ಮುಖ ಪುಟ > 1 > ಬಿಟಿ ಬದನೆಯ ನಂಜೇರಿದೆ ನೋಡಾ

ಬಿಟಿ ಬದನೆಯ ನಂಜೇರಿದೆ ನೋಡಾ

ಬದನೆ ಅಂದರೆ ಯಾರಿಗೆ ಗೊತ್ತಿಲ್ಲ. ಬದನೆಯಲ್ಲೂ ಬೇರೆ ಬೇರೆ ಬಗೆಗಳು – ಒಂದೊಂದು ಊರಿಗೆ ಒಂದರಂತೆ. ಕುಂದಾಪುರ ಬದನೆ, ಕುಮಟಾ ಬದನೆ, ಉಡುಪಿಯ ಗುಳ್ಳ, ಮಟ್ಟಿ ಗುಳ್ಳ,  ನಾಳಿ ಬದನೆ, ಕರಾವಳಿ ಬದನೆ, ಘಟ್ಟದ ಬದನೆ…. ಬದನೆಂದ ಎಷ್ಟೊಂದು ಅಡುಗೆ! ಪಲ್ಯ, ಸಾಂಬಾರು, ಕಾ ಹುಳಿ, ಸುಟ್ಟಾವು, ಗೊಜ್ಜು, ಪೋಡಿ .. ಒಂದೇ ಎರಡೇ. ಇಂಥ ಸ್ವಾದಿಷ್ಟ ತರಕಾರಿಗೆ ನಂಜು ಎಂಬ ಹಣೆಪಟ್ಟಿ ಬೇರೆ!  ಈ ಕಾರಣಕ್ಕಾಗಿ ಅಲ್ಲ, ಬೇರೆಯೇ ಕಾರಣಕ್ಕಾಗಿ ಇಂದು ಭಾರತದ ಬದನೆ ಅಂತಾರ್‍ಟ್ರಾಯ ಸುದ್ದಿಗೆ ಗ್ರಾಸವಾಗಿದೆ. ಅದುವೇ ಬಿಟಿಬದನೆ (bt brinjal) . ಒಬ್ಬ ಕೃಷಿಕನಾಗಿ, ಒಂದಷ್ಟು ಬದನೆಯ ಪ್ರಹಸನದ ಬಗ್ಗೆ ನಿಮ್ಮೊಂದಿಗೆ ಹೀಗೆ ಮಾತುಕತೆ.
ಹೊಸ ಅವತಾರ
ಬ್ಯಾಸಿಲಸ್ ತುರಿಂಜೀನಿಸಿಸ್ ಎಂಬ ಬ್ಯಾಕ್ಟೀರಿಯಾಗಳ ವಂಶವಾಹಿ”ಯನ್ನು (genes) ಊರ ಬದನೆಗೆ ಜೋಡಿಸಿ ಸ್ಟೃಸಿದ ಬಯೋಟೆಕ್ನಾಲಜಿ ಅಥವಾ ಜೈವಿಕ ತಂತಾಜ್ಞಾನದ ಕುಲಾಂತರಿ ಬೆಳೆಯೇ (trnsgenic crops) ಬಿಟಿಬದನೆ.  ಕೀಟಗಳನ್ನು ನಾಶ ಮಾಡಲು ಶಕ್ತವಾಗುವ “ಬೀಟಾ ಟಾಕ್ಸಿನ್” “ವಿಷವನ್ನು ಹೊಂದಿದ  ಬಿಟಿಬದನೆಯ “ಅವತಾರ” ಪ್ರಯೋಗಾಲಯದಲ್ಲಿ ನೂರು ಬೇರೆ ಬೇರೆ ಕಟ್ಟು ನಿಟ್ಟಿನ ಪರೀಕ್ಷೆಗಳು ನಡೆದು, ಆ ಬಳಿಕವೇ ರೈತರ ಬಳಕೆಗೆ ಬರಬೇಕಾಗಿತ್ತು.
