಂದುವು. ಪ್ರಧಾನಿ ಜವಾಹರಲಾಲ ನೆಹರೂ ಆಗಾಗ ರಾಜಕಾರಣದ ನಡುವೆ ಬಿಡುವು ಮಾಡಿಕೊಂಡು ಕೃಷ್ಣನ್ ಅವರನ್ನು ಭೇಟ್ಟಿಯಾಗುತ್ತಿದ್ದರಂತೆ -ವಿಜ್ಞಾನ ಮತ್ತು ತತ್ವಜ್ಞಾನದ ಬಗ್ಗೆ ಚರ್ಚಿಸುವುದಕ್ಕಾಗಿ! ಮಾತೃ ಭಾಷೆಯಾದ ತಮಿಳಿನಲ್ಲಿ ಕೃಷ್ಣನ್ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದರು – ಜ್ಞಾನ ಪ್ರಸಾರಕ್ಕಾಗಿ. “ಜ್ಞಾನ ಸಂವಹನಕ್ಕೆ ಮಾತೃಭಾಷೆ ಎಂದೂ ತೊಡಕಾಗದೆಂದು ಅವರು ಹೇಳುತ್ತಿದ್ದರು.

೧೯೪೭ರಲ್ಲಿ ರ್‍ಟ್ರಾಯ ಭೌತ”ಜ್ಞಾನ ಸಂಶೋಧನಾಲಯ – ಎನ್‌ಪಿಎಲ್ ( National Physical Laboratory)  ಸ್ಥಾಪನೆಯಾದಾಗ, ಅದರ ನಿರ್ದೇಶಕತ್ವದ ಜವಾಬ್ದಾರಿ ಕೃಷ್ಣನ್ ಹೆಗಲಿಗೇರಿತು. ಆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಸುತ್ತ ಸಂಶೋಧನಾಲಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ತಂದುಕೊಟ್ಟರು.  ಭಾರತೀಯ ವಿಜ್ಞಾನ ರಂಗಕ್ಕೆ ಅವರಿಂದ ಇನ್ನಷ್ಟು ಲಭ್ಯವಾಗಲಿತ್ತು. ಆದರೆ ಇನ್ನೂ ಚಟುವಟಿಕೆಯಲ್ಲಿದ್ದಾಗಲೇ,  ೧೯೬೧, ಜೂನ್ ೧೪ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ, ರಾಮನ್ ಇರುವಾಗಲೇ ಅವರಿಗಿಂತ ಕಿರಿಯರಾದ ಕೃಷ್ಣನ್ ಭವದ ಬದುಕಿಗೆ ವಿದಾಯ ಹೇಳಿದರು.

ಎನ್‌ಪಿಎಲ್ ಕಟ್ಟಡಗಳು ಮೇಲೇಳುತ್ತಿದ್ದ ಸಂದರ್ಭದ ಒಂದು ಘಟನೆ ಕೃಷ್ಣನ್ ಏನೆಂದು ಹೇಳುತ್ತದೆ. ಎಂದಿನಂತೆ ಬೆಳಗ್ಗೆ ಕಟ್ಟಡದ ಬಳಿ ಬಂದಾಗ ಕೃಷ್ಣನ್ ದಿಗ್ಭ್ರಾಂತರಾದರು. ಕಟ್ಟಡದ ಮುಂಭಾಗದಲ್ಲಿದ್ದ ಎರಡು ಮರಗಳನ್ನು ಕಡಿದುರುಳಿಸಲು ಅಲ್ಲಿ ಕೆಲಸಗಾರರು ಸನ್ನದ್ಧರಾಗಿದ್ದರು – ಹಗ್ಗ ಮತ್ತು ಕೊಡಲಿಗಳೊಂದಿಗೆ. ಹೌಹಾರಿದ ಅವರು ಧಾವಿಸಿದರು ಅತ್ತ. ಯಾತಕ್ಕೆ ಮರ ಕಡಿಯುತ್ತಿದ್ದೇರೆಂದು ಕೇಳಿದಾಗ ಎಂಜನೀಯರ್ ಹೇಳಿದ “ಸರ್. ಆ ಮರಗಳು ಕಟ್ಟಡದ ಸಮರೂಪತೆಗೆ (Symmetry)  ತೊಂದರೆ ಕೊಡುತ್ತಿವೆ. ಒಮ್ಮೆ ನಿಟ್ಟುಸಿರು ಬಿಟ್ಟು ಕೃಷ್ಣನ್ ಹೇಳಿದರು ” ಅವೆರಡನ್ನು ಉರುಳಿಸುವ ಬದಲಿಗೆ ಮತ್ತೆರಡನ್ನು ಆ ಕಡೆ ಈ ಕಡೆ ನೆಟ್ಟು ಬಿಡಿ – ಸಮರೂಪತೆ ಸರಿಯಾಗುತ್ತದೆ, ಸೌಂದರ್ಯ ಉಳಿಯುತ್ತದೆ !”

 1. subbanna
  ಮೇ 4, 2010 ರಲ್ಲಿ 7:15 ಅಪರಾಹ್ನ

  Why balck holes have not appeared yet, oh they are invisible isnt it ? Do post it.

 2. naveen
  ಜನವರಿ 5, 2015 ರಲ್ಲಿ 6:08 ಫೂರ್ವಾಹ್ನ

  sir about Raaman effect we need full info of his scientific study through power point slide show in “KANNADA LANGUAGE ONLY”

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: