ಗ್ರಹಣ – ಬಡಿಯದಿರಲಿ ವೈಚಾರಿಕ ಪ್ರಜ್ಞೆಗೆ
ಮತ್ತೆ ಸೂರ್ಯಗ್ರಹಣ ಬಂದಿದೆ. ಮತ್ತದೇ ಹಳೇ ರಾಗ – ಗ್ರಹಣ ವೀಕ್ಷಣೆ ಸರ್ವಥಾ ಸಲ್ಲ. ಆಹಾರ ನಿಶಿದ್ಧ – ಹಳೆ ಪೇಪರ್.. ಹಳೆ ಚಿಂದಿ..ಯ ಹಾಗೆ.
ಬೆಂಗಳೂರಲ್ಲಿ ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಜಟಾಪಟಿ ಶುರುವಾಗಿದೆಯಂತೆ.
ದೈವಜ್ಞರೊಬ್ಬರು ಅಪ್ಪಣೆ ಕೊಡಿಸಿದ್ದಾರೆ
ಮಹಾಭಾರತ ಯುದ್ಧ, ದ್ವಿತೀಯ ಜಾಗತಿಕ ಯುದ್ಧ, ಇಂದಿರಾಗಾಂಧಿಯ ಹತ್ಯೆ ನಡೆದಾಗ ಸೂರ್ಯಗ್ರಹಣ ಸಂಭವಿಸಿತ್ತು. ಗ್ರಹಣ ಕಾಲದಲ್ಲಿ ವ್ಯಕ್ತಿ ಹೆಚ್ಚು ವ್ಯಗ್ರನಾಗುತ್ತಾನೆ. ಅವನ ಮಾನಸಿಕ ಸ್ಥಿತಿಯಲ್ಲಿ ಏರು ಪೇರಾಗುತ್ತದೆ. ಹೆಚ್ಚು ಸೋಲುವ ಮನೋಭಾವ ಗೋಚರಿಸುತ್ತೆ. ಇದಕ್ಕೆಲ್ಲ ಪರಿಹಾರವೆಂದರೆ ಜನರು ಪೂಜೆ, ಯಜ್ಞಗಳಲ್ಲಿ ತೊಡಗುವುದು ಅಥವಾ ದೇವಸ್ಥಾನಕ್ಕೆ ತೆರಳಿ ಪರಿಹಾರ ಕಂಡುಕೊಳ್ಳುವುದು.
ಅಷ್ಟಕ್ಕೂ ಗ್ರಹಣಗಳು ಸಂಭವಿಸಿದ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದರೆ ಅವು ಕೇವಲ ಕಾಕತಾಳೀಯ. ಅಥವಾ ಪ್ರತಿ ಗ್ರಹಣಕ್ಕೂ ಇಂಥ ದುರ್ಘಟನೆಗಳ ಸರಣಿಯನ್ನು ತಳಕು ಹಾಕಲು ನಮಗೆ ಹೆಚ್ಚು ಕಷ್ಟವಾಗದು. ಸಮಯ ವ್ಯಯಿಸುವ ವ್ಯವಧಾನ ಇದ್ದರಾಯಿತು.
ರಾಮಾಯಣ, ಮಹಾಭಾರತ ಮೊದಲಾದ ಅದ್ಭುತ ರಮ್ಯ ಪುರಾಣಗಳಲ್ಲಿ ಅಲ್ಲಲ್ಲಿ ಗ್ರಹಣಗಳ ಉಲ್ಲೇಖವಾಗಿದೆಯಂತೆ. ಅಭಿಮನ್ಯು ಸತ್ತಾಗ… ಗ್ರಹಣಗಳು ಅನಿಷ್ಠಕಾರಕ ಎಂಬ ಮತ್ತು ಆ ಕಾಲಕ್ಕೆ ಸಹಜವೇ ಆಗಿದ್ದ ಮನೋಧರ್ಮ ಕಥಾನಕವನ್ನು ಇನ್ನಷ್ಟು ರಮ್ಯಗೊಳಿಸಲು “ಸೂರ್ಯಗ್ರಹಣ” ದಂಥ, ಧೂಮಕೇತು ದರ್ಶನವಾದಂಥ ಘಟನೆಯ ಪ್ರಸ್ತಾಪ ಕವಿಯ ಕವಿತ್ವದ ಪಾರಮ್ಯವೂ ಕಾರಣವಾಗಿರಬಹುದು. ಯಾವ ಕವಿಯೂ ವರ್ತಮಾನದಿಂದ ಬೇರು ಕಳಚಿ ಕೊಂಡವನಲ್ಲ.
ನಿಜ, ಇವೆಲ್ಲವೂ ಅಲ್ಲಿಗೆ ಬಲು ಚಂದ. ನಿತ್ಯ ಜೀವನಕ್ಕೆ ಅಲ್ಲ.
ಸದಾ ಹೊಳೆವ ಸೂರ್ಯ – ನಡು ಹಗಲಿನಲ್ಲಿ ಮರೆಯಾಗುವ ಪೂರ್ಣ ಸೂರ್ಯಗ್ರಹಣ ಒಂದು ಪ್ರದೇಶದಲ್ಲಿ ಒಬ್ಬನ ಜೀವಮಾನಕ್ಕೆ ದಕ್ಕುವ ಅನುಭವ. ಜೀವನದ ಭಾಗ್ಯ. ಏಕೆಂದರೆ ಮತ್ತೆ ಕಾಯಬೇಕು ಇಂಥದೊಂದು ಘಟನೆ ಅಲ್ಲಿಯೇ ನಡೆಯಲು ಕನಿಷ್ಠ ಮುನ್ನೂರ ಅರುವತ್ತು ವರ್ಷಗಳು.
ಭಾಗ್ಯ ಈ ಬಾರಿ ಉತ್ತರ ಭಾರತದ ವದೋರಾ, ಪಾಟ್ನಾ, ವಾರಣಾಶಿ, ಡಾರ್ಜಿಲಿಂಗ್ , ಭೂತಾನಿನ ಜನ ಸಮುದಾಯಕ್ಕೆ ಈ ಬಾರಿ ಬಂದಿದೆಯಾದರೆ, ನಮಗೆ ಖಂಡ ಅಥವಾ ಪಾರ್ಶ್ವ ಸೂರ್ಯಗ್ರಹಣ. ನಮಗೆ ಗ್ರಹಣ ದರ್ಶನ ಸಿಗಬಹುದು ಪ್ರಕೃತಿ ಒಲಿದರೆ ಮಾತ್ರ.
ಈ ಕುರಿತು ಇನ್ನಷ್ಟು ವಿವರಕ್ಕೆ ನೀವು ಕೆಂಡ ಸಂಪಿಗೆಯಲ್ಲಿ ನಿನ್ನೆ ಪ್ರಕಟವಾದ ನನ್ನ ಬರಹ ಬುಧವಾರ ಸವಿನಿದ್ದೆಯ ಹೊತ್ತು ಸಂಭವಿಸಲಿದೆ ಸೂರ್ಯಗ್ರಹಣ ನೋಡಬಹುದು
ಮೊನ್ನೆ ಮೊನ್ನೆ ಶಾಲೆಯ ಅಧ್ಯಾಪಿಕೆ ನನ್ನನ್ನು ಸಂಪರ್ಕಿಸಿ, ಗ್ರಹಣದ ಬಗ್ಗೆ ಉಪನ್ಯಾಸ ನೀಡಲು ಆಮಂತ್ರಿಸಿದರು. ಅವರಿಗೆ ಮಕ್ಕಳಿಗೆ ಒಂದಷ್ಟು ಗಗನ ವಿದ್ಯಮಾನದ ಬಗ್ಗೆ ಅರಿವು ಮೂಡಿಸಬೇಕೆನ್ನುವ ನಿಜ ಉತ್ಸಾಹ. ಆದರೆ ನನಗೋ ಸರ್ಪ ಸುತ್ತಿಕೊಂಡಿತ್ತು. ಅರೇ ಇದೇನಿದು? ಹರ್ಪಿಸ್, ಹೊಟ್ಟೆಯಲ್ಲಿ ಪಟ್ಟಿಯಾಕಾರದಲ್ಲಿ ಕೀವು ತುಂಬಿದ ಬೊಕ್ಕೆಗಳು, ಯಮಯಾತನೆ, ಜ್ವರ ಬೇರೆ. ಇದು ನನ್ನ ಆರೋಗ್ಯಕ್ಕೆ ಹೊಡೆದ ತಾತ್ಕಾಲಿಕ ಗ್ರಹಣ. “ಮಂತ್ರಿಸಿದ ತೆಂಗಿನಕಾಯಿಯಿಂದ ಸರ್ಪದೋಷದ ತನಕ ಸಲಹೆ ಕೊಟ್ಟವರು ಹಲವರು. ಅದು ಬೇರೆಯೇ ಕಥೆ ಈ ಕುರಿತು ಇನ್ನೊಂದು ಬಾರಿ ಬರೆಯುತ್ತೇನೆ – ಸ್ವಗತದಲ್ಲಿ!
ಬರಲಾಗದ ನನ್ನ ಅಸಹಾಯಕತೆ ತೋಡಿಕೊಂಡಾಗ, ಬೇರೊಬ್ಬರನ್ನು ಸೂಚಿಸಲು ವಿನಂತಿಸಿದರು. ನಾನು ಒಬ್ಬರನ್ನು ಸೂಚಿಸಿದೆ. ಅವರು ಉನ್ನತ ವಿದ್ಯಾಪಾರಂಗತರು. ಬೌದ್ಧಿಕವಾಗಿ ಎತ್ತರದಲ್ಲಿರುವವರು. ಆದರೆ ನನಗೆ ಆಶ್ಚರ್ಯವಾದದ್ದು ಅವರು ಹೌಹಾರಿ ತಿರಸ್ಕರಿಸಿದರಂತೆ “ಅಯ್ಯಯ್ಯೋ , ಆದಿನ ನನಗೆ ಉಪವಾಸ, ಮಕ್ಕಳೂ ಮಾಡಬೇಕಲ್ಲ” ಅಂದರೆ ಸಾಂಪ್ರದಾಯಿಕವಾಗಿ ಬಂದ ನಂಬಿಕೆಗಳ ಪಳೆಯುಳಿಕೆಗಳು ಬಂದನಿಕೆಗಳಾಗಿ ಹಿಡಿದಿವೆ ಎಷ್ಟೊಂದು ಬಿಗಿಯಾಗಿ!
ಅಂದ ಹಾಗೆ ಇಲ್ಲೊಂದು ಸುದ್ದಿ ಎದ್ದಿದೆ. ಯರೋ ದೈವಜ್ಞರು ಅಪ್ಪಣೆ ಕೊಡಿಸಿದ್ದಾರೆ
ಹನ್ನೊಂದು ಗಂಟೆಯ ಹೊತ್ತಿಗೆ ಸೂರ್ಯನಿಗೆ ರಾಹುವಿನಿಂದ ಮುಕ್ತಿ
ಹಾಗಾಗಿ ಗ್ರಹಣ ದಿನ ಕೆಲವು ಶಾಲೆ ಕಾಲೇಜುಗಳಲ್ಲಿ ತರಗತಿ ಆರಂಭವಾಗುವುದು ಬೆಳಗ್ಗೆ ಹನ್ನೊಂದರ ಬಳಿಕವೇ. ಇನ್ನು ಕೆಲವುಗಳಿಗೆ ರಜೆ ಘೋಷಿಸಲಾಗಿದೆ.
ಸರಕಾರವೇ ಮಧ್ಯ ಪ್ರವೇಶಿಸಿ ಸಾರ್ವತ್ರಿಕ ರಜಾ ಘೋಷಣೆ ಮಾಡಿತೇ? ಹಾಗಾದರೆ ಅಚ್ಚರಿಯೇನೂ ಇಲ್ಲ. ಏಕೆಂದರೆ ಯಾವುದು ಸಂಸ್ಕೃತಿಯ ಭಾಗ? ಯಾವುದನ್ನು ತೊಡೆಯಬೇಕು? ಯಾವುದನ್ನು ಉಳಿಸಿಕೊಳ್ಳಬೇಕು? – ಇಂಥ ಪರಿಜ್ಞಾನ ಬರುವ ವೈಜ್ಞಾನಿಕ ಮನೋಭಾವದ ಅಭಾವ ಇರುವ ಮಂದಿ ಆಳಲು ತೊಡಗಿದರೆ ಇಂಥೆಲ್ಲ ಅಧ್ವಾನಗಳು ನಿರೀಕ್ಷಿತವೇ.
ನಾವು ಸಮುದಾಯವಾಗಿ ಬದಲಾಗುವುದು ಯಾವಾಗ? ಅರಿವಿನ, ತಿಳಿವಿನ ಕೇಂದ್ರವಾಗಬೇಕಾದಲ್ಲಿಯೇ ಅಂಧನಂಬುಗೆಗೆ ಆಸ್ಪದವೇ? ಚಂದ್ರಯಾನದ ರೂವಾರಿಗಳನ್ನು ಸೃಷ್ಟಿಸಿದ ನಮ್ಮ ಶಾಲೆ ಕಾಲೇಜುಗಳಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಪ್ರಯತ್ನ ಪೂರ್ವಕ ನಾವು ಮೂಡಿಸಬೇಡವೇ?
ಹೇ, ಇದು ನಂಬಿಕೆಯ ಪ್ರಶ್ನೆ. ಆ ದಿನ ನಮ್ಮ ಸಂಪ್ರದಾಯದಂತೆ ನಡೆದರೆ ದೊಡ್ಡ ಕಳೆದುಕೊಳ್ಳುವುದು ಎನೂ ಇಲ್ಲ
ಎನ್ನುವ ದನಿ ಕೇಳಿಸುತ್ತದೆ. ಆದರೆ ಇದು ಅಷ್ಟು ಸರಳವಲ್ಲ. ಇಂಥ ನಂಬಿಕೆಗಳಿಗೆ ಹಲವು ಆಯಾಮಗಳುಂಟು ಎನ್ನುವುದನ್ನು ಮರೆಯಬಾರದು. ಒಬ್ಬ ವ್ಯಕ್ತಿಯ ನಂಬುಗೆ, ಮನೆಯೊಳಗಿನ ಆಚರಣೆ ಅಲ್ಲಿಗೆ ಚಂದ ಇರಬಹುದು. ಅವನ ಮತ್ತು ಅವನ ಮನೆಯವರ ಸುಖಕ್ಕೆ ಅದು ಅಲ್ಲಿಯೇ ಇರಲಿ – ಬೇಕಾದರೆ ಶತ ಶತಮಾನಗಳ ತನಕವೂ. ಆದರೆ ಅದು ಅಲ್ಲಿಂದ ಹೊರಬಿದ್ದು ಬೀದಿಯಲ್ಲೆಲ್ಲ ರೊಚ್ಚೆ ಎಬ್ಬಿಸುವ ಬಗೆ ಮಾತ್ರ ಕೊಳಕು, ರೇಜಿಗೆ ಉಂಟು ಮಾಡುವದ್ದು. ಅದು ಖಂಡನೆಗೆ ಅರ್ಹವಾದದ್ದು.
ನಾಗರೀಕತೆ ಬೆಳೆದು ಬಂದ ಬಗೆಯನ್ನು ಗಮನಿಸಬೇಕು. ಟಾಯ್ನಬಿ ಬರೆಯುತ್ತಾನೆ
ಅಂಧ ನಂಬುಗೆಗಳ ಎದುರಿನ ಹೋರಾಟವೇ ನಾಗರೀಕತೆಯ ಉಗಮದ ಬಿಂದು. ಇಂಥ ಹೋರಾಟಗಳು ಮನುಕುಲದ ಇತಿಹಾಸವನ್ನು ಸೃಷ್ಟಿಸಿವೆ.
ಅಂಧ ನಂಬುಗೆಗಳ ದುರ್ಗಮ ಹುತ್ತಗಳನ್ನು ಒಂದೊಂದಾಗಿ ಕಡಿಯುತ್ತ ಬರಲು ವಿಜ್ಞಾನ ಪಟ್ಟ ಪಡಿಪಾಡುಗಳಿಗೆ ವಿಜ್ಞಾನ ಇತಿಹಾಸವನ್ನು ಗಮನಿಸಬೇಕು. ಹಾಗಾಗಿಯೇ ಗ್ರಹಣ ಕಾಲದ ನಮ್ಮ ಸಂಪ್ರದಾಯದ ಮೌಡ್ಯದ ಆಚರಣೆಯನ್ನು ವಿಜ್ಞಾನವನ್ನು ಕಲಿತ ಮತ್ತು ನಿತ್ಯ ವಿಜ್ಞಾನವನ್ನು ಬಗೆ ಬಗೆಯ ರೀತಿಯಲ್ಲಿ ಬಳಸುತ್ತಿರುವ ನಾವು ಅನುಸರಿಸುವುದೆಂದರೆ ವಿಜ್ಞಾನ ನಿರ್ಮಾಪಕರಿಗೆ ನಾವು ಮಾಡುವ ಅಪಮಾನ. ಹಾಗಾಗದಿರಲಿ.
ಸಮುದಾಯವಾಗಿ ನಾವು ಬದಲಾಗುವುದು ಯಾವಾಗ? ಬದಲಾಗಲು ಮುಚ್ಚಿದ ಮನದ ಕದ ತೆರೆಯಬೇಕು. ಬರಲಿ ಹೊಸ ಚಿಂತನೆಯ ಗಾಳಿ. ಸಿಗಲಿ ವೈಚಾರಿಕ ಪ್ರಜ್ಞೆಗೆ ಬಡಿದ ಗ್ರಹಣಕ್ಕೆ ಶಾಶ್ವತ ಮೋಕ್ಷ.
good article.
The article was good,i am also waiting to see this
beautiful solar eclipse.
ನಿಮಗಿರುವ ಕಾಳಜಿ ಬಹುತೇಕ ಮಂದಿಗೆ ಇಲ್ಲ. ನಿನ್ನೆಯ(೨೧-೦೭-೦೯) ಎರಡು ಬಹು ಪ್ರಸಾರ ಹೊಂದಿರುವ ಪತ್ರಿಕೆಯ(ಕರಾವಳಿಯ ನಂ ೧ ಹಾಗು ಕರ್ನಾಟಕದ ನಂ ೧) ಮುಖಪುಟದಲ್ಲಿ ಗ್ರಹಣದ ಬಗ್ಗೆ ಜ್ಯೋತಿಷಿಗಳ ಹೇಳಿಕೆಯನ್ನು, ಇಂತಿಂಥವರಿಗೆ ತೋಂದರೆ ಅಂಥ ಪ್ರಕಟಿಸಿದ್ದಾರೆ. ಏನು ಹೇಳೋಣ ಇವರಿಗೆ?
—–
ರವಿಪ್ರಕಾಶ
Dear Dr Radhakrishna,
I am not following the massive flow of daily info flooding the
PC- I am simply not up to that .
But today I saw your blog on grahana written with passion for the good
of the community.
Looking back , I find a seachange since 3 decades regarding the
attitude towards grahana.More people think that it is something to be
seen and enjoyed.Compare the deserted streets of Blore in 1980 during
grahana , with the almost normal activities of life in Surat [ or
Mysore] as well as the thronging youngsters for goggles.Though there
is still a long way to go, the change is perceptible.This change gives
succour and hope.Even Daivjnas[ I saw one of them arguing today] are
trying to adjust – telling that delivery during grahana – a great life
giving act of a mother- should not be connected with astronomical
events.
Then those who perform pooja- they perform it not only on grahana
day, they do it on dwadashi, newmoon, fullmoon,special tithis and
nodal days [ chouthi, deepavali, sankramana etc]- we will be happy if
the rest are not harassed.
neevelli hogri soorya grahaNa nODakke?
bengaLoorallantoo enoo kaaNlilla 😦
ಪ್ರಿಯ ರಾಧಾಕೃಷ್ಣ ಅವರೇ
ನಿಮ್ಮ ಪ್ರಯತ್ನ ಅಭಿನಂದನೀಯ, ನೀನು ಕಂಡುಂಡು ಬಂದ ಪರಂಪರೆಗೆ ಉಚಿತವಾಗಿಯೂ ಇರಬಹುದು. ಆದರೆ ಇತ್ತ ಪತ್ರಿಕೆಗಳಲ್ಲಿ ನಮ್ಮ ಜನಪ್ರತಿನಿಧಿಗಳು ಮಳೆಬರಲಿಲ್ಲವೆನ್ನುವಾಗ ಅಧಿಕೃತವಾಗಿ ದೇವಾಲಗಳಿಗೆ ಪೂಜೆ, ಹೋಮ ಸಲ್ಲಿಸಲು ಆದೇಶಿಸುತ್ತಿರುವುದು, ಈಚೆಗೆ ಜಲಾಶಯಗಳತ್ತ ದಂಡುಕಟ್ಟಿಕೊಂಡು ಹೋಗಿ ಬಾಗಿನ ಅರ್ಪಿಸುತ್ತಿರುವುದು ಹೆಚ್ಚುತ್ತಿರುವಾಗ ಯಾಕೆ ಈ ಹೋರಾಟ? ಲಾಡು ವಿತರಣೆ, ಗಂಗಾಜಲ ವಿತರಣೆಗಳ ಸಾಲಿನಲ್ಲಿ ಮಾನ್ಯ ಗೃಹ ಸಚಿವರು ಊರುಕೇರಿಗಳಲ್ಲಿ ಬಾಗಿನ ಅರ್ಪಿಸುವುದನ್ನೂ ಸರಕಾರೀ ಕಾರ್ಯಕ್ರಮ ಮಾಡುವ ಆದೇಶ ಹೊರಡಿಸಲಿರುವುದನ್ನು ಕೇಳಿ ಧನ್ಯತೆ ಬರುತ್ತದೆ. ಅದಕ್ಕೆ ನಿಮ್ಮಂತೆಯೇ ಗೋವಿಂದ ಭಟ್ಟರು ತಮ್ಮ ಬ್ಲಾಗ್ನಲ್ಲಿ
ಇನ್ನೊಂದು ವ್ಯರ್ಥ ಹೋರಾಟ ನಡೆಸಿರುವುದನ್ನು ನೀವು ನೋಡಬಹುದು.
ಬರುವ ವರ್ಷ ನಿಮ್ಮ ತೋಡಿನ ಕಟ್ಟಕ್ಕೆ ಬಾಗಿನ ಅರ್ಪಿಸಲು ಸರಕಾರದ ಅನುದಾನ ದಕ್ಕುತ್ತದೆ ಎಂದಾಗ, ನೀವೀತರದ ಲೇಖನದಲ್ಲೆಲ್ಲಾ ಸಮಯ ಹಾಳು ಮಾಡದೆ ಗ್ರಹಣ ಮೋಕ್ಷಗೊಂಡಾಗ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಿಸುವುದೊಳ್ಳೆಯದು. ಇಂತು ನಿಮ್ಮ ಸೇವಾಕಾಂಕ್ಷಿ
ಹರೇಕೃಷ್ಣ ಹರೇರಾಂ
Sir, I personally feel that these beliefs arose due to fear of extinction. It is quite natural for somebody to get afraid when somethings observed daily, indulges in the hide and seek game, that too with an invisible object. Such beliefs arose when there were no proper understanding of the phenomenon. These later became a part of the tradition and/or were imposed upon subsequent generation (a typical human tendency). But what is more embarrassing is that, even after proper understanding of the subject, people tend to incline on beliefs rather than facts to satisfy themselves.
Belief about eclipse and how do you react about that, I believe it ones private matter. I personally might be doing certain spiritual activities which gives me satisfaction , But at the same time really condemn these politicians wasting public money into these activities so called bagina, doing special poojas for rain etc . it should be their private activities done from spending from their pockets (even if their wealth comes from questionable sources!). But at the same time you cannot question my private life why are you doing at as far as I dont force it on to some one !
ವೈಚಾರಿಕ ಪ್ರಜ್ಞೆಯ ಜಾಗೃತಿಗೆ ಜುಲೈ ೨೧ರಂದು ಚುರುಕಾಗಿದ್ದ ಲೇಖನಿಗೆ/ಲೇಖಕನಿಗೆ ಈಗ ಯಾವ ಗ್ರಹಣ ಬಡಿದಿದೆ ಎಂದು ಆತಂಕಿತನಾಗಿದ್ದೇನೆ. ಬುದ್ಧಿ ಭಾವಗಳ ಹಿತ ಸಮ್ಮೇಳನದಲ್ಲಿರುವ ಭಾವಯ್ಯಾ ಕನಿಷ್ಠ ಈಚೆಗೆ ನೀನು (ಇನ್ನು ಕೆಲವರ ಸಹಯೋಗದಲ್ಲಿ) ನಡೆಸಿಕೊಟ್ಟ ಆಕಾಶವಾಣಿ ರಸಪ್ರಶ್ನೆ ಸ್ಪರ್ಧೆಯ (ಪ್ರಶ್ನೋತ್ತರ ಬೇಡ, ಅನುಕೂಲವಾದರೆ ಆಕಾಶವಾಣಿಯಲ್ಲೇ ಕೇಳಿಕೊಳ್ಳುತ್ತೇವೆ) ದಾಖಲೆಗೊಳಪಡದ ಅನುಭವಗಳು, ಮುಖ್ಯವಾಗಿ ರಂಜನೀಯ ಅಂಶಗಳನ್ನಾದರೂ
ನಮ್ಮೊಡನೆ ಹಂಚಿಕೊಳ್ಳಯ್ಯಾ
ಅಸಕ್ಕ ಭಾವ
Good Article Sir 🙂
Some of my thoughts which came after reading your articles..
Beliefs..
Some are Blind..
Some are Reasonable..
Some we think Blind until and unless we get the reasons..
Some we think as reasonable until and unless someone proves them as Blind..
People are confused and they make a mindset to float in between Reasons and Blindness..
It is as simple as humans like light as well as darkness..
I believe that for every action which we see and react immediately in the society and life are just effects. The cause for these things are rooted deep in the heart and mindset of people and society. If we just hold our reactions on the “effects” and try to think,realise and act on the cause we will find the solutions to all the problems.
This is my “Universal Law of Solutions” 🙂
Applicable for All!!
Applicable to All!!
If we understand and Apply it everytime..
Oh!! Forgot to tell!! I am waiting for your comments on my recent article 🙂
Great job boss. I like your effort.
Thanks from everybody to you