ಆದರೆ ಅವಸರವಸರವಾಗಿ ೨೦೦೯, ಅಕ್ಟೋಬರ್ ಹದಿನಾಲ್ಕರಂದು ಬಿಟಿ ಬದನೆಗೆ ಜೈವಿಕ ತಂತ್ರಜ್ಞಾನ ಸಮಿತಿ ಹಸಿರು ನಿಶಾನೆ ತೋರಿಸಿತು. ಜೀವ “ಜ್ಞಾನ ಕ್ಷೇತ್ರದಲ್ಲಿ ಹಲವು ದಶಕಗಳ ಸಂಶೋಧನೆಗಳಿಂದ ಅಂತಾರಾಷ್ಟ್ರೀಯ ಮನ್ನಣೆ ಪಡೆದ “ಹಿರಿಯ “ವಿಜ್ಞಾನಿ ಡಾ.ಪುಷ್ಪಾಭಾರ್ಗವ, ರುಪೆರ್ಟ್ ಶೆರ್ಲೆಡ್ಕೆ ಮೊದಲಾದ “ವಿಜ್ಞಾನಿಗಳು “ಇದೊಂದು ತೀರ ಅವಸರದ ನಿರ್ಧಾರ. ದುಡುಕು ಹೆಜ್ಜೆ ಅತ್ಯಂತ ಅಪಾಯಕಾರಿ”  ಎಂಬ ದನಿ ಎತ್ತಿದರು. ಗ್ರೀನ್‌ಪೀಸ್, ರೈತ ಸಂಘಗಳು, ಪರಿಸರ ಪ್ರಿಯರು, ಸಾಮಾಜಿಕ ಚಿಂತಕರು  ಒಟ್ಟಾಗಿ ಬಿಟಿಬದನೆ “ವಿರುದ್ಧ ಆಂದೋಲನ ಶುರು ಮಾಡತೊಡಗಿದಂತೆ ಸರಕಾರೀ ಕೃಪಾಪೋಷಿತ ಪರಿಸರ ಇಲಾಖೆ ಎಚ್ಚೆತ್ತುಕೊಂಡಿತು. ಹಲವು ಸಭೆಗಳು ನಡೆದುವು. ಪರ – ಪ್ರತಿರೋಧ ವಾದಗಳು ಹಾರಾಡಿದುವು.  “ಎಲ್ಲ ಕಟ್ಟು ನಿಟ್ಟಿನ ಪರೀಕ್ಷೆಗಳನ್ನು ನಡೆಸಿ ಪರಿಸರದ ಮೇಲೆ  ಯಾವುದೇ ದುಷ್ಪರಿಣಾಮ  ಇಲ್ಲವೆಂದಾದರೆ ಮಾತ್ರ ಬಿಟಿಬದನೆಯ ತಳಿಗಳನ್ನು ಬಿಡುಗಡೆ ಮಾಡುತ್ತೇವೆ” ಎಂದು ಸರಕಾರ ಘೋಸಿತು. ಸದ್ಯಕ್ಕೆ ಬಿಟಿಬದನೆಗೆ ಬಾಗಿಲು ಮುಚ್ಚಿಕೊಂಡಿದೆ;  ಅಂಶಕಾಲಿಕವಾಗಿ  ಕದನಕ್ಕೊಂದು “ವಿರಾಮ ಬಿದ್ದಿದೆ.

ಕೃಷಿ ಪ್ರಯಾಸ
ಬದನೆಯ ಕೃಷಿ ಸುಲಭವಲ್ಲ. ಬದನೆಯ ಕೃಷಿ ಏನು ಬಂತು? ಎಲ್ಲ ತರಕಾರೀ ಕೃಷಿಯೂ ಕೂಡ. ಮಾಹಿತಿ ತಂತ್ರಜ್ಞಾನದ ಧಾವಂತದ ಯುಗದಲ್ಲಿ ಹಸಿರು ಗದ್ದೆಗಳ, ಪಚ್ಚೆ ತರಕಾರಿಗಳ ಕೃ ಬೆರೆ ಬೇರೆ ಕಾರಣಗಳಿಗಾಗಿ ನಡೆಸಲು ಸಾಧ್ಯವಾಗದೇ ಕೃಷಿ ಬಡವಾಗುತ್ತಿದೆ;  ಕೃಷಿಕ ನಲುಗುತ್ತಿದ್ದಾನೆ. ಬದನೆ ಕೂಡ ಇದರಿಂದ ಹೊರತಾಗಿಲ್ಲ. ಸಸಿಯಿಂದ  ತೊಡಗಿ, ಹೂ ಬಿಟ್ಟು ಕಾಯಿ ಕಚ್ಚಿಕೊಂಡು ಕೊಯ್ಯುವ ತನಕ ಒಂದಲ್ಲ ಒಂದು ಹುಳ – ಕೀಟಗಳ ನಿರಂತರ ಬಾಧೆ – ವರ್ತಮಾನ ಸಮಾಜದ ಮೇಲೆರಗುವ ಉಗ್ರಗಾಮಿಗಳ ಹಾಗೆ.

ನೋಡುವುದಕ್ಕೆ ಗುಂಡಗಾಗಿ ನುಣುಪಾಗಿ ಸುಂದರವಾಗಿ ಕಾಣುವ ಬದನೆಯ  ಒಳಗೆಲ್ಲ ಹುಳ; ಕರ್ರಗಿನ ದ್ರವ. ಗಿಡದ ಬೇರಿಗೋ ಕೀಟದ ಸಂಚಕಾರ. ಎಲೆಗಳಿಗೆ ಕಂಬಳಿ ಹುಳದ ಕಾಟ. ಬಡವಾದ ರೈತ ಮಾಡುವುದೇನು? ಬೇರೆ ಬೇರೆ ಪ್ರಯೋಗಗಳು. ಪರಿಸರದ ಮೇಲೆ ನಿಜ ಕಾಳಜಿ ಇರುವಾತ ಗೋಮೂತ್ರದ ಅರ್ಕಕ್ಕೆ ಬೇವಿನ ಎಣ್ಣೆ, ಬೆಳ್ಳುಳ್ಳಿರಸ ಇತ್ಯಾದಿಗಳನ್ನೆಲ್ಲ ಸೇರಿಸಿ ಸಿಂಪರಣೆ ಮಾಡಿ ಕೀಟಗಳ ಬಾಧೆಯನ್ನು ತಡೆಯುವ ಪ್ರಯತ್ನ ಮಾಡುತ್ತ, “ಅಳಿದುಳಿದ ಮೇಲೆ ಸಿಕ್ಕಿದ್ದು ತನಗೆ ನಿಸರ್ಗ ಕೊಟ್ಟದ್ದು” ಎಂಬ ತತ್ತ್ವಜ್ಞಾನಿಯ ಚಿಂತನೆ ಮಾಡುತ್ತಾನೆ. ಆದರೆ ಕೆಲವರು  ಹಾಗಲ್ಲ.  ಅವರಿನ್ನೂ  ಕೃಷಿ ತಜ್ಞರು ಹೇಳಿದ್ದನ್ನು ಮರೆತಿಲ್ಲ. ನಿಸರ್ಗದ ಕುರಿತಾಗಿ ಬಂದಿರುವ ಹೊಸ ಪಾಠಗಳು ಅರ್ಥವಾಗಿಲ್ಲ. ಹಾಗಾಗಿ ಎಂಡೊಸಲ್ಫಾನ್,ತಿಮೇಟ್, ಫ್ಯುರಿಡಾನ್ ಮೊದಲಾದ ಕೀಟನಾಶಕಗಳನ್ನು ಎಗ್ಗಿಲ್ಲದಂತೆ ವಾರದಾಗ ಒಂದು ಸರ್ತಿಯಂತೆ ಎರ್ರಾಬಿರ್ರಿಯಾಗಿ ಹೊಡೆದು ಬದನೆಯನ್ನು (ಇತರ ತರಕಾರಿಗಳಿಗೂ, ಭತ್ತ ಇತ್ಯಾದಿ ಬೆಳೆಗಳಿಗೂ ಇದು ಅನ್ವಯ) ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಹಾಗಿದ್ದರೆ ಕೀಟ ಬಾಧೆಗಳಿಂದ “ಸಂಪೂರ್ಣ” ಮುಕ್ತವಾದ ಸುಂದರ ಸುಪುಷ್ಟ ಬದನೆ ಬಂದರೆ ಎಷ್ಟೊಂದು ಚೆನ್ನ! ಅಂಥ ಪ್ರಯತ್ನಗಳ ಫಲವಾಗಿ ಮೂಡಿ ಬಂದದ್ದು ಬಿಟಿಬದನೆ. ಹಾಗೆ ನೋಡಿದರೆ ಈ ಬಗೆಯ ಇಂಥ ಪ್ರಯತ್ನಗಳು ಹೊಸದೇನೂ ಅಲ್ಲ. ಈ ಹಿಂದೆ ಬತ್ತ, ಹತ್ತಿ, ಶೇಂಗಾ, ಜೋಳ, ತಂಬಾಕು ಮೊದಲಾದವುಗಳಲ್ಲಿ ಕುಲಾಂತರೀ ತಳಿಗಳ ಸೃಷ್ಟಿ ಮಾಡಿದ್ದಾರೆ ಜೈವಿಕ ತಂತ್ರಜ್ಞಾನಿಗಳು. ಆ ಪ್ರಯೋಗಗಳಲ್ಲೆಲ್ಲ ತೊಡಗಿಕೊಂಡ  ಜೈವಿಕ ತಂತ್ರಜ್ಞಾನ ದೈತ್ಯ ಕಂಪೆನಿಯಾದ ಮೊನ್ಸೊಂಟಾ  – ಮತ್ತು ಮಹಾರಾಷ್ಟ್ರಾ  ಹೈಬ್ರಿಡ್ ಸೀಡ್  ಕಂಪೆನಿ ಮಹಾಯ್ಕೋ ಬಿಟಿ ಬದನೆಯ ಸೃಷ್ಟಿಗೆ ತೊಡಗಿದ್ದು ಐದಾರು ವರ್ಷಗಳಷ್ಟು ಹಿಂದೆ. ಬ್ಯಾಸಿಲಸ್ ತುರಿಂಝೇನಿಸಿಸ್ ಬ್ಯಾಕ್ಟೀರಿಯಾದ ವಂಶವಾಹಿಯನ್ನು ಸಾಮಾನ್ಯ ಬದನೆಯ ವಂಶವಾಹಿಯೊಂದಿಗೆ ಸೇರಿಸಿ ಬಿಟಿ ಬದನೆಯನ್ನು ಸೃಷ್ಟಿಸುವಲ್ಲಿ  ಸಫಲರಾದರು.

ಜೈವಿಕ ಬ್ಯಾಕ್ಟೀರಿಯಾ
೧೯೦೧ರಲ್ಲಿ ಜಪಾನಿನ ಜೀವ ವಿಜ್ಞಾನಿ ಶಿಗೇಟನ್‌ಇವಾಟಾ ಆವಿಷ್ಕರಿಸಿದ ಬ್ಯಾಸಿಲಸ್ ತುರಿಂಝೇನಿಸಿಸ್ ಎನ್ನುವ ಈ ಸೂಕ್ಷ್ಮಾಣು ಜೀವಿಗಳು (ಬ್ಯಾಕ್ಟೀರಿಯಾಗಳು)  ಹೇರಳವಾಗಿ ಮಣ್ಣಿನಲ್ಲಿವೆ, ಮರದ ತೊಗಟೆಗಳಲ್ಲಿವೆ, ಹುಳ-ಕೀಟಗಳಲ್ಲಿವೆ. ಈ ಬ್ಯಾಕ್ಟೀರಿಯಾಗಳಿಂದ ಬಿಡುಗಡೆಯಾಗುವ ಪ್ರೊಟೀನ್ ಒಂದು ವಿಷ ಪದಾರ್ಥ – ಸಸ್ಯದ ಕಾಂಡವನ್ನು ಅಥವಾ ಬೇರನ್ನು ನಾಶ ಮಾಡುವ ಕೀಟಗಳನ್ನು ಕೊಲ್ಲಲು ಇದಕ್ಕಿದೆ ಸಾಮರ್ಥ್ಯ.   ನಿಮಗೆ ತಿಳಿದಿರಬಹುದು, ಹಾವಿನ ವಿಷ ಕೂಡ ಒಂದು ಪ್ರೊಟೀನ್ –  ದೇಹಕ್ಕೆ ಸೇರಿದರೆ ಅದು ಮಾಡುವ ಪರಿಣಾಮಗಳು ಮಾತ್ರ ಅಂತಕನ ದೂತರಿಗೆ ಕರೆ ಕೊಡುತ್ತದಷ್ಟೆ!

ತುರಿಂಝೇನಿಸಿಸ್ ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷ ಕೀಟದ ಜೀರ್ಣಾಂಗದೊಳಕ್ಕೆ ಹೊಕ್ಕರೆ ಸಾಕು, ಅಲ್ಲಿ ಅದು ಉಬ್ಬುತ್ತ ಹೋಗುತ್ತದೆ – ಕೀಟ ಮರಣ ಹೊಂದುತ್ತದೆ. ೧೯೩೦ರ ಸುಮಾರಿಗೆ ತುರಿಂಝೇನಿಸಿಸ್ ಬಾಕ್ಟೀರಿಯಾವನ್ನು ಸಂಸ್ಕರಿಸಿ ತಯಾರಿಸಲಾದ ಜೈವಿಕ ವಿಷವನ್ನು ಸಿಂಪರಣೆ ಮಾಡುವ ಕ್ರಮ ಆರಂಭವಾಯಿತು. ಆದರೆ ಯಾವಾಗ ಜೈವಿಕ ತಂತ್ರಜ್ಞಾನ ಬಂತೋ, ಬ್ಯಾಸಿಲಸ್ ತುರಿಂಝೇನಿಸಿಸ್ ವಂಶವಾಹಿಗಳನ್ನು ಹತ್ತಿ, ಶೇಂಗಾ, ಬತ್ತ, ಜೋಳ ಮೊದಲಾದ ಸಸ್ಯಗಳ ವಂಶವಾಹಿಯೊಂದಿಗೆ ಸೇರಿಸಿ ಕುಲಾಂತರೀ ತಳಿಗಳನ್ನು ಸೃಷ್ಟಿಸಲಾಯಿತು.  ಇಂಥ ತಳಿಗಳ  ಗಿಡಗಳಲ್ಲಿ ಉಪಟಳ ಕೊಡುವ ಕೀಟಗಳನ್ನು ನಿವಾರಿಸುವ “ವಿಷ ವಿರುತ್ತದೆ –   ಕೀಟಗಳಿಗೇನು ಗೊತ್ತು – ಮನುಷ್ಯನ ಈ ಕರಾಮತ್ತು? ಗಮ್ಮತ್ತಿನಿಂದ ಅವು ಎಂದಿನಂತೆ ದಾಳಿ ಮಾಡಿದಾಗ ಸಸ್ಯಗಳಲ್ಲಿ ಸ್ವಾಭಾವಿಕವಾಗಿ ಬಂದಂಥ ವಿಷಗಳಿಗೆ ತುತ್ತಾಗಿ ಸಾಯುತ್ತವೆ. (ಹೆದರಬೇಡಿ, ಈ “ವಿಷ ಕೀಟಗಳಿಗಷ್ಟೇ ಅಪಾಯಕರಿ ಮಾರಾಯ್ರೇ, ನಮಗಲ್ಲ) ಅಲ್ಲಿಗೆ ಬೆಳೆ ಕೀಟಗಳಿಂದ ಮತ್ತು ರೋಗಗಳಿಂದ ಮುಕ್ತ.
ಬಿಟಿ ಹತ್ತಿ,ಬಿಟಿ ಜೋಳ, ಬಿಟಿಬತ್ತ, ಬಿಟಿಗೋಧಿಗಳ ಸೃಷ್ಟಿಯಾದದ್ದು ಹೀಗೆ. ಆರಂಭದಲ್ಲಿ ಇಂಥ ಬಿಟಿ ಸಸ್ಯಗಳು ಅದ್ಭುತ ಹಸಿರಿನ ಪ್ರಪಂಚವನ್ನು ಸೃಷ್ಟಿಸುವ   ಕಲ್ಪನೆ ಇತ್ತು. ಆದರೆ ಹಾಗಾಗಲಿಲ್ಲ. ಬಿಟಿ ಹತ್ತಿಯನ್ನು ಮೊನ್ಸಾಂಟೊ – ಮಹಾಯ್ಕೋ ಕಂಪೆನಿಗಳು ೨೦೦೨ರಲ್ಲಿ ಬಿಡುಗಡೆ ಮಾಡಿದುವು. ರೋಗಮುಕ್ತ ಮತ್ತು ಅಧಿಕ ಇಳುವರಿ ತರುವ ಹತ್ತಿ ರೈತರ ಪಾಲಿಗೆ ಚಿನ್ನದ ತತ್ತಿ ಎನ್ನುವ ರಂಗುರಂಗಿನ ಪ್ರಚಾರದೊಂದಿಗೆ ಬಂದ ಬಿಟಿಹತ್ತಿಯನ್ನು ರೈತರು ತಮ್ಮ ಹೊಲಗಳಲ್ಲಿ ಬೆಳೆದದ್ದೇ ಬೆಳೆದದ್ದು. ಆದರೆ ಒಂದೆರಡು ವರ್ಷಗಳಲ್ಲಿ ಅವರಿಗೆ “ಎಲ್ಲೋ ಎಡವಟ್ಟಾಗಿದೆ” ಎನ್ನುವುದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮಧ್ಯಪ್ರದೇಶ, ಮಹಾರಾಷ್ತ್ರ, ಗುಜರಾಥ್ ರಾಜ್ಯಗಳಲ್ಲಿ ಬಿಟಿಹತ್ತಿ ಸಂಪೂರ್ಣ ವಿಫಲವಾಯಿತು. ಅಧಿಕ ಇಳುವರಿ ಬಿಡಿ, ಬೇರೆ ಬೇರೆ ಹೊಸ ರೋಗಗಳಿಂದ ಹತ್ತಿಯ ಗಿಡಗಳು ನಲುಗಿದುವು. ಮಹಾರಾಷ್ಟ್ರದ ರೈತರು  ಐನೂರು ಕೋಟಿ ರೂಪಾಯನ್ನು ಪರಿಹಾರವಾಗಿ ಕಂಪೆನಿ ನೀಡಬೇಕೆಂದು ಕೋರ್ಟ್ ಮೆಟ್ಟಲೇರಿದರು. ಹೊಲಗಳಲ್ಲಿ ದುಡಿಯಬೇಕಾದ ಮಂದಿ ಕೋರ್ಟ್ – ಕಛೇರಿ ಸುತ್ತಾಡಿ ಸುತ್ತಾಡಿ ಸುಸ್ತಾಗಿ ಸುಮ್ಮನಾಗುವ ಹೊತ್ತಿನಲ್ಲಿ ಬಿಟಿಬದನೆಯ ಅವತಾರವಾಗಬೇಕೇ? ಹಾಗಾಗಿ ಈ ಬಾರಿ ರೈತರು ಮುಂಚಿತವಾಗಿಯೇ ಎಚ್ಚೆತ್ತುಕೊಂಡರು. ಬಿಟಿಬದನೆಯ ವಿರುದ್ಧ ಬಲವಾಗಿ ದನಿ ಎತ್ತಿದರು.
ಕುಲಾಂತರೀ ಸಸ್ಯಗಳು ಒಂದು ನಿರ್ದಿಷ್ಟ ಕೀಟಗಳ ರೋಗದ ವಿರುದ್ಧ ನಿರೋಧ ಶಕ್ತಿಯನ್ನು ಆರಂಭದಲ್ಲಿ ಹೊಂದಿರುವುದೇನೋ ನಿಜ. ಆದರೆ ಈ ಶಕ್ತಿ ಕಾಲ ಕ್ರಮೇಣ ಕುಂದುತ್ತ ಐದು ವರ್ಷಗಳೊಳಗೆ ಅವು ಇತರೇ ಸಸ್ಯಗಳಂತೆ ಮತ್ತೆ ಹಳೆಯ ಚಾಳಿಗೆ ಪಕ್ಕಾಗುತ್ತವೆನ್ನುವುದನ್ನು ಅಮೇರಿಕದಲ್ಲಿ ನಡೆದ ಸಂಶೋಧನೆಗಳು ದಾಖಲಿಸಿವೆ. ಅಷ್ಟಕ್ಕೂ ನಿಸರ್ಗದಲ್ಲಿ ಇನ್ನೂ ಹಲವು ಹೊಸ ಬಗೆಯ ರೋಗಗಳು ಮತ್ತು ಕೀಟಗಳಿವೆಯಲ್ಲ. ಅವೆಲ್ಲವುಗಳ ದಾಳಿಯನ್ನು ಈ ಸಸ್ಯಗಳು ಎದುರಿಸುವಲ್ಲಿ ದಯನೀಯವಾಗಿ ಸೋಲುತ್ತಿವೆ ಎನ್ನುವುದನ್ನು  ಗಮನಿಸಬೇಕು.

ಸಶಕ್ತ ಬಿಟಿಬದನೆ ಬಂದ ಮೇಲೆ ಎಲ್ಲೆಡೆ ಎಲ್ಲರೂ ಅದನ್ನೇ ಬೆಳೆಯುತ್ತ ಹೋದರೆ ಏನಾಗಬಹುದು? ಬದನೆಯ ನೂರಾರು ಬಗೆಯ ತಳಿಗಳು ಇಳೆಯಿಂದ  ನಾಳೆ ಕಣ್ಮರೆಯಾಗಲಾರವೇ? ಅರ್ಥ ಕಳೆದುಕೊಳ್ಳುತ್ತಿರುವ ಆರ್ಥಿಕ ಜಗತ್ತಿನಲ್ಲಿ ಪ್ರಬಲ ಶಕ್ತಿಯಾದ ಬಹುರಾಷ್ಟ್ರೀಯ  ಕಂಪೆನಿಗಳೊಂದಿಗೆ ಸೇರಿಕೊಂಡ ಸರಕಾರ ನೇರ ಅಥವಾ ಪರೋಕ್ಷವಾಗಿ ಬಿಟಿ ತಳಿಗಳನ್ನಷ್ಟೇ ಬೆಳೆಯಬೇಕೆಂದು ಹುಕುಮು ಚಲಾಯಿಸಬಾರದೇಕೆ? ಇದರ ಸಾಧ್ಯತೆಯೇ ಹೆಚ್ಚು. ನೆರೆಯ ಕೊರಿಯಾದಲ್ಲಿ ಇಂಥದೇ ಒತ್ತೊಡಕ್ಕೆ ಒಳಗಾದ ರೈತರು ಬಿಟಿಬತ್ತವನ್ನು ವ್ಯಾಪಕವಾಗಿ  ಬೆಳೆಸಿದ ಪರಿಣಾಮವಾಗಿ ಒಂದು ಕಾಲದಲ್ಲಿ ಅಸಂಖ್ಯ ಬತ್ತದ ತಳಿಗಳಿದ್ದ ಈ ನಾಡಿನಲ್ಲಿ ಇಂದು ಉಳಿದಿರುವುದು ಬಿಟಿ ಭತ್ತ ಮತ್ತು ಬೆರಳೆಣಿಕೆಯ ಇತರ ತಳಿಗಳು. ವೈವಿಧ್ಯತೆ ಸಸ್ಯ ಪರಿಸರದಲ್ಲಷ್ಟೇ ಅಲ್ಲ ಪ್ರಾಣಿ ಪ್ರಪಂಚದಲ್ಲೂ ಬೇಕು.

ಅಸಲಿಗೆ ಕುಲಾಂತರೀ ಬದನೆಯಿಂದ ಯಾವ ಬಗೆಯ ದೂರಗಾಮಿ  ಪರಿಣಾಮ ಆಗುತ್ತದೆಂದು ನಮಗಿನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಕೀಟ, ಹುಳ ಹುಪ್ಪಟೆಗಳ ಬಾಧೆಯನ್ನು ತಡೆಯಬಲ್ಲ ಬದನೆ ನಮ್ಮ ಜಠರಾಗ್ನಿಯನ್ನು ಶಮನಗೊಳಿಸುತ್ತದೆ. ಆದರೆ ಅದೇ ಕುಲಾಂತರೀ ಜಠರಕ್ಕೇ ಕನ್ನ ಕೊರೆಯಬಾರದೇಕೆ? ಹಾಗಾಗುತ್ತದೆಂದು ಕೆಲವು ಸಂಶೋಧನೆಗಳ ಫಲಿತಾಂಶಗಳು ಹೇಳುತ್ತಿವೆಯಂತೆ. ಸಂಶಯಗಳಿಗೆ ಸ್ಪಷ್ಟ ಉತ್ತರವಿಲ್ಲ.
ಆದರೆ ನಿಸರ್ಗದೊಡನೆ ಹುಚ್ಚು  ಚೆಲ್ಲಾಟ ಸಲ್ಲದು ಎಂಬ ಬಗ್ಗೆ ಹೆಚ್ಚು ಗೊಂದಲ ಬೇಡ.   ನಾವು – ಮನುಷ್ಯರು ನಿಸರ್ಗದ ಕೂಸುಗಳೆನ್ನುವುದನ್ನು ಒಪ್ಪಿಕೊಳ್ಳಬೇಕು. ನಿಸರ್ಗವನ್ನು ಒಪ್ಪಿ ಅದರೊಂದಿಗೆ  ಜತೆಯಾಗಿ ಬದುಕು ನಡೆಸುವ ಚಿಂತನೆ ನಮಗಿಂದು ಬೇಕಾಗಿದೆ. ನೈಸರ್ಗಿಕವಾಗಿ ಒಬ್ಬ ಮನುಷ್ಯ ಬಾಳುವುದಕ್ಕೂ, ಎಲ್ಲ ಔಷಧ ತಿನ್ನುತ್ತ ಹೇಗೇಗೋ ಬಾಳುವುದಕ್ಕೂ ಬಲು ವ್ಯತ್ಯಾಸವಿದೆ.
ಹಾಗಾಗಿಯೇ ಲೀಡ್ಸ್ ವಿಶ್ವ ವಿದ್ಯಾಲಯದ ಸೂಕ್ಷ್ಮಾಣು ಜೈವಿಕ ವಿಜ್ಞಾನಿ ಹರ್ಷನಾರಂಗ್ ಹೇಳತ್ತಾರೆ  “ಕುಲಾಂತರೀ ತಳಿಗಳನ್ನು ಸೃಷ್ಟಿಸಿ ಅವುಗಳನ್ನು ನಿಸರ್ಗಕ್ಕೆ ಸೇರಿಸಿದರೆ ಅದರಿಂದ ಅಗಾಧ ಅಪಾಯ ತಪ್ಪಿದ್ದಲ್ಲ. ಇದೊಂದು ಹರಾಕಿರಿ. ಸಂಭವನೀಯ ತೊಂದರೆಗಳ ಪ್ರಮಾಣವನ್ನು ಲೆಕ್ಕ ಹಾಕುವುದು ಸುಲಭವಲ್ಲ. ಇದಕ್ಕಿರುವ ಒಂದೇ ಒಂದು ಪರಿಹಾರವೆಂದರೆ ಕುಲಾಂತರೀ ಆಹಾರ ತಳಿಗಳ ಸೃಷ್ಟಿ ಕಾರ್ಯಗಳನ್ನು ನಿಲ್ಲಿಸುವುದು.”

  1. ಫೆಬ್ರವರಿ 26, 2010 ರಲ್ಲಿ 10:35 ಫೂರ್ವಾಹ್ನ

    ಬಹಳ ಚೆನ್ನಾಗಿದೆ ಮಾಹಿತಿ. ಧನ್ಯವಾದಗಳು.

  2. sridhar
    ಜುಲೈ 6, 2011 ರಲ್ಲಿ 12:00 ಅಪರಾಹ್ನ

    ಸ್ವಾಮಿ,
    ಬಹಳ ಚೆನ್ನಾಗಿ ವಿಷಯವನ್ನು ಮಂಡಿಸಿದ್ದೀರಾ; ಕೃಷಿ ಸಂಶೋಧನಾ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿರುವ ನನಗೆ ಬಹಳ ಉಪಯುಕ್ತ ಮಾಹಿತಿ ಒದಗಿಸಿದ್ದೀರಿ. ನಿಮ್ಮ ಲೇಖನಕ್ಕೆ ಧನ್ಯವಾದಗಳು.

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: