ಜಾತಕ

ನಿನ್ನೆಯ ತನಕ ಅಲ್ಲಿ ಇಲ್ಲಿ ��ವಿಷ್ಯಕಾರ
ತಕಪಕ ಕುಣಿಯುತ್ತಿದ್ದ ಮನೆಯ ನಾಯಿ
ತಟಪಟ ಕೈಕಾಲು ಬಡಿದು ಸತ್ತಾಗಲೇ
ಶುರುವಾಗಿತ್ತು ನನ್ನಮ್ಮನ ಮನದಲ್ಲಿ
ಸಂಶಯದ ಕೀಟ
ಮಾಡಿರಬಹುದೇ ಯಾರಾದರೂ ಮಂತ್ರ ಮಾಟ
ವಾರದಲಿ ಮುದಿ ದನವೊಂದು ಗೊಟಕ್ಕೆನ್ನಬೇಕೇ?
ಅಪ್ಪನಿಗೇರಿತು ಹಳೆಯ ದಮ್ಮಿನ ಹುಮ್ಮು
ಅಮ್ಮನಿಗೆ ಗಾಬರಿಯೋ ಗಾಬರಿ

ಗ್ರಹಗತಿಯ ಗ್ರಹಚಾರ ಸರಿಇರದೆಂಬ ಖಾತರಿ
ತುರುಕಿದಳು ಅಮ್ಮ ನನ್ನ ಕೈಯೊಳಗೆ
ಅಪ್ಪನ ಮತ್ತು ನನ್ನ ಜಾತಕದ ಕಟ್ಟು
‘ಬೇಡ ಸಾಧ್ಯ”ಲ್ಲ’ ಎಂದರೂ ಕೇಳಬೇಕೇ? ನೋಡಿ
ಓಡಿಸಿದಳು ಜೋಸರ ಮನೆಗೆ ಕಾಡಿ ಬೇಡಿ

ಜೋಸರ ಮನೆ ಮಟ್ಟಲೇರುವಾಗಲೇ
ನೆರೆದಿತ್ತು ಅಲ್ಲಿ ದೊಡ್ದ ಸಂತೆ
ಪ್ರತಿಯೊಬ್ಬರ ಮೊಗದಲ್ಲೂ ಪ್ರೇತ ಕಳೆ
ಸಣ್ಣ ಪುಟ್ಟ ಬಗೆಬಗೆಯ ಚಿಂತೆ
ಒಬ್ಬನ ಮಗನಿಗೆ ಹುಚ್ಚು
ಮತ್ತೊಬ್ಬನ ಮಗಳಿಗೆ  ಬೀದಿ ಸುತ್ತುವ ನೆಚ್ಚು
ಇನ್ನೊಬ್ಬನ ಮಡದಿಗೆ ರಕ್ತ ವಾಂತಿ
ಮಗದೊಬ್ಬನಿಗೆ ಇಲ್ಲವಂತೆ ಮನೆ ಮನ ಶಾಂತಿ

ಜೋಸರ ಮಾಣಿಗೆ ಪುರುಸೊತ್ತಿರಲಿಲ್ಲ
ತಾಯತ, ಮಂತ್ರಾಕ್ಷತೆ, ರಕ್ಷಾಕವಚ
ಮಂತ್ರಿಸಿದ ತೆಂಗಿನಕಾಯ ಸಾರಾಸಗಟು ಮಾರಾಟ
ಕೊನೆಯಲ್ಲಿ ಬಂತು ನನ್ನ ಸರದಿ
ಎತ್ತಿಕೊಂಡರು ನನ್ನ ಜಾತಕ
ಇಟ್ಟರೊಮ್ಮೆ ಗರ್ದೃ ದೃಷ್ಟಿ

ಹಾರುತ್ತಿತ್ತು ಜುಟ್ಟು, ಕುಣಿಯುತ್ತಿತ್ತು ಹುಬ್ಬು
ನಲಿಯುತ್ತಿತ್ತು ಕೈಯಲ್ಲಿ ಕವಡೆ ತಕಪಕ
ಒಮ್ಮೆ ನಗು, ಮಗದೊಮ್ಮೆ ಘನ ಗಂಭೀರ
ಪಕ್ಕನೆ ಚಿಂತಾಕ್ರಾಂತ, ಹಟಾತ್ತನೆ ಶಾಂತ, ಮಂದಸ್ಮಿತ

ಅಷ್ಟಮದಲ್ಲಂತೆ ಚಂದ್ರ ಸಪ್ತಮದಲ್ಲಿ ಕುಜ
ಆದರೂ ಬಚಾವ್ – ಇದೆ ಗುರುವಿನ ದೃಷ್ಟಿ

ಮುಂದಿನ ತಿಂಗಳೆರಡು ಸಂಕಷ್ಟ, ಅನಾವೃಷ್ಟಿ
ಸಾವು, ರೋಗರುಜಿನ, ಶಸ್ತ್ರಕ್ರಿಯೆ ಅಪಾಯ
ಮತ್ತೆ ಇರಬಹುದು ಧನ ಪ್ರಾಪ್ತಿ ಸಂತೃಪ್ತಿ –
ದೇ” ಪೂಜೆಂದ, ವೈದೀಕರ ಸೇವೆಯಿಂದ

ಅವರವರ ಭಾವಕ್ಕೆ ಅವರವರ ಭಕುತಿಗೆ
ತಕ್ಕಂತೆ ನುಡಿಯುತ್ತಿತ್ತು ಜಾತಕವೆಂಬ ಸೀಡಿ
ಇಟ್ಟೆ ಜೋಸರ ಮುಂದೆ ನೂರರ ಐದು ಕಟ್ಟು
ಕಣ್ಮುಚ್ಚಿ ಕೈಯಲ್ಲಿಟ್ಟರು ಮಂತ್ರಿಸಿದ ತೆಂಗಿನ ಕಾಯಿ
ಅಲುಗಾಡಿಸಿದರೆ ನೀರಿರದ ಬುರುಡೆ

*************************

Categories: ಕವನ
  1. ಕವಿಕುಲಕುಠಾರ
    ಜನವರಿ 31, 2009 ರಲ್ಲಿ 4:12 ಅಪರಾಹ್ನ

    ಮುಂದುವರಿದ ಓದು:
    ಅವರವರ ಭಾವಕ್ಕೆ ಅವರವರ ಭಕುತಿಗೆ
    ತಕ್ಕಂತೆ ನುಡಿಯುತ್ತಿತ್ತು ಜಾತಕವೆಂಬ ಸೀಡಿ
    ಇಟ್ಟೆ ಜೋಸರ ಮುಂದೆ ನೂರರ ಐದು ಕಟ್ಟು
    ಕಣ್ಮುಚ್ಚಿ ಕೈಯಲ್ಲಿಟ್ಟರು ಮಂತ್ರಿಸಿದ ತೆಂಗಿನ ಕಾಯಿ
    ಅಲುಗಾಡಿಸಿದರೆ ನೀರಿರದ ಬುರುಡೆ

    ಮನೆಗೆ ಬಂದವನೆ ಒಡೆದೆ
    ಅಲ್ಲ ಅದು ಕಾಯಿ, ಬಲಿತ ಕೊಬ್ಬರಿ ಬರಿದೆ!
    ತುರಿದೆ, ನಾಲ್ಕು ಉಪ್ಪು, ತುಸುವೇ ಮಸಾಲೆ ಹಚ್ಚಿ ಹುರಿದೆ!
    ಮೇಲೊಂದಷ್ಟು ಪುರಿ, ಇಂಗಿನ ವಗ್ಗರಣೆ
    ಅಲಂಕಾರಕ್ಕೆರಡೆಸಳು ಕೊತ್ತಂಬರಿ
    ಸುವಾಸನೆ ಅರಳುತ್ತಿದ್ದಂತೆ ಮತ್ತೆ ಮೆಲ್ಲುತ್ತಿದ್ದಂತೆ
    ಬಾಗಿಲಲ್ಲಿಣುಕಿತ್ತು ಬೀಡಾಡಿ ನಾಯಿಕುನ್ನಿ
    ಕೊಟ್ಟಿಗೆಯಲ್ಲಿ ಕೇಳಿತ್ತು ಗಬ್ಬದ ದನಈಂದ ಬೊಬ್ಬೆ!!
    -ಕವಿಕುಲಕುಠಾರ

  2. ಫೆಬ್ರವರಿ 1, 2009 ರಲ್ಲಿ 2:42 ಫೂರ್ವಾಹ್ನ

    ಮತ್ತೆ ಮುಂದುವರೆದಿದೆ ಯೋಚನಾ ಲಹರಿ…

    ನೋಟಿನ ಕಂತೆಗೆ ಸಮಸ್ಯೆಯ ಸಂತೆ
    ಜಾತಕದ ಬಾಸಿಗೆ ಕಾಸಿನ ಚಿಂತೆ
    ಗ್ರಹಗತಿಯಿಂದಲೇ ಗ್ರಹಚಾರದ ನಾಂದಿ
    ಗಾಂಚಾಲಿ ಮಾಡ್ತಾನೆ ಗ್ರಹಗತಿವಿನೋದಿ!

    ನಾಲ್ಕಕ್ಕೆ ಮೂರು ಕೂಡಿ ಐದರಿಂದ ಎರಡನ್ನು ಕಳೆ
    ಮನದಲಿರ್ಪ ಮಾಯೆಗೆ ಜಾತಕವೇ ಕಳೆ
    ಕವಡೆಗೆ ಒಂದೇ ಕಣ್ಣು ಇವನಿಗೋ ಭವಿಷ್ಯಕ್ಕೆ ಕಣ್ಣು
    ವಿಜ್ಞಾನ ಇವನಿಗೆ ಕೇವಲ ಬೆಲೆವೆಣ್ಣು!

    ಧರ್ಮರಾಯನಿಗಿತ್ತೇ ನಾಯಿಯ ರಹದಾರಿ
    ತಕಪಕ ನಾಯಿಗೆ ಗೊತ್ತೇ ಸ್ವರ್ಗದ ದಾರಿ
    ಜಾತಕದ ಪಾತಕವ ಏನನ್ನಲಿ ನಾನು?
    ಜಾತಕ ವಿಹೀನಿ ನಾನು ಕಂತ್ರಿ ಸೂನು!

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: