Radhakrishna ಉವಾಚ!

ಗ್ರಹಣ – ಬಡಿಯದಿರಲಿ ವೈಚಾರಿಕ ಪ್ರಜ್ಞೆಗೆ
ಮತ್ತೆ ಸೂರ್ಯಗ್ರಹಣ ಬಂದಿದೆ. ಮತ್ತದೇ ಹಳೇ ರಾಗ – ಗ್ರಹಣ ವೀಕ್ಷಣೆ ಸರ್ವಥಾ ಸಲ್ಲ. ಆಹಾರ ನಿಶಿದ್ಧ – ಹಳೆ ಪೇಪರ್.. ಹಳೆ ಚಿಂದಿ..ಯ ಹಾಗೆ.

ಬೆಂಗಳೂರಲ್ಲಿ ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಜಟಾಪಟಿ ಶುರುವಾಗಿದೆಯಂತೆ.

ದೈವಜ್ಞರೊಬ್ಬರು ಅಪ್ಪಣೆ ಕೊಡಿಸಿದ್ದಾರೆ

ಮಹಾಭಾರತ ಯುದ್ಧ, ದ್ವಿತೀಯ ಜಾಗತಿಕ ಯುದ್ಧ, ಇಂದಿರಾಗಾಂಧಿಯ ಹತ್ಯೆ ನಡೆದಾಗ ಸೂರ್ಯಗ್ರಹಣ ಸಂಭವಿಸಿತ್ತು. ಗ್ರಹಣ ಕಾಲದಲ್ಲಿ ವ್ಯಕ್ತಿ ಹೆಚ್ಚು ವ್ಯಗ್ರನಾಗುತ್ತಾನೆ. ಅವನ ಮಾನಸಿಕ ಸ್ಥಿತಿಯಲ್ಲಿ ಏರು ಪೇರಾಗುತ್ತದೆ. ಹೆಚ್ಚು ಸೋಲುವ ಮನೋಭಾವ ಗೋಚರಿಸುತ್ತೆ. ಇದಕ್ಕೆಲ್ಲ ಪರಿಹಾರವೆಂದರೆ ಜನರು ಪೂಜೆ, ಯಜ್ಞಗಳಲ್ಲಿ ತೊಡಗುವುದು ಅಥವಾ ದೇವಸ್ಥಾನಕ್ಕೆ ತೆರಳಿ ಪರಿಹಾರ ಕಂಡುಕೊಳ್ಳುವುದು.

ಅಷ್ಟಕ್ಕೂ ಗ್ರಹಣಗಳು ಸಂಭವಿಸಿದ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದರೆ ಅವು ಕೇವಲ ಕಾಕತಾಳೀಯ. ಅಥವಾ ಪ್ರತಿ ಗ್ರಹಣಕ್ಕೂ ಇಂಥ ದುರ್ಘಟನೆಗಳ ಸರಣಿಯನ್ನು ತಳಕು ಹಾಕಲು ನಮಗೆ ಹೆಚ್ಚು ಕಷ್ಟವಾಗದು. ಸಮಯ ವ್ಯಯಿಸುವ ವ್ಯವಧಾನ ಇದ್ದರಾಯಿತು.

ರಾಮಾಯಣ, ಮಹಾಭಾರತ ಮೊದಲಾದ ಅದ್ಭುತ ರಮ್ಯ ಪುರಾಣಗಳಲ್ಲಿ ಅಲ್ಲಲ್ಲಿ ಗ್ರಹಣಗಳ ಉಲ್ಲೇಖವಾಗಿದೆಯಂತೆ. ಅಭಿಮನ್ಯು ಸತ್ತಾಗ…  ಗ್ರಹಣಗಳು ಅನಿಷ್ಠಕಾರಕ ಎಂಬ ಮತ್ತು ಆ ಕಾಲಕ್ಕೆ ಸಹಜವೇ ಆಗಿದ್ದ ಮನೋಧರ್ಮ ಕಥಾನಕವನ್ನು ಇನ್ನಷ್ಟು ರಮ್ಯಗೊಳಿಸಲು “ಸೂರ್ಯಗ್ರಹಣ” ದಂಥ, ಧೂಮಕೇತು ದರ್ಶನವಾದಂಥ  ಘಟನೆಯ ಪ್ರಸ್ತಾಪ ಕವಿಯ ಕವಿತ್ವದ ಪಾರಮ್ಯವೂ  ಕಾರಣವಾಗಿರಬಹುದು. ಯಾವ ಕವಿಯೂ ವರ್ತಮಾನದಿಂದ ಬೇರು ಕಳಚಿ ಕೊಂಡವನಲ್ಲ.

ನಿಜ,  ಇವೆಲ್ಲವೂ ಅಲ್ಲಿಗೆ ಬಲು ಚಂದ. ನಿತ್ಯ ಜೀವನಕ್ಕೆ ಅಲ್ಲ.

ಸದಾ ಹೊಳೆವ ಸೂರ್ಯ – ನಡು ಹಗಲಿನಲ್ಲಿ ಮರೆಯಾಗುವ ಪೂರ್ಣ ಸೂರ್ಯಗ್ರಹಣ ಒಂದು ಪ್ರದೇಶದಲ್ಲಿ ಒಬ್ಬನ ಜೀವಮಾನಕ್ಕೆ ದಕ್ಕುವ ಅನುಭವ. ಜೀವನದ ಭಾಗ್ಯ. ಏಕೆಂದರೆ ಮತ್ತೆ ಕಾಯಬೇಕು ಇಂಥದೊಂದು ಘಟನೆ ಅಲ್ಲಿಯೇ ನಡೆಯಲು ಕನಿಷ್ಠ ಮುನ್ನೂರ ಅರುವತ್ತು ವರ್ಷಗಳು.

ಭಾಗ್ಯ ಈ ಬಾರಿ ಉತ್ತರ ಭಾರತದ ವದೋರಾ, ಪಾಟ್ನಾ, ವಾರಣಾಶಿ, ಡಾರ್ಜಿಲಿಂಗ್ , ಭೂತಾನಿನ ಜನ ಸಮುದಾಯಕ್ಕೆ ಈ ಬಾರಿ ಬಂದಿದೆಯಾದರೆ, ನಮಗೆ ಖಂಡ ಅಥವಾ ಪಾರ್ಶ್ವ ಸೂರ್ಯಗ್ರಹಣ. ನಮಗೆ ಗ್ರಹಣ ದರ್ಶನ ಸಿಗಬಹುದು ಪ್ರಕೃತಿ ಒಲಿದರೆ ಮಾತ್ರ.

ಈ ಕುರಿತು ಇನ್ನಷ್ಟು ವಿವರಕ್ಕೆ ನೀವು ಕೆಂಡ ಸಂಪಿಗೆಯಲ್ಲಿ ನಿನ್ನೆ ಪ್ರಕಟವಾದ ನನ್ನ ಬರಹ ಬುಧವಾರ ಸವಿನಿದ್ದೆಯ ಹೊತ್ತು ಸಂಭವಿಸಲಿದೆ ಸೂರ್ಯಗ್ರಹಣ ನೋಡಬಹುದು

ಮೊನ್ನೆ ಮೊನ್ನೆ ಶಾಲೆಯ ಅಧ್ಯಾಪಿಕೆ ನನ್ನನ್ನು ಸಂಪರ್ಕಿಸಿ, ಗ್ರಹಣದ ಬಗ್ಗೆ ಉಪನ್ಯಾಸ ನೀಡಲು ಆಮಂತ್ರಿಸಿದರು. ಅವರಿಗೆ ಮಕ್ಕಳಿಗೆ ಒಂದಷ್ಟು ಗಗನ ವಿದ್ಯಮಾನದ ಬಗ್ಗೆ ಅರಿವು ಮೂಡಿಸಬೇಕೆನ್ನುವ ನಿಜ ಉತ್ಸಾಹ. ಆದರೆ ನನಗೋ ಸರ್ಪ ಸುತ್ತಿಕೊಂಡಿತ್ತು. ಅರೇ ಇದೇನಿದು? ಹರ್ಪಿಸ್, ಹೊಟ್ಟೆಯಲ್ಲಿ ಪಟ್ಟಿಯಾಕಾರದಲ್ಲಿ ಕೀವು ತುಂಬಿದ ಬೊಕ್ಕೆಗಳು, ಯಮಯಾತನೆ, ಜ್ವರ ಬೇರೆ.  ಇದು ನನ್ನ ಆರೋಗ್ಯಕ್ಕೆ ಹೊಡೆದ ತಾತ್ಕಾಲಿಕ ಗ್ರಹಣ. “ಮಂತ್ರಿಸಿದ ತೆಂಗಿನಕಾಯಿಯಿಂದ ಸರ್ಪದೋಷದ ತನಕ ಸಲಹೆ ಕೊಟ್ಟವರು ಹಲವರು. ಅದು ಬೇರೆಯೇ ಕಥೆ  ಈ ಕುರಿತು ಇನ್ನೊಂದು ಬಾರಿ ಬರೆಯುತ್ತೇನೆ – ಸ್ವಗತದಲ್ಲಿ!

ಬರಲಾಗದ ನನ್ನ ಅಸಹಾಯಕತೆ ತೋಡಿಕೊಂಡಾಗ, ಬೇರೊಬ್ಬರನ್ನು ಸೂಚಿಸಲು ವಿನಂತಿಸಿದರು. ನಾನು ಒಬ್ಬರನ್ನು ಸೂಚಿಸಿದೆ. ಅವರು ಉನ್ನತ ವಿದ್ಯಾಪಾರಂಗತರು. ಬೌದ್ಧಿಕವಾಗಿ ಎತ್ತರದಲ್ಲಿರುವವರು. ಆದರೆ ನನಗೆ ಆಶ್ಚರ್ಯವಾದದ್ದು ಅವರು ಹೌಹಾರಿ ತಿರಸ್ಕರಿಸಿದರಂತೆ “ಅಯ್ಯಯ್ಯೋ , ಆದಿನ ನನಗೆ ಉಪವಾಸ, ಮಕ್ಕಳೂ ಮಾಡಬೇಕಲ್ಲ”  ಅಂದರೆ ಸಾಂಪ್ರದಾಯಿಕವಾಗಿ ಬಂದ ನಂಬಿಕೆಗಳ ಪಳೆಯುಳಿಕೆಗಳು ಬಂದನಿಕೆಗಳಾಗಿ ಹಿಡಿದಿವೆ  ಎಷ್ಟೊಂದು ಬಿಗಿಯಾಗಿ!

ಅಂದ ಹಾಗೆ ಇಲ್ಲೊಂದು ಸುದ್ದಿ ಎದ್ದಿದೆ.  ಯರೋ ದೈವಜ್ಞರು ಅಪ್ಪಣೆ ಕೊಡಿಸಿದ್ದಾರೆ

ಹನ್ನೊಂದು ಗಂಟೆಯ ಹೊತ್ತಿಗೆ ಸೂರ್ಯನಿಗೆ ರಾಹುವಿನಿಂದ ಮುಕ್ತಿ

ಹಾಗಾಗಿ ಗ್ರಹಣ ದಿನ ಕೆಲವು ಶಾಲೆ ಕಾಲೇಜುಗಳಲ್ಲಿ ತರಗತಿ ಆರಂಭವಾಗುವುದು ಬೆಳಗ್ಗೆ ಹನ್ನೊಂದರ ಬಳಿಕವೇ. ಇನ್ನು ಕೆಲವುಗಳಿಗೆ ರಜೆ ಘೋಷಿಸಲಾಗಿದೆ.

ಸರಕಾರವೇ ಮಧ್ಯ ಪ್ರವೇಶಿಸಿ ಸಾರ್ವತ್ರಿಕ ರಜಾ ಘೋಷಣೆ ಮಾಡಿತೇ? ಹಾಗಾದರೆ ಅಚ್ಚರಿಯೇನೂ ಇಲ್ಲ. ಏಕೆಂದರೆ ಯಾವುದು ಸಂಸ್ಕೃತಿಯ ಭಾಗ? ಯಾವುದನ್ನು ತೊಡೆಯಬೇಕು? ಯಾವುದನ್ನು ಉಳಿಸಿಕೊಳ್ಳಬೇಕು? – ಇಂಥ ಪರಿಜ್ಞಾನ ಬರುವ ವೈಜ್ಞಾನಿಕ ಮನೋಭಾವದ ಅಭಾವ ಇರುವ ಮಂದಿ ಆಳಲು ತೊಡಗಿದರೆ ಇಂಥೆಲ್ಲ ಅಧ್ವಾನಗಳು ನಿರೀಕ್ಷಿತವೇ.

ನಾವು ಸಮುದಾಯವಾಗಿ ಬದಲಾಗುವುದು ಯಾವಾಗ? ಅರಿವಿನ, ತಿಳಿವಿನ ಕೇಂದ್ರವಾಗಬೇಕಾದಲ್ಲಿಯೇ ಅಂಧನಂಬುಗೆಗೆ ಆಸ್ಪದವೇ? ಚಂದ್ರಯಾನದ ರೂವಾರಿಗಳನ್ನು ಸೃಷ್ಟಿಸಿದ ನಮ್ಮ ಶಾಲೆ ಕಾಲೇಜುಗಳಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಪ್ರಯತ್ನ ಪೂರ್ವಕ ನಾವು ಮೂಡಿಸಬೇಡವೇ?

ಹೇ, ಇದು ನಂಬಿಕೆಯ ಪ್ರಶ್ನೆ. ಆ ದಿನ ನಮ್ಮ ಸಂಪ್ರದಾಯದಂತೆ ನಡೆದರೆ ದೊಡ್ಡ ಕಳೆದುಕೊಳ್ಳುವುದು ಎನೂ ಇಲ್ಲ

ಎನ್ನುವ ದನಿ ಕೇಳಿಸುತ್ತದೆ. ಆದರೆ ಇದು ಅಷ್ಟು ಸರಳವಲ್ಲ. ಇಂಥ ನಂಬಿಕೆಗಳಿಗೆ ಹಲವು ಆಯಾಮಗಳುಂಟು ಎನ್ನುವುದನ್ನು ಮರೆಯಬಾರದು. ಒಬ್ಬ ವ್ಯಕ್ತಿಯ ನಂಬುಗೆ, ಮನೆಯೊಳಗಿನ ಆಚರಣೆ ಅಲ್ಲಿಗೆ ಚಂದ ಇರಬಹುದು. ಅವನ ಮತ್ತು ಅವನ ಮನೆಯವರ ಸುಖಕ್ಕೆ ಅದು ಅಲ್ಲಿಯೇ ಇರಲಿ – ಬೇಕಾದರೆ ಶತ ಶತಮಾನಗಳ ತನಕವೂ. ಆದರೆ ಅದು ಅಲ್ಲಿಂದ ಹೊರಬಿದ್ದು ಬೀದಿಯಲ್ಲೆಲ್ಲ ರೊಚ್ಚೆ ಎಬ್ಬಿಸುವ ಬಗೆ ಮಾತ್ರ ಕೊಳಕು, ರೇಜಿಗೆ ಉಂಟು ಮಾಡುವದ್ದು. ಅದು ಖಂಡನೆಗೆ ಅರ್ಹವಾದದ್ದು.

ನಾಗರೀಕತೆ ಬೆಳೆದು ಬಂದ ಬಗೆಯನ್ನು ಗಮನಿಸಬೇಕು. ಟಾಯ್ನಬಿ ಬರೆಯುತ್ತಾನೆ

ಅಂಧ ನಂಬುಗೆಗಳ ಎದುರಿನ ಹೋರಾಟವೇ ನಾಗರೀಕತೆಯ ಉಗಮದ ಬಿಂದು. ಇಂಥ ಹೋರಾಟಗಳು ಮನುಕುಲದ ಇತಿಹಾಸವನ್ನು ಸೃಷ್ಟಿಸಿವೆ.

ಅಂಧ ನಂಬುಗೆಗಳ  ದುರ್ಗಮ ಹುತ್ತಗಳನ್ನು ಒಂದೊಂದಾಗಿ ಕಡಿಯುತ್ತ ಬರಲು ವಿಜ್ಞಾನ ಪಟ್ಟ ಪಡಿಪಾಡುಗಳಿಗೆ ವಿಜ್ಞಾನ ಇತಿಹಾಸವನ್ನು ಗಮನಿಸಬೇಕು. ಹಾಗಾಗಿಯೇ ಗ್ರಹಣ ಕಾಲದ ನಮ್ಮ ಸಂಪ್ರದಾಯದ ಮೌಡ್ಯದ ಆಚರಣೆಯನ್ನು ವಿಜ್ಞಾನವನ್ನು ಕಲಿತ ಮತ್ತು ನಿತ್ಯ ವಿಜ್ಞಾನವನ್ನು ಬಗೆ ಬಗೆಯ ರೀತಿಯಲ್ಲಿ ಬಳಸುತ್ತಿರುವ ನಾವು ಅನುಸರಿಸುವುದೆಂದರೆ ವಿಜ್ಞಾನ ನಿರ್ಮಾಪಕರಿಗೆ ನಾವು ಮಾಡುವ  ಅಪಮಾನ. ಹಾಗಾಗದಿರಲಿ.

ಸಮುದಾಯವಾಗಿ ನಾವು ಬದಲಾಗುವುದು ಯಾವಾಗ?  ಬದಲಾಗಲು ಮುಚ್ಚಿದ ಮನದ ಕದ ತೆರೆಯಬೇಕು. ಬರಲಿ ಹೊಸ ಚಿಂತನೆಯ ಗಾಳಿ. ಸಿಗಲಿ ವೈಚಾರಿಕ ಪ್ರಜ್ಞೆಗೆ ಬಡಿದ ಗ್ರಹಣಕ್ಕೆ ಶಾಶ್ವತ ಮೋಕ್ಷ.

Posted in ಖಗೋಳವಿಜ್ಞಾನ, ವಿಜ್ಞಾನ ಲೇಖನಗಳು

ಭೂರಮೆಯ ತಾಜಾ ಸುಂದರಿ ವಾಲ್ಪಾರೈ
ನಿತ್ಯ ಬದುಕಿನ ಏಕತಾನತೆಯಿಂದ ಒಂದಷ್ಟು ಬಿಡುಗಡೆಗೆ ಮನ ಹಾರೈಸುತ್ತಿತ್ತು. ಊಟಿ, ಮುನ್ನಾರ್, ಕೊಡೈಕನಾಲ್ ಪ್ರವಾಸೀ ತಾಣಗಳಾಗಿ ಸುಪ್ರಸಿದ್ಧ. ಇವುಗಳಿಗೆ  ಸ್ಟಾರ್ ವ್ಯಾಲ್ಯೂ ಬಂದಿದೆ – ಸ್ಟಾರ್ ಹೋಟೇಲುಗಳೊಂದಿಗೆ. ಅಲ್ಲಿಗೆ ಹೋದರೆ ಹೇಗೆ? ಅಲ್ಲಾದರೋ ಮೇ ತಿಂಗಳಿನಲ್ಲಿ ಜನಜಂಗುಳಿ ಗಿಜಿಗುಟ್ಟುತ್ತಿರಬಹುದು. ವಾಲ್ಪಾರೈ ಅಥವಾ  ಷೊಲೆಯಾರ್ ?  ಪ್ರವಾಸಿಗಳಿಗೆ ಹೆಚ್ಚು ತೆರೆದುಕೊಳ್ಳದ ಮತ್ತು ಹಾಗಾಗಿ ತಮ್ಮ ತಾಜತನ ಉಳಿಸಿಕೊಂಡ ರಮ್ಯ ತಾಣಗಳಿವು. ಊಟಿ ಮತ್ತು ಮುನ್ನಾರಿಗೆ  ಸಮೀಪವಿರುವ ಈ ತಾಣಗಳಿಗೆ ಕುಟುಂಬ ಸಮೇತ ಭೇಟಿ ನೀಡುವ ಅವಕಾಶ ದೊರೆತದ್ದು ಆತ್ಮೀಯರೂ ಬಂಧುಗಳೂ ಆದ ಗಣೇಶನ್ ಅವರಿಂದಾಗಿ.

ಗಣೇಶನ್ ವಾಲ್ಪಾರೈನಿಂದ ಇಪ್ಪತ್ತು ಕಿಮೀ ದೂರದ  ಮನಂಬೋಲಿ  ಜಲವಿದ್ಯುದ್ ಗಾರದ   ಮುಖ್ಯಸ್ಥರು. ಅದೊಂದು ಕಿರು ವಿದ್ಯುತ್ ಘಟಕ. ಇದು ಕೊಯಂಬುತ್ತೂರಿನಿಂದ ಸುಮಾರು ನೂರಿಪ್ಪತ್ತು  ಕಿಮೀ ದೂರದಲ್ಲಿದೆ.   ಅವರು ಸಿಕ್ಕಾಗಲೆಲ್ಲ  ಹೇಳುತ್ತಿದ್ದರು, “ನೀವೊಮ್ಮೆ ಬರಬೇಕು ವಾಲ್ಪರೈನ ದಟ್ಟ  ಕಾನನದ ನಡುವೆ ಇರುವ ನಮ್ಮ ಮನೆಗೆ.” ಅವರ ಪ್ರೀತಿಯ ಕರೆಗೆ ಅಲ್ಲಿಗೆ ಹೋದ ಮೇಲೆ ಉದ್ಗರಿಸಿದ್ದು ’ಆಹಾ, ಸ್ವರ್ಗ ಬೇರೆ ಎಲ್ಲೂ ಇಲ್ಲ, ಇಲ್ಲಿದೆ’!

ನಾವು ಮಂಗಳೂರಿನಿಂದ ಬೆಳಗ್ಗೆ ಆರೂವರೆಯ ಹೊತ್ತಿಗೆ ರೈಲೇರಿ  ಹೊರೆಟೆವು ಕೊಯಂಬುತ್ತೂರಿಗೆ.  ಉತ್ತು ಹದ ಮಾಡಿ ಬರಲಿರುವ ಮಳೆಗಾಗಿ ಕಾಯುತ್ತಿದ್ದ ಗದ್ದೆಗಳು, ನದಿ ಸರೋವರಗಳು ..  ಕೇರಳದ ನಿಸರ್ಗ ಸೌಂದರ್ಯವನ್ನು ವೀಕ್ಷಿಸುತ್ತ ನಡು ನಡುವೆ  ಹೊತ್ತು ತಂದ ಹೊಟ್ಟೆಯ ಸರಂಜಾಮುಗಳನ್ನು  ತಣ್ಣಗೆ ಹೊಟ್ಟೆಯೊಳಗೆ ಇಳಿಸಿಕೊಳ್ಳುತ್ತ ಸಂಜೆ ಮೂರರ ಹೊತ್ತಿಗೆ ಕೊಯಂಬುತ್ತೂರನ್ನು ಸಮೀಪಿಸಿದೆವು .  ಪಾಲ್ಘಾಟ್ ಜಂಕ್ಷನ್ ದಾಟಿ ಕೊಯಂಬುತ್ತೂರು ಬರುತ್ತಿರುವಂತೆ  ಗೋಚರಿಸತೊಡಗಿದುವು ಕಲ್ಲು ಬಂಡೆಗಳ ಪರ್ವಾತಾವಳಿಗಳು. ನಾವು ಮುಂದೆ ಹೋಗಲಿರುವ ಜಾಗದ ಕಲ್ಪನೆ ಆದಾಗಲೇ ಮೂಡತೊಡಗಿತ್ತು.  ಕೊಯಂಬುತ್ತೂರು ರೈಲ್ವೇ ನಿಲ್ದಾಣದಲ್ಲಿ ಇಳಿದಾಗ ರಿಕ್ಷಾ, ಕಾರಿನ ಮಂದಿ ಮುತಿಕೊಂಡರು. ಆದರೆ  ಗಣೇಶನ್   ಕಾಯುತ್ತಿದ್ದರು ನಮಗಾಗಿ

ತಿರ್ಗಾಸುಗಳನೇರಿ

ಕೊಯಂಬುತ್ತೂರಿನಿಂದ ಕ್ವಾಲಿಸ್ ನಲ್ಲಿ ನಮ್ಮ ಪಯಣ ತೊಡಗಿತು ಪೊಲ್ಲಾಚಿ ಕಡೆಗೆ.  ಪೊಲ್ಲಾಚಿ ತೆಂಗಿನ ನಾರು ಉದ್ಯಮಕ್ಕೆ ಪ್ರಸಿದ್ಧವಂತೆ. ಏರು ತಗ್ಗುಗಳಿಲ್ಲದ, ಪಟ್ಟಿ ಬಳಿದುಕೊಂಡ  ಅಗಲವಾದ ಹೆದ್ದಾರಿ.  ಮೈಲುಗಟ್ಟಲೆ ದೂರಕ್ಕೆ ಹರಡಿ ಹೋದ ತೆಂಗಿನತೋಟಗಳು, ಕಬ್ಬಿನ ಹೊಲಗಳು. ಪೊಲ್ಲಾಚಿ ದಾಟಿ ಬಂದಾಗ ಅಲೆಯಾರ್  ಅಣೆಕಟ್ಟು ಗೋಚರಿಸಿತು. ಇದೊಂದು ಕಿಮೀ ಉದ್ದದ ಅಣೆಕಟ್ಟು. ನದಿಯ ನೀರು ಕಡಿಮೆ ಇದ್ದುದರಿಂದ ಹೊರ ಹರಿವು ನಿಂತಿತ್ತು.

ಅಣೆಕಟ್ಟಿನ ಬದಿಯಲ್ಲೇ ವಿಶಾಲ ಉದ್ಯಾನವನ. ಅಲ್ಲಿ ಜನ ಗಿಜಿ ಗುಟ್ಟುತ್ತಿತ್ತು. ಉದ್ಯಾನವನದ ಹೊರಗೆಲ್ಲ ಹರುಕು ಮುರುಕು ಅಂಗಡಿಗಳು. ತೋತಾಪುರಿ ಮಾವಿನಕಾಯಿಯ ಉಪ್ಪೇರಿ ಮತ್ತು ಅದರೊಂದಿಗೆ ಬಿಸ್ಲೇರಿಯ ಭರಪೂರ ಮಾರಾಟ. ಉದ್ಯಾನವನದ ನಡುವೆ ಕೃತಕವಾಗಿ ನಿರ್ಮಿಸಿದ ಕಿರು ತೊರೆ. ಮೊಣಕಾಲು ಮುಳುಗದ ಆ ತೊರೆಯಲ್ಲಿ ಹರಿದಾಡುವ ಚಿಣ್ಣರೆಂಬೋ ದೊಡ್ದವರು. ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ತೊಟ್ಟೆ, ಬಾಟಲಿಗಳು, ಊಟದ ಹಾಳೆಗಳು. ನಮ್ಮ ಪ್ರವಾಸೀ ಸಂಸ್ಕೃತಿಯನ್ನು ಪೂರ್ಣ ಪ್ರಮಾಣದಲ್ಲಿ ಬಿಂಬಿಸುತಿತ್ತು.

ಪೊಲ್ಲಾಚಿಯಿಂದ ಮತ್ತಷ್ಟು ಉತ್ತರಕ್ಕೆ  ಸರಿದಂತೆ  ಧುತ್ತನೆ ಕಾಣಿಸಿಕೊಳ್ಳತೊಡಗಿದುವು ಗಗನಚುಂಬಿ ಪರ್ವತ ಶ್ರೇಣಿಗಳು.  ಈ ಶ್ರೇಣಿಗಳನ್ನು ಹತ್ತಿ ಇಳಿದು ಸಾಗಬೇಕಾಗಿತ್ತು. ಸುಮಾರು 5000 ಅಡಿ ಎತ್ತರದಲ್ಲಿರುವ ವಾಲ್ಪಾರೈ ತಲುಪಲು. ಇದು ಅಂತಿಂಥ ಘಾಟಿಯಲ್ಲ ಅಸಾಮಾನ್ಯ ಘಾಟಿ. ಶಿರಾಡಿ, ಸಂಪಾಜೆ, ಆಗುಂಬೆಗಿಂತಲೂ ದುರ್ಗಮ.   ಚಡಾವುಗಳನ್ನು , ತಿರ್ಗಾಸುಗಳನ್ನು ಏರುತ್ತ ನಮ್ಮನ್ನು ಹೊತ್ತ ಕ್ವಾಲಿಸ್ ಸಾಗಿದಂತೆ  ಎಡ ಬಲಗಳಲ್ಲಿ ಪ್ರಾಕೃತಿಕ ವರ್ಣ ವೈಭವ  ಅದ್ಬುತವಾಗಿ ಅನಾವರಣಗೊಳ್ಳತೊಡಗಿತು.

ನಲುವತ್ತೈದು ಕಡಿದಾದ ತಿರುವುಗಳನ್ನು ಏರಿಳಿದು ನಾವು ಸಾಗಬೇಕಾದ ಆ ಘಾಟಿ  ಹೆಚ್ಚಿನ ಕಡೆ ಕಲ್ಲಿನ ಬಂಡೆಯ ಬದಿಯಲ್ಲೇ ತೆವಳುತ್ತ ಸಾಗುತ್ತಿತ್ತು.   ಈ ಹಾದಿಯನ್ನು ಮೊದಲು ರೂಪಿಸಿದವನು ಬ್ರಿಟಿಷ್ ಎಂಜನೀಯರ್ ಲೂಮ್ಸ್ 1845ರ ಸುಮಾರಿಗೆ!. ಹಾಗಾಗಿ ಅವನ ನೆನಪಿಗೆಂದೇ ಘಾಟಿಯ ನಡುವೆ, ಒಂದು ವೀಕ್ಷಣಾ ಸ್ಥಳವನ್ನು ರೂಪಿಸಿದ್ದಾರೆ. ಅಲ್ಲಿಂದ ನೋಡಿದರೆ ಕಣ್ಣು ದಣಿವಷ್ಟು ದೂರಕ್ಕೆ   ಚಾಚಿಕೊಂಡಿತ್ತು  ಆಳ ಕಮರಿ, ದೂರದಲ್ಲಿ ಜಲಾಶಯ, ದಿಗಂತದಂಚಿನಲ್ಲೆಲ್ಲೋ ಪೊಲ್ಲಾಚಿ, ಕೊಯಂಬುತ್ತೂರು ಪಟ್ಟಣಗಳು. ಕೆಳಕ್ಕೆ ಕಮರಿಯಾಳಕ್ಕೆ ತೆವಳುತ್ತ ಸಾಗಿತ್ತು  ನಾವು ಬಂದ ಹಾದಿ. ಮೇಲೆ ಆಕಾಶದೆತ್ತರಕ್ಕೆ ಚಾಚಿಕೊಂಡ ಪರ್ವತಶ್ರೇಣಿ. ಅಲ್ಲೋ ಇಲ್ಲೋ ಸಾಗುವ ವಾಹನಗಳ ಏದುಸಿರನ್ನು ಬಿಟ್ಟರೆ ಕವಿದಿತ್ತು ಅಲ್ಲಿ ಗಾಢ ಮೌನ ಮತ್ತು ಮುಸ್ಸಂಜೆಯ ತಣ್ಣಗಿನ ಹವೆ. ನಡುನಡುವೆ ಸುಳಿಸುಳಿದು ಬರುತ್ತಿದ್ದ ಮೋಡಗಳ ಮಾಲೆ. ಅದೊಂದು ಮರೆಯಲಾಗದ ಅನುಭವ.

ಆದರೆ ನಮಗೆ ತೀರ ಅಚ್ಚರಿಯಾದದ್ದು ಆ ಹಾದಿಯನ್ನು ಇಟ್ಟುಕೊಂಡ ಬಗೆ.  ನಡುವೆ ಮತ್ತು ಬದಿಗಳಲ್ಲಿ ಬಿಳೆ ಮತ್ತು ಹಳದಿ ಬಣ್ಣದ ಪಟ್ಟಿ ಬಳಿದುಕೊಂಡು ಹೆಬ್ಬಾವಿನಂತೆ ಬಿದ್ದಿತ್ತು ಹಾದಿ. ಅದರಲ್ಲಾದರೋ ಒಂದಿಷ್ಟೂ ಗುಂಡಿ ಗುಳುಪುಗಳಿರಲಿಲ್ಲ. ಆಗ ಅಯಾಚಿತವಾಗಿ ಮತ್ತೆ ಮತ್ತೆ ನೆನಪಾದದ್ದು ನಮ್ಮೂರಿನ ಶಿರಾಡಿ, ಸಂಪಾಜೆಯ ದರಿದ್ರಾವಸ್ಥೆ. ಅಲ್ಲಿರುವಂತೆ ಇಲ್ಲಿಯೂ ಹೊಂಡ ಕೊರಕಲುಗಳ ನಡುವೆ ಹಾದಿಯನ್ನು ಹುಡುಕುವಂತಿದ್ದರೆ ನಮ್ಮ ಪಯಣಕ್ಕೆ ಇನ್ನಷ್ಟು ರುಚಿ ಬರುತ್ತಿತ್ತೇನೋ!. ನಮ್ಮಲ್ಲಿ ಮಳೆ ಜಾಸ್ತಿ, ಹಾಗಾಗಿಯೇ    ಶಿರಾಡಿ, ಸಂಪಾಜೆಗಳು ಹಾಗಾಗಿರುವುದು ಎನ್ನುವ ಸಬೂಬು ನೀಡಬಹುದು ನಾವು – ನಮ್ಮ ತೃಪ್ತಿಗಾಗಿ. ಆದರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಚಿರಾಪುಂಜಿ, ಆಗುಂಬೆಯ  ನಂತರದ ಸ್ಥಾನ  ವಾಲ್ಪರೈಗೆ. ಇಲ್ಲಿ ಮಳೆಗಾಲದುದ್ದಕ್ಕೂ ಜಿಟಿಗುಟ್ಟುತ್ತ ಮಳೆ ಸುರಿಯುತ್ತದೆಯಂತೆ ! ನಾವಿದ್ದ ಎರಡು ದಿನವೂ ಅಲ್ಲಿ ಮಳೆ ಸುರಿದಿತ್ತು.

ಅದಾಗಲೇ ಕತ್ತಲೆ ಮುಸುಕತ್ತ  ಮಂಜು ದಟ್ಟವಾಗತೊಡಗಿತು, ಮಂಜಿನ ರಾಶಿಯನ್ನು ಸೀಳಿಕೊಂಡು ಸಾಗಿದ ನಮ್ಮ ವಾಹನ  ಅಟಕಟ್ಟಿ  ಎಂಬಲ್ಲಿ  ನಿಂತಿತು ಚಹಾ ಗುಟೇಕೇರಿಸಲು ಆ ತಿರ್ಗಾಸಿನಲ್ಲೊಂದು ಚಹಾದಂಗಡಿ. ಪಾತ್ರೆಗಳ ನಡುವೆ ಹಬೆಯ ಚಹಾ ಹಾರುತ್ತಿತ್ತು, ಬೀಡಿ ಎಳೆಯುತ್ತ ಹರಟೆ, ಮೋಜಿನಲ್ಲಿ ಟೀ ತೋಟದ ಕೆಲಸಗಾರರು  ತಲ್ಲೀನರಾಗಿದ್ದರು.   ತೇಜಸ್ವಿಯವರ ನಿಗೂಢ ಮನುಷ್ಯರ ಕಥಾಲೋಕವೊಂದು ಅಲ್ಲಿ ಪ್ರತ್ಯಕ್ಷವಾದಂತಿತ್ತು. ಅಟಕಟ್ಟಿಯ ಕಣಿವೆಯಾಳದ ದಟ್ಟ ಕಾನನದ ನಡುವೆ ಕಾಡಂಪಾರೈ ವಿದ್ಯುತ್ ಘಟಕವಿದೆ. ಗಣೇಶನ್ ಕೆಲವು ವರ್ಷಗಳ ಹಿಂದೆ ಅಲ್ಲಿ ಕೆಲಸ ಮಾಡುತ್ತಿದ್ದರಂತೆ.

ಮನಂಬೋಲಿ

ಐದು ಗಂಟೆಗಳ ಸತತ ಪಯಣದ ಬಳಿಕ ನಾವು ಬಂದದ್ದು ಉರಲೀಕ್ಕಲ್ ಚೆಕ್ ಪೋಸ್ಟ್ ಬಳಿಗೆ. ಅಲ್ಲಿದ್ದ ಪೋಲೀಸಪ್ಪ ಆಕಳಿಸುತ್ತ ಮೈಮುರಿದುಕೊಂಡು ಬಂದ ನಮ್ಮ ವಾಹನದೆಡೆಗೆ. ಆ ವೀರಪ್ಪನ್ ಮೀಸೆಯಡಿಯಲ್ಲಿ ಎಂಥ ಪೋಕರಿಗಳೂ ನಡುಗಬೇಕಿತ್ತು. ಪರಿಚಿತ ಗಣೇಶನ್ ಅವರನ್ನು ಕಂಡೊಡನೆ ಮೀಸೆಯಡಿಯಲ್ಲಿ ಕಂಡುವು ಬಿಳಿಯ ದಂತಪಂಕ್ತಿ. ಅವರಿಗೊಂದು ಸಲಾಮು ಹೊಡೆದದ್ದು ನಮಗೇ ಕೊಟ್ಟ  ಸಲಾಮು ಎಂಬಂತೆ ಸ್ವೀಕರಿಸಿದೆವು.

ಅಲ್ಲಿಂದ ನಮ್ಮ ಕ್ವಾಲಿಸ್ ಒಮ್ಮೆಲೇ ಇಳಿಯತೊಡಗಿತು ಕಣಿವೆಯಾಳದ ದಟ್ಟ ಕಾನನದ ಕಡೆಗೆ. ನಾವಿನ್ನೂ ಸುಮಾರು ಇಪ್ಪತ್ತು ಕಿಮೀ ಸಾಗಬೇಕಾಗಿತ್ತು.   ರಾತ್ರೆಯ ನಿಶ್ಯಬ್ದವನ್ನು ವಾಹನದ ಸದ್ದು ಕದಡುತ್ತಿರುವಂತೆ ಗಣೇಶನ್ ಹೇಳಿದರು – “ಇದು ರಕ್ಷಿತಾರಣ್ಯ. ಎಲ್ಲ ಬಗೆಯ ಪ್ರಾಣಿಗಳಿವೆ. ಚಿರತೆ, ಹುಲಿ, ಆನೆ, ಕಾಡು ಕೋಣಗಳು.. ಇಲ್ಲಿ ದ್ವಿಚಕ್ರಿಗಳು ಹೋಗುವುದು ತೀರ ಅಪಾಯ.  ವರ್ಷದ ಹಿಂದೆ ತರುಣ ಎಂಜನೀಯರ್ ಬೈಕೇರಿ ಕಾಡು ಹಾದಿಯಲ್ಲಿ ಸಾಗುವಾಗ ಮದಗಜದ ಪದತಲಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ” ಅವರು ಹಾಗೆ  ಹೇಳಿ ಮುಗಿಸುವುದರೊಳಗೆ ನಾಲ್ಕೈದು ಕಡವೆಗಳು – ಆನೆಗಳಲ್ಲ – ಕಾಣಿಸಿಕೊಂಡುವು. ವಾಹನದ ಬೆಳಕನ್ನು ಬೆದರು ಗಣ್ಣುಗಳಿಂದ ನಿಟ್ಟಿಸುತ್ತ ತಮ್ಮ ಲಾವಣ್ಯ ಮೆರೆದು ಛಂಗನೆ ನೆಗೆದು ಕಾಡೊಳಗೆ ಮರೆಯಾದುವು.

ಗಂಟೆಗಳ ಪಯಣದ ಬಳಿಕ ನಾವು ತಲುಪಿದ್ದು ನಮ್ಮ ಗಮ್ಯ ಸ್ಥಾನವಾದ ಮನಂಬೋಲಿ ವಿದ್ಯುದ್ ಗಾರದ ಬಳಿಯಲ್ಲೇ ಇರುವ ಗನೇಶನ್ ಅವರ ಕ್ವಾರ್ಟಸ್ಸಿಗೆ. ಅಂದರೆ ಸರಕಾರೀ ಕೃಪಾಪೋಷಿತ ಮನೆಗೆ. ನಮಗಾಗಿ ಕಾಯುತ್ತಿದ್ದರು ಗಣೇಶನ್ ಅವರ ಪತ್ನಿ   ಸುಲೋಚನಾ ಮತ್ತು ಬಿಸಿಬಿಸಿಯಾದ ಊಟ. ಹಿತವಾದ ಆ ಚಳಿಯಲ್ಲಿ ಬಿಸಿಯೂಟದ ಸವಿ ಪಯಣದ ಆಯಾಸವನ್ನು ಪರಿಹರಿಸಿ ಗಾಢ ನಿದ್ದೆಗೆ ನಾಂದಿ ಹಾಡಿತು.

ಮರುದಿನದ  ಬೆಳ್ಳಂಬೆಳಿಗ್ಗೆ ಮನೆಯ ಹೊರಗೆ ಬಂದಾಗ – ನಮ್ಮೆದುರು ದಟ್ಟ ಹಸಿರಿನ ಅನನ್ಯ  ಸೌಂದರ್ಯ ಹರಡಿ ಚೆಲ್ಲಿತ್ತು.  ಸುತ್ತೆಲ್ಲ ಕಾಡು. ಮೇ ತಿಂಗಳಿನಲ್ಲೂ ಚಳಿ. ಕಾಡಿನ ತುಂಬ ದಟ್ಟ ಮಂಜಿನ ಹೊಗೆ. ದೂರದಲ್ಲಿ ಇನ್ನೂ ಜೀವಂತವಾಗಿ ಉಳಿದಿರುವ ಜಲಪಾತ – ಹಸಿರು ಸೀರೆಯಂಚಿನ ಬೆಳ್ಳಿ ಮೆರಗು. . ಮನೆಯ ಸುತ್ತಲಿನ ಕಾಡಿನಲ್ಲಿ ಬೇರೆ ಪ್ರಾಣಿಗಳು ಕಾಣಿಸದೇ ಹೋದರೂ ಮಂಗಗಳು ಮಾತ್ರ ಯಥೇಚ್ಚವಾಗಿದ್ದುವು. ಹೊಸದಾಗಿ ಬಂದ ತಮ್ಮ ವಂಶಜರನ್ನು ನೋಡುವುದಕ್ಕೋ ಎಂಬಂತೆ ಮನೆಯ ಸುತ್ತುಮುತ್ತ ಅವುಗಳ ನೆಗೆತ ನಡೆದೇ ಇತ್ತು.

ಮನಂಬೋಲಿ ಒಂದು ಕಿರು ವಿದ್ಯುತ್ ಘಟಕ. ಇದು ಸ್ಥಾಪನೆಯಾದದ್ದು 1971ರಲ್ಲಿ, ಅಂದಿನ ಮುಖ್ಯಮಂತ್ರಿ ಕಾಮರಾಜ್ ನಾಡಾರ್ ಕಾಲದಲ್ಲಿ. ಮೇಲ್ಗಡೆಯ ಪರ್ವತ ಶ್ರೇಣಿಗಳಲ್ಲಿರುವ ಪಾಲಾರ್ ಮತ್ತು ಶೋಲೆಯಾರ್ ನದಿಗಳ ಕಿರು  ತೊರೆಗಳಿಗೆ ಒಡ್ಡು ಕಟ್ಟಿದ ನೀರು ಸುಮಾರು ಎಂಟು ಕಿಮೀ ದೂರಕ್ಕೆ ಬೃಹದಾಕಾರದ ಪೈಪುಗಳಲ್ಲಿ ಬಂದು ಟರ್ಬೈನುಗಳಿಗೆ ಬಡಿದು ಟರ್ಬೈನು ತಿರುಗುತ್ತ ವಿದ್ಯುತ್ ಉತ್ಪಾದನೆಯಾಗುತ್ತದೆ. ಟರ್ಬೈನಿನಿಂದ ಹೊರ ಹರಿದ ನೀರ ಅರಣ್ಯದೊಳಕ್ಕೆ ತೊರೆಯಾಗಿ ಸಾಗುತ್ತದೆ ಇನ್ನು ಕೆಳಗಿನ ಕಣಿವೆಯ ಆಳಕ್ಕೆ. ವಾರದ ಹಿಂದೆ ಹುಡುಗನೊಬ್ಬ ಆ ತೊರೆಯಲ್ಲಿ ಈಜಲು ಹೋದಾಗ ಮೊಸಳೆ ಗಬಕ್ಕನೆ ಹಿಡಿಯಿತಂತೆ ಅವನ ಕಾಲನ್ನು. ಹುಡುಗ ಪ್ರಸಂಗಾವಧಾನತೆ ತೋರಿ ಮೊಸಳೆಯ ಕಣ್ಣಿಗೆ ಕೈ ಹಾಕಿದ. ಕಸಿವಿಸಿಗೊಂಡ ಮೊಸಳೆ ಬಾಯಿ ಬಿಟ್ಟಿತು. ಹುಡುಗ ತಪ್ಪಿಸಿಕೊಂಡು ದಡ ಸೇರಿದನಂತೆ. ಚಿಕಿತ್ಸೆಗೆ ಅಲ್ಲಿ ವೈದ್ಯಕೀಯ ವ್ಯವಸ್ಥೆ ಎಂಬುದೇ ಇಲ್ಲ. ದೂರದ ವಾಲ್ಪಾರೈಗೆ ಹೋಗಬೇಕು.

ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರು ಸಾಕಷ್ಟು ಇರದಿರುವ ಕಾರಣದಿಂದ ಎರಡು ತಿಂಗಳು ವಿದ್ಯುತ್ ಘಟಕಕ್ಕೆ ವಾರ್ಷಿಕ ರಜೆ. ಈ ಹೊಸ ರಜಾ ವ್ಯವಸ್ಥೆ ಇತ್ತೀಚೆಗಿನ ವರ್ಷಗಳಲ್ಲಿ ಜಾರಿಗೆ ಬಂದಿರುವುದು ಬದಲಾಗುತ್ತಿರುವ ಪರಿಸರಕ್ಕೆ ಸಾಕ್ಷಿಯಾಗಿದೆ.  ಸರಕಾರಕ್ಕೆ ಸ್ಥಾಪಿಸಲು ಇದ್ದ ಉತ್ಸಾಹ ಘಟಕವನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ಇಲ್ಲ. ಇರುವುದಕ್ಕೆ ಅರುವತ್ತು ಸುಸಜ್ಜಿತ ಮನೆಗಳಲ್ಲಿ ಮೂವತ್ತು ಮನೆಗಳಲ್ಲಿ ಘಟಕದ ಉದ್ಯೋಗಿಗಳಿದ್ದಾರೆ. ಅಗತ್ಯವಿದ್ದರೂ ನೇಮಕಾತಿ ಇಲ್ಲ. ಹಾಗಾಗಿ ಅವು ಬಣ್ಣ ಗೆಟ್ಟು, ಪೊದೆಕಂಟಿಗಳೊಂದಿಗೆ ಹಾಳು ಬಿದ್ದು  ರಮಣೀಯ ಕಾಡಿನ ನಡುವೆ ಅಕರಾಳ ವಿಕರಾಳವಾಗಿ ಕಾಣಿಸುತ್ತಿವೆ.  ಅಲ್ಲಿ ಹೊರಜಗತ್ತಿನೊಂದಿಗೆ ಸಂಪರ್ಕ ದುರ್ಗಮ. ಮೊಬೈಲ್ ಟವರುಗಳು ಅಲ್ಲಿಲ್ಲ. ಯಾರು ಮತ್ತು ಯಾಕಾದರೂ ಸ್ಥಾಪಿಸುತ್ತಾರೆ? ಹಾಗಾಗಿ ಕರ್ಣ ಪಿಶಾಚಿಗಳ ಕರಕೆರೆ ಅಲ್ಲಿಲ್ಲ. ಬಲು ಕಷ್ಟದಲ್ಲಿ ದೂರವಾಣಿಯ ಸಂಪರ್ಕ ವ್ಯವಸ್ಥೆ ಇದೆ.

ಒಂದರ್ಧ ಕಿಮೀ ಅರಣ್ಯದೊಳಕ್ಕೊಂದು ಫಾರೆಸ್ಟ್ ಗೆಸ್ಟ ಹೌಸ್ ಇದೆ. ಶೊಲೆಯಾರ್ ತೊರೆಯ ಬದಿಯಲ್ಲೇ ಇರುವ ಈ ಗೆಸ್ಟ್ ಹೌಸಿನ ನಂತರ ಅರಣ್ಯ ಮತ್ತಷ್ಟು ದಟ್ಟವಾಗುತ್ತದೆ. ಭಾರೀ ಗಾತ್ರದ  ಮರಗಳು, ದಟ್ಟ ಪೊದೆಗಳು,  ಬಗೆ ಬಗೆಯ ಹಕ್ಕಿಗಳ ಹಾಡು  ಆ ಅರಣ್ಯದ ಸುಸ್ಥಿರ ಆರೋಗ್ಯವನ್ನು ಸೂಚಿಸುವಂತಿದ್ದುವು. ಅಲ್ಲಿ ಮನೆಗಳ ಸುತ್ತ ನೆಟ್ ಬೇಲಿ ಅಳವಡಿಸಿದ್ದಾರೆ – ನಾಡಿನ ಪ್ರಾಣಿಗಳಿಗೆ ಕಾಡು ಪ್ರಾಣಿಗಳಿಂದ  ಅಪಾಯವಾಗಬಾರದೆಂದು. ಕೆಲವು ದಿನಗಳ ಹಿಂದೆ ಆನೆಯ ಹಿಂಡೊಂದು ಈ ಬೇಲಿಯ ತಾಕತ್ತನ್ನು ಪರೀಕ್ಷಿಸಿ ಹೋದದ್ದನ್ನು ಗಣೇಶನ್  ನಮಗೆ ತೋರಿಸಿದರು.

ಎಲ್ಲೆಲ್ಲೂ ಟೀ ತೋಟ

ಮನಂಬೋಲಿಯಿಂದ ದಟ್ಟ ಕಾನನದ ಹಾದಿಯಲ್ಲೇ ಮೇಲಕ್ಕೇರಿ ಬಂದರೆ ಸಿಗುವ ವಾಲ್ಪರೈ ಅಷ್ಟೇನೂ ದೊಡ್ಡ ಪೇಟೆಯಲ್ಲ. ವಿಟ್ಲ ಅಥವಾ ಬೆಳ್ಳಾರೆಗಿಂತಲೂ ಚಿಕ್ಕ ಪೇಟೆ. ಅಲ್ಲಿನ್ನೂ ಪ್ರವಾಸೀ ಸಂಸ್ಕೃತಿ ಬಂದಿಲ್ಲ. ಹಾಗಾಗಿ ಅದರ ಸೌಂದರ್ಯ ಹಾಗೆಯೇ ಉಳಿದುಕೊಂಡಂತಿದೆ. ಅಲ್ಲಿ ಎಲ್ಲಿ ನೋಡಿದರಲ್ಲಿ ಗುಡ್ಡ ಬೆಟ್ಟಗಳ ತುಂಬೆಲ್ಲ ಟಾಟಾ, ಬಿರ್ಲಾ, ಮುರುಗನ್ ಮೊದಲಾದ   ಬೃಹತ್ ಉದ್ದಿಮೆದಾರರ ಟೀ ತೋಟಗಳು.  ಹರಡಿಕೊಂಡಿವೆ.  ಹಸಿರು ಕಚ್ಚಿಕೊಂಡ ಚಿಕ್ಕ ಪೊದರುಗಳ ಟೀ ತೋಟಗಳ ನಡು ನಡುವೆ  ರೆಂಬೆ ಕೊಂಬೆಗಳನ್ನು ಕತ್ತರಿಸಿಕೊಂಡು ನಿಂತ ಮರಗಳು. ಟೀ ಪೊದರುಗಳುನ್ನು ಚೊಕ್ಕವಾಗಿ ಕತ್ತರಿಸಿ ಒಪ್ಪ ಮಾಡಿಟ್ಟ ಟೀ ತೋಟಗಳ  ತುಂಬ ಚಿಗುರೆಲೆಗಳನ್ನು ತೆಗೆಯುವುದರಲ್ಲಿ ಕೆಲಸಗಾರರ ಹಿಂಡೇ ನಿರತರಾಗಿದ್ದರು. ಇವನ್ನೆಲ್ಲ ನೋಡುತ್ತಿರುವಂತೆ ಬ್ರಿಟೀಷರ ಕಾಲದಲ್ಲಿ ಏಳಲಾರಂಭಿಸಿದ ಈ ತೋಟಗಳಿಗಾಗಿ ಎಷ್ಟೊಂದು ಕಾಡು ಬಲಿಯಾಗಿರಬಹುದಲ್ಲ ಎಂಬ ಭಾವ ಮೂಡಿದ್ದು ಸುಳ್ಳಲ್ಲ.   ಕೆಲವು ತೋಟಗಳು ಟೀ ಎಲೆಗಳನ್ನು ಕತ್ತರಿಸಿಕೊಂಡು ಸುಣ್ಣ ಮತ್ತು ವಿಷ ಲೇಪಿಸಿಕೊಂಡು ಬೋಳು ಬೋಳಾಗಿ ನಿಂತಿದ್ದುವು.

ಟೀ ತೋಟಗಳ ಮಧ್ಯೆ ಇರುವ  ಟೀ ಕಾರ್ಖಾನೆಯೊಂದಕ್ಕೆ ಭೇಟಿ ಕೊಟ್ಟೆವು. ಅದೊಂದು ದೈತ್ಯ ಕಾರ್ಖಾನೆ. ಸುತ್ತಲಿನ ತೋಟಗಳಿಂದ ಪ್ಲಾಸ್ಟಿಕ್ ಗೋಣೆಗಳಲ್ಲಿ ಸಂಗ್ರಹಿಸಿದ ಟೀ ಎಲೆಗಳನ್ನು ಒಳಾಂಗಣದಲ್ಲಿ ನಿರ್ಮಿಸಲಾಗಿದ್ದ ವಿಶಾಲವಾದ  ಅಟ್ಟಳಿಗೆಯಲ್ಲಿ ಹರಡಲಾಗುತ್ತಿತ್ತು. ಅಟ್ಟಳಿಗೆಯ ಕೆಳಗೆ ಮತ್ತು ಬದಿಗಳಲ್ಲಿ ಇರಿಸಲಾಗಿದ್ದ ದೈತ್ಯಾಕಾರದ ಫ್ಯಾನುಗಳಿಂದ  ಬರುತ್ತಿದ್ದ ಬಿಸಿ ಗಾಳಿಗೆ ಟಿ  ಚಿಗುರೆಲೆಗಳು ಒಣಗಿ ಗರಿ ಗರಿಯಾಗಿ ಮುಂದಿನ ಹಂತಕ್ಕೆ ಸಜ್ಜಾಗುತ್ತಿದ್ದುವು. ಒಣಗಿದ ಎಲೆಗಳ ರಾಶಿಗಳು ದೈತ್ಯ ಬಾಯ್ಲರುಗಳಲ್ಲಿ ಮತ್ತಷ್ಟು ತೇವ ಕಳೆದುಕೊಂಡು ನಂತರದ ಹಂತದಲ್ಲಿ ಚಿಕ್ಕ ಚಿಕ್ಕ ಚೂರುಗಳಾಗುತ್ತಿದ್ದುವು; ಅಥವಾ ಹುಡಿಯಾಗುತ್ತಿದ್ದುವು. ಮಾರುಕಟ್ಟೆಯಲ್ಲಿ ನಮಗೆ ಟೀ ಚಿಕ್ಕ ಎಲೆಗಳ ರೂಪದಲ್ಲಿ ಅಥವಾ ಕಪ್ಪಗಿನ ಹುಡಿಯಾಗಿ ಸಿಗುವ ಬಗೆ ಹೀಗೆ.

ಇಡೀ ಕಾರ್ಖಾನೆಯಲ್ಲಿ ಚಹಾದ ಸುವಾಸನೆಯ ಬದಲಿಗೆ ಒಂದು ಬಗೆಯ ಒಗರು ಘಾಟು ತುಂಬಿತ್ತು. ವಾಸ್ತವವಾಗಿ ಇದು ಅದರ ತಾಜಾ ಘಾಟು. ಇಲ್ಲಿಂದ ಸಗಟು ರೂಪದಲ್ಲಿ ಟೀ  ಹುಡಿಯನ್ನು ಕೊಂಡ ಕಂಪೆನಿಗಳು, ಟೀ ಕುಡುಕರಿಗೆ ಇಷ್ಟವಾಗುವ ಸುವಾಸನಾ ದ್ರವ್ಯವನ್ನು ಬೆರಕೆ ಮಾಡಿ ಮಾರುಕಟ್ಟೆಗೆ ಬಣ್ಣ ಬಣ್ಣದ ನಮೂನೆಯ ಪೆಟ್ಟಿಗೆಗಳಲ್ಲಿ ಬಿಡುಗಡೆ ಮಾಡುತ್ತಾರಂತೆ. ಎಷಿಯಾದಲ್ಲಿಯೇ ಇಷ್ಟು ದೊಡ್ಡ ಕಾರ್ಖಾನೆ ಇಲ್ಲವೆಂದು ಕಾರ್ಖಾನೆಯನ್ನು ಸುತ್ತಿಸಿದ ಮ್ಯಾನೇಜರ್ ಉರುಫ್ ಕ್ವಾಲಿಟೀ ಕಂಟ್ರೋಲರ್ ತನ್ನ ಕಾಲರ್ ಸರಿ ಮಾಡಿಕೊಂಡು ಹೇಳಿಕೊಂಡ. ಸುತ್ತಿ ಅದಾಗಲೇ ಸುಸ್ತಾಗಿದ್ದ  ಟೀ ಕುಡುಕನಾದ ನನಗೆ ತಾಜಾ ಟೀ ಬಿಟ್ಟಿಯಾಗಿ ಸಿಕ್ಕೀತೇಂಬ ಆಸೆ. ಆದರೆ ಮ್ಯಾನೇಜರ್ ಹೇಳಿದ – ಕ್ಷಮಿಸಿ, ಇಲ್ಲಿ ನಾವು ಟೀ ಮಾಡುವುದೇ ಇಲ್ಲ !

ವಾಲ್ಪಾರೈ ನೋಡಿ ನಮ್ಮ ಗೂಡಿಗೆ ಮರಳಿ ತಿಂಗಳುಗಳು ಉರುಳಿವೆ. ಆದರೆ ಅಲ್ಲಿನ ಅನನ್ಯ ನಿಸರ್ಗ ಸೌಂದರ್ಯದ  ನೆನಪುಗಳಿನ್ನೂ   ಹಸಿರಾಗಿಯೇ ಉಳಿದು ಉತ್ಸಾಹ ನೀಡುತ್ತಿವೆ. ಸಾಧ್ಯವಾದರೆ ಒಮ್ಮೆ ನೀವೂ ಹೋಗಿ ಬನ್ನಿ.

Posted in ಪ್ರವಾಸ

ನಾರಾಯಣ ಮಾವ ಮತ್ತು ಮರಿಕೆ
ಫ್ರಖರ ಚಿಂತಕ ಮೂಢನಂಬುಗೆಯ ಭಂಜಕ

ವಿಜ್ಞಾನ ವಾಙ್ಮಯಕ್ಕೆ ಇವರು ಜಿಟಿಎನ್ – ಜಿಟಿನಾರಾಯಣ ರಾವ್.  ನಮಗೆ ಮರಿಕೆಯ ಮಂದಿಗೆ? ಮರಿಕೆಯ ಹಿರಿಯರಿಗೆ ನಾರಾಯಣ, ಮಕ್ಕಳಿಗೆ ನಾರಾಯಣ ಮಾವ, ಮರಿಮಕ್ಕಳಿಗೆ ನಾರಾಯಣಜ್ಜ.

ಇವರು ಮರಿಕೆಗೆ ಬರುತ್ತಾರೆಂದರೆ ನಮಗೆಲ್ಲ ಸಂಭ್ರಮ, ಉತ್ಸಾಹ, ಒಂದಷ್ಟು ದಿಗಿಲು – ಪುಂಖಾನುಪುಂಖವಾಗಿ  ಅವರೆಸೆಯುತ್ತಿದ್ದ ವಿಜ್ಞಾನ ಸಂಗೀತಾದಿ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ.

ಮರಿಕೆ ಇರುವುದು ಪುತ್ತೂರು ಪೇಟೆಯಿಂದ ಐದು ಕಿಮೀ ದೂರದಲ್ಲಿ, ಹಸಿರು ಹೊದ್ದು ಮಲಗಿರುವ ಬಲ್ಲೇರಿ ಕಾಡಿನ ಸನಿಹದಲ್ಲಿ.  ಜಿಟಿಎನ್ ಹುಟ್ಟಿದ್ದು ಮರಿಕೆಯಲ್ಲಿ (೩೦.೧.೧೯೨೬). ನನ್ನ ತಂದೆಯ ತಂದೆ – ಅಂದರೆ ಅಜ್ಜ ಸುಬ್ಬಯ್ಯರ ತಂಗಿ ವೆಂಕಟಲಕ್ಶ್ಮಿ  ಜಿಟಿಯವರ ತಾಯಿ. ಸಾಹಿತ್ಯದಲ್ಲಿ ಅಗಾಧ ಆಸಕ್ತಿ ಇದ್ದ ಅಜ್ಜ ಜಿಟಿಎನ್ ಅವರ ಮೇಲೆ ಗಾಢ ಪ್ರಭಾವ ಬೀರಿದರೆನ್ನುವುದನ್ನು ಆಗಾಗ ಹೇಳುತ್ತಿದ್ದರು ಮತ್ತು ಅದನ್ನು ತಮ್ಮ ಎನ್ ಸಿಸಿ ದಿನಗಳು, ಮುಗಿಯದ ಪಯಣ ಕೃತಿಗಳಲ್ಲಿ ದಾಖಲಿಸಿದ್ದಾರೆ.

ಮಡಿಕೇರಿ ಮನೆಯ ಪರಿಸರಕ್ಕಿಂತ ಮರಿಕೆಯಲ್ಲಿಯದೇ ನನಗೆ ಹೆಚ್ಚು ಪ್ರಿಯವಾಗುತ್ತಿತ್ತು. ಅದೊಂದು ಸಂತೆ, ಕಿರಿಯ ಸಂಗಾತಿಗಳಿಲ್ಲದ ಒಂಟಿ ಬಾಳು. ಮರಿಕೆಯಾದರೋ ಒಲುಮೆಯ ಪುಟ್ಟ ಗೂಡು. ಸೋದರಮಾವ ಸುಬ್ಬಯ್ಯ, ಅಜ್ಜಿ ಅಮ್ಮಯ್ಯ ಮತ್ತು ಅತ್ತೆ ಪಾರ್ವತಿ ನಮ್ಮನ್ನು ಎತ್ತಿ ಪ್ರೀತಿಸಿ ತಮ್ಮ ಸರೀಕನೆಂದು ಮುದ್ದು ಮಾಡುತ್ತಿದ್ದುದನ್ನು ಎಂದೂ ಮರೆಯಲಾರೆ. ಮಾವ ಕತೆ ಹೇಳಿದರು, ನಾಟಕದ ಮಟ್ಟು ಹಾಡಿದರು, ಪೈಯನ್ನೂ ನನ್ನನ್ನೂ ಎತ್ತಿಕೊಂಡು ಗದ್ದೆ ತೋಟವಿಡೀ ಅಡ್ಡಾಡಿದರು, ಜೊತೆಗೆ ಜೀವನ ಮೌಲ್ಯಗಳನ್ನು ಪ್ರತ್ಯಕ್ಷ ಆಚರಣೆಯಿಂದ ಬಿಂಬಿಸಿದರು

(ಮುಗಿಯದ ಪಯಣ ಪುಟ ೬)

ಮರಿಕೆಯೊಂದಿಗೆ ಇವರ ಸಂಬಂಧ ಮತ್ತಷ್ಟು ಗಾಢವಾಗುವುದಕ್ಕೆ ಇವರ ಸೋದರಿಕೆಯ ಮದುವೆಯೂ ಕಾರಣವಾಯಿತು. ಮುಂದೆ ಇವರು ಕೈಹಿಡಿದದ್ದು ನಮ್ಮ ಅಜ್ಜನ ಹಿರಿಯ ಮಗಳಾದ ಲಕ್ಷ್ಮಿಯನ್ನು, ಅಂದರೆ ನನ್ನ ದೊಡ್ದ ಅತ್ತೆ ಯನ್ನು(ತಂದೆಯ ಅಕ್ಕ). ಮಾವ ತಮ್ಮ ಮುಗಿಯದ ಪಯಣ ಕೃತಿಯ “ಬಾಳಿಗೊದಗಿದ ಬೆಳಕು” ಅಧ್ಯಾಯದಲ್ಲಿ (ಪು೬೪) ಬರೆಯುತ್ತಾರೆ

ಅಂದು ನಾನೊಬ್ಬ ಅತ್ಯಂತ ಅರ್ಹ ಬ್ರಹ್ಮಚಾರಿ. ಮದುವೆ ಮಾರುಕಟ್ಟೆಯಲ್ಲಿ ನನ್ನ ಬೆಲೆ ಏರಿತ್ತು! ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನಲ್ಲಿಗೆ ಬಂದ ಎಲ್ಲ ಸೂಚನೆಗಳಿಗೂ ನನ್ನ ಉತ್ತರ ಒಂದೇ : ವಯಸ್ಸು ಮೂವತ್ತು ತುಂಬಿದ ಬಳಿಕವೇ ವಿವಾಹದ ಯೋಚನೆ ಮಡಿಕೇರಿಯ ತವರಿನಲ್ಲಿದ್ದ ನಾಲ್ವರು ಅಜ್ಜಿಯರದೂ ಒಂದೇ ಒತ್ತಾಯ, “ಸುಬ್ಬಯ್ಯನ ಮಗಳನ್ನು ಒಪ್ಪಿಕೊಳ್ಳೋ. ನಿನಗೆ ಇಷ್ಟವಾದ ತೆಂಗಿನಕಾಯಿ ಹುಳಿಯನ್ನೂ ಅಕ್ಕಿ ಪಾಯಸವನ್ನೂ ಚೆನ್ನಾಗಿ ತಯಾರಿಸುತ್ತಾಳೆ ಕಣೋ!”

ಈ ಸುಬ್ಬಯ್ಯ ಬೇರೆ ಯಾರೂ ಅಲ್ಲ,ನನ್ನ ತಾಯಿಯ ಅಣ್ಣ, ಮರಿಕೆಯ ದೊರೆ, ನನ್ನ ಸಾಹಿತ್ಯ – ಸಂಗೀತಾಸಕ್ತಿಗಳಿಗೆ ಸಮೃದ್ಧ ಪೋಷಣೆಯಿತ್ತ ಆದರ್ಶ ಪುರುಷ. ನಾನು ಎಷ್ಟು ಮಡಿಕೇರಿಯ ಶಿಶುವೋ ಅಷ್ಟೇ ಮರಿಕೆಯ ಶಿಶು ಕೂಡ. ಇನ್ನು ಈ ಮಾವನ ಹೆಂದತಿ (ನನ್ನತ್ತೆ) ನನ್ನನ್ನು ಖುದ್ದು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯಿಂದ ಲಾಲಿಸಿ ಬೆಳೆಸಿದ ಮಹಾಮಾತೆ. ಇಂಥವರ ಮಗಳು ಲಕ್ಷ್ಮಿ (ತಂಗಿ) ನನ್ನ ಸೋದರತ್ತಿಗೆ. ನನಗಿಂತ ನಾಲ್ಕು ವರ್ಷ ಕಿರಿಯಳು, ತುಂಬ ಜಾಣೆ …

ತಮ್ಮ “ಎನ್ ಸಿಸಿ  ದಿನಗಳು” ಕೃತಿಯಲ್ಲಿ ತಮ್ಮ ಮೇಲೆ ಬಲು ಪರಿಣಾಮಕಾರೀ ಪ್ರಭಾವ ಬೀರಿದ ಇಬ್ಬರು ಹಿರಿಯರನ್ನು ಪ್ರಸ್ತಾವಿಸುತ್ತಾರೆ. ಒಬ್ಬರು ಅವರ ಚಿಕ್ಕಪ್ಪ, ಪ್ರಾಯದಲ್ಲಿ ಮಾವನಿಗಿಂತ ತುಸು ಹಿರಿಯರು. ಆದರೆ ಪ್ರಖರ ವಿಚಾರವಾದಿ.

“ಹಿಂದೀ ಸಿನೆಮಾದ ಹಾಡುಗಳು, ಇಸ್ಪೀಟ್ ಎಲೆಯ ಚಳಕಗಳು, ಸಾಹಸದ ಕತೆಗಳು, ಗಣಿತಶಾಸ್ತ್ರದ ಮೂಲ ಸೂತ್ರಗಳು, ಇವನ್ನೆಲ್ಲ ನನಗೆ ಸಮಪ್ರಾಯದವನೆಂದು ಆತ್ಮೀಯತೆಯಿಂದ ಹೇಳಿಕೊಡುವಾಗ ಅವರೇ ನನಗೆ ದೇವರು ಲೆಕ್ಕವನ್ನು ನಾನು ಕಲಿತದ್ದು ಅವರಿಂದ, ಸಾಹಸ ಪ್ರೀಯತೆಯ ಬೀಜ ಬಿತ್ತಿದವರು ಅವರು. ಇಂದು (೧೯೭೨) ದುರ್ದೈವದಿಂದ ಅವರು ಬದುಕಿಲ್ಲ. ಅವರ ಜೀವನ ನಿರಂತರ ಸಾಹಸ. ಪ್ರಯೋಗಗಳ ಗಾಥ, ೧೯೬೨ನೇ ಇಸವಿ ೧೯೩೨ರಲ್ಲಿ ಬಂದಿದ್ದರೆ ಹೇಗಿರಬಹುದು?

ಇನ್ನೊಬ್ಬರು ನನ್ನ ಸೋದರ ಮಾವ. ಈಚೆಗೆ ಹೆಣ್ಣುಕೊಟ್ಟ ಮಾವನೂ ಹೌದು. ಇವರು ನನ್ನ ತಾಯಿಯ ಗಂಡುರೂಪ. ಬಲು ತೀಕ್ಷ್ಮ ಮನಸ್ಸು, ಅತ್ಯುದಾರ ಸ್ವಭಾವ. ಸಾಹಿತ್ಯ ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ. ಸ್ವತ: ಉತ್ತಮ ಬರಹಗಾರರು. ಭಾಷಾಂತಕಾರರು. ವ್ಯಕ್ತಿ ಇತರರಿಗಾಗಿಯೇ ಬಾಳುವುದು ಪರಮಪುರುಷಾರ್ಥ ಎಂದು ನಂಬಿ ತೀರ ಸಹಜವಾಗಿ ಅದನ್ನು ಅನುಷ್ಠಾನಕ್ಕೆ ತಂದಿರುವ ಇವರ ಜೀವನ ನನಗೆ ಸಕಲ ಸದ್ಗುಣಗಳ ಆಗರ.

ಇನ್ನೆಲ್ಲಿ ಈ ನೆಗೆ?

(ಮಾವನ ಮಾವ ಅಂದರೆ ನನ್ನಜ್ಜನ ನೆನಪುಗಳನ್ನು ಇಲ್ಲಿ ದಾಖಲಿಸಿದ್ದೇನೆ.)

ಮಾವ ತಮ್ಮ ಅಧ್ಯಾಪನ ಕಾಲದಲ್ಲಿ ಎನ್ ಸಿಸಿ ಅಧಿಕಾರಿಯಾಗಿ ವಿದ್ಯಾರ್ಥಿಗಳೊಂದಿಗೆ ಪಶ್ಚಿಮಘಟ್ಟದ ಹಲವು ಪರ್ವತ ಶಿಖರಗಳನ್ನು ಏರಿದವರು. ಅಕಾಲದಲ್ಲಿ ಅಮೃತವೂ ವಿಷ ಎನ್ನುತ್ತ ಹಿತ ಮಿತ ಆಹಾರ ಸೇವಿಸುತ್ತ ಗಟ್ಟಿ ಮುಟ್ಟಾಗಿ ಬಾಳಿದವರು. ನಿತ್ಯ ಗಣಿತ, ಖಗೋಳ ವಿಜ್ಞಾನ, ಸಂಗೀತದ ಬಗ್ಗೆ ಚಿಂತಿಸಿದವರು, ತಮ್ಮ ಆಸಕ್ತಿಯನ್ನು ಇತರರಲ್ಲಿ ಉದ್ದೀಪಿಸಿದವರು. ಬೌದ್ದಿಕವಾಗಿ ನಿತ್ಯ ನೂತನವಾಗಿದ್ದವರು. ಕೊಡಗಿನ ಗಂಡು ನಾನು ಎನ್ನುತ್ತ ಪ್ರಾಯ ಸಂದರೂ ಮೈಸೂರಿನ ಶೀತ ಗಾಳಿಗೆ ಎದೆ ಒಡ್ಡಿ ಸೈಕಲ್ ಏರಿ ಸಾಗುತ್ತಿದ್ದವರು – ತುಸು ಹೆಚ್ಚೇ ಏನೋ ಎಂಬಂತೆ ತಮ್ಮ ದೈಹಿಕ ತ್ರಾಣವನ್ನು ಪರೀಕ್ಷೆಗೆ ಒಡ್ಡುತ್ತಿದ್ದವರು. ಇದರ ಪರಿಣಾಮವೋ ಎಂಬಂತೆ ಎಪ್ಪತ್ತೇಳರ ಇಳಿ ಹರೆಯದಲ್ಲಿ ಅವರು ತೀವ್ರ ಶೀತ -ಕಫದ ಬಾಧೆಗೊಳಗಾದರು. ಪ್ರಾರಂಭದ ವೈದ್ಯಕೀಯ ಚಿಕಿತ್ಸೆ ಸರಿಯಾಗದೇ ಪರಿಸ್ಥಿತಿ ಬಿಗಡಾಯಿಸಿತು.

ಮುಗಿಯದ ಪಯಣದ “ಯಮಸದನ ನೋಡಿ ಬಂದೆ” ಅಧ್ಯಾಯದಲ್ಲಿ (ಪು ೩೯೭-೩೯೯) ಬರೆಯುತ್ತಾರೆ

ಹೆಂಡತಿಗೆ (ಲಕ್ಷ್ಮಿ) ಶಿಕ್ಷೆ, ಸೊಸೆಗೆ (ರುಕ್ಮಿಣಿ) ಚಡಪಡಿಕೆ, ಮಗನಿಗೆ (ಅನಂತ) ಕಠಿಣ ಪರೀಕ್ಷೆ., ಮೊಮ್ಮಗಳಿಗೆ (ಅಕ್ಷರಿ) ಉದ್ವೇಗ, ಅಸಂಖ್ಯ ಬಂಧುಗಳಿಗೂ ಅಭಿಮಾನಿಗಳಿಗೂ ಚಿಂತೆ, ಚಿಂತೆ, ನನಗೋ? ಸ್ವಯಂಕೃತಾಪರಾಧ. ಆಗ ನನ್ನ ಬಾಯಿಯಿಂದ ಹೊಮ್ಮುತ್ತಿತ್ತಂತೆ ಒಂದು ಹಾಡು :”ಅನುಗಾಲವೂ ಚಿಂತೆ ಜೀವಕೆ… ಪೊಡವಿಯೊಳು ಸಿರಿ ಪುರಂದರವಿಠಲನ ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ

ನನಗೆ ನೆನಪಿದೆ. ನಾವು ಆಸ್ಪತ್ರೆಗೆ ಬಂದಾಗ ಮಾವ ಒರಗಿದ್ದರು ಮಂಚದಲ್ಲಿ. ಮುಖ, ದೇಹ ಬಾತುಕೊಂಡು ಚೆಂಡಿನಂತಾಗಿತ್ತು. ಆವರು ಹೇಳಿದ್ದು “ಸೋರುತಿಹುದು ಮನೆಯ ಮಾಳಿಗೀ…” ನಮಗೋ ದು:ಖ ಉಮ್ಮಳಿಸಿ ಬಂದಿತ್ತು. ಆದರೆ ಮಾವ ಹೋರಾಟದಲ್ಲಿ ಜಯಿಸಿಯೇ ಬಿಟ್ಟರು.

ಮನೆಗೆ ಬಂದು ಚೇತರಿಸುಕೊಳ್ಳುತ್ತಿರುವಾಗ ನಾನು ಅವರಿಗೊಂದು ಮನದಾಳದ ಪತ್ರ ಬರೆದೆ

ಪ್ರಿಯ ಮಾವ,

ನೀವು ನಲ್ಮೆಯ ಗೂಡಿಗೆ ಮತ್ತೆ ಮರಳಿದ ಸಿಹಿ ಸುದ್ದಿ ಕೇಳಿ ನಿರಾಳವಾಯಿತು. ಕಳೆದೊಂದು ತಿಂಗಳು. ತಳಮಳ, ಸಂಕಟ.  ಎಷ್ಟು ಬಾರಿ ಮೈಸೂರಿಗೆ ಫೋನಿಸಿದೆನೋ ತಿಳಿಯದು. ಆದರೆ ನಿರಾಸೆಯ ಸುದ್ದಿ ಬರುತ್ತಿರುವಂತೆ ಹತಾಶ ಭಾವ. ಶೂನ್ಯವಾದ ಅನುಭವ. ಈ ನಡುವೆ ಬೇರೆ ಆಸ್ಪತ್ರೆಗೆ ನಿಮ್ಮನ್ನು ಸೇರಿಸಿದ್ದು,  ಚಿಕಿತ್ಸೆ ಸರಿ ದಾರಿಯಲ್ಲಿ ಸಾಗುತ್ತ ನೀವು ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಾಗ ಎಲ್ಲ ಸರಿಯಾಗುವ ಭರವಸೆ ಮೂಡಿತು.

ನೀವನ್ನಬಹುದು “ಚಿತೆ ಎಲ್ಲರಿಗೂ ಇರುವುದೇ. ಚಿಂತೆ ಏತಕೆ ” ಆದರೆ  ನಿಮ್ಮನ್ನು ಬಿಟ್ಟು ನಮ್ಮ ಕುಟುಂಬವನ್ನು ಊಹಿಸಿಕೊಳ್ಳುವುದಕ್ಕೂ ನಮಗಾಗದು. ಏಕೆಂದರೆ ನಿಮ್ಮಿಂದ ನಾವು – ಮರಿಕೆಯ ಮಕ್ಕಳು – ಎಷ್ಟೆಲ್ಲ ಪಡೆದಿಲ್ಲ.  ಜೀವನ ಪಥದಲ್ಲಿ ಸರಿ ದಾರಿ ಯಾವುದೆಂದು ನಮಗೆ ತೋರಿಸಿಕೊಟ್ಟವರು ನೀವು. ಪ್ರಪಂಚವನ್ನು ನೋಡುವ ಬಗೆಯಲ್ಲಿ, ಜೀವನದ ಸಮಸ್ಯೆಗಳನ್ನು ಅರ್ಥೈಸುವ ರೀತಿಯಲ್ಲಿ ಒಂದಿಷ್ಟು ವೈಚಾರಿಕ ಪ್ರಜ್ಞೆ ನಮಗೆ ಮೂಡಿರುವುದಾದರೆ ಅದರಲ್ಲಿ ಸಿಂಹಪಾಲು ನಿಮ್ಮದಿದೆ. ನಾವಷ್ಟೇ ಅಲ್ಲ – ನಮ್ಮ ಅಪ್ಪ – ಅಮ್ಮಂದಿರು ಕೂಡ ನಿಮ್ಮ ಒಡನಾಟದಲ್ಲಿ ಕಲಿತದ್ದು ಬಹಳಷ್ಟಿವೆ. ಒಟ್ಟು ಸಾರವೆಂದರೆ “ನೀವಿರುವುದು ನಮ್ಮ ಕುಟುಂಬದ ಭಾಗ್ಯ. ಇಂಥ ಬಾಗ್ಯ ಎಲ್ಲರಿಗೂ ಇರದು; ಬರದು”. ನಿಮ್ಮದೇ ವಾಕ್ಯದಲ್ಲಿ ಹೇಳುವುದಾದರೆ

ಹಸನುಗೊಳಿಸಿದಿರಯ್ಯ ನೀವು ಹೊಸ ನೆಲವ

ನಾವು? ಹೆಕ್ಕಿದವಷ್ಟೇ ತೋಟದಿಂ ಕೆಲಹೂವ.

ಇನ್ನು ಹೆಚ್ಚು ನಾನು ಹೇಳಲಾರೆ- ನಾವೆಲ್ಲ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದೇವೆಂದು. ಎಂದೇ  ನಿಮಗೊದಗಿ ಬಂದ ತೀವ್ರ ಅನಾರೋಗ್ಯ ಮರಿಕೆಯ ನಮ್ಮೆಲ್ಲರಿಗೂ ಅತಿಶಯ ಆಘಾತ ಒಡ್ಡಿತು. ಕೇವಲ ಚಿಕ್ಕ ಜ್ವರ ನಿಮ್ಮನ್ನು ಹಾಸಿಗೆಗಂಟಿಸಿ ಜವರಾಯನಿಗೆ ರತ್ನಗಂಬಳಿ ಹಾಸಿದ ಕರೆಯಾದರೆ ಸಹಿಸಲು ಸಾಧ್ಯವಾದಿತೇ? ನೀವು ಇನ್ನೂ ಎಪ್ಪತ್ತರ ತರುಣ – ಇ೦ಥ ತರುಣನನ್ನು ನಾವು ಬಿಟ್ಟುಕೊಡಲು ಸಾಧ್ಯವೇ ?

ಅವರರವ ಭಾವಕ್ಕೆ ಸರಿಯಾಗಿ ಮೂಡಿದ ಹಾರೈಕೆಗಳ ಒಟ್ಟು ಫಲವೋ ಎನ್ನುವಂತೆ ನೀವು ಚೇತರಿಸುತ್ತಿದ್ದೀರಲ್ಲ – ಅದು ಮುಖ್ಯ. ಸಂಪೂರ್ಣ ಚೇತರಿಸಿಕೊಂಡ ಎಂದಿನ ನಾರಾಯಣ ಮಾವನನ್ನು ನೋಡಲು ನಾವೆಲ್ಲ ಇಲ್ಲಿ ಕಾತರದಿಂದ ಕಾಯುತ್ತಿದ್ದೇವೆ; ಹಾರೈಸುತ್ತಿದ್ದೇವೆ.

ರಾಧಾಕೃಷ್ಣ.

ಒಂದೆರಡು ತಿಂಗಳ ನಂತರ ಅವರು ನನ್ನನ್ನೂ ಸೇರಿದಂತೆ  ತಮ್ಮೆಲ್ಲ ಹಿತೈಷಿಗಳಿಗೆ, ಬಂಧುಗಳಿಗೆ ಪತ್ರ ಬರೆದರು

August 30, 2003.

GTN at Mysore greets all his wellwishers, friends, relatives, children and Star of Mysore who have extended their spontaneous love and warmth when he was confined the hospital, July 11 to August 24. The Doctors and the nurses at Basappa Memorial Hospital Mysore, especially Dr C.M.Kudari, have showered their best expertise on him to rescue him at age 78 from the sure clutches of death. He is now ‘imprisoned’ within the four lovable walls of his home comprising his wife Lakhmi, daughterinlaw Rukmini, son Ananta, granddaughter Akshari and brother Eashwara. What more can one aspire to get! He’s physically very weak. He hopes by September 24 he should be normal and by October 24 kicking! He extends his warmest thanks and good wishes to you all. GTN

ಹೀಗೆ ಹೇಳಿದ ಅವರು   ೨೬.೬.೨೦೦೮ ಸಂಜೆ ತಮ್ಮ ಸ್ನೇಹಿತರ ಮನೆಯಲ್ಲಿ  ಕಂಪ್ಯೂಟರ್ ಪರದೆ ಮೇಲೆ ಸಂಗೀತಕ್ಕೆ ಸಂಬಂಧಿಸಿದ ದ ಲೇಖನ ಓದುತ್ತ ಇದ್ದಂತೆ ಕಣ್ಣು ಮಂಜಾಗುತ್ತಿದೆ ಅನ್ನುತ್ತ ಮೆಲ್ಲನೆ ಒರಗಿದವರು ಮತ್ತೆ ಶಾಶ್ವತ ನಿದ್ದೆಯ ಕಡೆಗೆ ಜಾರಿದರು. ಮರು ದಿನ ಮುಂಜಾವಿನ ಹೊತ್ತಿಗೆ ತಾರೆಗಳ ಅನೂಹ್ಯ ಲೋಕದಾಚೆಗೆ ನಡೆದೇ ಬಿಟ್ಟರು.   ಯಾತನೆ ಇಲ್ಲದ ಕೊನೆಯನ್ನು ಅಪ್ಪಿದ ಬಗೆ ಅವರು ಇಚ್ಛಿಸಿದಂತಿತ್ತು.

ಮಾವ ಇಲ್ಲದೇ ರ್ಷವೊಂದು ತಣ್ಣಗೆ ಸಂದಿದೆ.ಅವರಿಲ್ಲದೇ ಹೋದರೂ   ಅವರ ನೆನಪು ಮತ್ತೆ ಮತ್ತೆ ಆಗುತ್ತದೆ – ಇರುಳ ಬಾನು ಕಂಡಾಗ, ಉತ್ತಮ ಸಂಗೀತ ಆಲಿಸಿದಾಗ, ಲೇಖನ ಪ್ರಕಟವಾದಾಗ.. ಹೀಗೆ ಆಗಾಗ. ಅವರಿಗೊಂದು ನುಡಿನಮನ ಸಲ್ಲಿಸಿದ್ದೇನೆ ಕೆಂಡ ಸಂಪಿಗೆಯಲ್ಲಿದೆ. ನೀವು ನೋಡಬಹುದು.

Posted in ವ್ಯಕ್ತಿ - ಜೀವನ

ತಾಲೀಬಾನ್ ಎಂಬ ಪುರಾತನ ಹೆಮ್ಮಾರಿ
ಪಾಕಿಸ್ತಾನದಲ್ಲಿ ಮತ್ತೊಂದು ಬರ್ಬರ ತಾಲೀಬಾನೀ ಕಾನೂನು ಜಾರಿಗೆ ಬಂದ ಕಳವಳಕಾರೀ ವರದಿ ವಾರಗಳ ಹಿಂದೆ ಆಂಗ್ಲ ದೈನಿಕ ದಿ.ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹುಡುಗಿಯೊಬ್ಬಳಿಗೆ ಅನೈತಿಕ ಸಂಬಂಧವಿದೆ ಎಂಬ ಗುಮಾನಿ. ಎಂಥ ಘೋರ ಅಪರಾಧವಿದು!. ಉಗ್ರ ತಾಲೀಬಾನೀಗಳ ಮುಖಂಡರು ಶಿಕ್ಷೆ ಘೋಷಿಸಿದರು - ಸಾರ್ವಜನಿಕವಾಗಿ ಮರಣ ದಂಡನೆ. ಬೇರಾರೂ ಇನ್ನು ಮುಂದೆ ಅಂಥ ತಪ್ಪು ಮಾಡಬಾರದಲ್ಲ ಅದಕ್ಕೆ. ಅವರಿಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಹುಡುಗಿ ಗೋಗರೆಯುತ್ತಿದ್ದಳಂತೆ - “ದಯವಿಟ್ಟು ಕ್ಷಮಿಸಿ, ನಾನು ಯಾವ ತಪ್ಪೂ ಮಾಡಿಲ್ಲ.“ ಆದರೆ ಧರ್ಮದ ಹೆಸರಿನಲ್ಲಿ ಅಂಧರಾದ ಕ್ರೂರಿಗಳು ಬಿಡಲಿಲ್ಲ. ಒಂದರ ಮೇಲೊಂದರಂತೆ ಎದೆಗೆ ಗುಂಡಿಕ್ಕಿದರು. ಧರೆಗೆ ಒರಗಿದ ಅವಳಲ್ಲಿನ್ನೂ ಕುಟುಕು ಜೀವ ತುಡಿಯುತ್ತಿತ್ತಂತೆ. ಅಲ್ಲಿದ್ದ ನ್ಯಾಯಪರುರು ಹೇಳಿದರಂತೆ “ಜೀವ ಉಂಟು, ಗುಂಡಿಕ್ಕಿ” ಮತ್ತೆ ಕೆಲವು ನುಗ್ಗಿದುವು ದೇಹಕ್ಕೆ. ಆಮೇಲೆ ಹುಡುಗನನ್ನು ಬಿಡಲಿಲ್ಲ, ನಿರ್ದಯಿಗಳು ಹತ್ಯೆ ಮಾಡಿದರು. ಸಾರ್ವಜನಿಕವಾಗಿ ಹುಡುಗಿಗೆ ಛಡಿ ಏಟು ಕೊಟ್ಟ ಶಿಕ್ಷೆಯ ಸುದ್ದಿ ತಣ್ಣಗಾಗುವುದರೊಳಗೆ ಬಂದ ಈ ವರದಿ ಮುಂಬರುವ ದಿನಗಳಲ್ಲಿ ಪಾಕಿಸ್ಥಾನ ಯಾವ ಹಾದಿ ಹಿಡಿಯಲಿದೆ ಎನ್ನುವುದರ ಸ್ಪಷ್ಟ ಸೂಚೆನೆಯಾಗಿದೆ. ಈಗಾಗಲೇ ಹಲವು ಉಗ್ರಗಾಮಿ ಸಂಘಟನೆಗಳ ತಾಣವಾದ ಪಾಕಿಸ್ಥಾನದ ಎಲ್ಲ ಉಗ್ರರನ್ನು ಒಟ್ಟು ಮಾಡಿದ ಪ್ರತೀಕವೋ ಎನ್ನುವಂಥ ತಾಲಿಬಾನಿಗಳ ಕೈ ಮೇಲಾಗುತ್ತಿರುವದನ್ನು ಕಂಡ ಅಮೇರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳು ತಮ್ಮ ಕಳವಳ ವ್ಯಕ್ತಪಡಿಸತೊಡಗಿವೆ.

ತಾಲೀಬಾನೀ ವ್ಯವಸ್ಥೆಯ ಕಬಂಧ ಬಾಹುಗಳು ಪಾಕಿಸ್ಥಾನವನ್ನು ಬಹು ವೇಗದಲ್ಲಿ ಆವರಿಸತೊಡಗಿವೆ. ಇದು ಕ್ಯಾನ್ಸರ್ ರೋಗದಂತೆ. ಕ್ಯಾನ್ಸರ್ ಪ್ರಾರಂಭ ಹಂತದಲ್ಲಿ ಅಪಾಯಕಾರೀ ಎಂದನಿಸುವುದೆ ಇಲ್ಲ. ನಿಧಾನವಾಗಿ ಅದು ಹಬ್ಬತೊಡಗುತ್ತದೆ. ರೋಗಿ ಕುಸಿಯತೊಡಗಿದಂತೆ ಮತ್ತೆ ಅದು ವ್ಯಾಪಿಸುವ ವೇಗ, ಉಂಟುಮಾಡುವ ನೋವು ಅಸಹನೀಯ - ರೋಗಿಗಷ್ಟೇ ಅಲ್ಲ ಅವನನ್ನು ನೋಡುವ ಇತರರಿಗೂ. ಪಾಕಿಸ್ತಾನ ಇಂದು ಇಂಥ ಅಪಾಯದಲ್ಲಿದೆ.

ಸುಂದರವಾದ ಸ್ವಾತ್ ಕಣಿವೆ ಈಗಾಗಲೇ ತಾಲೀಬಾನಿಗಳ ಪಾಲಾಗಿದೆ. ಈ ಕಣಿವೆ ಇಸ್ಲಾಮಾಬಾದಿನಿಂದ ಅಷ್ಟೇನೂ ದೂರವಿಲ್ಲ - ಕೇವಲ ನೂರೈವತ್ತು ಕಿಮೀ. ಹಾಗೆ ನೋಡಿದರೆ ಶ್ರೀನಗರದಿಂದ ಅಥವಾ ದಿಲ್ಲಿಯಿಂದಲೂ ಕೂಡ ಬಹು ದೂರದಲ್ಲೇನೂ ಇಲ್ಲ. ಪಾಕಿಸ್ತಾನ ಸರಕಾರ ತಾಲೀಬಾನಿಗಳ ಆಡಳಿತಕ್ಕೆ ಮನ್ನಣೆ ಕೊಟ್ಟಿರುವುದು ಅವರಿಗೆ ಸಂದ ಜಯ. ಅವರೇನು ಮಾಡಲಿದ್ದಾರೆ ಇನ್ನು ಅಲ್ಲಿ ಅನ್ನುವುದಕ್ಕೆ ಅಫಘಾನಿಸ್ತಾನದಲ್ಲಿ ಈ ಹಿಂದೆ ಮಾಡಿದ ಭೀಕರ ವ್ಯವಸ್ಥೆಗಳೇ ಸಾಕ್ಷಿಯಾಗಿವೆ.

ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ಒಳಗಿಟ್ಟರು. ಮುಕ್ತ ಜಗತ್ತನ್ನು ನಿರ್ಬಂಧಿಸಿದರು. ಮನುಷ್ಯತ್ವಕ್ಕೆ ತಮ್ಮದೇ ಆದ ಭಾಷ್ಯವನ್ನು ಕೊಟ್ಟರು. ಕ್ರೂರಿಗಳೂ ಅನಾಗರೀಕರೂ ಆದ ತಾಲಿಬಾನಿಗಳ ಹೇಯ ಕೃತ್ಯಗಳಲ್ಲಿ ಅಲ್ಲಿನ ಜನಸಾಮಾನ್ಯ ಹಲವು ವರ್ಷಗಳ ಕಾಲ ನಲುಗಿದ. ಸಂಗೀತ, ನೃತ್ಯ ನೇಪಥ್ಯಕ್ಕೆ ಸರಿದುವು. ಅಫಘನ್ನರ ಅತ್ಯಂತ ಪ್ರಿಯ ಆಟವಾದ

ಫುಟ್ಬಾಲ್ ವಿದೇಶೀಯ ಎನ್ನುವ ಕಾರಣಕ್ಕೆ ನಿಷೇಧಕ್ಕೊಳಗಾಯಿತು. ಶಾಂತಿಯ ದೂತನಾದ ಬುದ್ಧ ಇವೆಲ್ಲವನ್ನು ಬೃಹತ್ ಕಲ್ಲಿನ ಮೂರ್ತಿಯಾಗಿ ನೋಡುತ್ತಿದ್ದರೆ ಅವನನ್ನೂ ಬಿಡಲಿಲ್ಲ. ಬುದ್ಧನ ಮೂರ್ತಿಯನ್ನೇ ಕೊನೆಯಲ್ಲಿ ಪುಡಿಗಟ್ಟಿದರು. ಅಂಥ ತಾಲೀಬಾನಿಗಳು ಇಂದು ಸ್ವಾತ್ ಕಣಿವೆಯ ಮುಗ್ದ ಜನರನ್ನು ಧರ್ಮದ ಚೌಕಟ್ಟಿನಲ್ಲಿ ಅಮಾನವೀಯ ಕಾನೂನುಗಳಿಂದ ಹಿಂಡಿ ಹಿಪ್ಪೆ ಮಾಡಲು ತೊಡಗಿದ್ದಾರೆ.

ಕಾರಣಗಳು ಏನೇ ಇರಲಿ, ಅಫಘಾನಿಸ್ತಾನವನ್ನು ತಾಲೀಬಾನಿಗಳಿಂದ ಬಿಡಿಸುವುದಕ್ಕೆ ಅಮೇರಿಕ ಬರಬೇಕಾಯಿತು. ಆದರೆ ಎಷ್ಟೊಂದು ರಕ್ತಪಾತ ನಡೆದುಹೋಯಿತು. ಈಗ ಆಧುನಿಕ ಜಗತ್ತಿನ ಈ ಪುರಾತನ ಹೆಮ್ಮಾರಿಯ ಕಣ್ಣು ಪಾಕಿಸ್ಥಾನನದ ಮೇಲೆ ಬಿದ್ದಿದೆ. ಸರಕಾರ ಮತ್ತು ಉಗ್ರರ ನಡುವೆ ಒಡಂಬಡಿಕೆಯಾಯಿತು. ಅದರ ಪ್ರಕಾರ ಉಗ್ರರು ಸ್ವಾತಿನಲ್ಲಿ ಮಾತ್ರ ಇರತಕ್ಕದ್ದು ಮತ್ತು ಶಸ್ತ್ರ ಹಿಡಿಯಬಾರದು. ಆದರೆ ತಾಲಿಬಾನಿಗಳು ಅದೆಲ್ಲವನ್ನು ತೂರಿ ಬಿಟ್ಟಿದ್ದಾರೆ. ಇಸ್ಲಾಮಿನಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಅವಕಾಶವಿಲ್ಲ ಎನ್ನುವ ಹೇಳಿಕೆಯೊಂದಿಗೆ ಶಸ್ತ್ರ ಸನ್ಯಾಸದ ಮಾತುಕತೆಯನ್ನು ತ್ಯಜಿಸಿರುವ ಅವರು ಇಡೀ ಪಾಕಿಸ್ಥಾನಕ್ಕೆ ತಮ್ಮ ಕಾನೂನನ್ನು ಅನ್ವಯಿಸುವ ಗುರಿ ಹೊಂದಿದ್ದೇವೆಂದು ಈಗಾಗಲೇ ಘೋಷಿಸಿದ್ದಾರೆ. ಇಸ್ಲಾಮಾಬಾದಿನ ತೀರ ಹತ್ತಿರದ ಬುನೇರ್ ನಗರದಲ್ಲಿ ಬೀಡು ಬಿಟ್ಟ ಅವರನ್ನು ಅಲ್ಲಿಂದ ದೂರ ಕಳಿಸುವುದಕ್ಕೆ ಸಾಕೋ ಸಾಕಾಯಿತು ಪಾಕಿಸ್ತಾನದ ಆಡಳಿತಕ್ಕೆ. ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ನೆಲಕಚ್ಚಿರುವ ಪಾಕಿಸ್ತಾನದ ದುರ್ಬಲತೆ ಈ ಸಂದರ್ಭ ತಾಲೀಬಾನಿಗಳಿಗೆ ತಮ್ಮನ್ನು ವಿಸ್ತರಿಸಿಕೊಳ್ಳಲು ಪ್ರೋತ್ಸಾಹವಾಗಿದೆ. ಪಾಕಿಸ್ತಾನದ ಸೇನೆ ಮತ್ತು ತಾಲೀಬಾನ್ ಉಗ್ರರ ನಡುವೆ ಈಗಾಗಲೇ ಹೋರಾಟ ಪ್ರಾರಂಭವಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ತೀವ್ರಗೊಳ್ಳಬಹುದು.

ಇರಾಕಿನ ಮೇಲೆ, ಅಫಘಾನಿಸ್ತಾನದ ಮೇಲೆ ಸೇನೆ ಕಳುಹಿಸಿ ತನ್ನ ಮತ್ತು ಅಲ್ಲಿನ ಅಮಾಯಕರನ್ನು ಬಲಿ ಕೊಟ್ಟ ಅಮೇರಿಕಕ್ಕೆ ಪಾಕಿಸ್ತಾನದ ರಕ್ಷಣೆಗೂ ಹೋಗಬೇಕಾದ ದಿನಕ್ಕೆ ಇನ್ನು ಬಲು ದೂರವಿಲ್ಲ. ಎಷ್ಟೆಂದರೂ ಅಮೇರಿಕಕ್ಕೆ ಪಾಕಿಸ್ಥಾನದೊಂದಿಗೆ ಬೇರೆ ಬೇರೆ ರಾಜಕೀಯ ಕಾರಣಕ್ಕಾಗಿ ಹೆಚ್ಚು ಅಪ್ಯಾಯಮಾನವಾದ ನಂಟಿದೆ. ಪಾಕಿಸ್ತಾನದಲ್ಲಿ ಇದು ತನಕ ಸಾಕಷ್ಟು ಮುಕ್ತ ಜಗತ್ತಿತ್ತು. ಸೇನೆಯ ಆಡಳಿತವಿದ್ದರೂ ಜಿಯಾ, ಮುಷ್ರಫ್ ಮೊದಲಾದ ಸೇನಾ ನಾಯಕರು ಆಧುನಿಕ ಜಗತ್ತಿನ ಮನೋಭಾವದ ಮಂದಿಗಳು. ಇಂಥ ಪಾಕಿಸ್ತಾನ ತಾಲಿಬಾನೀಗಳ ಕೈಯಲ್ಲಿ ನಲುಗಿ ನಶಿಸಿ ಹೋದರೆ ಅದೊಂದು ದುರಂತ. ನೆರೆಯ ನಮಗೆ ಇದಕ್ಕಿಂತ ಗಂಭೀರ ಸಮಸ್ಯೆ ಬೇರೊಂದು ಇರಲಾರದು.

ಹಾಗೆ ನೋಡಿದರೆ ತಾಲೀಬಾನಿಗಳು ದೇವಲೋಕದಿಂದ ಅಥವಾ ನರಕಲೋಕದಿಂದ ಬಂದವರಲ್ಲ. ಅವರು ಎಲ್ಲರಂತೆ ಮನುಷ್ಯರೇ. ಧರ್ಮಾಂಧತೆ ಮಾತ್ರ ಇವರ ಕಣ್ಣು ಕಟ್ಟಿದೆ, ಮನವನ್ನು ನಿರ್ಧಯಿಯಾಗಿಸಿದೆ. ಧರ್ಮದ ಬಗೆಗಿನ ನಂಬುಗೆಯನ್ನು ಅಂಧರಾಗಿ ಒಪ್ಪುವ ಮತ್ತು ಅಪ್ಪುವ ಮಂದಿಗಳಲ್ಲಿ “ತಮ್ಮ ನಂಬುಗೆಗಳನ್ನು” ನಿಧಾನವಾಗಿ ಪ್ರಸರಿಸುತ್ತ ಇವರು ಗಟ್ಟಿಯಾಗುತ್ತ ಹೋಗುತ್ತಾರೆ. ಹಾಗಾಗಿಯೇ ಇಂಥವರ ಬಗ್ಗೆ ಎಚ್ಚರಿಕೆ ಅಗತ್ಯ. ಈ ನಡುವೆ ಪಾಕಿಸ್ತಾನದಾದ್ಯಂತ ತಾಲೀಬಾನಿಗಳ ಅಂಧ ಆಚರಣೆಯನ್ನು ಖಂಡಿಸುವ ದನಿ ಎದ್ದಿರುವುದು ಆಶಾವಾದದ ಲಕ್ಷಣ. ಅಂತರ್ಜಾಲದಲ್ಲಿ ಅವರ ವಿರೋಧ ವ್ಯಕ್ತವಾಗತೊಡಗಿದೆ. ಇಂಥ ಮಾನವೀಯ ಒಳದನಿ ಬಲವಾಗುತ್ತ ಹೋದ ಹಾಗೇ ತಾಲೀಬಾನಿಗಳ ಹಿಡಿತ ಸಡಿಲವಾಗಬಹುದು. ಪಾಕಿಸ್ಥಾನಕ್ಕ ಬಡಿದ ಈ ಕ್ಯಾನ್ಸರ್ ಗಡ್ಡೆ ಕರಗಬಹುದು.

ಮತ ಧರ್ಮಗಳ ಆಚೆಗೆ ನಮ್ಮ ದೃಷ್ಟಿಯನ್ನು ಹರಿಸುವ ವೈಚಾರಿಕತೆಯನ್ನು “ಪ್ರಜ್ಞಾಪೂರ್ವಕ” ಬೆಳೆಸಿಕೊಳ್ಳುವುದೊಂದೇ ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೇ ಆದರೂ ಮಾನವೀಯತೆಯನ್ನೇ ಹೊಸಕಿ ಹಾಕುವ ಪೈಶಾಚಿಕ “ತಾಲೀಬಾನ್ ವ್ಯವಸ್ಥೆ“ಯನ್ನು ಧಿಕ್ಕರಿಸಲು ಅಗತ್ಯವಾದ ಆಯುಧ. ಯಾವಾಗ ವೈಚಾರಿಕ ಪ್ರಜ್ಞೆಯನ್ನು ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತ ಹೋಗುತ್ತದೋ ಆಗ ತಾಲೀಬಾನಿಗಳ ಕೈ ಮೇಲಾಗುತ್ತದೆ. ಹಾಗಾಗದಂತೆ ನಾವು ಎಚ್ಚರಿಕೆ ವಹಿಸಬೇಕು.

Posted in ಸ್ವಗತಗಳು

ಕಾರಂತರ ವಿಜ್ಞಾನ ಪ್ರೀತಿ
ಶಿವರಾಮಕಾರಂತರು ಕನ್ನಡದ ಶ್ರೇಷ್ಟ ಕಾದಂಬರಿಕಾರರಾಗಿ ಸುಪ್ರಸಿದ್ದರು. ಚೋಮನ ದುಡಿಯಿಂದ ತೊಡಗಿ ಮೂಕಜ್ಜಿಯ ಕನಸುಗಳ ತನಕ ಅವರು ಬರೆದ ಕಾದಂಬರಿಗಳು ಕನ್ನಡ ಮನಸ್ಸನ್ನು ತಟ್ಟಿದ ಬಗೆ ಅನನ್ಯವಾದದ್ದು. ಆದರೆ ಆಶ್ಚರ್ಯವಾಗಬಹುದು - ಅವರ ಪ್ರಥಮ ಆಸಕ್ತಿ ಇದ್ದುದು - ವೈಚಾರಿಕ ಬರಹಗಳಲ್ಲಿ - ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ.

ಕಾಲೇಜು ಮೆಟ್ಟಲೇರಿ, ವಿಶ್ವವಿದ್ಯಾಲಯದ ಅಂಗಣದಲ್ಲಿ ವಿಜ್ಞಾನದ “ಕ್ರಮಬದ್ಧ ಶಿಕ್ಷಣ” ಪಡೆಯದೇ ಹೋದರೂ ಬೆರಗಾಗುವಷ್ಟು ವಿಪುಲವಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕಾರಂತರು ರಚಿಸಿದರು. ಮೂರು ಸಂಪುಟಗಳ “ಬಾಲಪ್ರಪಂಚ” (೧೯೩೬) ಮತ್ತು ನಾಲ್ಕು ಸಂಪುಟಗಳ “ವಿಜ್ಞಾನ ಪ್ರಪಂಚ” (೧೯೫೯) ವಿಜ್ಞಾನದ ಬಗ್ಗೆ ಕಾರಂತರ ತೀವ್ರ ವಿಜ್ಞಾನ ಆಸ್ಥೆಗೆ ಸಾಕ್ಷಿಯಾಗಿವೆ. ಸುಮಾರು ಮೂರು ಸಾವಿರ ಪುಟಗಳಿಗೆ ವಿಸ್ತರಿಸಿಕೊಂಡಿರುವ ಈ ಸಂಪುಟಗಳು ಒಂದು ವಿಶ್ವವಿದ್ಯಾಲಯದ ಹಲವು ಪ್ರಾದ್ಯಾಪಕ ಮಹೋದಯರು ಸೇರಿ ಮಾಡಬಹುದಾದ ಮಹೋನ್ನತ ಕಾರ್ಯ. ಆದರೆ ನಾವು ಗಮನಿಸಬೇಕಾದದ್ದು ಶಿವರಾಮ ಕಾರಂತರು ಇವೆಲ್ಲವನ್ನು ಏಕಾಂಗಿಯಾಗಿ ಮಾಡಿದರು. ಇವಷ್ಟೇ ಅಲ್ಲ, ಮತ್ತೂ ಹಲವು ವಿಜ್ಞಾನ ಪುಸ್ತಕ ಮತ್ತು ಲೇಖನಗಳನ್ನು ಬರೆದರು.

ನಾವು ಯಾತಕ್ಕೆ ಒಂದು ಲೇಖನ ಅಥವಾ ಪುಸ್ತಕ ಬರೆಯುತ್ತೇವೆ ? ತನಗೆ ಅರಿವಾದ ಕಾಣ್ಕೆಯನ್ನು ಇತರರಿಗೆ ತಿಳಿಸಬೇಕೆಂಬ ಮನದಾಳದ ತುಡಿತ ಬರೆವಣಿಗೆಗೆ ಪ್ರೇರಣೆ ನೀಡುತ್ತದೆ. ” ಮನದಾಳದ ಹೊಯ್ದಾಟವೇ ಲೇಖನಿಗೆ ಶಾಯಿ“. ಇಂಥ ತುಡಿತ ಇದ್ದಾಗ ಮಾತ್ರ ಅಲ್ಲಿ ನಿಜವಾದ ಸಾಹಿತ್ಯ ಅರಳುತ್ತದೆ. ಶಿವರಾಮ ಕಾರಂತರಿಗೆ ಅವರ ಬಾಳ ಸಂಜೆಯ ತನಕವೂ ಇಂಥ ತುಡಿತವಿತ್ತು. ಹೊಸದನ್ನು ಅರಿಯಬೇಕೆಂಬ ಹಂಬಲವಿತ್ತು. ಹಾಗಾಗಿಯೇ ಅವರು ಬರೆಯುತ್ತ ಹೋದರು. ಬರೆಯುತ್ತ ಬೆಳೆದರು.

ಬದುಕು ಮತ್ತು ನಾನು” ಎಂಬ ಲೇಖನದಲ್ಲಿ ಕಾರಂತರು ಬರೆಯುತ್ತಾರೆ

ವ್ಯಕ್ತಿ ತಾನು ಹುಟ್ಟಿದ ಬಳಿಕ ಜೀವಿಸುತ್ತಿರುವ ಪರಿಸರದಲ್ಲಿ ಬೆಳೆಯುತ್ತಿರುತ್ತಾನೆ. ಹಾಗೆಂದರೆ, ಅವನ ದೇಹ ಬಲಿಯುವುದಿಲ್ಲ, ಬುದ್ದಿಯೂ ಬಲಿಯುತ್ತದೆ. ಅದು ಯಾವ ರೀತಿಯಿಂದ ಬಲಿಯುತ್ತದೆ? ಆ ಬಲಿಯುವಿಕೆಗೆ ಏನೆಲ್ಲ ಪೋಷಕವಾಗುತ್ತದೆ - ಎಂಬುದನ್ನು ನಾವು ಯೋಚಿಸಿದೆವಾದರೆ, ನಮ್ಮ ಬದುಕೇ ಒಂದು ಅತ್ಯದ್ಭುತ ವಿದ್ಯಮಾನವಾಗಿ, ನಮ್ಮ ಕಣ್ಣಿಗೆ ಗೋಚರಿಸೀತು. ಅದರ ಅದ್ಭುತ ರಮಣೀಯತೆ ಇಲ್ಲವೇ, ಅದ್ಭುತ ಗಂಭೀರ ರೂಪವನ್ನು ಕುರಿತು ತಿಳಿಯಬೇಕಾದರೆ ನಾವು ಅದನ್ನು ಕುರಿತು ಈಗಾಗಲೇ ಕಟ್ಟಿಕೊಂಡು ಬಂದ, ಎಂದರೆ ಕಣ್ಮುಚ್ಚಿ ನಂಬಿಕೊಂಡು ಬಂದ ತೀರ್ಮಾನಗಳನ್ನು ಮರೆತು ನೋಡಬೇಕು - ಆಗ ಮಾತ್ರ, ಅದರ ರಹಸ್ಯ ಹೊಳೆದೀತು. ಹೀಗೇಕೆ ಅನ್ನುತ್ತೇನೆ ಎಂದರೆ ಬದುಕನ್ನು ಕುರಿತು ನಮ್ಮ ಸಮಾಜದಲ್ಲಿ ಪರಂಪರೆಯಿಂದ ನಾವು ನಂಬಿ ಬಂದ ಕೆಲವೊಂದು ಭಾವನೆಗಳಿಂದಾಗಿ ಬದುಕಿನ ನಿರ್ದಿಷ್ಟ ವಿಮರ್ಶೆಗೆ ತೊಡಕು ಬರುತ್ತದೆ ಎಂಬುದರಿಂದ. ” ಮನುಷ್ಯ ಹುಟ್ಟಿದ್ದೇ ಇದಕ್ಕೆ , ಇಂಥದೇ ತಾವಿನಲ್ಲಿ; ಇಂಥ ಯುಗದಲ್ಲಿ, ಅದು ಹುಟ್ಟಿದ ಉದ್ದೇಶ ಇಂಥದೇ” ಅನ್ನುವ ತೀರ್ಮಾನಗಳನ್ನು ನಾವು ಒಪ್ಪಿ ಬಂದೆವೆಂದಾದರೆ ಅಂಥ ಬದುಕಿನಲ್ಲಿ ನಾವು ಹುಡುಕಬೇಕಾದ ಯಾವ ರಹಸ್ಯ ಉಳಿದಿರುವುದಿಲ್ಲ. ನಮ್ಮ ಸಮಾಜವೋ, ಹಿರಿಯರೋ, ಒಪ್ಪಿ ಬಂದ ನಿಶ್ಚಿತ ರೂಪದ ತೀರ್ಮಾನಗಳಿಗೆ ನಮ್ಮ ಋಜು ಹಾಕಿದರಾಯಿತು. ಅಷ್ಟನ್ನು ಮಾಡಿ ನಮ್ಮ ಕಾಲ ಮುಗಿದೊಡನೆ ಇಲ್ಲಿಂದೆದ್ದು ಹೊರಟರಾಯಿತು. ಅದರ ಬದಲು - ನಮ್ಮ ಬದುಕನ್ನು ಕುತೂಹಲದಿಂದ ಇಣುಕಿ ನೋಡಬಲ್ಲ ದೃಷ್ಟ್ಟಿಯನ್ನೋ, ಬದುಕಿನ ಘಟನೆಗಳಿಗೆ ಸ್ಪಂದಿಸಬಲ್ಲ ಸಂವೇದನೆಗಳನ್ನೋ ಪ್ರಕಟಿಸಿ, ಅವು ಹೇಗಾದುವು - ಎಂದು ಚಿಂತಿಸಬಲ್ಲೆವಾದರೆ ಬುದ್ಧಿ ಜೀವಿಗಳಾದ ನಮಗೆ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಆಶ್ಚರ್ಯಕರ ಪ್ರಶ್ನೆಗಳು ಹೊಳೆದಾವು“

ಇದು ಕಾರಂತರ ವೈಜ್ಞಾನಿಕ ಪ್ರಜ್ಞೆ ಮತ್ತು ಜೀವನ ದೃಷ್ಟಿ. ಯಾವುದೇ ಘಟನೆ ಅಥವಾ ವಿದ್ಯಮಾನವನ್ನು ಅವರು ಗಮನಿಸುತ್ತಿದ್ದುದು ಸಂಶೋಧಕನ ಚಿಕಿತ್ಸಕ ದೃಷ್ಟಿಯಿಂದ. ಆ ಕಾರಣದಿಂದಲೇ ಅವರು ಸದಾ ಪ್ರವಾಸದಲ್ಲಿರುತ್ತಿದ್ದರು; ಉಪನ್ಯಾಸ ಮತ್ತು ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಬಗೆಯ ಜೀವನೋತ್ಸಾಹ ಅವರ ಸಾಹಿತ್ಯಕ್ಕೆ ಪ್ರೇರಣೆಯಾಗಿತ್ತು

ಇತಿಹಾಸಕ್ಕೆ ಜಿಗಿದ ಮನೆಯ ಬಾವಿ

“ತಿಳುವಳಿಕೆಗೂ ನಮಗೂ ಇರುವ ದೂರ ” ಎನ್ನುವ ಲೇಖನದಲ್ಲಿ ದಕ್ಷಿಣ ಕನ್ನಡದ ತಾನಿರುವ ನೆಲದ ಪ್ರಾಗೈತಿಕ ಇತಿಹಾಸವನ್ನು ವಿವರಿಸುವ ಪ್ರಯತ್ನ ಮಾಡುವ ಕಾರಂತರು ತಮ್ಮ ಲೇಖನಕ್ಕೆ ಹೇಗೆ ಸ್ಫೂರ್ತಿ ಒದಗಿತೆಂದು ವಿವರಿಸುತ್ತಾರೆ ( ಶಿವರಾಮಕಾರಂತರ ಲೇಖನಗಳು , ಸಂಪುಟ ೫, ವೈಚಾರಿಕ ಬಿಡಿ ಬರಹಗಳು, ಸಂಪಾದಕಿ : ಬಿ.ಮಾಲಿನಿ ಮಲ್ಯ, ೪೩೭- ೪೫೩). ಅದೊಂದು ದಿನ. ಕಾರಂತರು ಅವರ ಮನೆಯ ಬಾವಿಯೊಂದರ ಕೆಸರು ತೆಗೆಸುತ್ತಿದ್ದರು. ಆ ಕೆಸರಿನಲ್ಲಿ ಕಾಂಡಲು ಮರ, ಮತ್ತಿತರ ಗಿಡಗಳು ಸುಟ್ಟು ಉಂಟಾದ ಮಸಿಯ ಕರಿಕಲು ತುಂಡುಗಳು ಸಿಕ್ಕಿದುವಂತೆ.

ಆ ಸಿಕ್ಕ ತುಂಡುಗಳನ್ನು ಎಲ್ಲರೂ ಮಾಡುವಂತೆ ಕಸದ ತೊಟ್ಟಿಗೆ ಕಾರಂತರು ಎಸೆಯಲಿಲ್ಲ. ಬದಲಾಗಿ ಟಾಟಾ ಸಂಶೋಧನಾಲಯಕ್ಕೆ ಕಳುಹಿಸುತ್ತಾರೆ - ಆ ತುಂಡುಗಳು ಎಷ್ಟು ವರ್ಷಗಳ ಹಿಂದಿನವು ಎಂಬ ಬಗ್ಗೆ ಇವರಿಗೆ ಕುತೂಹಲ!. ರೇಡಿಯೋ ಐಸೊಟೋಪ್ ಪರೀಕ್ಷೆಯಿಂದ ಆ ಮಸಿಗೆಂಡಗಳು ಹೆಚ್ಚುಕಡಿಮೆ ೪೫,೦೦೦ ವರ್ಷಗಳ ಹಿಂದಿನವು ಎಂದು ತಿಳಿದು ಬಂತು. ಅಂದರೆ ಕಾರಂತರ ಬಾವಿ ಪ್ರಾಚೀನ ಕಾಲಕ್ಕೆ ಸಂದು ಹೋಯಿತು. ಅಷ್ಟು ವರ್ಷಗಳ ಹಿಂದೆ ಅಲ್ಲೇನು ಇದ್ದಿರಬಹುದು ಮತ್ತು ಕಾಲಾಂತರದಲ್ಲಿ ಅವೆಲ್ಲ ಹೇಗೆ ಬದಲಾವಣೆ ಹೊಂದುತ್ತ ಸಾಗಿದುವು ಎಂಬ ಕಲ್ಪನೆಯನ್ನು ಕಾರಂತರು ಮಾಡುತ್ತಾರೆ - ಬೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ. ಪ್ರಾಚೀನ ಕಾಲದಲ್ಲಿ ಅಲ್ಲಿ ನದಿ ಹರಿಯುತ್ತಿದ್ದಿರಬಹುದೆಂದು ಊಹಿಸುತ್ತಾರೆ. ಲೇಖನದ ಕೊನೆಯಲ್ಲಿ ಕಾರಂತರು ಬರೆಯುತ್ತಾರೆ

“ನಾನು ಜಗತ್ತಿನ ಜೀವ ಕೋಟಿಯ ಒಂದು ಅಂಶ, ಕಾಲಪ್ರವಾಹದ ಒಂದು ಬಿಂದು- ಎಂದು ತಿಳಿದುಕೊಂಡಾಗ ನಮ್ಮ ಬದುಕಿಗೆ ಎಟಕುವ ಸ್ವಾರಸ್ಯ ಅಪಾರ. ಲೋಕವೆಲ್ಲ ನನಗಾಗ್ಯೇ ಇದೆ - ಎಂದು ತಿಳಿದುಕೊಂಡಾಗ ಮಾತ್ರ ನಮ್ಮೆಲ್ಲ ಪ್ರಶ್ನೆಗಳು ಸರಳವೆನಿಸಿ ಕೇವಲ ಸ್ವಾರ್ಥದ ನೋಟವೊಂದೇ ಪ್ರಾಧಾನ್ಯ ಗಳಿಸುತ್ತದೆ. ಉಳಿದ ಯಾವತ್ತು ಜೀವಿಗಳ ಬದುಕು - ಕ್ಷುದ್ರವೋ, ನಗಣ್ಯವೋ ಅನಿಸುತ್ತದೆ

” ವಿಜ್ಞಾನದ ಬಗ್ಗೆ ಕಾರಂತರಿಗೆ ಖಚಿತ ನಿಲುವಿತ್ತು; ಸ್ಪಷ್ಟ ಕಲ್ಪನೆಯಿತ್ತು. “ವಿಜ್ಞಾನ ಮತ್ತು ಅಂಧಶೃದ್ದೆ” ಎಂಬ ಪುಸ್ತಕದಲ್ಲಿ ಕಾರಂತರು ಬರೆಯುತ್ತಾರೆ

“ವಿಜ್ಞಾನ ಯಾವುದಾದರೊಂದು ಸಂಗತಿಯನ್ನು ಕಣ್ಮುಚ್ಚಿ ನಂಬುವುದಿಲ್ಲ. ಅದು ತನಗೆ ತಿಳಿಯದ್ದನ್ನು ತಿಳಿಯದು ಎಂದು ಹೇಳುತ್ತದೆ. ತಿಳಿದುದಕ್ಕೆ ಕಾರಣಗಳನ್ನು ಒದಗಿಸುತ್ತದೆ. ಪ್ರಯೋಗಗಳ ಮೂಲಕ ಆ ಕಾರಣಗಳ ಸ್ವರೂಪವನ್ನು ನಿಷ್ಕರ್ಷಿಸುತ್ತದೆ. ಆ ಮೂಲಕ ಅದು ಬಾಳ್ವೆಗೆ ಬೇಕಾದ ತಿಳಿವನ್ನೂ, ಧೈರ್ಯವನ್ನೂ, ಸೂಕ್ಷ್ಮ ದೃಷ್ಟಿಯನ್ನೂ ಒದಗಿಸಿ ಮಾರ್ಗದರ್ಶನ ಮಾಡುತ್ತದೆ. ನಮ್ಮ ಮುಂದಿರುವ ಸಮಸ್ಯೆ ಎಂದರೆ ನಾವು ಬಾಳಬೇಕಾದ ರೀತಿ ಯಾವುದು ಎಂದು ಯೋಚಿಸಿ, ಅದಕ್ಕೆ ಏನು ದಾರಿ ಅಥವಾ ಪರಿಹಾರ ಎಂದು ಕಂಡು ಹಿಡಿಯುವುದು. ಆ ಕೆಲಸದಲ್ಲಿ ನಮ್ಮ ಪೂರ್ವೀಕರು ಸಂಗ್ರಹಿಸಿಟ್ಟ ಜ್ಞಾನದ, ವಿಜ್ಞಾನದ ಪ್ರಯೋಜನ ವನ್ನು ಪಡೆಯುವುದು; ಪ್ರಯೋಗ ಮಾಡಿ ನೋಡುವುದು. ಈ ಬಗೆಯಿಂದ ನಮ್ಮ ಕೈಗೆ ಬಂದಿರುವ ತಿಳಿವನ್ನು ಮೂದಲಿಸಿ, ಕೇವಲ ಅಂತೆಕಂತೆಗಳ ಮೇಲೆ ಬೆಳೆಯಿಸಿದ ನಂಬಿಕೆಯ ಕಂತೆಗಳನ್ನು ನೆಚ್ಚಿ ದಾರಿ ಸಾಗುವ ರೀತಿ ಅದಲ್ಲವೇ ಅಲ್ಲ. ನಮಗೆ ನಿಜಕ್ಕೂ ತಿಳಿಯದ್ದನ್ನು ” ತಿಳಿಯದು” ಎಂದು ಹೇಳಲು ಕಲಿಯೋಣ; ಬರಿಯ ಅಂತೆ ಕಂತೆಗಳನ್ನು ನಂಬಿ ನಾವು ಬುದ್ಧಿವಂತರೆಂದು ತೋರಿಸಿಕೊಳ್ಳುವ ಸೋಗನ್ನು ಬಿಟ್ಟುಬಿಡೋಣ”

ಪ್ರಥಮ ಆಸಕ್ತಿಯ ವಿಜ್ಞಾನ

ಶಿವರಾಮ ಕಾರಂತರಿಗೆ ಕನ್ನದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣದ ಆಸಕ್ತಿ ಮೊಳೆತದ್ದಾದರೂ ಹೇಗೆ ? “ಓದಿ ಏನಾಯಿತು?” ( ಗ್ರಂಥಲೋಕದ ನೂರು ಮುಖಗಳು - ವಿಷೇಷಾಂಕ, ಎಪ್ರಿಲ್, ೧೯೮೫) ಎಂಬ ಲೇಖನದಲ್ಲಿ ಕಾರಂತರು ಹೀಗೆ ಬರೆದಿದ್ದಾರೆ

“ಮುಂದೆ ಕೆಲವು ವರ್ಷಗಳ ತರುವಾಯ ನನಗೆ ಹಲವಾರು ಉಪಾಧ್ಯಾಯರ ಸಂಪರ್ಕವಾಯಿತು. ಅವರ ಜ್ಞಾನ ಕೇವಲ ಕನ್ನಡ ಪಠ್ಯ ಪುಸ್ತಕಗಳಿಗೆ ಸೀಮಿತವಾದುದನ್ನು ಕಂಡೆ. ಇಂಗ್ಲೆಂಡಿನಿಂದ ಮಕ್ಕಳಿಗಾಗಿ ರಚಿತವಾಗಿ ಬರುತ್ತಿದ್ದ Book of Knowledge, Wonders of animal life, Outlines of Sciences ಇತ್ಯಾದಿ ಬ್ಱಹತ್ ಗ್ರಂಥಗಳನ್ನು ನೋದಿದಾಗ, ಅನ್ಯರಲ್ಲಿರುವ ಮಾನಸಿಕ ಸಂಪತ್ತು ನಮಗಿಲ್ಲದೇ ಹೋಯಿತೆಂದು ಅನಿಸಿತು. ಅದನ್ನು ನೀಗಿಸಲು ಹಲವಾರು ವಿಷಯಗಳನ್ನು ಕುರಿತು ಬರೆದ ಗ್ರಂಥಗಳನ್ನು ತರಿಸಿಕೊಂಡು ಓದಿ ಕನ್ನಡದಲ್ಲಿ ಬರೆಯತೊಡಗಿದೆ. ಅದರ ಫಲವೇ ಬಾಲಪ್ರಪಂಚ. ಯಾರೂ ಅದನ್ನು ಓದದೇ ಹೋದರೂ ಅದರ ನಿರ್ಮಾಣದ ಕೆಲಸಕ್ಕಾಗಿ ನಾನು ವಿವಿಧ ವಿಷಯಗಳಲ್ಲಿ ಪಡೆದ ತಿಳಿವು, ಸಂತೋಷ ಎಂದೂ ಅಳಿಯಲಾರದು.ಅಲ್ಲಿಂದ ಮುಂದೆ ಈ ಐವತ್ತು ವರ್ಷಗಳ ಅವಧಿಯಲ್ಲಿ ನನ್ನ ಪಾಲಿಗೆ ಅನ್ಯರ ಕ್ರಮ, ಅಧ್ಯಯನಗಳಿಂದ ಸುಲಭದಲ್ಲಿ ದೊರೆಯುವ ಜ್ಞಾನ ಸಂಪತ್ತು ನಾನು ಕುಳಿತಲ್ಲಿಯೇ ಗಳಿಸಬಹುದಾದ ಚಿನ್ನದ ಗಣಿ ಅನಿಸಿದೆ. ಅದು ಕೊಡುತ್ತಿರುವ ಸಂತೋಷ ಅಪಾರ; ಅದು ಪ್ರೇರಿಸುವ ಕಾರ್ಯಪ್ರವೃತ್ತಿ ಅನಿರೀಕ್ಷಿತ; ಉದ್ದಾಮ. ತೆರೆದರೆ ಮಾತ್ರ ಮಾತನಾಡುವ ಮೂಕ ಪುಸ್ತಕಗಳು ನನ್ನನ್ನು ಎಲ್ಲಿಗೆಲ್ಲ ಒಯ್ದಿವೆ, ಏನೆಲ್ಲ ಕೊಟ್ಟಿವೆ ಎಂದು ಹೇಳುವ ಕೆಲಸ ಸುಲಭವಲ್ಲ.ಈಚೆಗಿನ ಕೆಲವು ಶತಮಾನಗಳಲ್ಲಿ ಕೆಲವು ಪಾಶ್ಚಾತ್ಯ ರಾಷ್ಟ್ರಗಳು ವಿಜ್ಞಾನದ ಕ್ಷೇತ್ರಗಳಲ್ಲಿ ನಡೆಯಿಸುತ್ತಿರುವ ಸಂಶೋಧನೆ ಮತ್ತು ಸಾಧನೆಗಳನ್ನು ಕುರಿತು ವಿಜ್ಞಾನಿಗಳು ಇನ್ನೆಷ್ಟು ಕಾಲ ಇದೇ ರೀತಿ ಅನ್ವೇಷಣೆ ನಡೆಯಿಸಿದರೂ ಮುಗಿಯಿತು ಎಂದಾಗದು ಎನಿಸುತ್ತದೆ.

ಈ ತನಕ ಯಾವುದೇ ವಿಷಯದಲ್ಲಿ ಕತ್ತಲಾಗಿ ಕಾಣಿಸಿದ ತಾವು, ವಿಜ್ಞಾನ ಕೆಡವಿದ ಬೆಳಕಿನಿಂದ ಒಂದು ಜೀವಂತ ಜಗತ್ತೇ ಎಂಬಷ್ಟು ಹಿರಿದಾಗಿ, ಆಕರ್ಷಕವಾಗಿ ಕಾಣಿಸಿದಾಗ, ನನ್ನ ಮನಸ್ಸನ್ನು ಹಿಗ್ಗಿಸಿದ ಯಾವುದೇ ನಾಟಕ, ಗೀತ, ಶಿಲ್ಪಗಳು ಕೂದ ಅಷ್ಟು ಮನೋಹರವಾಗಿರಲಾರವು ಎನಿಸುತ್ತದೆ.”

ಕಾರಂತರಿಗೆ ಅಂದಿನ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಬರುತ್ತಿದ್ದ Popular Science, Science Digest, National Geography ಮೊದಲಾದ ಜನಪ್ರಿಯ ವಿಜ್ಞಾನ ಗ್ರಂಥಗಳ ಪರಿಚಯವಿತ್ತು, ಮಾತ್ರವಲ್ಲ ಅವುಗಳನ್ನು ಎಷ್ಟೇ ದುಬಾರಿಯಾದರೂ ತರಿಸಿ ಓದುತ್ತಿದ್ದರು. ಬಾಲವನದ ಗ್ರಂಥ ಬಂಢಾರದಲ್ಲಿ ನೂರಾರು ವಿಷಯ ವಿಶ್ವಕೋಶಗಳು, ವಿಜ್ಞಾನಕ್ಕೆ ಸಂಬಂಧಿಸಿದ ಆಕರ ಗ್ರಂಥಗಳು, ಜನಪ್ರಿಯ ವಿಜ್ಞಾನ ಪುಸ್ತಕಗಳು ಇದ್ದುವಂತೆ. ಈ ಎಲ್ಲ ಪುಸ್ತಕಗಳನ್ನು ಇಂಗ್ಲೀಷ್ ಬಲ್ಲ ಕಾರಂತರು ಓದುತ್ತ ಹೋದಂತೆ ಕನ್ನಡ ಜನರಿಗೆ ಇವು ತಲುಪುತ್ತಿಲ್ಲವಲ್ಲ ಎಂಬ ನೋವು ಅವರನ್ನು ಕಾಡತೊಡಗಿತು. ಈ ನೋವು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಗೆ ಕಾರಂತರನ್ನು ತೊಡಗಿಸಿತು.

೧೯೭೧ ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ವಿಜ್ಞಾನ ಪಠ್ಯ ಪುಸ್ತಕ ಬರಹಗಾರರ ಶಿಬಿರವನ್ನು ಏರ್ಪಡಿಸಿತು. ಆ ಶಿಬಿರದಲ್ಲಿ ಕಾರಂತರು ” ಆದರ್ಶ ಪಠ್ಯ ಪುಸ್ತಕಗಳು” ಎಂಬ ವಿಷಯದ ಬಗ್ಗೆ ಭಾಷಣ ಮಾಡುತ್ತ ಹೇಳಿದರು

“ನಮ್ಮ ಉಪಾಧ್ಯಾಯರುಗಳಿಗೆ ಏನೂ ಪುಸ್ತಕಗಳಿಲ್ಲ ಎಂಬ ಕಾಲಕ್ಕೆ ಎರಡು ಪ್ರಯತ್ನಗಳನ್ನು ಮಾಡಬೇಕಾಯಿತು. ಒಂದು ಕಷ್ಟ ಶಬ್ದ ಬಂದರೆ ಅದರ ಅರ್ಥ ತಿಳಿಯಲು ಒಂದು ಅರ್ಥ ಕೋಶ ಬೇಕೆಂದು ಅನ್ನಿಸಿತು. ಇದು ನಾನು ಬರೆಯಬಲ್ಲೆ ಎಂದಲ್ಲ, ನನಗೆ ಅದರ ಅಭ್ಯಾಸವಾಗುತ್ತದೆಂದು. ಎರಡನೇಯದಾಗಿ ಬಾಲ ಪ್ರಪಂಚ. ಇದನ್ನು ಬರೆಯಲು ಕಾರಣ - ಮಕ್ಕಳಿಗೆ ತಿಳಿಯಬಹುದಾದದ್ದನ್ನು ಹೇಳಬೇಕು ಎಂಬುದೇ. ಒಂದು ಘನ ಉದ್ದೇಶ ಇಟ್ಟುಕೊಂಡಿದ್ದೆ - ನಾನು ಪರರಿಗೆ ಹೇಳಬೇಕಾದರೆ ನನಗೇ ಗೊತ್ತಿರಬೇಕಲ್ಲ; ಆದ್ದರಿಂದ ನನಗೆ ಗೊತ್ತಾಗಲೆಂದು ನಾನು ಮೊದಲು ಓದಲು ಹೊರಟೆ. ಇವತ್ತು ನಾನು ಸಾಹಿತಿ ಅಂತ ಅನ್ನಿಸಿಕೊಂಡಿದ್ದರೂ ಸಾಹಿತ್ಯ ಗ್ರಂಥಗಳನ್ನು ನಾನು ಅಭ್ಯಾಸ ಮಾಡುತ್ತ ಇಲ್ಲ. ಅಪೂರ್ವಕ್ಕೊಂದು ಓದುತ್ತ ಇದ್ದೇನೋ ಇಲ್ಲವೋ ಅದೂ ನನಗೆ ಸಂಶಯ. ಹೆಚ್ಚಿಗೆ ಇವತ್ತಿನವರೆಗೂ, ಇವತ್ತೂ ನಾನು ಓದುತ್ತ ಇರುವುದು ವಿಜ್ಞಾನದ ಪುಸ್ತಕಗಳೇ. ಇಲ್ಲಿ ವಿವಿಧ ರೀತಿಯ ಪುಸ್ತಕಗಳನ್ನು ಕಾದಂಬರಿಗಳಿಗಿಂತ ಚೆನ್ನಾಗಿ ಮೇಲಿನ ಮಟ್ಟದ ವಿಜ್ಞಾನದಲ್ಲಿಯೂ ಬರೆದಿರುವುದನ್ನು ನಾನು ನೋಡಿದ್ದೇನೆ. ನಮ್ಮಲ್ಲಿಗೆ ಬರುವಾಗ ಇದು ಎಲ್ಲ ಸತ್ತ್ವವನ್ನೂ ಕಳೆದುಕೊಂಡು ನಿರ್ಜೀವ ವಾಸ್ತವಾಂಶಗಳ ನಿರೂಪಣೆ ಆಗುವುದೇಕೆ ?ಇದನ್ನು ನಾವು ಯೋಚಿಸಬೇಕಾಗುತ್ತದೆ ”

ಎಲ್ಲ ಸಾಹಿತಿಗಳು ಪ್ರಾರಂಭದಲ್ಲಿ ಕಿರು ಬರಹಗಳಿಂದ ಸಾಹಿತ್ಯ ಪ್ರಪಂಚಕ್ಕೆ ಕಾಲಿರಿಸುತ್ತಾರೆ. ಕಾರಂತರು ಕೂಡ ಅಪವಾದವಲ್ಲ. ಮೊದಲಿಗೆ ವಿಜ್ಞಾನಕ್ಕೆ ಸಂಬಂದಿಸಿದ ಕಿರು ಲೇಖನಗಳೊಂದಿಗೆ ವಿಜ್ಞಾನ ಸಾಹಿತ್ಯ ಪ್ರಪಂಚಕ್ಕೆ ಅಡಿ ಇಟ್ಟವರು. ೧೯೨೮ರ ಸುಮಾರಿಗೆ ೨೮ ರ ಹರೆಯದ ಯುವಕ ಕಾರಂತರು “ವಸಂತ” ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಕಾರಂತರೇ ಹೇಳುವಂತೆ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದು.

ವಸಂತ - ಕಾರಂತರ ಪ್ರಪ್ರಥಮ ಪತ್ರಿಕೋದ್ಯಮ ಸಾಹಸ. ಅದರ ಸಂಪಾದಕರು ಮತ್ತು ಹೆಚ್ಚಿನ ಲೇಖನಗಳ ಲೇಖಕರು ಕಾರಂತರೇ ಆಗಿದ್ದರು. ಪತ್ರಿಕೆ ಕುಂದಾಪುರದಿಂದ ಪ್ರಕಟವಾಗುತ್ತಿತ್ತು. ಅದರಲ್ಲಿ ಕಾರಂತರ ಮೊದಲ ಕಾದಂಬರಿಗಳಾದ “ನಿರ್ಭಾಗ್ಯ ಜನ್ಮ, ದೇವದೂತರು ಮತ್ತು ಸೂಳೆಯ ಸಂಸಾರ” ಪ್ರಕಟವಾಯಿತು. ಅಂದಿನ ಸಾಹಿತ್ಯಾಸಕ್ತರನ್ನು ಗಮನ ಸೆಳೆದ ಈ ಪತ್ರಿಕೆಯಲ್ಲಿ ಕಾರಂತರು ಹಲವಾರು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದರು.

ಆದರೆ ವಸಂತ ಪತ್ರಿಕೆ ಬಹುಕಾಲ ನಡೆಯಲಿಲ್ಲ. ಕಾರಂತರೇ ಹೇಳುತ್ತಾರೆ “ವಸಂತವೆಂಬ ಮಾಸ ಪತ್ರಿಕೆ ನನ್ನ ಗತ ವೈಭವಗಳಲ್ಲೊಂದು ಸ್ಮರಣೆಯಾಯಿತು“. ಸುಮಾರು ಎರಡು ದಶಕಗಳ ಬಳಿಕ, ಅಂದರೆ ಐವತ್ತರ ದಶಕದಲ್ಲಿ ಕಾರಂತರು “ವಿಚಾರವಾಣಿ” ಎಂಬ ಹೊಸ ಪತ್ರಿಕೆ ಪ್ರಾರಂಭಿಸಿದರು. ಆ ಪತ್ರಿಕೆಯಲ್ಲಿ “ವಿಜ್ಞಾನಯುಗ” ಎಂಬ ಅಂಕಣವಿತ್ತು. ಅದರಲ್ಲಿ ಹಲವು ವಿಜ್ಞಾನ ಲೇಖನಗಳನ್ನು ಬರೆದರು

ಈ ನಡುವೆ ೧೯೩೬ ರಲ್ಲಿ ಮೂರು ಸಂಪುಟಗಳ ಬಾಲಪ್ರಪಂಚ ಬೆಳಕು ಕಂಡಿತು. ಅಲ್ಲಿ ದೊಡ್ಡವರಿಗಾಗಿ ಹೇಳದೇ ಉಳಿದ ಹಲವು ವಿಷಯಗಳು ಇದ್ದುವು. ಪರಿಣಾಮವಾಗಿ ನಂತರ ಬಂತು ಮೂರು ಸಂಪುಟಗಳ ವಿಜ್ಞಾನ ಪ್ರಪಂಚ ಬಂತು. ಈ ಸಂಪುಟಗಳು ಕನ್ನಡ ವಿಜ್ಞಾನ ವಾಂಗ್ಮಯದಲ್ಲಿ ಮೈಲಿಗಲ್ಲುಗಳು. ಇವಲ್ಲದೇ ಶಿವರಾಮಕಾರಂತರು ಹಲವು ವಿಜ್ಞಾನ ಪುಸ್ತಕಗಳನ್ನು ಬರೆದರು. ವಿಚಿತ್ರ ಖಗೋಲ (೧೯೬೫), ನಮ್ಮ ಭೂ ಖಂಡಗಳು (೧೯೬೫), ಹಿರಿಯ ಕಿರಿಯ ಹಕ್ಕಿಗಳು (೧೯೭೧), ವಿಜ್ಞಾನ ಮತ್ತು ಅಂಧ ಶೃದ್ದೆ (೧೯೮೨), ಉಷ್ನವಲಯದ ಆಗ್ನೇಸ್ಯ (೧೯೮೩), ಪ್ರಾಣಿಪ್ರಪಂಚದ ವಿಸ್ಮಯಗಳು (೧೯೮೪), ಮಂಗನ ಕಾಯಿಲೆ (೧೯೮೪), ವಿಶಾಲ ಸಾಗರಗಳು (೧೯೮೪), ಪ್ರಾಣಿ ಪ್ರಪಂಚ (೧೯೯, ಇತ್ಯಾದಿ

ಮನಸ್ಸಿಗೆ ಮುದ ನೀಡಿದ ಇಂಗ್ಲೀಷಿನ ವಿಜ್ಞಾನ ಪುಸ್ತಕ ದೊರೆತರೆ ಕನ್ನಡದ ಜನರಿಗಾಗಿ ಅನುವಾದಿಸಲು ಕಾರಂತರು ಮುಂದಾಗುತ್ತಿದ್ದರು. ಇಂಗ್ಲೀಷಿನಲ್ಲಿ ರಾಶೆಲ್ ಕಾರ್ಸನ್ ಸುಪ್ರಸಿದ್ದ ಜನಪ್ರಿಯ ವಿಜ್ಞಾನ ಲೇಖಕರು. ಅವರ “The Sea Around Us “ಪುಸ್ತಕವನ್ನು ಓದಿದ ಕಾರಂತರಿಗೆ ಕನ್ನಡಕ್ಕೆ ಅನುವಾದಿಸುವ ಉತ್ಸಾಹ ಹುಟ್ಟಿತು. ಅದರ ಫಲವೇ ” ನಮ್ಮ ಸುತ್ತಲಿನ ಕಡಲು” (೧೯೫೮). ಇವಲ್ಲದೇ ಅವರ ಇತರ ಅನುವಾದಿತ ಹೊತ್ತಗೆಗಳು ಹೀಗಿವೆ -

ಮೋಸೋಮುಗಳು (ಮನ್ಸೂನ್) (೧೯೭೯)

ಕೀಟನಾಶಕಗಳ ಪಿಡುಗುಗಳು (೧೯೮೩)

ಜನತೆಯೂ ಅರಣ್ಯಗಳೂ (೧೯೮೩)

ಭಾರತದ ಪರಿಸರ ಪರಿಸ್ಠಿತಿ - ಪ್ರಜೆಯ ದೃಷ್ಟಿಯಲ್ಲಿ (೧೯೮೩)

ನಮ್ಮ ಪರಮಾಣು ಚೈತನ್ಯ -ಉತ್ಪಾದನಾ ಸಾಧನಗಳು (೧೯೮೬)

ಭಾರತದ ಪರಿಸರ ಸ್ಠಿತಿ - ದ್ವಿತೀಯ ಸಮೀಕ್ಷೆ (೧೯೮೬)

ಪರಮಾಣು - ಇಂದು, ನಾಳೆ(೧೯೮೩)

ನಮ್ಮೆಲ್ಲರಿಗೂ ಒಂದೇ ಭವಿಷ್ಯ (೧೯೮೯)

ಸಾಕಾಗದೇ ಪುಸ್ತಕಗಳ ಪಟ್ಟಿ - ಕಾರಂತರಿಗೆ ಅದೆಂಥ ವಿಜ್ಞಾನ ಪ್ರೀತಿ ಇತ್ತೆನ್ನುವುದನ್ನು ಸ್ಪಷ್ಟ ಪಡಿಸಲು ಕಾರಂತರ ಕೃತಿಗಳಲ್ಲಿ ಹೆಚ್ಚಿನವು ಜೀವ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದ್ದು. ಇದಕ್ಕೆ ನಿಸರ್ಗದ ಬಗ್ಗೆ ಕಾರಂತರಿಗಿದ್ದ ಒಲವು ಕಾರಣ.

ಅವರು ಒಂದೆಡೆ ಬರೆದಿದ್ದಾರೆ “ಪ್ರಯತ್ನ ಶೀಲರಿಗೆ, ಸಾಹಸಿಗಳಿಗೆ, ಕುತೂಹಲವುಳ್ಳವರಿಗೆ ನೆಲ, ನೀರು, ಬಾನು ಎಲ್ಲವೂ ಅದ್ಭುತ ಮನೋಹರ ಪ್ರದೇಶಗಳೇ ! ಹಾಗೆ ನೋದಹೋದರೆ ನಮ್ಮ ಮನಸ್ಸಿಗೆ ಸಂತೋಷವನ್ನು ಕೊಡಲಾರದ ಪ್ರದೇಶವೇ ಇಲ್ಲವೋ ಏನೋ ! ಅದನ್ನೆಲ್ಲ ಕಂಡು ತಿಳಿಯುವ ಕುತೂಹಲವಿರುವರ ಪಾಲಿಗೆ ನಿಸರ್ಗ ಯಾವ ರಹಸ್ಯವನ್ನೂ ಬಹಳ ಕಾಲ ಬಚ್ಚಿಟ್ಟುಕೊಳ್ಳಲಾರದು” (ವಿಶಾಲ ಸಾಗರಗಳು)

ಕಡಲಂತೆ ಕಾರಂತ ಎಂಬ ಪುಸ್ತಕದಲ್ಲಿ ಶ್ರೀ. ಬಿದರಹಳ್ಳಿ ನರಸಿಂಹಮೂರ್ತಿಯವರು ಹೇಳುವಂತೆ ” ನಿಸರ್ಗ ಪ್ರೇಮ ಕಾರಂತರ ವ್ಯಕ್ತಿತ್ತ್ವದ ಸ್ಥಾಯಿ ಲಕ್ಷಣ. ದೇವರನ್ನು ಅಷ್ಟಾಗಿ ಒಲ್ಲದ ಕಾರಂತರು ದೇವರ ಜಾಗೆಯಲ್ಲಿ ನಿಸರ್ಗವನ್ನು ಕೂರಿಸಿ ಪೂಜಿಸುತ್ತ ಬಂದಿದ್ದಾರೆ. ಅವರಿಗೆ ಬೆಟ್ಟ ಗುಡ್ದಗಳು, ಮರಗಿಡ ಕಾಡುಗಳು, ನದಿ ಸಮುದ್ರಗಳು ಹೆಂಡತಿ ಮಕ್ಕಳಷ್ಟೇ ಆಪ್ತ ಸ್ನೇಹಿತರಷ್ಟೇ ಆತ್ಮೀಯ ಜೀವಗಳು

ಕಾರಂತರಿಗೆ ನಿಸರ್ಗ ಎಲ್ಲವೂ ಆಗಿತ್ತು. ಚೋಮನ ದುಡಿ, ಕುಡಿಯರ ಕೂಸು, ಚಿಗುರಿದ ಕನಸು, ಬೆಟ್ಟದ ಜೀವ ಮೊದಲಾದ ಕಾದಂಬರಿಗಳಲ್ಲಿ ನಾವು ಕಾರಂತರ ನಿಸರ್ಗ ಪ್ರೇಮವನ್ನು ಕಾಣಬಹುದು. ಇದೇ ಬಗೆಯ ನಿಸರ್ಗ ಪ್ರೇಮ ಅವರ ವಿಜ್ಞಾನ ಕೃತಿಗಳನ್ನೂ ಪ್ರಭಾವಿಸಿದೆ.

“೧೯೯೧ ರಲ್ಲಿ ಪ್ರಕಟವಾದ ” ಪ್ರಾಣಿ ಪ್ರಪಂಚ” ಕಾರಂತರ ಜನಪ್ರಿಯ ಪುಸ್ತಕಗಳಲ್ಲೊಂದು. ಏಳಕ್ಕೂ ಹೆಚ್ಚು ಬಾರಿ ಪುನರ್ ಮುದ್ರಣವನ್ನು ಕಂಡಿರುವುದೇ ಇದರ ಜನಪ್ರಿಯತೆಯ ಸೂಚಕ. ಇಂಗ್ಲೀಷಿನ Wonders of animal life ಎಂಬ ನಾಲ್ಕು ಸಂಪುಟಗಳು ಪ್ರಾಣಿ ಪ್ರಪಂಚದ ಸೃಷ್ಟಿಗೆ ಪ್ರೇರಣೆಯಾದುವೆಂದು ಮುನ್ನುಡಿಯಲ್ಲೇ ಕಾರಂತರು ಬರೆದಿದ್ದಾರೆ. ಅಕಾರಾದಿಯಾಗಿ ಬೇರೆ ಬೇರೆ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ವಿವರಣೆ ಒದಗಿಸಿರುವ ಪುಸ್ತಕದ ತುಂಬ ರೇಖಾ ಚಿತ್ರಗಳಿವೆ - ಅವೆಲ್ಲವನ್ನು ಸ್ವತ: ಕಾರಂತರೇ ಬರೆದಿದ್ದಾರೆಂದರೆ ಸೋಜಿಗವಾಗುತ್ತದೆ. ಕಾರಂತರು ಮುನ್ನಡಿಯಲ್ಲಿ ಹೇಳುತ್ತಾರೆ

“ಇದಕ್ಕಾಗಿ ಎರಡು ವರ್ಷಗಳ ದೀರ್ಘಕಾಲದ ಬಿಡುವಿನ ಸಮಯವನ್ನು ಬಳಸಿಕೊಂಡು ಸುಮಾರು ೭೦೦ ಪಶುಪಕ್ಷಿಗಳನ್ನು ಈ ಪ್ರಾಣಿ ಪ್ರಪಂಚಕ್ಕೆ ಸೇರಿಸಿಕೊಂಡೆ. ಅವನ್ನು ಸಚಿತ್ರವಾಗಿ ಕೊಡುವ ಪ್ರಯತ್ನದಲ್ಲಿ ಫೊಟೊ ಸಂಗ್ರಹಕ್ಕೆ ಹೋಗದೇ ಅದರ ಖರ್ಚು ವೆಚ್ಚಕ್ಕೆ ಬೆದರಿ, ಈ ಮೊದಲು ಪ್ರಯತ್ನಿಸಿದಂತೆ ನಾನೇ ಬರೆಯತೊಡಗಿದೆ. ಅವೆಲ್ಲವೂ ಅನ್ಯ ಚಿತ್ರಗಳನ್ನೋ, ಫೊಟೋಗಳನ್ನೋ ನೋಡಿ ಬರೆದ ರೇಖಾ ಚಿತ್ರಗಳು. ಅಂಥ ಕೆಲವನ್ನು ಕೈ ತಿದ್ದದ ನಾನು ತಿರು ತಿರುಗಿ ಬರೆಯಲೂ ಬೇಕಾಯಿತು. ಆ ರೀತಿಯಲ್ಲಿ ಸುಮಾರು ನಾಲ್ಕು ನೂರು ಚಿತ್ರಗಳನ್ನು - ಬರೆದು, ಹರಿದು, ಬರೆದು, ಹರಿದು ತಿರುಗಿ ಬರೆಯಲು ಹೊರಟೆ. ಪ್ರಕಟಣೆಯ ವೆಚ್ಚದ ದೃಷ್ಟಿಯಿಂದ ಅದು ಅನಿವಾರ್ಯವಾಗಿತ್ತ.”

ನಾವು ನೆನಪಿಡಬೇಕು - ಇಷ್ಟೆಲ್ಲ ಮಾಡುವಾಗ ಕಾರಂತರು ಇನ್ನೂ ೮೭ರ ತರುಣ! ಜ್ಞಾನಪೀಠ ಪುರಸ್ಕೃತ ಈ ಹಿರಿಯರು ಪತ್ರಿಕೆಗಳ ಜನತಾವಾಣಿಯಲ್ಲಿ ಬರೆದ ಪತ್ರಗಳು ಅಸಂಖ್ಯ. ತನಗೆ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೇ ಕಾರಂತರು ಹೇಳುತ್ತಿದ್ದರು. ದಕ್ಷಿಣ ಮತ್ತು ಉತ್ತರ ಕನ್ನಡದ ಜನಸಮುದಾಯದಲ್ಲಿ ಪರಿಸರ ಪರ ವಾದ ಪ್ರಬಲ ದನಿಯಾಗುವಲ್ಲಿ ಕಾರಂತರು ಕಾರಣರಾದರು. ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಚುನಾವಣಾ ಪ್ರಚಾರ ಮಾಡದೇ ಹೋದರೂ ೭೦ ಸಾವಿರ ಮತಗಳನ್ನು ಪಡೆದದ್ದು ಕಾರಂತರ ವರ್ಚಸ್ಸು ಜನರನ್ನು ತಟ್ಟಿದುದಕ್ಕೆ ಸಾಕ್ಷಿ

ಪರಿಸರದ ಬಗ್ಗೆ ಕಾರಂತರಿಗಿತ್ತು ಅನನ್ಯ ಕಾಳಜಿ. ಆಧುನಿಕ ಜೀವನ ವಿಧಾನಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ದನಿ ಎತ್ತಿದರು. ಕೈಗಾ ಪರಮಾಣು ಸ್ಥಾವರ ಸ್ಥಾಪನೆ ಅಥವಾ ಬೇಡ್ತಿ ಹಾಗೂ ಕಾಳೀ ನದೀ ಯೋಜನೆಯ ಸಂದರ್ಭದಲ್ಲಿ, ಕರಾವಳಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆ ಬಂದಾಗ, ಕುದುರೇಮುಖ ಅದಿರು ಯೋಜನೆಯ ಕಾಲದಲ್ಲಿ ಶಿವರಾಮ ಕಾರಂತರು ಸುಮ್ಮನುಳಿಯಲಿಲ್ಲ. ಇವೆಲ್ಲವೂ ಹೇಗೆ ಪರಿಸರದ ಮೇಲೆ ಅಳಿಸಲಾಗದ ಘಾಸಿ ಮಾಡಲಿವೆ ಎಂಬ ಬಗ್ಗೆ ಲೇಖನ, ಉಪನ್ಯಾಸ, ಮತ್ತು ಪುಸ್ತಕಗಳ ಮೂಲಕ ಜನ ಜಾಗೃತಿಗೆ ಯತ್ನಿಸಿದರು. ಹಿಂದೆ ಕಂಡ ಮತ್ತು ಈಗ ಕಾಣುತ್ತಿರುವ ಕರ್ನಾಟಕ (ಕರ್ನಾಟಕ ಪರಿಸರ ಪರಿಸ್ಠಿತಿ ವರದಿ, ೧೯೮೩ -೮೪) ಎಂಬ ಸುದೀರ್ಘ ಲೇಖನವೊಂದರಲ್ಲಿ ಬದಲಾಗುತ್ತಿರುವ ಕರ್ನಾಟಕದ ಪರಿಸರ ಮತ್ತು ಸಾಮಾಜಿಕ ರೀತಿ ನೀತಿಗಳ ಬಗ್ಗೆ ಗಾಡ ವಿಷಾದ ವ್ಯಕ್ತ ಪಡಿಸುತ್ತಾರೆ. ಇಲ್ಲಿ ಎಷ್ಟೆಲ್ಲ ಮರಗಿಡಗಳಿದ್ದುವು, ಜಾನಪದ ಸಂಸ್ಕೃತಿಗಳಿದ್ದುವು, ಪಾರಂಪರಿಕ ಜ್ಞಾನವಿದ್ದುವು, ವನ್ಯ ಜೀವಿಗಳು ಹರಡಿಕೊಡಿದ್ದುವು. ಆದರೆ ಅವೆಲ್ಲವೂ ಮರೆಯಾಗುತ್ತಿವೆಯಲ್ಲ ಎಂದು ಕಾರಂತರು ವಿಷಾದಿಸುತ್ತಾರೆ. ಆ ಲೇಖನದಲ್ಲಿ ಅವರು ನಮ್ಮ ಪರಿಸರ ಪ್ರೀತಿ ಬಗ್ಗೆ ಕಟಕಿಯಾಡುತ್ತಾರೆ

“ಭಾರತದಲ್ಲಿ ವಾಸಿಸುವ ನಮಗೆ ಪರಿಸರವನ್ನು ಕುರಿತ ಜ್ಞಾನ ತೀರ ಕಡಿಮೆ. ಪಶು ಪಕ್ಷಿಗಳಿಗೂ, ಮಾನವ ಬಳಗಕ್ಕೂ ಏನು ಸಂಬಂಧವಿದೆಯೆಂದು ನಮಗಿನ್ನೂ ತಿಳಿದಿಲ್ಲ. ಆದರೂ ನಾವು ಬುದ್ಧನಿಂದ ಅಹಿಂಸಾ ಧರ್ಮದ ಬೋಧನೆ ಪಡೆದವರು ! ನಮ್ಮ ಪುರಾತನ ಋಷಿಗಳು ಅತಿ ಸೂಕ್ಷ್ಮವಾದ ಜೀವಾಣುವಿನಲ್ಲಿಯೂ ಬ್ರಹ್ಮನಿದ್ದಾನೆ ಎಂದವರು. ಹೀಗೆ ಮತ ಧರ್ಮಗಳ ಪ್ರಭಾವ ನಮ್ಮ ಮೇಲೆ ವಿಪರೀತ ಬಿದ್ದುದರಿಂದಲೋ ಏನೋ. ಆ ಬ್ರಹ್ಮನನ್ನು ನಾವು ನಿಸರ್ಗದಲ್ಲಿ ಕಾಣಲು ಬಯಸುವುದಿಲ್ಲ ! ಕಲಿಯುಗದಲ್ಲಿ ಬ್ರಹ್ಮನ ಬದಲು ದುಡ್ಡೇ ಸರ್ವಸ್ವ - ಎಂಬ ಆರಾಧನೆಗೆ ತೊಡಗಿದ್ದೇವೆ. ಪ್ರಕೃತಿ ಸಂಪತ್ತನ್ನು ನಾವು ಇಂದು ದೈನಂದಿನ ನಮ್ಮ ಲಾಭಕ್ಕಾಗಿ ಸುಲಿಯುತ್ತಿದ್ದೇವೆಯೇ ಹೊರತು, ನಾಳಿನ ಯೋಚನೆ ನಮಗಿಲ್ಲ ಎಂಬಂತೆ ವರ್ತಿಸುತ್ತಿದ್ದೇವೆ.”

ವರ್ತಾಮಾನದ ಸಮಸ್ಯೆಗಳಿಗೆ ಕಾರಂತರಂತೆ ಸ್ಪಂದಿಸಿದ ಸಾಹಿತಿ ಬೇರೊಬ್ಬನಿಲ್ಲವೆಂದರೆ ಅತಿಶಯೋಕ್ತಿಯಾಗದು. ಅವರೆಂದೂ ದಂತ ಗೋಪುರಗಳಲ್ಲಿದ್ದವರಲ್ಲ. “ಭಾರತದ ಪರಿಸರ ಸ್ಥಿತಿ - ೧೯೮೨” ಕಾರಂತರ ಬಲು ಮುಖ್ಯ ಅನುವಾದಿತ ಕೃತಿಗಳಲ್ಲೊಂದು. ಅನಿಲ್ ಅಗರ್ವಾಲ್, ಕ್ಲಾಡ್ ಸಿಲ್ವಾರಿಸ್, ಮಾಧವ ಗಾಡ್ಗಿಲ್ ಮೊದಲಾದ ಮೂವತ್ತಕ್ಕೂ ಹೆಚ್ಚು ಪರಿಸರ ತಜ್ಞರು ಭಾರತದ ನೆಲ, ಜಲ, ವಾಯು - ಒಟ್ಟಾರೆ ಪರಿಸರದ ಪರಿಸ್ಥಿತಿ ಬಗ್ಗೆ ಇಂಗ್ಲೀಷಿನಲ್ಲಿ ತಯಾರಿಸಿದ ವರದಿಯ ಕನ್ನಡ ರೂಪಾಂತರವಿದು. ಕಾರಂತರಿಲ್ಲದಿದ್ದರೆ ಪ್ರಾಯಶ: ಕನ್ನಡಿಗರಿಗೆ ಇಂಥ ಅಮೂಲ್ಯ ಪುಸ್ತಕ ಲಭ್ಯವಾಗುತ್ತಿರಲಿಲ್ಲವೇನೋ

ಪರಿಷ್ಕರಣೆಗೆ ಅವಕಾಶ

ಕಾರಂತರ ವಿಜ್ಞಾನ ಬರಹಗಳ ಬಗ್ಗೆ ಹಲವು ಆಕ್ಷೇಪಗಳನ್ನು ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಅವರ ಭಾಷೆ ಒರಟು, ಅಲ್ಲಲ್ಲಿ ಸಂದಿಗ್ದತೆ, ಪರಿಕಲ್ಪನೆಯಲ್ಲಿ ಅಸ್ಪಷ್ಟತೆ, ಪಾರಿಭಾಷಿಕ ಶಬ್ದಗಳ ತಪ್ಪು ಬಳಕೆ ಇತ್ಯಾದಿ. ಇಂಥ ಆಕ್ಷೇಪಗಳನ್ನು ಅಲ್ಲಗಳೆಯಲಾಗದು. ಇವೆಲ್ಲವುಗಳ ಹೊರತಾಗಿಯೂ ಕಾರಂತರ ವಿಜ್ಞಾನ ಕೃತಿಗಳು ಯಾವ ಕಾಲದಲ್ಲಿ ರಚಿತವಾದುವು ಎಂಬುದನ್ನು ನಾವು ಗಮನಿಸಬೇಕು. ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯಕ್ಕೆ ಇವು ಉತ್ಸಾಹವನ್ನು ಊಡಿದುವು; ಜನಮಾನಸದ ಮೇಲೆ ಗಾಢ ಪ್ರಭಾವ ಬೀರಿದುವು ಎನ್ನುವುದನ್ನು ಒಪ್ಪಿಕೊಳ್ಳಬೇಕು.

ವಿಜ್ಞಾನ ಒಬ್ಬ ವ್ಯಕ್ತಿಯ ಸೊತ್ತಲ್ಲ. ವಿಜ್ಞಾನ ಬರಹಗಳಲ್ಲಿ ಪರಿಕಲನಾತ್ಮಕ ಸ್ಪಷ್ಟತೆ ಅತೀ ಅಗತ್ಯ. ವಿಜ್ಞಾನ ನಿಂತ ನೀರಲ್ಲ. ಹರಿವ ಪ್ರವಾಹ. ಜ್ಞಾನ ಸೀಮೆಯ ಎಲ್ಲೆ ಸದಾ ವಿಸ್ತಾರವಾದಂತೆ ಹೊಸ ಹೊಸ ವಿವರಣೆಗಳು ಹುಟ್ಟಿಕೊಳ್ಳುತ್ತವೆ.  ನ್ಯೂಟನ್ನನ ನಿಯಮಗಳಿಗೆ  ಐನ್ ಸ್ಟೈನ್ ತಿದ್ದುಪಡಿ ತಂದಂತೆ. ಹಾಗಾಗಿಯೇ ಅಂತಿಮವಾಗಿ ವಿಜ್ಞಾನ ವ್ಯಕ್ತಿ ನಿಷ್ಠವಲ್ಲ. ಇದು ವಿಜ್ಞಾನ ಬರವಣಿಗೆಗೂ ಅನ್ವಯಿಸುತ್ತದೆ. ಕೃತಿಗಾರನ ಕಾಲ ಮತ್ತು ಪರಿಸ್ಠಿತಿಗಿಂತ,  ಅಲ್ಲಿ ಮಂಡಿಸಿದ ವಿಷಯ ಮುಖ್ಯವಾಗುತ್ತದೆ. ತಪ್ಪು ಹೇಳಿಕೆಗಳು, ಪರಿಷ್ಕರಣೆಗೆ ಯೋಗ್ಯ ವಿಚಾರಗಳು ಪರಿಷ್ಕರಿಸಲ್ಪಡಲೇ ಬೇಕು. ಈ ದೃಷ್ಟಿಯಲ್ಲಿ ಶಿವರಾಮಕಾರಂತರ ವಿಜ್ಞಾನ ಕೃತಿಗಳನ್ನು ಪುನರ್ ಮುದ್ರಣ ಮಾಡುವ ಸಂದರ್ಭದಲ್ಲಿ ಅವುಗಳ ಪರಿಷ್ಕರಣೆ ಅತೀ ಅಗತ್ಯ. ಇಲ್ಲಿ “ಕಾರಂತ ಶೈಲಿ” ಯನ್ನು ಮುಟ್ಟದೇ ಪರಿಷ್ಕರಿಸಬಹುದು. ಹೀಗೆ ಮಾಡುವುದರಿಂದ ಕಾರಂತರಿಗೆ ನ್ಯಾಯ ಸಲ್ಲುತ್ತದೆ; ವಿಜ್ಞಾನಕ್ಕೆ ಅನ್ಯಾಯವಾಗದು

ಹಲವು ದಶಕಗಳ ಹಿಂದೆ ಕಾರಂತರು ವಿಶ್ವಕೋಶದ ಪ್ರಕಟಣೆಯ ಸಾಹಸ ಮಾಡಿದರು. ಇಂದು ನಾವಿದ್ದೇವೆ ಮಾಹಿತಿ ಯುಗದಲ್ಲಿ. ಪ್ರಕಟಣೆಗೆ ಹೊಸ ತಂತ್ರಜ್ಞಾನ ಬಂದಿದೆ. ಆದರೇನು ? – ಕಾರಂತರಿಲ್ಲ, ಕಾರಂತರಂಥವರಿಲ್ಲ ! ಕನ್ನಡ ವಿಶ್ವಕೋಶ ಯೋಜನೆ ಅಪೂರ್ಣವಾಗಿ ಚಿರ ನಿದ್ರೆಗೆ ಸಂದಿದೆ. ವ್ಯಕ್ತಿಯಾಗಲಿ, ನಮ್ಮ ವಿಶ್ವವಿದ್ಯಾಲಯಗಳಾಗಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವಕೋಶಗಳ ಪ್ರಕಟಣೆಗೆ ಮುಂದಾಗುತ್ತಿಲ್ಲ. ಕಾರಣಕ್ಕೆ ಹಲವು ನೆಪಗಳಿವೆ. ನಮ್ಮ ಬೌದ್ಧಿಕ ದಿವಾಳಿತನಕ್ಕೆ ಇದು ಸಾಕ್ಷಿ ಎಂದೆನಿಸದೇ ? ಕನ್ನಡದ ಪ್ರಮುಖ ವಿಜ್ಞಾನ ಬರಹಗಾರರಾದ ಜೆ.ಅರ್ ಲಕ್ಶ್ಮಣ ರಾಯರು ಕಾರಂತರ ವಿಜ್ಞಾನ ಸಾಹಿತ್ಯದ ಬಗ್ಗೆ ಕಾರಂತರ ಅಭಿನಂದನ ಗ್ರಂಥವಾದ ಕಾರಂತ ಪ್ರಪಂಚದಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ಹೇಳಿದ್ದಾರೆ

“ತಾವು ಓದಿ ತಿಳಿದುಕೊಂಡು ಆನಂದಿಸಿದ ವಿಷಯಗಳನ್ನು ಇತರರಿಗೆ ತಿಳಿಸುವ ಪ್ರಯತ್ನ ಅವರದು. ಆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ವರದಿ ಮಾಡುವುದರಲ್ಲಿಯೂ ಒಂದು ಕಲೆ ಇದೆ. ಆ ಕಲೆ ಕಾರಂತರಿಗೆ ಒಲಿದಿದೆ. ಆದುದರಿಂದಲೇ ವರ್ಣನೆಗೆ ಪ್ರಾಶಸ್ತ್ಯವಿರುವ ವಿಜ್ಞಾನ ಶಾಖೆಗಳಾದ ಜೀವ ವಿಜ್ಞಾನ, ಭೂವಿಜ್ಞಾನಗಳನ್ನು ಕುರಿತ ಅವರ ಬರಹ ಹೆಚ್ಚು ಶೋಭಿಸುತ್ತದೆ. ಪ್ರಾಣಿ ಮತ್ತು ಸಸ್ಯ ಜೀವನ, ಭೂ ಇತಿಹಾಸಗಳ ವಿಷಯದಲ್ಲಿ ಕಾರಂತರು ಓದುಗರ ಕುತೂಹಲ, ಆಸಕ್ತಿಗಳನ್ನು ಕೆರಳಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕಾರಂತರ ಬರಹಗಳ ಇನ್ನೊಂದು ಮಹತ್ಸಾಧನೆ ಎಂದರೆ, ಪ್ರೌಢ ವಿಷಯಗಳನ್ನು ಕುರಿತು ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲವೆಂಬ ಅರ್ಥವಿಲ್ಲದ ಕೂಗನ್ನು ಅಡಗಿಸಲು ಅದು ಸಹಕಾರಿಯಾಗಿದೆ. ವಿಷಯದ ಮೇಲೆ ಪ್ರಭುತ್ವ, ತಿಳಿಸಬೇಕೆಂಬ ಅಭಿಲಾಷೆ, ಈ ಎರಡೂ ಇದ್ದುದೇ ಆದರೆ, ಭಾಷೆ ಅಡ್ದಿ ಮಾಡದೆಂಬುದನ್ನು ಅವರ ಬರಹ ತೋರಿಸಿಕೊಟ್ಟಿದೆ.ಇದಕ್ಕಾಗಿ ಕನ್ನಡಿಗರು ಅವರಿಗೆ ಋಣಿಯಾಗಿದ್ದಾರೆ.”

ನಿಜ, ಶಿವರಾಮ ಕಾರಂತರು ಕಾದಂಬರಿಕಾರರಾಗದೇ ಹೋಗಿದ್ದರೂ ವಿಜ್ಞಾನ ಬರಹಗಾರರಾಗಿ ಕನ್ನದ ಸಾಹಿತ್ಯ ಪ್ರಪಂಚದಲ್ಲಿ ಅವರಿಗೊಂದು ಸ್ಥಾನವಿರುತ್ತಿತ್ತು. ಅವರು ಕಾದಂಬರಿಕಾರ, ನಾಟಕಗಾರ, ನಿರ್ದೇಶಕ, ನೃತ್ಯ ಪಟು, ಚಿತ್ರಗಾರ, ವಿಜ್ಞಾನ ಸಾಹಿತ್ಯ ನಿರ್ಮಾಪಕ, ಚಲನ ಚಿತ್ರ ನಿರ್ದೇಶಕ, ಪರಿಸರ ಸಂರಕ್ಷಕ, ರಾಜಕಾರಣಿ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞ… ಇನ್ನೇನು !?. ವಿಜ್ಞಾನವನ್ನು ಕಾಲೇಜಿಗೆ ಹೋಗಿ ಶಾಸ್ತ್ರೀಯವಾಗಿ ಕಲಿಯದ ಕಾರಂತರೇ ಇಷ್ಟೊಂದು ಸಮೃದ್ಧವಾಗಿ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನೃಷ್ಟಿಸಿ ನಮ್ಮ ಮುಂದೆ ಬಲು ದೊಡ್ಡ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಇದು ನಮಗೆ ಸ್ಫೂರ್ತಿಯ ಸೆಲೆಯಾಗಬೇಕಾಗಿದೆ.

Posted in ವ್ಯಕ್ತಿ - ಜೀವನ

ವಿಜ್ಞಾನ ದಿನ ರಾಮನ್ ಪರಿಣಾಮದ ಒಂದು ನೆನಪು
ಮೊನ್ನೆ ಮೊನ್ನೆ ಕಳೆಯಿತು ಫೆಬ್ರವರಿ 28, ವಿಜ್ಞಾನ ದಿನವೆಂದು ತಣ್ಣಗೆ ಆಚರಿಸಿದೆವು. ಸಿವಿ ರಾಮನ್ ಕುರಿತು ಉದಯವಾಣಿಯಲ್ಲಿ ನನ್ನ ಕಿರು ಬರಹ ಪ್ರಕಟವಾಯಿತು (ನೋಡಿ ಉದಯವಾಣಿ 27.2.2009). ಅದರ ವಿಸ್ತ್ರುತ ರೂಪ ಕೆಂಡ ಸಂಪಿಗೆಯಲ್ಲಿ ಮತ್ತು ಇನ್ನಷ್ಟು ಪರಿಷ್ಕರಿಸಿದ ಬರಹ ಇಲ್ಲಿದೆ. ರಾಮನ್ ಪರಿಣಾಮದ ಬಗ್ಗೆ ಬರೆದ ಈ ಲೇಖನ ನಿಮ್ಮ ಮೇಲೂ ಪರಿಣಾಮ ಬೀರಿತಾದರೆ ನನ್ನ ಪ್ರಯತ್ನ ಸಾರ್ಥಕ. ಓದಿ ಬರೆಯಿರಿ ನಿಮ್ಮ ಪ್ರತಿಕ್ರಿಯೆಯನ್ನು. ಕಾಯುತ್ತಿದ್ದೇನೆ ಅದಕ್ಕಾಗಿ …

1928, ಫೆಬ್ರವರಿ 28. ಕಲ್ಕತ್ತಾದ ಬೌಬಝಾರ್ ಓಣಿಯಲ್ಲಿದ್ದ “ದಿಇಂಡಿಯನ್ ಎಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್” ಸಂಸ್ಥೆಯ ಕಛೇರಿಯಲ್ಲಿ ಮುಸ್ಸಂಜೆ ಮುಸುಕುತ್ತಿತ್ತು.  ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ವಿ.ರಾಮನ್ (ಚಂದ್ರಶೇಖರ ವೆಂಕಟರಾಮನ್, (1888-1970) ಕರೆದಿದ್ದ  ಪತ್ರಿಕಾ ಗೋಷ್ಠಿಗಾಗಿ ವರದಿಗಾರರು ಅಲ್ಲಿ ಸೇರಿದ್ದಾರೆ. ರಾಮನ್ ಕರೆದ ಗೊಷ್ಠಿ ಅಂದ ಮೇಲೆ ಅಲ್ಲೇನೋ ವಿಶೇಷವಾದದ್ದು ಇರಲೇಬೇಕೆಂದು ಅವರಿಗೆ ಗೊತ್ತಿತ್ತು. ಆವರ ನಿರೀಕ್ಷೆ ಹುಸಿಯಾಗಲಿಲ್ಲ.

ತಾನು ಮತ್ತು ತನ್ನ ಸಹದ್ಯೋಗಿ ಕೆ.ಎಸ್.ಕೃಷ್ಣನ್ ಬೆಳಕಿಗೆ ಸಂಬಂಧಿಸಿದಂತೆ ನೂತನ ವಿದ್ಯಮಾನವೊಂದನ್ನು ಆವಿಷ್ಕರಿಸಿದ್ದೇವೆ ಮತ್ತು ಅದು ದ್ರವ ಪದಾರ್ಥದ ಅಣುಗಳ ರಚನಾ ವಿನ್ಯಾಸವನ್ನು ತಿಳಿಯಲು ಸಹಕಾರಿಯಾಗಲಿರುವ ಮಹತ್ವದ ಆವಿಷ್ಕಾರವಾಗಲಿದೆ ಎಂದು ರಾಮನ್ ಪತ್ರಿಕಾ ಗೋಷ್ಟಿಯಲ್ಲಿ ಅಲ್ಲಿ ಘೋಷಿಸಿದರು. ವರದಿಗಾರರಿಗೆ ಸಂಭ್ರಮ. ಮರುದಿನ ಎಲ್ಲ ಪತ್ರಿಕೆಗಳಲ್ಲಿ “ಕಲ್ಕತ್ತಾದ ಪ್ರೊಫೆಸರ್ ಅವರಿಂದ ಬೆಳಕಿನ ನೂತನ ವಿದ್ಯಮಾನದ ಆವಿಷ್ಕಾರ” ಎನ್ನುವ ಶಿರೋನಾಮೆಯಲ್ಲಿ ವಿವರವಾದ ವರದಿ ಪ್ರಕಟವಾಯಿತು. ಅಂದು ರಾಮನ್ ಘೋಷಿಸಿದ ಆ  ವಿದ್ಯಮಾನ ಮುಂದೆ “ರಾಮನ್ ಪರಿಣಾಮ” (Raman Effect)  ಎಂಬ ಹೆಸರಿನಲ್ಲ್ಲಿ  ಸುಪ್ರಸಿದ್ಧವಾಯಿತು. ರಾಮನ್ ಪರಿಣಾಮವನ್ನು ಪ್ರಪಂಚಕ್ಕೆ ಪರಿಚಯಿಸಲಾದ ಫೆಬ್ರವರಿ 28ನ್ನು ದೇಶದಾದ್ಯಂತ ವಿಜ್ಞಾನ ದಿನವಾಗಿ 1987ರಿಂದ ಆಚರಿಸಲಾಗುತ್ತಿದೆ.

ನಿತ್ಯ ಬದುಕಿನಲ್ಲಿ ವಿಜ್ಞಾನ ನಮ್ಮ ಬೇರೆ ಬೇರೆ ಕ್ಷೇತ್ರಗಳನ್ನು ನಮಗೇ ಅರಿಯದಂತೆ ಆವಾಹಿಸಿದೆ. ಇದರೊಂದಿಗೆ ತಂತ್ರಜ್ಞಾನ ಕೂಡ. ಅಂದರೆ ಇವೆರಡೂ ನಮಗೆ ಅನಿವಾರ್ಯ. ವರ್ಷದ ಒಂದು ದಿನವಾದರೂ ವಿಜ್ಞಾನದ ಬಗ್ಗೆ, ಅದರ ಸಾಮಾಜಿಕ ಜವಾಬಬ್ದಾರಿಯ ಬಗ್ಗೆ, ವಿಜ್ಞಾನಿಗಳ ಬಗ್ಗೆ, ಅದರ ಮಾನವೀಯ ಗುಣಗಳ  ಬಗ್ಗೆ, ಜನಜೀವನದ ಮೇಲೆ ಅದು ಬೀರುವ ಪರಿಣಾಮದ್ ಬಗ್ಗೆ – ಹೀಗೆ ವಿಜ್ಞಾನದ ಬೇರೆ ಬೇರೆ ಆಯಾಮಗಳ ಬಗ್ಗೆ ಚಿಂತನೆ ನಡೆಸಬೇಕಾದ ದಿನವಿದು.

ಬಾಲ್ಯದ ಪ್ರತಿಭೆ

ರಾಮನ್ ಅವರ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. 1988, ನವೆಂಬರ್ 7ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನನ. ತಂದೆ ಚಂದ್ರಶೇಖರ ಅಯ್ಯರ್ ಭೌತಶಾಸ್ತ್ರ ಪ್ರಾದ್ಯಾಪಕ. ತಾಯಿ ಪಾರ್ವತಿ ಅಮ್ಮಾಳ್. ಈ ದಂಪತಿಗಳ ಎಂಟು ಮಂದಿ ಮಕ್ಕಳಲ್ಲಿ ರಾಮನ್ ಎರಡನೇಯವರು. ಮೊದಲಿನವರು ಚಂದ್ರಶೇಖರ್ ಸುಬಹ್ಮಮಣ್ಯನ್ – ನೊಬೆಲ್ ಪ್ರಶಸ್ತಿ ವಿಜೇತ ಖಗೋಳ ವಿಜ್ಞಾನಿಯಾದ ಎಸ್.ಚಂದ್ರಶೇಖರ್ (ಚಂದ್ರಶೇಖರ್ ಪರಿಮಿತಿಯ ದೃಷ್ಟಾರ) ಅವರ ತಂದೆ. ಅಂದರೆ ಸಿವಿ.ರಾಮನ್- ಚಂದ್ರಶೇಖರ್ ಅವರ ಚಿಕ್ಕಪ್ಪ.

ರಾಮನ್ ತಂದೆ ಚಂದ್ರಶೇಖರ ಅಯ್ಯರ್

ರಾಮನ್ ಅವರದು ಬಾಲ್ಯ ಪ್ರತಿಭೆ. ಇಂಗ್ಲೀಷಿನಿಂದ ತೊಡಗಿ ಎಲ್ಲ ವಿಷಯಗಳಲ್ಲಿ ತರಗತಿಯಲ್ಲಿ ಅವರನ್ನು ಮೀರಿಸುವವರಿರಲಿಲ್ಲ. ದಾಖಲೆ ಅಂಕಗಳೊಂದಿಗೆ 12ರ ವಯಸ್ಸಿಗೇ ಮೆಟ್ರಿಕ್ಯುಲೇಶನ್ ಮುಗಿಸಿ (1900) ರಲ್ಲಿ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿಗೆ ಸೇರಿದರು. ಪಂಚೆ ಉಟ್ಟ, ತಲೆ ಮೇಲೊಂದು ಪೇಟ ಧರಿಸಿದ ಈ ಕೃಶಕಾಯದ ಹುಡುಗ  ತರಗತಿಯಲ್ಲಿ ಕುಳಿತಿದ್ದಾನೆ.  ಜೋನ್ಸ್ ಎಂಬ ಆಂಗ್ಲ ಪ್ರಾದ್ಯಾಪಕರು ಎಂದಿನಂತೆ ತರಗತಿಗೆ ಬಂದರು; ನೋಡಿ ಅಶ್ಚರ್ಯಗೊಂಡು ಕೇಳಿದರಂತೆ “ ನೀನು ತಪ್ಪಿ ಈ ಕಡೆ ಬಂದಿಲ್ಲ ತಾನೇ? ತರಗತಿಯಲ್ಲಿ ನಗೆಗಡಲು. ಚಿಕಣಿ ರಾಮನ್ ಉತ್ತರಿಸಿದ “Absolutely no, sorry, you are wrong sir” ರಾಮನ್ ರೀತಿಯೇ ಹಾಗೆ – ಸ್ಪಷ್ಟ ಮತ್ತು ನೇರ.

ಕೆಲವೇ ದಿನಗಳಲ್ಲಿ ರಾಮನ್ ಎಲ್ಲ ಪ್ರಾದ್ಯಾಪಕರ ಮೆಚ್ಚಿನ ಶಿಷ್ಯರಾದರು. ಭೌತಶಾಸ್ತ್ರ ಪ್ರಾದ್ಯಾಪಕ ಶ್ರೀನಿವಾಸನ್ ಸ್ಮರಿಸಿದ್ದಾರೆ “the best student I have had in all my thirty years of service” ತರಗತಿಗಿಂತ ಹೆಚ್ಚಾಗಿ ಪ್ರಸಿಡೆನ್ಸಿ ಕಾಲೇಜಿನ ಗ್ರಂಥಾಲಯದಲ್ಲಿ ರಾಮನ್ ಸಮಯ ಕಳೆಯುತ್ತಿದ್ದರು ಸ್ವಯಂ ರಾಮನ್ ಹೇಳಿದ್ದಾರೆ

I finished my school and College career and my University examination at the age of eighteen. In this a short span of years I studied four languages and mastered them. A list of all volumes I had to study would be terrifying in length. Books on ancient Greek mythology, Ramayana & Mahabharatha, Modern Indian & European history, formal logic, Economics, Public finance. In science so many so many books made impact on me. Specifically The Elements of Euclid, The sensation of tone written by Helmholtz”

ರಾಮನ್ ಬಿ.ಎ ಪ್ರಥಮ ಬಿ.ಎ.ಯಲ್ಲಿದ್ದಾಗಲೇ ಎರಡು ಸಂಶೋಧನ ಲೇಖನ ಬರೆದರು – ಇವು ಅವರ ಭವಿಷ್ಯತ್ತಿನ ಸಂಶೋಧನೆಯ ಹಾದಿಯ ಸೂಚನೆಗಳಾಗಿದ್ದುವು

Unsymmetrical  diffraction bands due to a rectangular aperture”

Curvature method for determination of Surface tension

ಇವರಡೂ ರಾಯಲ್ ಸೊಸೈಟಿಯ ಫಿಲಾಸಾಫಿಕಲ್ ಮ್ಯಾಗಝೀನಿನಲ್ಲಿ ಪ್ರಕಟವಾದುವು. ಇವಲ್ಲದೇ ಕಾಲೇಜು ಮುಗಿಯುವುದರೊಳಗಾಗಿ Newtons Rings in polarized light  ಮತ್ತು The small motion of nodes on vibrating string ಎಂಬ ಲೇಖನಗಳು Nature ಪತ್ರಿಕೆಯಲ್ಲಿ ಪ್ರಕಟವಾದುವು. ಇಲ್ಲಿ ಪ್ರಸ್ತಾವಿಸಬೇಕಾದದ್ದು – ನಂತರ ಹದಿನೈದು ವರ್ಷದೊಳಗೆ ಅದೇ ಪ್ರಸಿಡೆನ್ಸಿ ಕಾಲೇಜಿನಲ್ಲಿ ಸೇರಿದ ಎಸ್.ಚಂದ್ರಶೇಖರ್ ಕೂಡ ಕಾಲೇಜು ಹಂತದಲ್ಲಿಯೇ ರಾಯಲ್ ಸೊಸೈಟಿ ಪತ್ರಿಕೆಯಲ್ಲಿ ಸಂಶೋಧನ ಲೇಖನ ಪ್ರಕಟಿಸಿ ರಾಮನ್ ಅವರ ಸಾಧನೆಯನ್ನು ಪುನರಾವರ್ತಿಸಿದರು – ಮುಂದೆ ನೊಬೆಲ್ ಪಡೆಯುವಲ್ಲಿಯೂ ಕೂಡ.

ಬಿ.ಎ.ಮತ್ತು ಎಂ.ಎ.ಪರೀಕ್ಷೆಗಳಲ್ಲಿ ದಾಖಲೆ ಅಂಕ ಪಡೆದ ರಾಮನ್ ಭೌತ ಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕೆ ಇಂಗ್ಲೆಂಡಿಗೆ ಹೋಗಲು ನಿಶ್ಚಯಿಸಿದರು. ಆದರೆ ದೈಹಿಕ ಕಾರಣವಾಗಿ ರಾಮನ್ ಅವರ ಅರ್ಜಿ ತಿರಸ್ಕೃತವಾಯಿತು. ತಂದೆಯ ಒತ್ತಾಯಕ್ಕೆ ಕಟ್ಟುಬಿದ್ದು ಅವರು ICS ಪರೀಕ್ಷೆ ಬರೆದರು – ರಾಮನ್ನರಿಗೆ ದ್ವಿತೀಂii  Rank ಬಂತು. ಅವರಿಗೆ ಕೆಲಸ ದೊರೆತದ್ದು ಕಲ್ಕತ್ತಾದ ಣಕಾಸು ಇಲಾಖೆಯಲ್ಲಿ. ಅವರ ಕೆಲಸ ಹಣದ ಇಲಾಖೆಯಲ್ಲಿ, ಮನವಿದ್ದುದು ಭೌತಶಾಸ್ತ್ರದಲ್ಲಿ.  Indian Cultivation of Science ಎಂಬ ಸಂಸ್ಥೆಯ ಚಿಕ್ಕ ಪ್ರಯೋಗಾಲಯದಲ್ಲಿ ಸಂಜೆ ಹೊತ್ತು ಪ್ರಯೋಗಗಳನ್ನು ಮಾಡುತ್ತಿದ್ದ ರಾಮನ್,  ಅವರ ಸಂಶೋಧನ ಲೇಖನಗಳು ಪ್ರಕಟವಾಗುತ್ತ ಹೇರಳ ಹಣ ಮತ್ತು ಅಧಿಕಾರದ ಪ್ರಲೋಭನೆಗಳಿರುವ ಕೆಲಸವನ್ನು ತ್ಯಜಿಸಿ ಕಲ್ಕತ್ತಾ ವಿಶ್ವವಿದ್ಯಾಲಯದ ಭೌತವಿಜ್ಞಾನ  ವಿಭಾಗದಲ್ಲಿ (1917) ರಲ್ಲಿ ಪ್ರಾದ್ಯಾಪಕರಾಗಿ ಸೇರಿಕೊಂಡರು. ಇದು ಅವರ ಜೀವನ್ನಕ್ಕಷ್ಟೇ ಅಲ್ಲ,  ಭಾರತೀಯ ವಿಜ್ಞಾನರಂಗಕ್ಕೊಂದು  ತಿರುವು

ರಾಮನ್ ಪರಿಣಾಮ

ಕವಿಯ ಕಾವ್ಯಕ್ಕೆ, ಕಲಾವಿದನ ಕುಂಚಕ್ಕೆ, ಸಂಗೀತಗಾರನ ರಾಗಕ್ಕೆ ಜೀವ ತುಂಬುವ ನಿಸರ್ಗ ಸೌಂದರ್ಯ ಒಬ್ಬ ವಿಜ್ಞಾನಿಗೆ ಸ್ಪೂರ್ತಿಯ ಚಿಲುಮೆಯಾಗುತ್ತದೆ. ನೈಸರ್ಗಿಕ ವಿದ್ಯಮಾನದ ಅನನ್ಯ ಸೊಬಗನ್ನು ಸವಿಯುವುದಷ್ಟೇ ಅಲ್ಲ, ಅದರ ಕಾರ್ಯ-ಕಾರಣ ಸಂಬಂಧವನ್ನು ಅಧ್ಯಯನಿಸಿ, ಆ ಸೊಬಗಿಗೆ ಹೊಸ ಭಾಷ್ಯವನ್ನು ಬರೆಯುತ್ತಾನೆ. ಈತ ಕವಿ, ಚಿತ್ರ ಕಲಾವಿದ, ಸಂಗೀತಗಾರ, ಸತ್ಯಾನ್ವೇಷಕ. ಸಿ.ವಿ.ರಾಮನ್ ಇಂಥವರು. ಅವರು ಒಂದೆಡೆ ಹೇಳಿದ್ದಾರೆ

“ನಮಗೆ ಕಾಣಿಸುವ ನಿಸರ್ಗ ಮುಖದ ವೈವಿದ್ಯತೆ ಅನಂತ. ಅವಳನ್ನು ಪ್ರೀತಿಸುವ ಮಂದಿಗೆ ಎಂದೆಂದೂ ಸುಂದರ ಮತ್ತು ಕುತೂಹಲಕಾರಿ. ಬಾನಿನ ನೀಲಿ, ಸೂರ್ಯೋದಯ ಮತ್ತು ಸೂರ್ಯಾಸ್ತದ ವೈಭವ, ಮೇಘಗಳ ಅವಿರತ ಬದಲಾಗುವ ದೃಶ್ಯ, ಕಾಡಿನ ಮತ್ತು ನಾಡಿನ ವೈವಿದ್ಯ ಬಣ್ಣ, ಇರುಳಿನ ನಕ್ಷತ್ರಾಂಕಿತ ಆಗಸ.. ನಮ್ಮ ಕಣ್ಮುಂದೆ ಸುಳಿವ ಇವು ಮತ್ತು ಇನ್ನೂ ಇಂಥ ಹಲವು ದೃಶ್ಯಗಳು ನಮಗಾಗಿಯೋ ಎನ್ನುವಂತೆ ನಿಸರ್ಗ ಪ್ರದರ್ಶಿಸುವ ಎಂದೆಂದೂ ಮುಗಿಯದ ಬೆಳಕು ಮತ್ತು ಬಣ್ಣದ ನಾಟಕದ್ದು”

ಮತ್ತೊಂದು ಉಪನ್ಯಾಸದಲ್ಲಿ ರಾಮನ್ ಹೇಳುತ್ತಾರೆ

The man of Science observes what nature offers with the eye of understanding but her beauties are not lost on him for that reason. More truly it can be said that understanding refines our vision and heightens our appreciation of what is striking and beautiful.

ಪ್ರಾಯಶ: ಈ ಕಾರಣಕ್ಕಾಗಿಯೇ ನೊಬೆಲ್ ವಿಜ್ಞಾನಿ ರಿಚರ್ಡ ಫೈನ್ಮನ್ ಹೇಳುತ್ತಾನೆ “ಗುಲಾಬಿಯ ಹೂವಿನ ಚೆಲುವನ್ನು ಅಸ್ವಾದಿಸುವುದರೊಂದಿಗೆ ಅದರ ಚೆಲುವಿಗೆ ಕಾರಣವಾದ ನಿಸರ್ಗದ ಪ್ರರೂಪವನ್ನು (symmetry) ಅರ್ಥೈಸಿಕೊಡಾಗ ಅದರ ಚೆಲುವು ಇಮ್ಮಡಿಯಾಗುತ್ತದೆ”

ಅಂದರೆ ವಿಜ್ಞಾನಿಯಾದವನಿಗೂ ಕವಿ, ಕಲಾವಿದರಿಗಿರುವಂತೆ ಸೌಂದರ್ಯ ಪ್ರಜ್ಞೆ ಇರುತ್ತದೆ – ಪ್ರಾಯಶ: ಇನ್ನಷ್ಟು ಹೆಚ್ಚಿಗೆ.

ತವರೂರ ದಾರಿಯಲ್ಲಿ

1921, ಸಪ್ಟೆಂಬರ್ ತಿಂಗಳು. ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮರಳಿ ತವರಿಗೆ ರಾಮನ್ ಪ್ರಯಾಣಿಸುತ್ತಿದ್ದಾರೆ. ಹಡಗು ಮೆಡಿಟರೇನಿಯನ್ ಸಮುದ್ರದಲ್ಲಿ ಸಾಗುತ್ತಿದೆ. ಸಮುದ್ರದ  ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್ ಬೆರಗಾದರು. ಅರೇ ಇದೇನಿದು – ಎಂಥ ನೀಲಿ – ಎಂಥ ಚೆಲುವು!

ನಿರಭ್ರ ಬಾನಿನ ಬಣ್ಣವೂ ನೀಲಿಯೇ. ಬಾನಿನಿನ ನೀಲಿಗೆ ಅದಾಗಲೇ ಪರಿಪೂರ್ಣ ವಿವರಣೆಯನ್ನು ಬ್ರಿಟೀಷ್ ಭೌತ ವಿಜ್ಞಾನಿ ಲಾರ್ಡ ರ್‍ಯಾಲೆ (1842-1919) ಕೊಟ್ಟಿದ್ದರು ಮತ್ತು ನೊಬೆಲ್ ಪಾರಿತೋಷಕದಿಂದ ಸನ್ಮಾನಿತರಾಗಿದ್ದರು.   ಭೂಮಿಯ ವಾಯುಮಂಡಲದ ಅಣು ಮತ್ತು ದೂಳಿನ ಕಣಗಳಿಂದ ಬಿಳಿಯ ಬೆಳಕಿನ  ಭಾಗವಾದ ನೀಲಿ ಬಣ್ಣ ಅತೀ ಹೆಚ್ಚು ಪ್ರಮಾಣದಲ್ಲಿ ಚದರಿಸಲ್ಪಟ್ಟು (scattering) ಇಡೀ ಬಾನು ನೀಲಿ ಬಣ್ಣದಿಂದ ಗೋಚರಿಸುತ್ತದೆಂದು ರ್‍ಯಾಲೆಯ ವಿವರಣೆಯಾಗಿತ್ತು.   ಸೂರ್ಯೋದಯ ಅಥವಾ ಸೂರ್ಯಾಸ್ತ ಕಾಲದಲ್ಲಿ ಬಾನಿಗೆ ಕೆಂಪು ರಂಗೇರುವುದಕ್ಕೂ  ಬೆಳಕಿನ ಚದರಿಕೆಯೇ ಕಾರಣ. ಬಾನಿಗೆ ನೀಲಿ ಬಣ್ಣ ಹೇಗೆ ಬರುತ್ತದೆಂದು ಸಮರ್ಪಕವಾಗಿ ವಿವರಿಸಿದ ರ್‍ಯಾಲೆ, ಅದೇಕೋ ಎನೋ, ಸಾಗರದ ನೀಲಿಯನ್ನು ವಿವರಿಸುವಲ್ಲಿ ಎಡವಿದರು-  ಬಾನಿನ ನೀಲಿ ಸಾಗರದ ನೀರಿನಿಂದ ಪ್ರತಿಫಲಿಸಲ್ಪಟ್ಟು ಸಾಗರ ನೀಲವಾಗಿ ಕಾಣಿಸುತ್ತದೆಂದು ವಿವರಣೆ ನೀಡಿ ಸುಮ್ಮನಾದರು.

ಆದರೆ ರಾಮನ್ ತನ್ನೆದುರು ಹರಡಿ ಚೆಲ್ಲಿದ ನೀಲ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಕಾರಣವೆಂದು ಅವರಿಗನ್ನಿಸಿತು. ಹಡಗಿನಲ್ಲಿಯೇ ಸಮುದ್ರದ ನೀರನ್ನು ಕುಪ್ಪಿಗಳಲ್ಲಿ ಸಂಗ್ರಹಿಸಿದರು;  ?ಅವರ ಕಿಸೆಯಲ್ಲಿರುತ್ತಿತ್ತು ಚಿಕ್ಕ ರೋಹಿತ ದರ್ಶಕ – ನಮ್ಮಲ್ಲಿ ಮೊಬೈಲುಗಳಿರುವ ಹಾಗೆ !  ರೋಹಿತದರ್ಶಕವನ್ನು ಬಳಸಿಕೊಂಡು ನೀರಿನಲ್ಲಿ ಬೆಳಕಿನ ಚದರಿಕೆಯನ್ನು ಪರೀಕ್ಷಿಸಿದರು. ಮುಂದಿನ ಹದಿನೈದು ದಿನಗಳ ಪಯಣದುದ್ದಕ್ಕೂ ಪ್ರಯೋಗ ಸಾಗಿತು; ಫಲಿತಾಂಶಗಳು ಸಂಶೋಧನ ಲೇಖನಗಳಾದುವು  ಮುಂಬಯಿಯಲ್ಲಿ ಇಳಿಯುತ್ತಲೇ ಪ್ರತಿಷ್ಠಿತ “ನೇಚರ್” ಪತ್ರಿಕೆಗೆ ಲೇಖನವನ್ನು ರವಾನಿಸಿದರು. ಆ ಲೇಖನದಲ್ಲಿ ರಾಮನ್ ಬರೆಯುತ್ತಾರೆ

The view has been expressed that the much admired dark blue of the deep sea has nothing to do with the colour of water, but simply the blue of the sky seen by reflection as proposed by Rayleigh. Observations made in this way in the deeper waters of the Mediterranean and Red sea showed that the color is not by reflection. It was abundantly clear from the observations that the blue colour of the deep sea is the distinct phenomenon in itself and not merely due to reflected sky-light. An interesting possibility is that it may be due to scattering from water molecules”

ಈ ಲೇಖನಗಳು ಮುಂದಿನ ಸಂಚಿಕೆಗಳಲ್ಲಿ ಪ್ರಕಟವಾದುವು.

ಇದು ಎಂಥಾ ನೀಲವಯ್ಯ!

ಇಷ್ಟಕ್ಕೆ ತೃಪ್ತರಾಗದ ರಾಮನ್, ನಂತರದ ದಿನಗಳಲ್ಲಿ ಕೆ.ಎಸ್.ಕೃಷ್ಣನ್ (1898-1961), ರಾಮಕೃಷ್ಣ ರಾಮನಾಥನ್(1893-1985) ಹಾಗೂ ಇತರ ಶಿಷ್ಯರೊಂದಿಗೆ ದ್ರವ ಮಾದ್ಯಮದಲ್ಲಿ ಬೆಳಕಿನ ಚದರಿಕೆಯ ಬೇರೆ ಬೇರೆ  ವಿದ್ಯಮಾನವನ್ನು ಅಧ್ಯಯನಿಸತೊಡಗಿದರು.  ದ್ರವದ ಅಣುಗಳಿಂದ ಬೆಳಕಿನ ಕಿರಣ ಚದರಿಸಲ್ಪಟ್ಟಾಗ ಅದರ ರೋಹಿತ ರೇಖೆಯ ಅಲೆಯುದ್ದದಲ್ಲಿ ವ್ಯತ್ಯಾಸವಾಗುತ್ತದೆಂದು ಅವರ ಊಹೆಯಾಗಿತ್ತು. ಇಂಥದೊಂದು ಊಹೆ ಮಾಡುವುದು ಮತ್ತು ಆ ಊಹೆಯನ್ನು ಬೆಂಬತ್ತುವುದು ಪ್ರಥಮ ದರ್ಜೆಯ ವಿಜ್ಞಾನಿಗಷ್ಟೇ ಸಾಧ್ಯ.

1927ರ ಒಂದು ದಿನ. ಕೆ.ಎಸ್.ಕೃಷ್ಣನ್ ರಾಮನ್ ಅವರ ಕೊಠಡಿಗೆ ಬಂದು ಆ ವರ್ಷದ ನೊಬೆಲ್ ಪ್ರಶಸ್ತಿ ಅಮೇರಿಕದ ಕಾಂಪ್ಟನ್ ಅವರಿಗೆ ಕಾಂಪ್ಟನ್ ಪರಿಣಾಮಕ್ಕಾಗಿ ದೊರೆತಿದೆ ಎಂದಾಗ ರಾಮನ್ ಹೇಳಿದರಂತೆ

“ Excellent News. …. Very nice indeed. But look here Krishnan, if this is true for X-rays, it must be true for light too. There must be an optical analogue to the Compton Effect. We must pursue it and we are on the right lines. It must and shall be found. The Nobel Prize must be won”

ನಿಜ, ಕಾಂಪ್ಟನ್ ಮಾಡಿದ್ದು ಘನ ದ್ರವ್ಯಗಳಲ್ಲಿ ಎಕ್ಸ್- ಕಿರಣಗಳ ಚದರಿಕೆಯ ಮತ್ತು ಆ ಮೂಲಕ ಅವುಗಳ ಅಲೆಯುದ್ದ ಹೆಹ್ಚುವ ವಿದ್ಯಮಾನವನ್ನು. ಅದರ ವಿವರ ಇಲ್ಲಿ ನೀಡುವುದು ಸಾಧ್ಯವಾಗದು. ಆದರೆ ಈ ಆವಿಷ್ಕಾರ ಭೌತ ವಿಜ್ಞಾನರಂಗಕ್ಕೆ ಹೊಸ ಹೊಳವು ಕೊಟ್ಟಿತು – ರಾಮನ್ ಅವರಿಗೂ. ತನ್ನ ಗುರಿ ಅವರಿಗೆ ಸುಸ್ಪಷ್ಟವಿತ್ತು. ಆ ದಿಸೆಯಲ್ಲಿ ಅವರು ಪ್ರಯತ್ನಿಸಿದರು.

ವಾಸ್ತವವಾಗಿ ಈ ದಿಸೆಯಲ್ಲಿ ಅದಾಗಲೇ ಸೈದ್ಧಾಂತಿಕ ಸೂಚನೆಗಳು ಒದಗಿದ್ದುವು. 1923ರಲ್ಲಿ ಜರ್ಮನಿಯ ಭೌತ ವಿಜ್ಞಾನಿಗಳಾದ ಸ್ಮೆಕೆಲ್, ಹೈಸೆನ್‌ಬರ್ಗ್ ಮತ್ತು ಕ್ರಾಮರ್ ಹಾಗೂ 1927ರಲ್ಲಿ ಡಿರಾಕ್, ಬೆಳಕಿನ ಕಿರಣ ಪದಾರ್ಥದ ಮೂಲಕ ಹಾದುಹೋಗುವಾಗ ಚದರಿಕೆಯಿಂದ ಕಿರಣದ ಅಲೆಯುದ್ದದಲ್ಲಿ ವ್ಯತ್ಯಾಸವಾಗಬಹುದೆಂದು ಊಹಿಸಿದ್ದರು. ಇದನ್ನು ಬೆಂಬತ್ತಿದವರು ರಾಮನ್ ಮತ್ತು ಅವರ ಸಂಗಡಿಗರು. ಇವರಲ್ಲದೇ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಸ್ ರಷ್ಯಾದಲ್ಲಿ ಲ್ಯಾಂಡ್ಸ್ ಬರ್ಗ ಮತ್ತು ಮ್ಯಂಡೆಲ್ಸ್ಟನ್ ತಂಡದಿಂದಲೂ ಬಿರಿಸಿನಿಂದ ಪ್ರಯೋಗ ನಡೆಯುತ್ತಿತ್ತು. ಅಂದರೆ ಅಂತಾರಾಷ್ಟ್ರೀಯಯವಾಗಿ ಸಂಶೋಧನಾ ಪೈಪೋಟಿ – ತುರುಸಿನ ಸ್ಪರ್ಧೆ.

1928, ಫೆಬ್ರವರಿ ತಿಂಗಳಿನ ಮೊದಲ ವಾರದಿಂದಲೇ ಪ್ರಯೋಗಗಳು ಬಿರುಸಿನಿಂದ ಸಾಗಿದುವು. ಫೆಬ್ರವರಿ28, ಬೆಳಗ್ಗೆ ಹತ್ತರ ಹೊತ್ತಿಗೆ ತಮ್ಮ ಪ್ರಯೋಗದಲ್ಲಿ ರಾಮನ್ ಯಶಸ್ಸು ಕಂಡರು. ದ್ರವ ಮಾದ್ಯಮದಲ್ಲಿ ಅಣುಗಳು ಬೆಳಕಿನ ಅಲೆಗಳನ್ನು ಚದರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ವಿನೂತನ ವಿದ್ಯಮಾನವನ್ನು ಅಂದು ರಾಮನ್ ತಮ್ಮ ಚಿಕ್ಕ ರೋಹಿತ ದರ್ಶಕದಲ್ಲಿ ಕಂಡರು ಮತ್ತು ಆ ರೋಹಿತದ ಛಾಯಾ ಚಿತ್ರವನ್ನು ಪಡೆಯುವಲ್ಲಿ ಯಶಸ್ವಿಯಾದರು. ಅದೊಂದು “ಯುರೇಕಾ” ಎನ್ನಬಹುದಾದ ಪರಮೋತ್ಕೃಷ್ಟ ಕ್ಷಣವಾಗಿತ್ತು.

ಕೆಎಸ್ ಕೃಷ್ಣನ್ ರಾಮನ್ ಸಹದ್ಯೋಗಿ, ರಾಮನ್ ಪರಿಣಾಮದ ಆವಿಷ್ಕಾರದಲ್ಲಿ ಸಹಭಾಗಿ

ಕ್ವಾಂಟಂ ಸಿದ್ಧಾಂತ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳು. ಬೆಳಕಿನ ಕಿರಣವೆನ್ನುವುದು ಅಸಂಖ್ಯಾತ ಶಕ್ತಿ ಪೊಟ್ಟಣ – ಅಥವಾ ಫೋಟಾನುಗಳ ಪ್ರವಾಹ ಎನ್ನುವ ಕ್ವಾಂಟಂ ಸಿದ್ಧಾಂತವನ್ನು ಬಳಸಿಕೊಂಡು ರಾಮನ್ ತನ್ನ ಆವಿಷ್ಕಾರವನ್ನು ವಿವರಿಸಿದ ಬಗೆ ಅತ್ಯಂತ ಸುಂದರ. ಮಾದ್ಯಮದ ಮೂಲಕ ಹಾದು ಹೋಗುವಾಗ ಬೆಳಕಿನ ಕಿರಣದ ಫೋಟಾನುಗಳು ಮತ್ತು ಮಾದ್ಯಮದ ಅಣುಗಳೊಡನೆ ಡಿಕ್ಕಿ ಸಂಭವಿಸುತ್ತದೆ. ಇಲ್ಲಿ ಎರಡು ಸಾಧ್ಯತೆಗಳುಂಟು. ಮಾದ್ಯಮದ ಅಣುಗಳು ಮೂಲ ಬೆಳಕಿನ ಕಿರಣದಿಂದ ಸ್ವಲ್ಪಾಂಶ ಶಕ್ತಿಯನ್ನು ಹೀರಿದ ಪರಿಣಾಮವಾಗಿ ಚದರಿಸಲ್ಪಟ್ಟ ಬೆಳಕಿನ ಶಕ್ತಿ ಕಡಿಮೆಯಾಗಿ ಅದರ ಅಲೆಯುದ್ದ ಹೆಚ್ಚುವುದು ಒಂದು ಸಾಧ್ಯತೆಯಾದರೆ, ಸ್ವಯಂ ಅಣುಗಳು ಬೆಳಕಿನ ಕಿರಣಗಳಿಗೆ ಶಕ್ತಿಯನ್ನು ನೀಡುವ ಮೂಲಕ ಚದರಿಸಲ್ಪಟ್ಟ ಕಿರಣದ ಶಕ್ತಿ ಹೆಚ್ಚಿ ಅಲೆಯುದ್ದ ಕಡಿಮೆಯಾಗುವುದು ಇನ್ನೊಂದು ಸಾಧ್ಯತೆ. ಪರಿಣಾಮವಾಗಿ ಮೂಲ ರೋಹಿತ ರೇಖೆಯ ಇಕ್ಕೆಲೆಗಳಲ್ಲಿ ನೂತನ ರೇಖಗಳು ಪ್ರಕಟವಾಗುತ್ತವೆ. ಅವುಗಳ ಅಲೆಯುದ್ದ, ತೀವೃತೆ ಮಾದ್ಯಮದ ಅಣುಗಳ ರಚನೆಯನ್ನು ಅವಲಂಬಿಸಿದೆ.

ನೀಲ ಬಣ್ಣದ ??ಕಿರಣವನ್ನು ದ್ರವ ಪದಾರ್ಥದಲ್ಲಿ – ಉದಾಹರಣೆಗೆ ಪೆಟ್ರೋಲಿನ ಮೂಲಕ ಹಾಯಿಸಿ ಚದರಿಸಲ್ಪಟ್ಟ ಕಿರಣದ ರೋಹಿತವನ್ನು ಲಂಬ ದಿಶೆಯಲ್ಲಿ ರೋಹಿತದರ್ಶಕದ ಮೂಲಕ  ಗಮನಿಸುತ್ತಿದ್ದೀರೆಂದು ಭಾವಿಸಿ. ಇಲ್ಲಿ ಮಾದ್ಯಮದ ಅಣುಗಳ ರಚನೆಗೆ ಅನುಗುಣವಾಗಿ ಚದರಿಸಲ್ಪಟ್ಟ ಕಿರಣ ಅಧಿಕ ಅಲೆಯುದ್ದದ ಕೆಂಪು  ಅಥವಾ ಕಡಿಮೆ ಅಲೆಯುದ್ದದ ನೇರಳೆ ಬಣ್ಣವಾಗಬಹುದು. ಅಂದರೆ ರೋಹಿತದಲ್ಲಿ ಮೂಲ ನೀಲಿ ಕಿರಣವನ್ನು ಸೂಚಿಸುವ ರೋಹಿತ ರೇಖೆಯ ಇಕ್ಕೆಲೆಗಳಲ್ಲಿ ಇತರ ರೇಖೆಗಳು ಕಾಣಿಸುತ್ತವೆ. ಬೆಳಕಿನ ಚದರಿಕೆಯ ಈ ವಿದ್ಯಮಾನಕ್ಕೆ ರಾಮನ್ ಪರಿಣಾಮವೆನ್ನುತ್ತೇವೆ.

ಬಂತು ನೊಬೆಲ್

ರಾಮನ್ ತಮಗೆ ನೊಬೆಲ್ ಪ್ರಶಸ್ತಿ ಬಹು ಬೇಗನೆ ಲಭಿಸುತ್ತದೆಂದು ನಂಬಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. 1930ರ ನೊಬೆಲ್ ಪ್ರಶಸ್ತಿ ರಾಮನ್ನರಿಗೆ ಒಲಿಯಿತು. ಇಷ್ಟು ಬೇಗ ನೊಬೆಲ್ ಇವರಿಗೆ ಬಂತೆನ್ನುವುದೇ ಆವಿಷ್ಕಾರದ ಮಹತ್ವವನ್ನು ಸಾರುತ್ತದೆ. ಪ್ರಶಸ್ತಿ ಪ್ರಕಟವಾಗುವ ಎರಡು ತಿಂಗಳ ಮೊದಲೇ ತನಗೆ ಮತ್ತು ತನ್ನ ಪತ್ನಿ ಲೋಕಸುಂದರಿಯವರಿಗೆ ಹಡಗು ಪ್ರಯಾಣಕ್ಕೆ ಎರಡು ಸೀಟು ಕಾದಿರಿಸಿದ್ದರಂತೆ! ಸ್ವೀಡನ್ ದೊರೆಯಿಂದ ಪ್ರಶಸ್ತಿ ಸ್ವೀಕರಿಸುತ್ತ ರಾಮನ್ ತನ್ನ ಆವಿಷ್ಕಾರದ ಉಪಯುಕ್ತತೆ ಬಗ್ಗೆ ಆಹ್ವಾನಿತ ಗಣ್ಯರಿಗೆ ವಿವರಿಸಿದರು

In the history of science, we often find that the study of some natural phenomenon has been the starting-point in the development of a new branch of  knowledge. We have an instance of this in the colour of skylight, which has ….’A voyage to Europe in the summer of 1921 gave me the first opportunity of observing the wonderful blue opalescence of the Mediterranean Sea.

It seemed not unlikely that the phenomenon owed its origin to the scattering of sunlight by the molecules of the water. To test this explanation, it appeared desirable to ascertain the laws governing the diffusion of light in liquids, and experiments with this object were started immediately on my return to Calcutta in September, 1921. It soon became evident, however, that the subject possessed a significance extending far beyond the special purpose for which the work was undertaken, and that it offered unlimited scope for research. It seemed indeed that the study of light-scattering might carry one into the deepest problems of physics and chemistry, and it was this belief which led to the subject becoming the main theme of our activities at  Calcutta from that time onwards.

ಹೀಗಿರುತ್ತದೆ ರಾಮನ್ ರೋಹಿತ

The significance of the effect is that the universality of the phenomenon, the convenience of the experimental technique and the simplicity of the spectra obtained enable the effect to be  used as an experimental aid to the solution of a wide range of problems in physics and chemistry. Indeed, it may be said that it is this fact which constitutes the principal significance of the effect. The frequency differences determined from the spectra, the width and character of the lines appearing in them, and the intensity and state of polarization of the scattered radiations  enable us to obtain an insight into the ultimate structure of the scattering substance. As experimental research has shown, these features in the spectra are very definitely influenced by physical conditions, such as temperature and state of aggregation, by physico-chemical conditions, such as mixture, solution, molecular association and polymerization, and most essentially by chemical constitution. It follows that the new field of spectroscopy has practically  unrestricted scope in the study of problems relating to the structure of  matter. We may also hope that it will lead us to a fuller understanding of the  nature of light, and of the interactions between matter and light.

ಎಸ್.ಚಂದ್ರಶೇಖರ್ ಹೇಳಿದ್ದಾರೆ

I have an equally vivid recollection of a day in early march in 1928, when Prof. Raman visited our home in Madras on his way to Bangalore where on the 16th of March he was to give the address announcing his discovery of what was soon called Raman Effect. I remember well his showing slides of the first Raman ever taken and of the state of euphoria he was in. On that occasion some one drew attention to the discovery of Compton Effect a few years earlier, and Raman responded with “Ah, but my effect will play a great role for Chemistry and molecular structure !” That statement was indeed prophetic. Later during the summer of 1928, I spent two months at the Indian Association for cultivation of Science at Raman’s laboratory where at that time there were many young men who together with Raman where persuading the new discovery. Among them were several who later to become leaders of Indian Science…. You can imagine what a marvelous experience it must have been for a young man to have witnessed at such close quarters a group of enthusiastic scientists caught in the wake of a great discovery.

ರಾಮನ್ ಊಹೆ ನಿಜವಾಯಿತು. ಹಿಂದೆಂದಿಗಿಂತಲೂ ಹೆಚ್ಚಿಗೆ ಇಂದು ರಾಮನ್ ಪರಿಣಾಮ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಆಲ್ಟ್ರಾವಯೋಲೆಟ್ ಮತ್ತು ಎಕ್ಸ್-ರೇ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ರಾಮನ್ ಪರಿಣಾಮ ತನ್ನ “ಪರಿಣಾಮ” ಬೀರುತ್ತಿದೆ.

ಸಮಕಾಲೀನ ವಿಜ್ಞಾನಿಗಳ ಮೇಲೆ ರಾಮನ್ ಪರಿಣಾಮ ಬೀರಿದ ಪರಿಣಾಮದ ಬಗ್ಗೆ ಅಲ್ಬರ್ಟ್ ಐನ್‌ಸ್ಟೈನ್ (1879-1955) ಹೇಳಿದ್ದಾರೆ

“ವಸ್ತುವಿನಲ್ಲಿ ಬೆಳಕಿನ ಚದರಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ನನಗಿನ್ನೂ ಸ್ಪಷ್ಟವಾಗಿ ನೆನಪಿದೆ – ಬರ್ಲಿನ್ನಿನ ಭೌತಶಾಸ್ತ್ರ ಗೋಷ್ಠಿಯಲ್ಲಿ ಭಾಗವಹಿಸಿದ ನಮ್ಮೆಲ್ಲರ ಮೇಲೆ ಈ ಆವಿಷ್ಕಾರ ಗಾಢ ಪರಿಣಾಮ ಬೀರಿತ್ತು”?

ನ್ಯೂಕ್ಲಿಯರ್ ಭೌತ ವಿಜ್ಞಾನದ ಪಿತಾಮಹ, ಬ್ರಿಟಿಷ್ ಭೌತ ವಿಜ್ಞಾನಿ ಅರ್ನೆಸ್ಟ್ ರುಧರ್ಫರ್ಡ್ (೧೮೭೧-೧೯೩೭) ಶ್ಲಾಘಿಸಿದ್ದಾರೆ. ದ್ಯುತಿ ಶಾಸ್ತ್ರದಲ್ಲಿ – ಅದರಲ್ಲೂ ಬೆಳಕಿನ ಚದರಿಕೆಯಲ್ಲಿ ಶ್ರೀ.ವೆಂಕಟರಾಮನ್ ಮುಂಚೂಣಿ ಸಂಶೋಧಕರು. ರಾಮನ್ ಪರಿಣಾಮ ಕಳೆದ ದಶಕದಲ್ಲಿ ಪ್ರಾಯೋಗಿಕ ಭೌತ ಶಾಸ್ತ್ರದಲ್ಲಾದ ಮೂರು ಅಥವಾ ನಾಲ್ಕು ಅತ್ಯುತ್ಕೃಷ್ಟ ಆವಿಷ್ಕಾರಗಳಲ್ಲೊಂದು.

ಸಿ.ವಿ.ರಾಮನ್ ಸುಮಾರು ಹದಿನೇಳು ವರ್ಷಗಳ ಕಾಲ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಆ ನಂತರ ಬಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಸಂಸ್ಥೆಗೆ ಹೊಸ ಹಾದಿ ತೋರಿದರು. ಆದರೆ ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ರಾಮನ್ ರಾಜಿನಾಮೆ ನೀಡಬೇಕಾಯಿತು. ತಮ್ಮದೊಂದು ಸುಸಜ್ಜಿತ ಸಂಶೋಧನಾಲಯ ಸ್ಥಾಪಿಸುವ ಕನಸು ಅವರಿಗಿತ್ತು, ಅವರ ಕನಸು ನನಸಾಯಿತು ೧೯೪೮ ರಲ್ಲಿ. ಅವರು ಸ್ಥಾಪಿಸಿದ ಆ ಸಂಶೋಧನಾಲಯ – ರಾಮನ್ ರೀಸರ್ಚ್ ಇನ್‌ಸ್ಟಿಟ್ಯೂಟ್ – ಇಂದು ಮುಂಚೂಣೀ ಸಂಶೋಧನ ಕೇಂದ್ರವಾಗಿದೆ.

ತಮ್ಮ ಬಾಳ ಸಂಜೆಯ ದಿನಗಳಲ್ಲೂ ರಾಮನ್ ಅಧ್ಯಾಪನ, ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದರು. ಹವಳ ಮತ್ತು ಸ್ಪಟಿಕಗಳಲ್ಲಿ ಬೆಳಕಿನ ಚದರಿಕೆ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು.

ಶಾಸ್ತ್ರೀಯ ಸಂಗೀತದಲ್ಲಿ ಒಲವಿದ್ದ ರಾಮನ್ ಸಂಗೀತ ವಾದ್ಯಗಳಲ್ಲಿ ಅಂಥ ಸುಮಧುರ ಸ್ವರ ಹೇಗೆ ಬರುತ್ತವೆನ್ನುವ ಬಗ್ಗೆ ವಿದ್ವತ್ಪೂರ್ಣ ಸಂಶೋಧನ ಲೇಖನ ಬರೆದರು. ದೃಷ್ಟಿಯ ಕುರಿತಂತೆ ಸಂಶೋಧನೆ ಕೈಗೊಂಡರು. ಶಿಸ್ತಿನ ಪ್ರತಿ ಮೂರ್ತಿಯೇ ಆಗಿದ್ದ ರಾಮನ್ ಭಾರತೀಯ ವಿಜ್ಞಾನರಂಗವನ್ನು ಇನ್ನಿಲ್ಲದಂತೆ ಆವಾಹಿಸಿದವರು. ನವೆಂಬರ್ 21, 1970 ರಂದು  82 ರ ಇಳಿ ವಯಸ್ಸಿನಲ್ಲಿ ರಾಮನ್ ಇಹವನ್ನು ತ್ಯಜಿಸಿದರು.

ವರ್ತಮಾನದ ಸಮಸ್ಯೆ

ಒಂದು ಮಾತಿದೆ. “ಪಥಿಕ, ದಾರಿ ಇರದು -ನಡೆದವನಿಗಷ್ಟೇ ದಾರಿ ದೊರೆಯುತ್ತದೆ”.  ರಾಮನ್ ನಡೆದು ದಾರಿ ತೋರಿದವರು. ಬಿಳಿ ದೊರೆಗಳ ಆಳ್ವಿಕೆಯಿಂದ ನರಳುತ್ತಿದ್ದ, ಕೀಳರಿಮೆಯಿಂದ ತೊಳಲುತ್ತಿದ್ದ ಭಾರತೀಯರಲ್ಲಿ ರಾಮನ್ನರ ಅಭೂತಪೂರ್ವ ಸಾಧನೆ ಅಸಾಧಾರಣ ಪರಿಣಾಮ ಬೀರಿತು. ವಾಸ್ತವವಾಗಿ ಅಂದು ಅವರಿಗೆ ಹಣ ಬೆಂಬಲವಾಗಲಿ, ಸುಸಜ್ಜಿತ ಪ್ರಯೋಗಾಲಯವಾಗಲಿ ಇರಲಿಲ್ಲ. ಇದ್ದದ್ದು ದೊಗಳೆ ಪ್ಯಾಂಟಿನ ಕಿಸೆಯಲ್ಲಿ ಹಿಡಿದಿಡಬಹುದಾದ ಚಿಕ್ಕ ರೋಹಿತ ದರ್ಶಕ. ಅದಕ್ಕಿಂತ ಹೆಚ್ಚಿಗೆ ನಿಸರ್ಗದ ಸತ್ಯವನ್ನು ಹುಡುಕುವ ತುಡಿತ ಮತ್ತು ಮನೋಬಲ. ಹಾಗೆ ನೋಡಿದರೆ ಇಪ್ಪತ್ತನೇ ಶತಮಾನದ ಪ್ರಾರಂಭದ ಆ ದಿನಗಳು – ಜಾಗತಿಕವಾಗಿಯೂ ವಿಜ್ಞಾನರಂಗದ ಸುವರ್ಣಯುಗವಾಗಿತ್ತು. ಅದರ ಭಾಗವಾಗಿಯೋ ಎನ್ನುವಂತೆ ಭಾರತದಲ್ಲಿಯೂ  ಕೂಡ ರಾಮನ್ ಸೇರಿದಂತೆ ಗಣಿತವಿದ ರಾಮಾನುಜನ್(1887-1920), ಸತ್ಯೇಂದ್ರನಾಥ ಬೋಸ್(1894-1974), ಜಗದೀಶಚಂದ್ರ ಬೋಸ್, (1858-1937), ಪ್ರಸಾಂತ್ ಮಹಾಲನೋಬಿಸ್(1893-1972), ಮೊದಲಾದವರು ಗಣಿತ ಮತ್ತು ವಿಜ್ಞಾನ ರಂಗದಲ್ಲಿ ಉಜ್ವಲವಾಗಿ ಪ್ರಕಾಶಿಸಿ ಭಾರತೀಯರ ಬೌಧ್ಧಿಕ ಸಾಮರ್ಥ್ಯವನ್ನು ಪ್ರಕಟಪಡಿಸಿದರು.

ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದು ಎಪ್ಪತ್ತೇಳು ವರ್ಷಗಳು ಉರುಳಿ ಹೋಗಿವೆ. ಆದರೆ ವಿಜ್ಞಾನಕ್ಕೆ ಸಂಬಧಿಸಿದಂತೆ ಇನ್ನೊಂದು ನೊಬೆಲ್ ಪ್ರಶಸ್ತಿ ಭಾರತೀಯ ಪ್ರಜೆ  ಪಡೆದಿಲ್ಲ ಎಂದಾಗ ಮನಸ್ಸು ಭಾರವಾಗುತ್ತದೆ. (ಜೀವ ವಿಜ್ಞಾನಿ ಹರಗೋವಿಂದ ಖೊರಾನಾ, ಖಭೌತ ವಿಜ್ಞಾನಿ ಎಸ್.ಚಂದ್ರಶೇಖರ್ – ಭಾರತೀಯ ಸಂಜಾತರಾದರೂ ಅಮೇರಿಕದ ಪೌರತ್ವ ಪಡೆದವರು) ಹಾಗಿದ್ದರೆ ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನ ರಂಗದಲ್ಲಿ ಭಾರತದ ಸಾಧನೆ ಏನೂ ಇಲ್ಲವೆ? ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ನಗಣ್ಯವೇ? ಅವಲೋಕಿಸಬೇಕಾದ ವಿಚಾರವಿದು.

ಇಂದು ಭಾರತದಲ್ಲಿ ಮೂರು ಸಾವಿರದಷ್ಟು ಸಂಶೋಧನಾ ಸಂಸ್ಥೆಗಳು ಮೂಲಭೂತ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ನಿರತವಾಗಿವೆ. ಭಾರತೀಯ ಸಂಶೋಧನಾ ಸಂಸ್ಥೆ (Indian Institue of Science), ಭಾಭಾ ಅಣುಶಕ್ತಿ ಸಂಶೋಧನಾಕೇಂದ್ರ(Babha Atomic Research Centre), ಟಾಟಾ ಮುಲಭೂತ ವಿಜ್ಞಾನ ಸಂಶೋಧನಾ ಕೇಂದ್ರ (TIFR), ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರ (CSIR), ಭಾರತೀಯ ವೈಮಾಂತರಿಕ್ಷ ಸಂಶೋಧನಾ ಸಂಸ್ಥೆ (ISRO).. ಹೀಗೆ ಹಲವು ಸಂಶೋಧನಾ ಕೇಂದ್ರಗಳು  ಜಾಗತಿಕ ಮಟ್ಟದಲ್ಲಿ  ಅಪಾರ ಮನ್ನಣೆ ಪಡೆದುಕೊಂಡಿವೆ. ಅಣುಶಕ್ತಿ ರಂಗದಲ್ಲಿ, ಬಾಹ್ಯಾಕಾಶ ಸಂಶೋಧಾನಾ ಕ್ಷೇತ್ರದಲ್ಲಿ, ಜೈವಿಕ  ತಂತ್ರಜ್ಞಾನದಲ್ಲಿ ನಮ್ಮ ಸಾಧನೆ ಗಮನೀಯವಾದದ್ದು.

ಪ್ರೊಟೀನ್ ಬಗ್ಗೆ ಮಹತ್ವದ ಸಂಶೋಧನೆ ಮಾಡಿರುವ ಡಾ.ಜಿ.ಎನ್.ಎನ್.ರಾಮಚಂದ್ರನ್, ದ್ರವ ಸ್ಪಟಿಕ ಕ್ಷೇತ್ರದಲ್ಲಿ ಮಹತ್ತರ ಸಂಶೋಧನೆ ಮಾಡಿರುವ ಡಾ.ಎಸ್.ಚಂದ್ರಶೇಖರ್, ಸ್ಟ್ರಿಂಗ್ ಸಿದ್ಧಾಂತದಲ್ಲಿ ಹೊಸ ಕ್ರಾಂತಿ ಮಾಡುತ್ತಿರುವ ಡಾ.ಅಶೋಕ ಸೇನ್, ಖಗೋಳ ವಿಜ್ಞಾನಕ್ಕೆ ಸ್ಥಿರವಿಶ್ವಸಿದ್ಧಾಂತವೆಂಬ ನವೀನ ಕಲ್ಪನೆ  ನೀಡಿರುವ ಡಾ.ಜಯಂತ ನಾರ್ಲೀಕರ್, ಘನವಸ್ತು ರಸಾಯನವಿಜ್ಞಾನದಲ್ಲಿ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮನ್ನಣೆ ಪಡೆದಿರುವ ಡಾ.ಸಿ.ಎನ್.ಆರ್.ರಾವ್, ಜೀವ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ.ಭಾರ್ಗವ, ನ್ಯಾನೋ ವಿಜ್ಞಾನರಂಗದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ನಿರತರಾಗಿರುವ ಹಲವು ವಿಜ್ಞಾನಿಗಳ ಸಾಧನೆಯನ್ನು ನಾವು ನಿರ್ಲಕ್ಷಿಸಬಾರದು. ರಾಮನ್ ಪಡೆದ ನೊಬೆಲ್ ನಮಗೆ ಭಾರವಾಗಬಾರದು; ಇನ್ನಷ್ಟು ಸಾಧನೆಗೆ ಸ್ಪೂರ್ತಿಯ ಸೆಲೆಯಾಗಬೇಕು.

ಅಂದರೆ ಎಲ್ಲವೂ ಸರಿಯಾಗಿದೆ ಎಂದಲ್ಲ. ಸರಿಯಾಗಬೇಕಾದದ್ದು ಬಹಳಷ್ಟಿದೆ -  ಮೂಲಭೂತ ವಿಜ್ಞಾನ ಅರಳಿ ನಳನಳಿಸಲು. ರಾಮನ್ ಕಾಲದ ಪರಿಸ್ಥಿತಿಗೂ ವರ್ತಮಾನದ ಪರಿಸ್ಥಿತಿಗೂ ಬಹಳ ಅಂತರವಿದೆ. ಇಂದು ಸಂಶೋಧನಾ ಬಗೆ ಭಿನ್ನವಾಗುತ್ತಿದೆ. ಸರಳ ಉಪಕರಣಗಳ ಬದಲಿಗೆ ದುಬಾರಿಯಾದ ಸಂಕೀರ್ಣ ಉಪಕರಣ ಬಳಸಿ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳು ಉದ್ಯಮದ ಆಯಾಮ ಪಡೆಯುತ್ತಿವೆ. ವಿಜ್ಞಾನರಂಗಕ್ಕೆ ಆರ್ಥಿಕ ಒತ್ತಾಸೆ ಹಿಂದೆಂದಿಗಿಂತಲೂ ಹೆಚ್ಚಿಗೆ ಬೇಕಾಗುತ್ತಿದೆ. ಸಂಶೋಧನೆಗಳು ದೇಶದ ಗಡಿ ಮೀರಿ ಅಂತಾರಾಷ್ಟ್ರೀಯ ಸಹಯೋಗತ್ವದಲ್ಲಿ, ಸಮಷ್ಟಿ ವ್ಯವಸ್ಥೆಯಲ್ಲಿ ನಡೆಯುತ್ತಿವೆ.

ವಿಜ್ಞಾನ ಹುಟ್ಟುವುದು ಪ್ರಶ್ನೆಯಲ್ಲಿ ಮತ್ತು ಉತ್ತರದ ಹುಡುಕಾಟದಲ್ಲಿ. ಅದು ಸಾಧ್ಯವಾಗುವುದು ನವೋನ್ಮೇಶಶಾಲಿಯಾದ ಯುವ ಪೀಳಿಗೆಯಿಂದಲೇ ಹೊರತು ತಲೆ ನೆರೆತ ಮಂದಿಯಿಂದಲ್ಲ.  ಸ್ವಯಂ ರಾಮನ್ ಒಂದೆಡೆ ಬರೆದಿದ್ದಾರೆ “ಯಾವುದೇ ವಿಜ್ಞಾನ ವಿಭಾಗದಲ್ಲಿ ತರುಣ ವಿಜ್ಞಾನಿಗಳ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಬದಿಗಿಟ್ಟರೆ, ಉಳಿದವರ ಕೊಡುಗೆ ಬಗ್ಗೆ ಹೇಳಲು ಏನೂ ಇರುವುದಿಲ್ಲ”

ಆದರೆ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇಂದು ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತಿದೆ. ನ್ಯೂಟನ್, ಐನ್ ಸ್ಟೈನ್, ಡಾರ್ವಿನ್, ರಾಮನ್, ರಾಮಾನುಜನ್ ಬಗ್ಗೆ ಕುತೂಹಲ ತಾಳಿ ಮೂಲ ಹೊಸ ಸತ್ಯದ ಹುಡುಕಾಟದಲ್ಲಿ ತೊಡಗಬೇಕಾದ ವಿದ್ಯಾರ್ಥಿಗಳು ಮೂಲ ವಿಜ್ಞಾನದಿಂದ ದೂರ ಸರಿಯುತ್ತಿರುವ ಪ್ರಮಾಣ ಮತ್ತು ವೇಗ ಗಾಬರಿ ಹುಟ್ಟಿಸುತ್ತಿದೆ. ಮಾಹಿತಿ ತಂತ್ರಜ್ಞಾನದೊಂದಿಗೆ ಸಾಗುವ ಕಾಂಚನದ ಹುಚ್ಚು ಕುದುರೆ ಏರಿದ ಪ್ರತಿಭಾನ್ವಿತರು ಧಾವಿಸುವ ಭರದಲ್ಲಿ ವಿಜ್ಞಾನದ ಅಧ್ಯಯನ ಮತ್ತು  ಸಂಶೋಧನೆ ಮೂಲೆಗುಂಪಾಗತೊಡಗಿದೆ. ನಮ್ಮ ಸಂಶೋಧನ ಸಂಸ್ಥೆಗಳಿಗೆ ಇದರ ಬಿಸಿ ಈಗಾಗಲೇ ತಟ್ಟಿದೆ. ಆದರೆ ಆರ್ಥಿಕ ಹಿಂಜರಿತದ ಕಾರಣದಿಂದ ಐಟಿ ಬಿಟಿ ಕಂಪೆನಿಗಳು ತಮ್ಮ

ಕೆಲವು ವರ್ಷಗಳ ಹಿಂದೆ  ಡಾ.ಸಿ.ಎನ್.ಆರ್.ರಾವ್  ಪತ್ರಿಕೆಯಲ್ಲಿ ದು:ಖ ತೋಡಿಕೊಂಡರು “ ಭಾರತದಲ್ಲಿ ಪ್ರತಿಭಾವಂತ ಎಳೆಯರು ಶುದ್ಧ ವಿಜ್ಞಾನದಿಂದ ದೂರ ಸರಿಯುತ್ತಿದ್ದಾರೆ. ವಿಜ್ಞಾನಕ್ಕೆ ಆಕ್ಸಿಜನ್ನಿನ ಅವಶ್ಯಕತೆ ಇದೆ. ಎಷ್ಟು ಬೇಗ ಕೊಡುತ್ತೀರೋ ಅಷ್ಟು ಒಳ್ಳೆಯದು” ನಿಜ, ತಂತ್ರಜ್ಞಾನದ ಉಸಿರು ಇರುವುದು ಮೂಲ ವಿಜ್ಞಾನದಲ್ಲಿ. ಉಸಿರೇ ನಿಂತರೆ ಮತ್ತೇನಿದೆ?

ರಾಮನ್ ಯುವಕ ಯುವತಿಯರನ್ನುದ್ದೇಶಿಸಿ ಹೇಳುವುದಿತ್ತು. ವಿಜ್ಞಾನ ದಿನದಂದು ಇದಕ್ಕಿಂತ ಸುಸಂಗತವಾದ ಬೇರೊಂದು ಸಂದೇಶ ಇರದು :

“ ನನ್ನೆದುರಿನ ಯುವಕ ಯುವತಿಯರಿಗೆ ನಾನು ಹೇಳಲು ಇಚ್ಚಿಸುತ್ತೇನೆ. ಯಾವ ಸಂದರ್ಭದಲ್ಲೂ ಆಶಾವಾದ ಮತ್ತು ಧೈರ್ಯ ಕಳೆದುಕೊಳ್ಳಬಾರದು. ನಿಮ್ಮೆದುರಿನ ಗುರಿಯನ್ನು ಸಾಧಿಸುವಲ್ಲಿ ಅತ್ಯಂತ ಧೈರ್ಯ ಮತ್ತು ಶ್ರುದ್ಧೆ ಇದ್ದಲ್ಲಿ ಮಾತ್ರ ಜಯ ಲಭಿಸುತ್ತದೆ. ಈ ಜಗತ್ತಿನಲ್ಲಿ ನಿಮ್ಮ ಹುಬ್ಬಿನಿಂದ ಬೆವರ ಹನಿ ಬರದೇ ಎನೂ ಫಲ ದೊರೆಯದು. ಭಾರತೀಯ ಬುದ್ದಿಮತ್ತೆ ಬೇರೆ ಯಾವುದೇ ದೇಶ, ಜನಾಂಗಕ್ಕೆ ಸರಿ ಮಿಗಿಲಾದದ್ದು ಎನ್ನುವ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆದರೆ ನಾವು ಕೀಳರಿಮೆ ಬೆಳೆಸಿಕೊಂಡಿದ್ದೇವೆ. ಈ ಸೋಲಿನ ಮನೋಭಾವವನ್ನು ನಾವು ತೊಡೆಯಬೇಕಾಗಿದೆ. ಇಂದು ನಮಗೆ ಬೇಕಾಗಿರುವುದು – ವಿಜಯಕ್ಕೆ ಬೇಕಾದ ಉತ್ಸಾಹ, ನಮ್ಮ ಸ್ವಂತಿಕೆಯನ್ನು ಸ್ಥಾಪಿಸುವ ಉತ್ಸಾಹ, ಒಂದು ಮಹಾನ್ ನಾಗರೀಕತೆಯ ಉತ್ತರಾಧಿಕಾರಿಗಳು ನಾವಾಗಿದ್ದೇವೆ ಎಂದು ಗುರುತಿಸಿಕೊಳ್ಳುವ ಬಯಕೆ. ಇಂಥ ಎಂದೂ ಬತ್ತದ ಉತ್ಸಾಹ ನಿಮ್ಮಲ್ಲಿ ಮೂಡಿದರೆ ಈ ಪೃಥ್ವಿಯಲ್ಲಿ ನಮ್ಮ ಗುರಿ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗದು”

Posted in ವಿಜ್ಞಾನ ಲೇಖನಗಳು

ತಪ್ಪಾದ ನಿರ್ಣಯ
“ನನ್ನ ಮರಣಾನಂತರ ನನ್ನ ಜೀವಮಾನದ ಎಲ್ಲ ಸಂಪತ್ತನ್ನು ಮೂಲಧನವಾಗಿಟ್ಟು  ಅದರ ಬಡ್ಡಿಯಿಂದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ – ಈ ಐದು ಪ್ರಕಾರಗಳಲ್ಲಿ ಮಾನವ ಕಲ್ಯಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಾಧಕರನ್ನು ಆರಿಸಿ ಅವರಿಗೆ ಪ್ರಶಸ್ತಿ ನೀಡಬೇಕು”  ಇದು ಆಲ್ಫ್ರೆಡ್‌ನೊಬೆಲ್ ಬರೆದ ಉಯಿಲಿನ ಸಾರಾಂಶ. (೧೮೯೫,ನವೆಂಬರ್ ೨೭).

೧೮೯೬, ಡಿಸೆಂಬರ್ ೧೦ರಂದು ಇಟೆಲಿಯ ಸಾನ್‌ರೆಮೋ ಎಂಬಲ್ಲಿರುವ “ನೊಬೆಲ್ ವಿಲ್ಲಾ” ಎಂಬ ಭವ್ಯ ಬಂಗಲೆಯಲ್ಲಿ ನೊಬೆಲ್ ನಿಧನ ಹೊಂದಿದ. ಆದರೆ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ನಾಲ್ಕು ವರ್ಷಗಳು ಬೇಕಾದುವು. ಸ್ವೀಡನ್ ಮತ್ತು ನಾರ್ವೇ ದೇಶದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೇ? ಪ್ರಶಸ್ತಿಗೆ ಆರಿಸಲು ಅನುಸರಿಸಬೇಕಾದ  ಮಾನದಂಡಗಳಾವುವು? ಪ್ರಶಸ್ತಿಯನ್ನು ಯಾವಾಗ ಮತ್ತು ಎಲ್ಲಿ ನೀಡಬೇಕು? ಇವೆಲ್ಲ ಚರ್ಚೆಗೆ ಬಂದ ವಿಷಯಗಳು. ಈ ನಡುವೆ ನೊಬೆಲ್ ಕುಟುಂಬದ ಕೆಲವರು ಈ ಉಯಿಲಿನ ವಿರುದ್ಧ ಕೋರ್ಟು ಮೆಟ್ಟಲೇರಿದರು.  ಇಂಥ ಹಲವು ಅಡೆ ತಡೆಗಳನ್ನು ಹಿಂದಿಕ್ಕಿ ನೊಬೆಲ್ ಪ್ರಶಸ್ತಿ ನೀಡುವ ಪಧ್ಧತಿ ಇಪ್ಪತ್ತನೇ ಶತಮಾನದ ಅರುಣೋದಯದಂದು – ಅಂದರೆ ೧೯೦೧ರಿಂದ ಪ್ರಾರಂಭವಾಯಿತು.

ರಾಸಾಯನಿಕ ಕ್ರಿಯೆಗಳು ಯಾವ ಬಗೆಯಲ್ಲಿ ನಡೆಯುತ್ತವೆಂದು ವಿವರಿಸುವ ಸಿಧ್ಧಾಂತಕ್ಕೆ ಹಾಲೆಂಡಿನ ಜೆಕೋಬಸ್ ಹೆಂಡ್ರಿಕ್ಯೂಸ್ ವಾಂಟ್ ಹಾಫ್ (೧೮೫೨-೧೯೧೧) ರಸಾಯನ ವಿಜ್ಞಾನದಲ್ಲಿ, ಡಿಪ್ತಿರಿಯಾ ವ್ಯಾಧಿಗೆ ಔಷಧವನ್ನು ಆವಿಷ್ಕರಿಸಿದ್ದಕ್ಕೆ ಜರ್ಮನಿಯ ಎಮಿಲ್ ಅಡಾಲ್ಫ್‌ವೋನ್ ಬೆಹ್ರಿಂಗ್(೧೮೫೪-೧೯೧೭) ವೈದ್ಯಕೀಯ ವಿಭಾಗದಲ್ಲಿ, ಭಾವಪೂರ್ಣ ಕವನಗಳಿಗಾಗಿ ಫ್ರೆಂಚ್ ಕವಿ ಸುಲ್ಲಿಪ್ರುದ್ಧೊಮ್ (೧೮೩೯-೧೯೦೭) ಸಾಹಿತ್ಯ ಪ್ರಕಾರದಲ್ಲಿ ೧೯೦೧ರ ನೊಬೆಲ್ ಪ್ರಶಸ್ತಿ ಸ್ವೀಕರಿಸಿದರು. ಸುಪ್ರಸಿದ್ಧ ಸೇವಾಸಂಸ್ಥೆ ರೆಡ್‌ಕ್ರಾಸ್ ಸ್ಥಾಪಕರಾದ ಸ್ವೀಡನ್ನಿನ ಜೀನ್ ಹೆನ್ರಿ ಡ್ಯುನಾಂಟ್ (೧೮೨೮-೧೯೧೦) ಮತ್ತು ಫ್ರಾನ್ಸಿನ ಶಾಂತಿ ಸಂಸ್ಥೆಯ ಸಂಸ್ಥಾಪಕ ಫ್ರೆಡ್ರಿಕ್ ಪ್ಯಾಸೀ (೧೮೨೨-೧೯೧೨) ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು. (ಅರ್ಥಶಾಸ್ತ್ಕಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಆಲ್ಫ್ರೆಡ್‌ನೊಬೆಲ್ ಸ್ಮರಣೆಗೆ ೧೯೬೮ರಲ್ಲಿ ಸ್ವೀಡನ್ ಬ್ಯಾಂಕ್ ಪ್ರಾರಂಭಿಸಿತು ಮತ್ತು ಇಂದು ಅದನ್ನೂ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ).

ಇನ್ನುಳಿದಿರುವುದು ಭೌತವಿಜ್ಞಾನ. ಜರ್ಮನಿಯ ವಿಲ್‌ಹೆಲ್ಮ್ ಕೊನ್ರಾಡ್ ರಂಟ್ಜನ್ (೧೮೪೫-೧೯೨೩) ಎಕ್ಸ್-ಕಿರಣಗಳ (X-Rays) ಆವಿಷ್ಕಾರಕ್ಕಾಗಿ  ಭೌತವಿಜ್ಞಾನದ ಪ್ರಪ್ರಥಮ ನೊಬೆಲ್ ಪ್ರಶಸ್ತಿ ಪಡೆದರು. ಭೌತ ಪ್ರಪಂಚದ ಸೂಕ್ಷ್ಮಾತಿಸೂಕ್ಷ್ಮ ರಚನೆಗಳ ಬಗ್ಗೆ ಒಳನೋಟ ಒದಗಿಸುವ, ವೈದ್ಯಕೀಯ ಚಿಕಿತ್ಸಾ ರಂಗದಲ್ಲಿ ಹೊಸ ಆಯಾಮವನ್ನೇ ತಂದ ಆವಿಷ್ಕಾರ ಅದಾಗಿತ್ತು. ಆದರೆ ಯಾರು ತಿಳಿದಿದ್ದರು ಇಂಥದೊಂದು ಆವಿಷ್ಕಾರವಾಗುತ್ತದೆಂದು?

೧೯ನೆಯ ಶತಮಾನದ ಕೊನೆಯ ಪಾದಕ್ಕಾಗುವಾಗ ಬೌತ ವಿಜ್ಞಾನದಲ್ಲಿ ಸಂಶೋಧಿಸಲು ಹೆಚ್ಚೇನೂ ಉಳಿದಿಲ್ಲ, ಎಲ್ಲ ಮುಗಿದಿದೆ ಎಂಬ ಆಭಿಪ್ರಾಯ ಪ್ರಚಲಿತವಾಗಿತ್ತು. ಭವಿಷ್ಯತ್ತಿನ ಉಜ್ವಲ ವಿಜ್ಞಾನಿಯಾಗತಕ್ಕ ಮ್ಯಾಕ್ಸ್ ಪ್ಲಾಂಕ್ (೧೮೫೮ – ೧೯೪೭)  ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯ ಸೇರಲು ಹೋದಾಗ (೧೮೭೫)  ಅಲ್ಲಿದ್ದ ಪ್ರೊಫೆಸರ್ ಹೇಳಿದರಂತೆ “ಹುಡುಗ, ಭೌತವಿಜ್ಞಾನ ತನ್ನ ಕೊನೆಯ ಹಂತದಲ್ಲಿದೆ. ಹಾಗಾಗಿ ಇದರಲ್ಲಿ ಭವಿಷ್ಯವಿಲ್ಲ. ಬೇರೆ ಯಾವುದಾದರೂ ವಿಷಯವನ್ನು ಆಯ್ದುಕೊಳ್ಳುವುದು ಭವಿಷ್ಯದ ದೃಷ್ಟಿಯಲ್ಲಿ ಉತ್ತಮ”  ೧೯೦೭ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಶ್ರೇಷ್ಠ ಪ್ರಾಯೋಗಿಕ ಭೌತ ವಿಜ್ಞಾನಿ ಅಮೇರಿಕದ ಮೈಕೆಲ್ಸ್‌ನ್ (೧೮೫೨ -೧೯೩೧) ಶಿಕಾಗೋ ವಿಶ್ವವಿದ್ಯಾಲಯದಲ್ಲಿ  ಉಪನ್ಯಾಸ ಮಾಡುತ್ತ (೧೮೮೫) ನುಡಿದರು “ಇಂದು ಪ್ರಾಯಶ: ಭೌತವಿಜ್ಞಾನದಲ್ಲಿ ಹೆಚ್ಚಿನ ತತ್ತ್ವಗಳು ನಿಖರವಾಗಿ ಸ್ಥಿರೀಕರಿಸಲ್ಪಟ್ಟಿವೆ. ಈ ತತ್ತ್ವಗಳನ್ನು ಉಪಯೋಗಿಸಿ ಇನ್ನು ನಮಗೆ ಗೊಚರಿಸುವ ವಿದ್ಯಮಾನಗಳನ್ನು ವಿವರಿಸಲು ಸಾಧ್ಯ ಮತ್ತು ಅವಷ್ಟೇ ಬಾಕಿ ಉಳಿದಿವೆ. ಭವಿಷ್ಯದ ಭೌತವಿಜ್ಞಾನದಲ್ಲಿ ಫಲಿತಾಂಶವನ್ನು ಆರನೆಯ ದಶಮಾಂಶ ಸ್ಥಾನಕ್ಕೆ ಸರಿಯಾಗುವಷ್ಟರ ಮಟ್ಟಿಗೆ ನಿಖರವಾಗಿ ಅಳೆಯುವುದಷ್ಟೇ ಆಗಿರುತ್ತದೆ”

ಹೀಗೆ ಗ್ರಹಿಸುವುದಕ್ಕೆ ಬಲವಾದ ಕಾರಣವೂ ಇತ್ತು. ನ್ಯೂಟನ್ ಬಲವಿಜ್ಞಾನ (Newtonian Mechanics), ಮತ್ತು ಮ್ಯಾಕ್ಸ್‌ವೆಲ್ ರೂಪಿತ  ವಿದ್ಯುತ್ಕಾಂತ ಸಿಧ್ಧಾಂತಗಳನ್ನು (Electromagnetic Theory) ಬಳಸಿಕೊಂಡು ಭೌತ ಪ್ರಪಂಚದ ಹೆಚ್ಚಿನ ವಿದ್ಯಮಾನವನ್ನು ವಿವರಿಸಲು ಸಾಧ್ಯವಾಗಿತ್ತು. ಎಂದೇ ಭೌತವಿಜ್ಞಾನದಲ್ಲಿ ಸಂಶೋಧನೆಗೆ ಹೆಚ್ಚೇನೂ ಆಸ್ಪದವಿಲ್ಲ  ಎಂಬ ನಿರ್ಣಯಕ್ಕೆ ಬಂದದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.  ಆದರೆ ಅಚ್ಚರಿ ಎಂದರೆ ಇವೆಲ್ಲವೂ ಎರಡೇ ಎರಡು ವರ್ಷಗಳಲ್ಲಿ ತಲೆಕೆಳಗಾದದ್ದು. ನಮಗೆ ತಿಳಿದದ್ದಕ್ಕಿಂತ ಹೆಚ್ಚಿಗೆ ತಿಳಿಯದೇ ಇದ್ದದ್ದು ಇದೆ ಎಂದು ತಿಳಿದದ್ದು ಎಕ್ಸ್-ಕಿರಣದ ಆವಿಷ್ಕಾರದಿಂದ. ಈ ಆವಿಷ್ಕಾರ ನೂತನ ಭೌತ ವಿಜ್ಞಾನಕ್ಕೆ ನಾಂದಿ ಹಾಡಿತು. ಆ ಆವಿಷ್ಕಾರದ ಕಥೆ ಮತ್ತು  ಏತಕ್ಕೆ ರಂಟ್ಜನ್ ಪ್ರಪ್ರಥಮ ನೊಬೆಲ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರೆಂದು ನಿಮಗೆ ಮುಂದೆ ವಿವರಿಸುತ್ತೇನೆ.

Posted in ವಿಜ್ಞಾನ ಲೇಖನಗಳು, ವ್ಯಕ್ತಿ - ಜೀವನ

ಪೈಗಳ ದಿನ
ಮಾರ್ಚ್ ೧೪ ಕಳೆದಿದೆ. ಕಾಲ ಯಾರಿಗೂ ಕಾಯುವುದಿಲ್ಲ. ಮಾರ್ಚ್ ೧೪ರ ವಿಶೇಷತೆಯ ಬಗ್ಗೆ ಉದಯವಾಣಿಯಲ್ಲಿ ನನ್ನ ಬರಹ ಪ್ರಕಟವಾಯಿತು. ಅದರ ವಿಸ್ತ್ರುತ ರೂಪ kendasampige.com ನಲ್ಲಿದೆ. ಎರಡನ್ನೂ ಸೇರಿಸಿದ ಬರಹ ಇದೀಗ ನನ್ನದೇ ತಾಣದಲ್ಲಿದೆ. ಆ ವಿಶೇಷ ಏನು ? ಗೊತ್ತುಂಟ ಮಾರಾಯ್ರೆ – ಅದು ನಮ್ಮ ಪೈಗಳ ದಿನ!

ನನಗೊಬ್ಬರು ಮಿಂಚಂಚೆಯ – ಅಂದರೆ ಇ-ಮೈಲ್ ಸ್ನೇಹಿತರು. ಅವರು ಉಡುಪಿಯ ರಮೇಶ ಅಡಿಗರು. ಇತ್ತೀಚೆಗೆ ಅಡಿಗರು ಎಚ್ಚರಿಸಿದರು “ಮಾರ್ಚ ೧೪ ಬರುತ್ತಿದೆ. ಪ್ರಪಂಚದ ಹಲವೆಡೆ  ಪೈ ಡೇ (ದಿನ) ಆಚರಣೆ ಮಾಡುತ್ತಿದ್ದಾರೆ.” ನಿಜ, ಈ ಆಚರಣೆ ನಮ್ಮಲ್ಲಿ ಇಲ್ಲ. ಆದರೆ ಅಮೇರಿಕ, ಆಸ್ಟ್ರೇಲಿಯಾ ಮೊದಲಾದೆಡೆ ಈ “ಪೈ ಡೇ”  ಅಂದರೆ “ಪೈ ದಿನ” ವನ್ನು ವಿಜೃಂಭಣೆಯಿಂದ ಆಚರಿಸುತ್ತಾರಂತೆ. ನಾವು ಯಾವ್ಯಾವುದೋ ದಿನವನ್ನು ಎರವಲು ಪಡೆದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವಾಗ ಇದನ್ನೂ ಆಚರಿಸಿದರೆ ನಷ್ಟವೇನೂ ಆಗದು. ಅಷ್ಟಕ್ಕೂ ಈ  ಪೈ ಅಂದರೆ ಯಾರು?

ಅಪರಿಮೇಯ ಸಂಖ್ಯೆ

ಈ ಪೈ ಅಸಾಮಾನ್ಯ.  ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಎಲ್ಲೆಲ್ಲಿ ವೃತ್ತ ಬರುತ್ತದೋ ಅಲ್ಲೆಲ್ಲ ಪೈ ಪ್ರತ್ಯಕ್ಷ. ಬೈಬಲ್‌ನಲ್ಲಿ ಇದರ ಕುರಿತು ಪ್ರಸ್ತಾಪವಿದೆಯಂತೆ. ಕ್ರಿಸ್ತ ಪೂರ್ವದ ದಿನಗಳ ಬೆಬಿಲೊನಿಯಾ,  ಈಜಿಪ್ಟ ಗಣಿತವಿದರಿಗೆ ಪೈಯ ಬೆಲೆ ಸರಿ ಸುಮಾರಾಗಿ ೩.೧ ಎಂದು ತಿಳಿದಿತ್ತು. ಆದರೆ ಪೈ ಎಂಬ ಮಾಯಾವಿ ಸಂಖ್ಯೆಯನ್ನು  ಶೋಧಿಸಿದವರು ಯಾರು? ಸ್ಪಷ್ಟವಾಗಿ ತಿಳಿಯದು ಯಾರಿಗೂ.

ಒಂದು ವೃತ್ತಕ್ಕೆ ಅದರದ್ದೇ ಆದ ಒಂದು ನಿರ್ದಿಷ್ಟ ಪರಿಧಿ ಎಂಬುದಿದೆ ಎಂಬುದು ಎಲ್ಲರಿಗೂ ತಿಳಿದದ್ದೆ. ವೃತ್ತದ ಗೆರೆಯ ಮೇಲೆ ಒಂದು ಬಿಂದುವಿನಿಂದ ಹೊರಟ ನೀವು ಮತ್ತೆ ಅದೇ ಬಿಂದುವಿಗೆ ತಲಪುತ್ತೀರಿ. ಗೆರೆಯ ಮೇಲೆ ನೀವು ಕ್ರಮಿಸಿದ ದೂರವೇ ಆ ವೃತ್ತದ ಪರಿಧಿ. ವೃತ್ತದ ಪರಿಧಿಯನ್ನು ಅದರ ವ್ಯಾಸದಿಂದ ಭಾಗಿಸಿದರೆ ದೊರೆಯುವ ನಿಷ್ಪತ್ತಿ (ಭಾಗಲಬ್ದ) ಒಂದು ಸಂಖ್ಯೆ ಮಾತ್ರವಲ್ಲ ಇದೊಂದು ನಿಯತಾಂಕ. ಈ ನಿಯತಾಂಕವೇ ಪೈ.

ಒಂದು ವೃತ್ತದ ವ್ಯಾಸ ಇನ್ನೊಂದು ವೃತ್ತದ ವ್ಯಾಸದ ದುಪ್ಪಟ್ಟು ಇದ್ದರೆ, ಅದರ ಪರಿಧಿಯೂ ದುಪ್ಪಟ್ಟಾಗುತ್ತದೆ. ಆದರೆ ಇವೆರಡರ ನಿಷ್ಪತ್ತಿ ಮಾತ್ರ ಒಂದೇ. ಅದುವೇ ಪೈ.

ಪೈ ಸೂಚಿತವಾಗಿರುವುದು ಗ್ರೀಕ್ ವರ್ಣಮಾಲೆಯ ಅಕ್ಷರದಿಂದ. ಗ್ರೀಕ್ ಭಾಷೆಯಲ್ಲಿ ಪೆರಿಮೀಟರ್ περίμετρος (perimeter)ಅನ್ನುವ ಪದ ವೃತ್ತದ ಪರಿಧಿಯನ್ನು ಸೂಚಿಸುತ್ತದೆ. ಆ ಪದದ ಮೊದಲ ಅಕ್ಷರವೇ ಪೈ π. ಹಾಗಾಗಿ ಈ ಸಂಖ್ಯೆಯನ್ನು π ಎಂಬ ಅಕ್ಷರದಿಂದ ಸೂಚಿಸಲಾಗುತ್ತದೆ.

π ಒಂದು ಅಪರಿಮೇಯ (irrational number) ಸಂಖ್ಯೆ. ಅಂದರೆ ಅದಕ್ಕೆ ಎಲ್ಲೆ ಇಲ್ಲ, ಮುಕ್ತಾಯವಿಲ್ಲ,  – ಕಡಲು ಇದ್ದ ಹಾಗೆ ಮತ್ತು ಇದರ ದಶಮಾಂಶ ಸ್ಥಾನದ ಸಂಖ್ಯೆಗಳು ಪುನರಾವರ್ತಿತವಲ್ಲ. ಎರಡು ಪೂರ್ಣಾಂಕಗಳ ನಿಷ್ಪತ್ತಿಯಾಗಿ ನಿರೂಪಿಸಲು ಬಾರದ ಯಾವುದೇ ನೈಜ ಸಂಖ್ಯೆಯನ್ನು ನಾವು ಅಪರಿಮೇಯ ಎನ್ನುತ್ತೇವೆ. ಉದಾಹರಣೆಗೆ ಎರಡರ ವರ್ಗಮೂಲ, ಮೂರರ ವರ್ಗಮೂಲ. ಅಷ್ಟು ಮಾತ್ರವಲ್ಲ, ಇಂಥ ಅಪರಿಮೇಯ ಸಂಖ್ಯೆಯನ್ನು ಎರಡು ಬೇರೆ ಸಂಖ್ಯೆಗಳ ಬೀಜಗಣಿತ ರೂಪದಲ್ಲಿ ಪಡೆಯಲು ಸಾಧ್ಯವಾಗದು.  ಇಂಥ ಸಂಖ್ಯೆಗೆ ಗಣಿತದ ಭಾಷೆಯಲ್ಲಿ ಅಬೀಜೀಯ ಸಂಖ್ಯೆ (transcendental number) ಎನ್ನುತ್ತಾರೆ. ಅಂದರೆ ಅದು ಅದುವೇ, ಅದರದ್ದೇ ಆದ ವೈಶಿಷ್ಟ್ಯತೆ ಅದಕ್ಕೆ. π ಅಂಥ ಮಹಾನುಭಾವ.

ಆರ್ಕಿಮಿಡಿಸ್ ಕೊಡುಗೆ

ನಾವು ಸಾಮಾನ್ಯವಾಗಿ π ಅಂದೊಡನೆ ೨೨/೭ ಎಂದು ಬರೆಯುತ್ತೇವೆ. ಇದು ಸುಪ್ರಸಿದ್ಧ. ಈ ಬಗೆಯನ್ನು ಸೂಚಿಸಿದವನು ಗ್ರೀಸಿನ ಗಣಿತವಿದ ಮತ್ತು ಭೌತ ವಿಜ್ಞಾನಿ ಆರ್ಕಿಮಿಡಿಸ್ (೨೮೭ – ೨೧೨ ಕ್ರಿಪೂ). ಈ ಆರ್ಕಿಮಿಡಿಸ್‌ನನ್ನು ತಿಳಿಯದವರಾರು? ರಾಜನ ಚಿನ್ನದ ಕಿರೀಟ ಬೆಟ್ಟೆಯೇ? ಪರಿಶುದ್ಧವೇ? ಎನ್ನುವ ಸಮಸ್ಯೆ ಬಗ್ಗೆ ಆಲೋಚಿಸುತ್ತ ಸ್ನಾನದ ತೊಟ್ಟಿಯಲ್ಲಿ ಇಳಿದವನಿಗೆ ತೊಟ್ಟಿಯಲ್ಲಿ ನೀರಿನ ಮಟ್ಟ ಏರಿದ್ದು ಕಂಡು ವಸ್ತುಗಳು ದ್ರವದಲ್ಲಿ ತೇಲುವ ನಿಯಮ ಥಟ್ಟನೆ ಹೊಳೆಯಿತಂತೆ. ಅಥೇನ್ಸಿನ ಬೀದಿಯಲ್ಲಿ ಯುರೇಕಾ ಎನ್ನುತ್ತ ಓಡಿದನಂತೆ – ನಗ್ನನಾಗಿ – ದೇಹದ ಮೇಲೆ ಪರಿವೆ ಇಲ್ಲದೇ. ಎಂಥ ರೋಚಕ ಕಥೆ!

ಚಿಂತನೆಯಲ್ಲಿ ಜಗವ ಮರೆತ ಆರ್ಕಿಮಿಡಿಸನ ತಲೆ ತರಿದ ಶತ್ರು ಯೋಧ ಆ ತಲೆಯ ಬೆಲೆ ಅರಿಯದೇ!

ಅರ್ಕಿಮಿಡಿಸ್ ಪ್ರಖರ ಮತಿ, ಗಣಿತವಿದ. ಚಕ್ರಗಳುಳ್ಳ ಹಲವು ಉಪಕರಣಗಳನ್ನು ನಿರ್ಮಿಸಿದ. ಆ ಕಾರಣಕ್ಕೋ ಏನೋ π ಕುರಿತಂತೆ ಆಸಕ್ತನಾದ. ವೃತ್ತದ ಒಳ  ಮತ್ತು ಹೊರಗೆ ಹಿಡಿಸುವಂತೆ ಬಹುಭುಜಾಕೃತಿಯನ್ನು ಎಳೆದದ್ದಾದರೆ, ಒಳಗಿನ ಬಹುಭುಜದ ಸುತ್ತಳತೆ ಮತ್ತು ಹೊರಗಿನ ಬಹು ಭುಜದ ಸುತ್ತಳತೆಯ ನಡುವಣ ಬೆಲೆ π ಆಗಿರುತ್ತದೆಂದು ಹೇಳಿದ್ದಲ್ಲದೇ, π ಬೆಲೆಯನ್ನು ಸರಿ ಸುಮಾರಾಗಿ   ೨೨೩/೭೧ ಮತ್ತು ೨೨/೭  ಇವರೆಡರ  ನಡುವೆ ಇದೆ ಎಂದು ನಿರೂಪಿಸಿದ. ೨೨/೭ ಗರಿಷ್ಠ ಬೆಲೆ ನೀಡುತ್ತದೆ ಮತ್ತು ನೆನಪಿಡಲು ಸುಲಭ,  ಎಂದೇ ಇದು ಜನಪ್ರಿಯವಾಯಿತು.

ವೃತ್ತೀಯ ನಿಯತಾಂಕವಾದ ಪೈಯನ್ನು ಪ್ರತೀಕಿಸಲು ಗ್ರೀಕ್ ಅಕ್ಷರ π ಯನ್ನು ಬಳಸಲು ಪ್ರಾರಂಭಿಸಿದ್ದು ಬ್ರಿಟಿಷ್ ಗಣಿತವಿದ ವಿಲಿಯಮ್ ಜೋನ್ಸ್ (೧೬೭೫-೧೭೪೯).  ಆತನ ಸಮಕಾಲೀನ ಮತ್ತು ಶ್ರೇಷ್ಠ ಗಣಿತವಿದ, ಸ್ವಿಝರ್ಲೆಂಡಿನ  ಲಿಯಾನಾರ್ಡೋ ಆಯ್ಲರ್ (೧೭೦೧ -೧೭೮೩) ಅದನ್ನೇ ಮತ್ತೆ ಮತ್ತೆ ತನ್ನ ಸಂಶೋಧನ ಲೇಖನಗಳಲ್ಲಿ ಬಳಸುತ್ತ ಪ್ರಚಾರಕ್ಕೆ ತಂದು ಅದಕ್ಕೊಂದು ಅಮರತ್ವ ನೀಡಿದ. ವೃತ್ತದ ಪರಿಧಿ ಇರಬಹುದು, ವಿಸ್ತೀರ್ಣ ಇರಬಹುದು. ಸಂಖ್ಯೆಯ ಬದಲಿಗೆ π ಎಂಬ ಸಂಜ್ಞಾರೂಪವನ್ನು ಬಳಸಿದರೆ, ಆ ಗಣಿತೋಕ್ತಿ ಚೊಕ್ಕದಾಗುತ್ತದೆ; ಅದರ  ಸೌಂದರ್ಯ ಹೆಚ್ಚುತ್ತದೆ! ಆಯ್ಲರ್ ಮತ್ತು ಜೋನ್ಸ್ ಇಂಥ ಒಪ್ಪವನ್ನು ಮಾಡಿದರು.

ಹನುಮಂತನ ಬಾಲವಿದು!

ಹಾಗಿದ್ದರೆ π ಎಂಬ ಸಂಖ್ಯೆ ಯಾವುದು? ಇನ್ನೂ ನಮಗೆ ನಿಖರವಾಗಿ ತಿಳಿದಿಲ್ಲ. ಇದು ಎಷ್ಟೊಂದು ಉದ್ದದ ಸಂಖ್ಯೆಯೆಂದರೆ ೩.೧೪ರ ನಂತರ ನೂರಾರು ದಶಮಾಂಶ ಸ್ಥಾನಗಳ ತನಕವೂ ಇದು ವಿಸ್ತರಿಸಿಕೊಂಡಿದೆ – ಹನೂಮಂತನ ಬಾಲದಂತೆ. ಈ ಸಂಖ್ಯೆಯ ಶೋಧಕ್ಕೆ ಹೊರಟವರು ಅದೆಷ್ಟೋ ಜನ – ಸ್ವರ್ಣ ನಿಧಿಯ ಹುಡುಕಾಟದಂತೆ. ಒಬ್ಬೊಬ್ಬರ ಪ್ರಯತ್ನಗಳು π ಬೆಲೆಯನ್ನು ಇನ್ನಷ್ಟು ವಿಸ್ತರಿಸಿದೆ.

ಆರ್ಕಿಮಿಡಿಸ್ ಪ್ರಕಾರ π  ಬೆಲೆ ೩.೧೪೧೮ (೨೨/೭). ಟಾಲೆಮಿ (ಕ್ರಿ.ಪೂ ಪೂರ್ವ ೧೬೦) ಎಂಬ ಖಗೋಳವಿದ ಮಾಡಿದ ಗಣನೆಯ ಪ್ರಕಾರ ೩.೧೪೧೬೬. ಇನ್ನು ಚೀನೀ ಗಣಿತವಿದರಾದ ವಾಂಗ್ ಫನ್, ಲಿಯು ಹೈ (ಕ್ರಿಪೂ ೨೫೦) ಹೇಳುವಂತೆ ೩.೧೫೫೫೫೫. ನಮ್ಮ ಗಣಿತವಿದರಾದ ಆರ್ಯಭಟ (ಕ್ರಿಸ್ತ ಪೂರ್ವ ೪೦೦) ಮತ್ತು ಬ್ರಹ್ಮಗುಪ್ತ (ಕ್ರಿ.ಪೂ ೬೦೦) ಹಾಗೂ ಮಾಧವ (ಕ್ರಿಶ೧೪೦೦) ರ ಪ್ರಕಾರ ಸುಮಾರು 3.14159265359….  ನ್ಯೂಟನ್ ಮಹಾಶಯನ ಪ್ರಕಾರ (೧೬೭೦) 3.1415926535897932.

ಹಾಗಿದರೆ ಪೈ ಯ ನಿಜ ಬೆಲೆ ಎಷ್ಟು? ಕಂಪ್ಯೂಟರ್ ಬಳಸಿಕೊಂಡು ಲೆಕ್ಕ ಹಾಕಿದಂತೆ π  ಬೆಲೆ 3.14159 26535 89793 23846 26433 83279 50288 41971 69399 37510 …………

ಕೊನೆಯ ಸ್ಥಾನದ ಸಂಖ್ಯೆ ಯಾವುದು? ಅಥವಾ ಕೊನೆ ಎಂಬುದಿದೆಯೇ? ಯಕ್ಷ ಪ್ರಶ್ನೆ ಇದು. ಅಂದ ಹಾಗೆ π ಎಂಬ ಸಂಖ್ಯೆಯನ್ನು ನೆನೆಪಿಡಲು ಏನಾದರೂ ಹಿಕ್ಮತ್ತು ಇದೆಯೇ? ಅಂಥದೊಂದು ಹಿಕ್ಮತ್ತು ಇಲ್ಲಿದೆ. ನೆನಪಿಡಲು ಇದೊಂದು ವಾಕ್ಯ ಸೂತ್ರ. ವಾಕ್ಯದ ಪ್ರತಿಯೊಂದು ಪದ ಒಂದು ದಶಮಾಂಶ ಸ್ಥಾನ ಮತ್ತು ಆ ಪದದಲ್ಲಿರುವ ಒಟ್ಟು ಅಕ್ಷರಗಳು ಆ ದಶಮಾಂಶ ಸ್ಥಾನದ ಸಂಖ್ಯೆಯ ಸೂಚಕ. ಆ ವಾಕ್ಯ ಹೀಗಿದೆ

How I want a drink, alcoholic of course, after the heavy lectures involving quantum mechanics. All of thy geometry, Herr Planck, is fairly hard…:

3.14159265358979323846264…..

ಇಲ್ಲಿ ಮೊದಲ ಪದ – ಮೊದಲ ದಶಮಾಂಶ ಸ್ಥಾನ ಮತ್ತು ಅಲ್ಲಿರುವ ಮೂರು ಅಕ್ಷರಗಳ ಪದ How, 3ಎನ್ನುವುದನ್ನು ಸೂಚಿಸುತ್ತದೆ. ಮತ್ತಿನದು ೧,  ಆ ಮೇಲಿನದು ನಾಲ್ಕು, ಅಂದ ಹಾಗೆ ಇಷ್ಟು ಸಾಕು! ವಾಕ್ಯವನ್ನು ನೆನಪಿಡಲು ನಾವೇನು ಮಾಡಬೇಕು? – ಇನ್ನೊಂದು ಸೂತ್ರ ಬೇಕಾದೀತು!

ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಆಲ್ಕೋಹಾಲಿಗೂ ಸಂಬಂಧವಿದೆಯೇ?, ತಿಳಿಯದು! ಈ ಸೂತ್ರ ವಾಕ್ಯ ನನಗೆ ನೆನಪಿಸಿದ್ದು  ಶ್ರೇಷ್ಠ ವಿಜ್ಞಾನ ಬರಹಗಾರ ಐಸಾಕ್ ಅಸಿಮೋವ್ ಮಾಡಿದ ಉದ್ಗಾರ

“How I want a drink, alcoholic of course, after the heavy lectures involving quantum mechanics!

ವರ್ಷದ ೩ನೇ ತಿಂಗಳಾದ ಮಾರ್ಚ್ ೧೪, π ಯ ಮೊದಲ ಮೂರು ಸಂಖ್ಯೆಗಳನ್ನು ನಿರೂಪಿಸುತ್ತದೆ (೩.೧೪). ಹಾಗಾಗಿಯೇ ಮಾರ್ಚ್ ೧೪, ಗಣಿತ ಪ್ರಿಯರಿಗೆ  π ಡೇ. ಗಣಿತ ಸಮಸ್ಯೆಗಳ ಸಿಕ್ಕಿನಿಂದ ಹೊರ ಬಂದು ಒಂದಷ್ಟು ಖುಷಿ ಪಡುವ ದಿನ. ಅಥವಾ ಇನ್ನಷ್ಟು ಗಣಿತೀಯ ಸಮಸ್ಯೆಗಳ ಬಗ್ಗೆ ಬಿರುಸಿನಿಂದ ಚರ್ಚಿಸುವ ದಿನ.

ಗಣಿತಕ್ಕೂ ಭೌತವಿಜ್ಞಾನಕ್ಕೂ ನಿಕಟ ಬಾಂಧವ್ಯ. ಮಾರ್ಚ್ ೧೪, ಭೌತ ವಿಜ್ಞಾನ ಆಸಕ್ತರಿಗೆ ಬೇರೊಂದು ಕಾರಣಕ್ಕೆ ಪ್ರಿಯವಾಗುತ್ತದೆ. ವಿಜ್ಞಾನ ಇತಿಹಾಸ ಕಂಡ ಪರಮ ಶ್ರೇಷ್ಠ ಭೌತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಹುಟ್ಟಿದ್ದು ೧೮೭೯, ಮಾರ್ಚ್ ೧೪ರಂದು, ಜರ್ಮನಿಯ ಉಲ್ಮ್ ಎಂಬ ಚಿಕ್ಕ ಪಟ್ಟಣದಲ್ಲಿ.

π ಎಂಬುದೊಂದು ಹೇಗೆ ಮಾಯಾ ಸಂಖ್ಯೆಯೋ ಅದೇ ಬಗೆಯಲ್ಲಿ ಐನ್‌ಸ್ಟೈನ್ ಮಂಡಿಸಿದ ಸಿಧ್ಧಾಂತಗಳು ಕೂಡ ಕಲ್ಪನೆಗೆ ನಿಲುಕದ ಲೋಕವನ್ನು ವಿವರಿಸುತ್ತವೆ.  ಅವರ ವಿಶೇಷ ಸಾಪೇಕ್ಷತಾ ಸಿದ್ಧಾಂತ ನೂತನ ಭತವಿಜ್ಞಾನಕ್ಕೆ ಹೊಸ ಆಯಾಮ ನೀಡಿದರೆ, ಅವರು ನಿಗಮಿಸಿದ ಸರಳ, ಸುಂದರ ಗಣಿತೋಕ್ತಿ, E = Mc2 ಶಕ್ತಿ ಮತ್ತು ದ್ರವ್ಯದ ನಡುವಣ ಅವಿನಾ ಸಂಬಂಧದ ಬಗ್ಗೆ ಹೊಸ ಹೊಳವು ಕೊಟ್ಟಿತು.

ದ್ರವಗಳಲ್ಲಿ ಅಣುಗಳ ಯಾದೃಚ್ಚಿಕ ಚಲನೆಯನ್ನು ವಿವರಿಸುವ ಸಿದ್ಧಾಂತ, ದ್ಯುತಿ ವಿದ್ಯುತ್ ಪರಿಣಾಮದ ವಿವರಣೆ,  ಲೋಹಗಳ ಗ್ರಾಹ್ಯೋಷ್ಣ ಸಿದ್ಧಾಂತ, ಲೇಸರ್ ಕಿರಣಗಳ ಉಪಜ್ಞೆಗೆ ಕಾರಣವಾದ ಪರಿಕಲ್ಪನೆ .. ಹೀಗೆ ಒಂದೇ ಎರಡೇ .. ೧೯೦೫-೧೯೧೫ರ ನಡುವೆ ಐನ್‌ಸ್ಟೈನ್ ನೀಡಿದ ಕೊಡುಗೆಗಳು. ಗುರುತ್ವ, ಆಕಾಶ ಮತ್ತು ಕಾಲಗಳ ಸಂಬಂಧವನ್ನು ಚರ್ಚಿಸುವ ಅವರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ (General Theory of Relativity)  ವಿಶ್ವದ ಹುಟ್ಟು ಮತ್ತು ವಿಕಾಸದ ಕುರಿತಂತೆ ಹೊಸ ಕಲ್ಪನೆ ಕಟ್ಟಿಕೊಡುತ್ತದೆ.

ಇವನೆಂಥ ಮೋಡಿಕಾರ

ಅವರೊಬ್ಬ ಸಂಗೀತ ಪ್ರೇಮಿ, ನಿಸರ್ಗ ಸೌಂದರ್ಯದ ಆರಾಧಕ, ಮುಕ್ತ ಸ್ವಾತಂತ್ರ್ಯದ ಪ್ರತಿಪಾದಕ – ಸಾಗರಕ್ಕೆ ಸಾಗರವೇ ಉಪಮೆಯಾದ ಹಾಗೆ. ಹಾಗಾಗಿಯೇ ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ ಎಮಿಲಿಯೋ ಸೆಗ್ರೆ ಹೇಳಿದ್ದು   “ ಜನಪ್ರಿಯ ಚಿಂತನೆಯಂತೆ ಆಲ್ಬರ್ಟ್ ಐನ್‌ಸ್ಟೈನ್ ಅಂದರೆ ಭೌತವಿಜ್ಞಾನದ ಅವತಾರ. ಈ ಗ್ರಹಿಕೆ ಸುಸಂಗತವಾದದ್ದು. ಇವರು ಸಾರ್ವಕಾಲಿಕ ಸರ್ವಶ್ರೇಷ್ಠ ವಿಜ್ಞಾನಿ”.

ತಿಂಗಳುಗಳ ಹಿಂದೆ – ಅಂದರೆ ಫೆಬ್ರವರಿ೧೪ನ್ನು ವಿರೋಧಗಳ ನಡುವೆಯೂ ವೆಲೆಂಟೈನ್ ಡೇ  ಆಚರಣೆ ನಡೆದಿದೆ. ಹಾಗಿದ್ದರೇಕೆ ಮಾರ್ಚ್ ೧೪ನ್ನು π ದಿನ ಮತ್ತು ಐನ್‌ಸ್ಟೈನರ ಜನ್ಮ ದಿನವೆಂದು ಗೌಜಿಯಿಂದ ಆಚರಿಸಬಾರದು?

ಪೈ ದಿನಕ್ಕೊಂದು ಲಾಂಛನ

ಆಚರಿಸದೇ ಇದ್ದರೆ ಮುಂದಿನ ಬಾರಿ ಆಚರಿಸೋಣ. ಆಗದೇ?

Posted in ವಿಜ್ಞಾನ ಲೇಖನಗಳು

ಭೂಮಿಯ ಚಲನೆ ಋತು ಬದಲಾವಣೆ
ತರಂಗ ಯುಗಾದಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಒಂದಷ್ಟು ಸೇರಿಸಿ ಇಲ್ಲಿರಿಸಿದ್ದೇನೆ. ಯುಗಾದಿಯ ಆಚರಣೆಯ ಹಿನ್ನೆಲೆಯ ಋತು ಬದಲಾವಣೆಯ ಬಗ್ಗೆ ನನ್ನ ಆಸಕ್ತಿ. ನಿಮಗೂ ಆಸಕ್ತಿ ಮೂಡಿಸಿದರೆ ನನ್ನ ಯುಗಾದಿ ಬೆಲ್ಲ ಸವಿಯಾಗುತ್ತದೆ!

ನೀವು www.whether.com ಎಂಬ ಅಂತರ್ಜಾಲ ನೋಡಿದ್ದೀರಾ? ಒಮ್ಮೆ  ಇಣುಕಿ ನೋಡಿ. ಪ್ರಪಂಚದ ಬೇರೆ ಬೇರೆ ದೇಶಗಳ ಸ್ಥಳಗಳ ಹವಾಮಾನ ಮಾಹಿತಿ ನಿಮ್ಮ ಕಂಪ್ಯೂಟರ್ ಪರದೆ ಮೇಲೆ ತೆರೆದುಕೊಳ್ಳುತ್ತದೆ. ಅಲ್ಲಿ ಎಲ್ಲೋ ಕೆಲವೆಡೆ ಬಿರು ಬೇಸಗೆ. ಇನ್ನೆಲ್ಲೋ ಹಿಮ ಪಾತ. ಮತ್ತೆಲ್ಲೋ ವರ್ಷಧಾರೆ. ಕೆಲವು ಪ್ರದೇಶಗಳಲ್ಲಿ ನಿರಭ್ರ ಬಾನು. ಮತ್ತೆ ಹಲವು  ಪ್ರದೇಶಗಳಲ್ಲಿ ಮೋಡ ಮುಸುಕಿದ ಬಿಗುಮಾನ. ಅಂದರೆ ಭೂ ಹವಾಮಾನ ಸ್ಥಾಯಿಯಲ್ಲ,  ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಕ್ರಿಯಾಶೀಲ ಪ್ರಕ್ರಿಯೆ.

ಹವಾಮಾನದ ಈ ವೈವಿದ್ಯತೆಗೆ ಋತುಗಳು (seasons) ಎನ್ನುತ್ತೇವೆ. ಭೂಮಿಯಲ್ಲಿ ಜೀವ ಕೋಟಿ ನಳನಳಿಸಲು ಇಂಥ ಋತು ವೈವಿದ್ಯತೆ ಅಗತ್ಯ. ನಮ್ಮ ಪೂರ್ವೀಕರು ಇಡೀ ವರ್ಷವನ್ನು ಆರು ಋತುಗಳಾಗಿ ವಿಂಗಡಿಸಿದರೆ (ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ), ಜಾಗತಿಕವಾಗಿ ನಾಲ್ಕು ಮುಖ್ಯ ಋತು ಅಥವಾ ಕಾಲಗಳನ್ನು ಗುರುತಿಸಲಾಗುತ್ತದೆ – ಹೇಮಂತ, ಗ್ರೀಷ್ಮ (ಬೇಸಗೆ), ಶರದ್ ಮತ್ತು ಶಿಶಿರ (ಚಳಿ). ಋತುಗಳ ವೈವಿದ್ಯತೆ ಸೂರ್ಯನ ಸುತ್ತ ಭೂಮಿ ಸುತ್ತುವ ಬಗೆಯಲ್ಲಿದೆ. ಅಂದರೆ ಭೂಮಿಯ ಚಲನೆಯಲ್ಲಿದೆ.

ಸಂಕ್ರಾಂತಿ

ದೀರ್ಘವೃತ್ತದ ಕಕ್ಷೆಯಲ್ಲಿ ಸೆಕುಂಡಿಗೆ ೨೯.೮ ಕಿಮೀ ವೇಗದಲ್ಲಿ ಸಾಗುತ್ತ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಭೂಮಿ ತನ್ನದೇ ಅಕ್ಷದಲ್ಲಿಯೂ ಆವರ್ತಿಸುತ್ತಿದೆ – ಬುಗರಿ ಗಿರಕಿ ಹೊಡೆದಂತೆ. ಒಂದು ಆವರ್ತನೆಗೆ ಭೂಮಿಗೆ ತಗಲುವ ಅವಧಿ  ೨೪ ಗಂಟೆಗಳು (ಒಂದು ದಿನ). ಭೂಮಿಯ ಆವರ್ತನಾ ಕಕ್ಷೆ ಸದಾ ಉತ್ತರ ದಿಕ್ಕಿನ ಧ್ರುವ ನಕ್ಷತ್ರದೆಡೆಗೆ ಚಾಚಿಕೊಂಡಿದೆ. ಹಾಗಾಗಿ ನಮ್ಮ ಪಾಲಿಗೆ  ಧ್ರುವ ನಕ್ಷತ್ರ ಸದಾ ಅಚಲ. ಆದರೆ ಸೂರ್ಯ ಸೇರಿದಂತೆ ಗ್ರಹ, ನಕ್ಷತ್ರಾದಿಗಳೆಲ್ಲ ಭೂಮಿ ಸುತ್ತ ತಿರುಗಿದಂತೆ ಭಾಸವಾಗುತ್ತದೆ – ಚಲಿಸುವ ರೈಲಿನಲ್ಲಿ ಕುಳಿತವನಿಗೆ ಹೊರಗಿನ ಮರಗಿಡಗಳು ವಿರುಧ್ಧ ದಿಶೆಯಲ್ಲಿ ಚಲಿಸುವಂತೆ. ಇದು ಸೂರ್ಯನ ಸುತ್ತ ಭೂಮಿಯ  ಪರಿಭ್ರಮಣೆಯ ಪರಿಣಾಮ.

ಸೂರ್ಯ ಚಂದ್ರ ಮತ್ತು ಇತರ ಗ್ರಹಗಳು ಖಗೋಲದಲ್ಲಿ ಯರ್ರಾ ಬಿರ್ರಿಯಾಗಿ ಚಲಿಸುವುದಿಲ್ಲ. ಅವರ ಚಲನೆಗೆ ಒಂದು ನಿಯತಿ ಇದೆ. ಪೂರ್ವ – ಪಶ್ಚಿಮದ ದಿಕ್ಕಿನಲ್ಲಿ ನಿರ್ದಿಷ್ಟ ಪಥದಲ್ಲಿಯೇ ಸಾಗುತ್ತದೆ ಇವರ ಮೆರವಣಿಗೆ.  ಈ ಪಥಕ್ಕೆ ಕ್ರಾಂತಿವೃತ್ತ (ecliptic) ಎಂದು ಹೆಸರು. ಕ್ರಾಂತಿ ವೃತ್ತವನ್ನು (ಮೂವತ್ತು ಡಿಗ್ರಿ ವ್ಯಾಪ್ತಿಯ) ಹನ್ನೆರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಈ ಭಾಗದಲ್ಲಿ ಯಾದೃಚ್ಚಿಕವಾಗಿ ಪರಸ್ಪರ ಸಂಬಂಧವಿಲ್ಲದಷ್ಟು ದೂರ ದೂರಕ್ಕೆ ಹರಡಿ ಹೋಗಿರುವ ನಕ್ಷತ್ರಗಳಲ್ಲಿ ನಮ್ಮ ಪೂರ್ವೀಕರು ಬಗೆ ಬಗೆಯ ಆಕಾರಗಳನ್ನು ಕಂಡರು;  ಅದ್ಭುತ ಪೌರಾಣಿಕ ಕಥೆ ಹೊಸೆದರು. ಇಂಥ ನಕ್ಷತ್ರಗಳ ಗುಂಪಿಗೆ ರಾಶಿ ಎಂದು ಹೆಸರು. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ- ಇವೇ ದ್ವಾದಶ ರಾಶಿಗಳು.

ಸೂರ್ಯ ಯಾವ ನಿರ್ದಿಷ್ಟ ರಾಶಿಯಲ್ಲಿರುತ್ತಾನೋ ಆ ರಾಶಿಗೆ ಸೌರಮಾಸ ಎನ್ನುತ್ತಾರೆ.  ಅಂದರೆ ಸೂರ್ಯ ಇಂದು ಉದಯಿಸುವ ಹೊತ್ತಿಗೆ ಮೇಷ ರಾಶಿಯಲ್ಲಿದ್ದರೆ ಆ ಮಾಸವೇ ಮೇಷ ಮಾಸ. ತಿಂಗಳಿನ ನಂತರ ಸೂರ್ಯ ವೃಷಭ ರಾಶಿಗೆ ಪ್ರವೇಶಿಸುತ್ತಾನೆ.   ವಾಸ್ತವವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯ ಪ್ರವೇಶಿಸುವ ಹಂತಕ್ಕೆ ಸಂಕ್ರಮಣ (ದಾಟು) ಅಥವಾ ಸಂಕ್ರಾಂತಿ ಎನ್ನುತ್ತಾರೆ. ಅಂದರೆ ಒಂದು ವರ್ಷದಲ್ಲಿ ಹನ್ನೆರಡು ಸಂಕ್ರಾಂತಿಗಳಿರುತ್ತವೆ. ಕೆಲವು ಸಂಕ್ರಾಂತಿಗಳಿಗೆ ವಿಶೇಷತೆಯನ್ನು ಆರೋಪಿಸಿ ನಾವು ಹಬ್ಬವಾಗಿ ಆಚರಿಸುತ್ತೇವೆ – ಬೇರೆ ಬೇರೆ ಕಾರಣಗಳಿಗಾಗಿ. ಉದಾಹರಣೆಗೆ,  ಮಕರ ಸಂಕ್ರಾಂತಿ ಇಂಥದೊಂದು ಧಾರ್ಮಿಕ ಹಬ್ಬ.

ಭೂಮಿಯ ಆವರ್ತನಾ ಅಕ್ಷ ಅದರ ಪರಿಭ್ರಮಣೆಯ ತಲಕ್ಕೆ ಲಂಬವಾಗಿಲ್ಲ. ಹಾಗೊಂದು ವೇಳೆ ಇದ್ದಿದ್ದರೆ ಭೂಮಿಯ ಎಲ್ಲ ಕಡೆ ಹಗಲು ಮತ್ತು ಇರುಳಿನ ಅವಧಿ ಸಮಾನವಾಗಿರುತ್ತಿತ್ತು (೧೨ ಗಂಟೆಗಳು). ಋತು ಬದಲಾವಣೆ  ಇರುತ್ತಿರಲಿಲ್ಲ. ಆದರೆ ಭೂಮಿ ಲಂಬರೇಖೆಯಿಂದ ಸುಮಾರು ೨೩.೫ ಡಿಗ್ರಿಯಷ್ಟು ವಾಲಿಕೊಂಡು ಆವರ್ತಿಸುತ್ತಿದೆ.

ಭೂಮಿಯಿಂದ ೧೫೦ಮಿಲಿಯ ಕಿಮೀ  ದೂರದಲ್ಲಿರುವ ಸೂರ್ಯನಿಂದ ಬೆಳಕೂ ಸೇರಿದಂತೆ  ವಿಕಿರಣಗಳು ಭೂಮಿ ಕಡೆಗೆ ಸಮಾಂತರವಾಗಿ ಬಂದರೂ, ಭೂಮಿಯ ಮಾಲಿಕೊಂಡ ಆವರ್ತನೆಯಿಂದಾಗಿ  ವಾಯುಮಂಡಲವನ್ನು ಓರೆಯಾಗಿಯೇ ಪ್ರವೇಶಿಸುತ್ತವೆ. ಈ ಕಾರಣದಿಂದಲೇ  ಭೂಮಿಯ ಎಲ್ಲ ಕಡೆ ಒಂದೇ ಹವಾಮಾನವಿಲ್ಲ.

ಒಂದು ಪ್ರದೇಶದ ಹಾವಾಗುಣ ಆ ಪ್ರದೇಶದ ಅಕ್ಷಾಂಶ, ಸೂರ್ಯ ಕಿರಣಗಳು ತಲುಪುವ ಕೋನ, ಉಷ್ಣತೆಯ ವಿಸರಣೆ, ವಾಯುಮಂಡಲದ ದಟ್ಟತೆ, ಮಾನವ ಕೃತ ಮಾಲಿನ್ಯಗಳ ಸೇರ್ಪಡೆ. ಮುಂತಾದ ಹಲವು ಅಂಶಗಳ ಮೇಲೆ ನಿರ್ಧಾರವಾಗುತ್ತದೆ. ಇದೊಂದು ಸಂಕೀರ್ಣ, ಅದರೆ ಅಧ್ಯಯನ ಯೋಗ್ಯ ವಿದ್ಯಮಾನ.

ಉತ್ತರಾಯಣ

ಸೂರ್ಯ ಎಂದೂ ಸೋಮಾರಿಯಲ್ಲ. ಪ್ರತಿದಿನ  ಮುಂಜಾನೆ ಆರು ಗಂಟೆಯ ಸುಮಾರಿಗೆ ಸೂರ್ಯ ಮೂಡುತ್ತಾನೆ ಪೂರ್ವ ದಿಕ್ಕಿನ ದಿಗಂತದಲ್ಲಿ.  ಹೊತ್ತು ಕಳೆದಂತೆ ಬಾನಂಗಣದಲ್ಲಿ ಮೇಲೇರುತ್ತಾನೆ. ನಡು ಮಧ್ಯಾಹ್ನ ನೆತ್ತಿಯ ಮೇಲೆ ಕೋರೈಸುತ್ತಾನೆ. ಸಂಜೆ ಆರರ ಸುಮಾರಿಗೆ ದಿಗಂತದಂಚಿನಲ್ಲಿ ಮುಳುಗಿದಾಗ ನಿಶೆ ಆವರಿಸುತ್ತದೆ – ನಶೆ ಏರಿಸುವ ಮಂದಿಗಾಗಿಯೋ ಎಂಬಂತೆ.

ಧ್ರುವ ನಕ್ಷತ್ರವನ್ನು ನಿರ್ದೇಶಿಸಿಕೊಂಡು, ಪ್ರದಕ್ಷಿಣಾಕಾರದಲ್ಲಿ ತೊಂಬತ್ತು ಡಿಗ್ರಿ ತಿರುಗಿದರೆ ಪೂರ್ವದ ದಿಕ್ಕನ್ನು ನಾವು ನಿಖರವಾಗಿ ಗುರುತಿಸಬಹುದು. ಪ್ರತಿದಿನವೂ ಸೂರ್ಯ ಮೂಡುವ ಪೂರ್ವದ ಈ ಬಿಂದುವನ್ನು  ಗುರುತಿಸುತ್ತ ಹೋದರೆ, ಕೆಲವೇ ದಿನಗಳಲ್ಲಿ ಈ ಬಿಂದು ತುಸು ತುಸುವೇ ವಿಚಲನೆಗೊಳ್ಳುವುದು ಸ್ಪಷ್ಟವಾಗುತ್ತದೆ.

ಈ ಉದಯದ ಬಿಂದು ವರ್ಷದ ಆರು ತಿಂಗಳು ಪೂರ್ವದಿಂದ ತುಸು ಉತ್ತರದ ಬದಿಗೂ, ಇನ್ನುಳಿದ ಆರು ತಿಂಗಳು ಪೂರ್ವದ ದಕ್ಷಿಣ ಬದಿಗೂ ಇರುತ್ತದೆ. ಸೂರ್ಯೋದಯದ ಬಿಂದುವಿನ ಉತ್ತರ – ದಕ್ಷಿಣ ಸರಿತಕ್ಕೆ  ಅಯನ ಎಂದು ಹೆಸರು. ಪೂರ್ವದಿಂದ ಉತ್ತರಕ್ಕೆ ಸೂರ್ಯ ಸರಿಯುವ ಅವಧಿಗೆ ಉತ್ತರಾಯಣ ಮತ್ತು ದಕ್ಷಿಣದ ಕಡಿಗೆ ಸರಿಯುವ ಅವಧಿಗೆ ದಕ್ಷಿಣಾಯನ ಎನ್ನುತ್ತಾರೆ.

ಪ್ರತೀ ಮಾರ್ಚ್ ೨೧ (ಅಥವಾ ೨೨ರಂದು) ನಮ್ಮ ಸೂರ್ಯ ಅತ್ಯಂತ ಕರಾರುವಾಕ್ಕಾಗಿ ಪೂರ್ವ ದಿಕ್ಕಿನಲ್ಲಿ ಮೂಡುತ್ತಾನೆ ಮತ್ತು ಪಶ್ಚಿಮದಲ್ಲಿ ಕಂತುತ್ತಾನೆ. ಅಂದು ಹಗಲು ಮತ್ತು ರಾತ್ರೆಯ ಅವಧಿ ಸಮಾನವಾಗಿರುತ್ತದೆ (ಹನ್ನೆರಡು ಗಂಟೆಗಳು). ಮಾರ್ಚ ೨೧ರ ನಂತರದ ದಿನಗಳಲ್ಲಿ ಸೂರ್ಯೋದಯದ ಬಿಂದು ನಿಧಾನವಾಗಿ ಉತ್ತರದ ಕಡೆಗೆ ಸರಿಯುತ್ತದೆ. ಇದು ವಸಂತ ಋತು ಮತ್ತು ಉತ್ತರಾಯಣದ ಆರಂಭ.

ಸೌರ ಚಲನೆ

ಇದೀಗ ಭೂಮಿಯ ಉತ್ತರಾರ್ಧ ಗೋಲವು ಸೂರ್ಯಭಿಮುಖವಾಗಿ ವಾಲಿಕೊಂಡಿದ್ದು, ಆ ಭಾಗಕ್ಕೆ ಸೂರ್ಯನ ಕಿರಣಗಳು ಅಧಿಕ ಕೋನದಲ್ಲಿ ಪಾತವಾಗುತ್ತವೆ. ಹಾಗಾಗಿ ಉತ್ತರಾರ್ಧ ಗೋಲದಲ್ಲಿ ಅಧಿಕ ತಾಪ ಮತ್ತು ದೀರ್ಘ ಹಗಲಿನ ಬೇಸಗೆ ವ್ಯಾಪಿಸುತ್ತದೆ. ಸೂರ್ಯನ ಈ ಸರಿತ ಮುಂದುವರಿಯುತ್ತ, ಮೂರು ತಿಂಗಳಿನಲ್ಲಿ ೨೩.೫ ಡಿಗ್ರಿಗಳಷ್ಟು ಸರಿದು ಅಂದರೆ ಜೂನ್ ೨೧ರಂದು (ಅಧಿಕ ವರ್ಷದ ಕಾರಣದಿಂದ ಕೆಲವೊಮ್ಮೆ ಜೂನ್ ೨೨) ಪೂರ್ವದಿಂದ ಗರಿಷ್ಠ ಉತ್ತರ ದಿಕ್ಕಿನ ಬಿಂದುವನ್ನು ತಲುಪುತ್ತದೆ.  ಅಂದು ಉತ್ತರಾರ್ಧಗೋಲದಲ್ಲಿ ಅತೀ ದೀರ್ಘ ಹಗಲು.

ಬಳಿಕ ಮತ್ತೆ ಸೂರ್ಯನ ಸರಿತ ಪೂರ್ವದ ಕಡೆಗೆ ಸಾಗುತ್ತದೆ. ಹಗಲಿನ ಅವಧಿ ಕುಂಠಿತವಾಗುತ್ತ ಮೂರು ತಿಂಗಳುಗಳ ಬಳಿಕ – ಅಂದರೆ ಸಪ್ಟೆಂಬರ್ ೨೧ರಂದು ನಿಖರ ಪೂರ್ವ ಬಿಂದನ್ನು ತಲುಪುತ್ತಾನೆ. ಇದೀಗ ಮತ್ತೆ ಹಗಲು ಹಾಗೂ  ಇರುಳುಗಳ ಅವಧಿ ಸಮಾನವಾಗುತ್ತದೆ.

ನಂತರ ಸೂರ್ಯೋದಯದ ಬಿಂದು ದಕ್ಷಿಣದ ಕಡೆಗೆ ಸರಿಯುತ್ತದೆ. ಇದು ದಕ್ಷಿಣಾಯನದ ಪ್ರಾರಂಭ. ಈಗ ಉತ್ತರಾರ್ಧ ಗೋಲದ ಭಾಗಗಳಲ್ಲಿ – ಅಂದರೆ ನಮ್ಮಲ್ಲಿಯೂ – ಹಗಲಿಗಿಂತ ರಾತ್ರೆ ದೀರ್ಘವಾಗುತ್ತ ಹೋಗುತ್ತದೆ. ಡಿಸೆಂಬರ್ ೨೧ರಂದು ೨೩.೫ ಡಿಗ್ರಿಗಳಷ್ಟು ಸರಿದ ಸೂರ್ಯೋದಯದ ಬಿಂದು ದಕ್ಷಿಣದ ತುದಿ ತಲಪುತ್ತದೆ. ಇದೀಗ ದಕ್ಷಿಣಾರ್ಧ ಗೋಲದಲ್ಲಿ ದೀರ್ಘ ಹಗಲಿನ ಬೇಸಗೆಯ ದಿನಗಳು. ಉತ್ತರಾರ್ಧ ಗೋಲದಲ್ಲಾದರೋ ದೀರ್ಘ ಇರುಳಿನ ಚಳಿಯ ಕಾಲ ಅಥವಾ ಶಿಶಿರ ಋತು.

ಆಮೇಲಿನ ದಿನಗಳಲ್ಲಿ ಮತ್ತೆ ಸೂರ್ಯೋದಯದ ಬಿಂದು ಪೂರ್ವದ ಕಡೆಗೆ ಸರಿಯುತ್ತ ಮಾರ್ಚ್ ೨೧ರಂದು ನಿಖರ ಪೂರ್ವದ ಬಿಂದುವನ್ನು ತಲುಪುತ್ತದೆ. ಇದು ದಕ್ಷಿಣಾಯನದ ಕೊನೆ ಅಥವಾ ಉತ್ತರಾಯಣದ ಮತ್ತು ಬೆಚ್ಚಗಿನ ವಸಂತ ಋತುವಿನ ಆರಂಭ. ಹೀಗೆ ಸೂರ್ಯೋದಯದ ಬಿಂದು ಒಂದು ವರ್ಷದಲ್ಲಿ ಒಂದು ಆಂದೋಲನ ಮುಗಿಸುತ್ತದೆ. ಈ ಆಂದೋಲನ ನಿರಂತರ ಸಾಗಿದೆ – ಋತುಗಳೂ ಕೂಡ.

ಭಾರತ ಭೂಮಧ್ಯ ರೇಖೆಯ ಉತ್ತರದ ಬದಿಯಲ್ಲಿ,  ಅಂದರೆ ಉತ್ತರಾರ್ಧ ಗೋಲದಲ್ಲಿದೆ. ಹಾಗಾಗಿಯೇ ಉತ್ತರಾಯಣ ಕಾಲದಲ್ಲಿ ಇಲ್ಲಿ ಬೆಚ್ಚನೆಯ ಹವೆ,  ಸಾಕಷ್ಟು ಮಳೆ, ಚೆನ್ನಾದ ಬೆಳೆ, ಹಸಿರಿನಿಂದ ಚಿಗಿಯುವ ಇಳೆ,  ಲವಲವಿಕೆಯಲ್ಲಿ ನಲಿಯುವ ಪ್ರಕೃತಿ. ಈ ಅವಧಿ ಸಮೃದ್ಧಿಯ ಸಂಭ್ರಮದ ಕಾಲ. ಕಡು ಚಳಿಯ ಹಿಮಾಲಯದಲ್ಲೂ ಅಹ್ಲಾದಕರ ಹವೆ. ನಮಗೆ ಹಿಮಾಲಯದ ಗಂಗೋತ್ರಿಯೇ ಸ್ವರ್ಗವೆಂಬ ಕಲ್ಪನೆ ಅನಾದಿಯಿಂದ ಬಂದದ್ದು.  ಅಂಥ ಗಂಗೋತ್ರಿಯೂ ಸಹಾಸಿಗರಿಗೆ ಉತ್ತರಾಯಣದಲ್ಲಿ ತೆರೆದುಕೊಳ್ಳುತ್ತದೆ. ಅರ್ಥಾತ್ ಸ್ವರ್ಗದ ಹೆಬ್ಬಾಗಿಲು ತೆರೆಯುತ್ತದೆ ಆಸ್ತಿಕರಿಗೆ!

ಹಾಗಾಗಿಯೇ ಇರಬೇಕು ಉತ್ತರಾಯಣದ ಆರಂಭ “ಯುಗಾದಿ” ಅಥವಾ  ಹೊಸ ವರ್ಷದ ಹಬ್ಬವಾಗಿ  ನಮ್ಮ ಸಂಸ್ಕೃತಿಯಲ್ಲಿ ಮೂಡಿ ಬಂತು. ನಿಸರ್ಗ ಮತ್ತು ಜನಜೀವನದ ಅನ್ಯಾನ್ಯ ಅನ್ಯೋನ್ಯತೆಗೆ ಇದೊಂದು ನಿದರ್ಶನ.

ದಕ್ಷಿಣಾಯನ ಅವಧಿಯಲ್ಲಿ ಚಳಿಗಾಲ. ಹಿಮ ಸುರಿಯುತ್ತದೆ ಹಿಮಾಲಯದಲ್ಲಿ. ಸ್ವರ್ಗದ ಬಾಗಿಲು ಮುಚ್ಚಿಕೊಳ್ಳುತ್ತದೆ, ಹಾಗಾಗಿಯೇ ದಕ್ಷಿಣಾಯನ ಕಾಲದಲ್ಲಿ ಶರಶಯ್ಯೆಯಲ್ಲಿ ಒರಗಿದ ಭೀಷ್ಮ ಕಾದದ್ದು ಉತ್ತರಾಯಣಕ್ಕಾಗಿ !

ಭೂಮಿಯ ಆವರ್ತನೆ ಧ್ರುವ ಪ್ರದೇಶಗಳಲ್ಲಿ ಇನ್ನಷ್ಟು ವಿಚಿತ್ರ ಪರಿಸ್ಥಿತಿಯನ್ನು ನಿರ್ಮಿಸಿದೆ. ಉತ್ತರಾರ್ಧಗೋಲದ ಬೇಸಗೆಯ ದಿನಗಳಲ್ಲಿ,  ಉತ್ತರ ಧ್ರುವ ಪ್ರದೇಶದಲ್ಲಿ ದಿನದ ಬಹು ಪಾಲು ದಿಗಂತದಲ್ಲಿ ಸೂರ್ಯ ಹೊಳೆಯುತ್ತಲೇ  ಇರುತ್ತಾನೆ. ಜೂನ್ ೨೧ರಂದು ಅಲ್ಲಿ ೨೪ಗಂಟೆಗಳ ಹಗಲು. ಇದೇ ಸಮಯದಲ್ಲಿ ದಕ್ಷಿಣ ಧ್ರುವ ಪ್ರದೇಶದಲ್ಲಾದರೋ ತದ್ವಿರುದ್ಧ ಪರಿಸ್ಥಿತಿ. ಅಲ್ಲಿ ವ್ಯಾಪಿಸುತ್ತದೆ ಕಡು ಚಳಿಗಾಲದ ಸುದೀರ್ಘ ರಾತ್ರೆಗಳು. ಇದನ್ನಲ್ಲವೇ ಅನ್ನುವುದು “ಏನು ವಿಸ್ಮಯ ಸೃಷ್ಟಿ!?”

ಚಾಂದ್ರ ಯುಗಾದಿ

ಭಾರತದ ಉತ್ತರ ಭಾಗಗಳಲ್ಲಿ ಸೌರ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾಗಗಳಲ್ಲಿ ಚಾಂದ್ರ ಯುಗಾದಿಯ ಆಚರಣೆಯಲ್ಲಿದೆ. ಇದು ಭೂಮಿ ಸುತ್ತ ಪರಿಭ್ರಮಿಸುತ್ತಿರುವ ಚಂದ್ರನ ಗತಿಯನ್ನು ಅನುಸರಿಸಿ ಬಂದ ಪದ್ಧತಿ.  ಮೂರು ಲಕ್ಷದ ಎಂಬತ್ತ ನಾಲ್ಕು ಸಾವಿರ ಕಿಮೀ ದೂರದಲ್ಲಿರುವ ಚಂದ್ರ ತನ್ನ ಸುತ್ತ ಆವರ್ತಿಸುತ್ತ ಭೂಮಿ ಸುತ್ತ ಪರಿಭ್ರಮಿಸುತ್ತಿದೆ – ಭೂಮಿ ಸೂರ್ಯನ ಸುತ್ತ ಸುತ್ತುವ ಹಾಗೆಯೇ.  ದೊಡ್ಡವರ ಸುತ್ತ ಸಣ್ಣವರು ಸುಳಿದಾಡುವುದು ಜಗದ ವ್ಯಾಪಾರವೋ ಏನೋ.

ಸುಮಾರು ಮೂವತ್ತು ದಿನಗಳಲ್ಲಿ ಚಂದ್ರ ಒಂದು ಪರಿಭ್ರಮಣೆಯನ್ನು ಮುಗಿಸುತ್ತಾನೆ. ಆಶ್ಚರ್ಯವೆಂದರೆ ಚಂದ್ರನ ಪರಿಭ್ರಮಣಾವಧಿಯೂ ಆವರ್ತನಾವಧಿಯೂ ಸರಿ ಸುಮಾರಾಗಿ ಒಂದೇ. ಈ ಕಾರಣದಿಂದಲೇ ಚಂದ್ರನ ಒಂದು ಪಾರ್ಶ್ವವಷ್ತೇ ನಮಗೆ ಗೋಚರವಾಗುತ್ತದೆ. ಈ ಭಾಗ ಗೋಚರವಾಗುವುದಾದರೂ ಹೇಗೆ? ಸೂರ್ಯನ ಬೆಳಕು ಪ್ರತಿಫಲಿಸಲ್ಪಡುವುದರಿಂದ.

ಸೂರ್ಯ ಭೂಮಿ ಮತ್ತು ಚಂದ್ರರ ಸ್ಥಾನಗಳನ್ನು ಅವಲಂಬಿಸಿ ಗೋಚರ ಚಂದನ ಬಿಂಬ ಬದಲಾಗುತ್ತ ಹೋಗುತ್ತದೆ. ಪ್ರಕಾಶಮಾನವಾಗಿ ಪರಿಪೂರ್ಣ ಗೋಲಾಕೃತಿಯ ಚಂದ್ರ ದರ್ಶನವಾಗುವ ದಿನವೇ ಹುಣ್ಣಿಮೆ. ಅಂದು  ಕಾಣಿಸುತ್ತಾನೆ. ಸೂರ್ಯ ಭೂಮಿ ಮತ್ತು ಚಂದ್ರ ಸರಿಸುಮಾರು ಒಂದೇ ರೇಖೆಯಲ್ಲಿ ಬರುತ್ತಾರೆ. ಹಾಗಾಗಿಯೇ ಸೂರ್ಯನ ಬೆಳಕು ಚಂದ್ರನ ಅತ್ಯಧಿಕ ಭಾಗದಿಂದ ಪ್ರತಿಫಲಿತವಾಗಿ ಚಂದ್ರ ಪೂರ್ಣ ಪ್ರಮಾಣದಲ್ಲಿ ಬೆಳಗುತ್ತಾನೆ. ಬೆಳದಿಂಗಳ ಇರುಳು ಅಪ್ಯಾಯಮಾನ. ಅಲ್ಲಿಂದ ಮುಂದೆ ಚಂದ್ರನ ಬೆಳಗುವ ಭಾಗ ಕುಂದುತ್ತ ಹೋಗುತ್ತದೆ , ಬೆಳದಿಂಗಳೂ  ಕೂಡ. ಹದಿನೈದು ದಿನಗಳ ನಂತರ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನೆ.  ಅಂದು ಚಂದ್ರ ನಮ್ಮಿಂದ ಪೂರ್ಣ ಮರೆಯಾಗುತ್ತಾನೆ. ಇದುವೇ ಅಮವಾಸ್ಯೆ. ಕಾರಿರುಳು ಮುಸುಕುವ ರಾತ್ರೆ. ನಭದಲ್ಲಿ ಮಿನುಗುವ ನಕ್ಷತ್ರಗಳಷ್ಟೇ ಬೆಳಕು ನೀಡುತ್ತವೆ ಒಂದಿಷ್ಟು. ಇದು ಇನ್ನಷ್ಟು ಆಪ್ಯಾಯಮಾನ!

ಅಮವಾಸ್ಯೆಯ ಮುಂದಿನ ದಿನಗಳಲ್ಲಿ ಚಂದ್ರನ ಪ್ರಕಾಶ ಮತ್ತೆ ಹೆಚ್ಚುತ್ತ ಹೋಗುತ್ತದೆ. ಮತ್ತೆ ಹದಿನೈದು ದಿನಗಳಲ್ಲಿ ಪ್ರಕಾಶಮಾನ ಚಂದ್ರ ಗೋಚರಿಸುತ್ತಾನೆ. ಒಂದು ಅಮವಾಸ್ಯೆಯಿಂದ ಹುಣ್ಣಿಮೆಯ ತನಕದ ಹದಿನೈದು ದಿನಗಳ ಅವಧಿಯನ್ನು ಶುಕ್ಲ ಪಕ್ಷವೆಂದೂ, ಹುಣ್ಣಿಮೆಯಿಂದ ಅಮವಾಸ್ಯೆಯ ತನಕದ ಮುಂದಿನ ಹದಿನೈದು ದಿನಗಳನ್ನು ಕೃಷ್ಣಪಕ್ಷವೆಂದೂ ಕರೆಯುತ್ತಾರೆ.

ಅಂದ ಹಾಗೆ ಪರಿಪೂರ್ಣ ಅಮವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಿದರೆ, ಪರಿಪೂರ್ಣ  ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುತ್ತದೆ. ಆದರೆ ಎಲ್ಲ ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಈ ಗಗನ ರೋಚಕ ವಿದ್ಯಮಾನ ಸಂಭವಿಸುವುದಿಲ್ಲ. ಇದಕ್ಕೆ ಬಲು ಮುಖ್ಯ ಕಾರಣ ಭೂಮಿ, ಚಂದ್ರರ ಕಕ್ಷಾತಲಗಳು ಒಂದೇ ಆಗಿರದೇ ಇರುವುದು.

ಎರಡು ಅಮವಾಸ್ಯೆಗಳ ನಡುವಣ ಕಾಲಾವಧಿಯ ಮೂವತ್ತು ದಿನಗಳೇ ಚಾಂದ್ರಮಾಸ.  ಇಂಥ ಹನ್ನೆರಡು ಮಾಸಗಳೇ ಚಾಂದ್ರ ವರ್ಷ. ಚಾಂದ್ರವರ್ಷದ ಪ್ರಥಮ ಮಾಸಕ್ಕೆ ಚೈತ್ರ ಎಂದು ಹೆಸರು. ನಂತರದ ತಿಂಗಳುಗಳು ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಪಾಲ್ಗುಣ. ಕೃಷ್ಣ ಪಕ್ಷ ಮುಗಿದು ಶುಕ್ಲಪಕ್ಷ ಪ್ರಾರಂಭವಾಗುವ ಚೈತ್ರಮಾಸದ ಪ್ರಥಮ ದಿನವೇ ಚಾಂದ್ರಮಾನ ಯುಗಾದಿ. ಅದು ಇಂದು ಬಂದಿದೆ. ಹಬ್ಬದ ಸಂಭ್ರಮ ತಂದಿದೆ.

ಮನುಷ್ಯನೂ ಸೇರಿದ ಹಾಗೆ ಪ್ರಾಣಿ ಪ್ರಬೇಧಗಳು. ಪ್ರಕೃತಿಯ ಭಾಗವಾದ ಇವೆಲ್ಲವೂ ಬದಲಾಗುವ ಋತುಗಳಿಗೆ ಪ್ರತಿಕ್ರಿಯಿಸುತ್ತವೆ. ನಾವು ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮ ಆಹಾರ, ವಿಹಾರಗಳ ಮೇಲೆ ಋತುಗಳ ಗಾಢ ಪರಿಣಾಮವಿದೆ.  ರೈತರ ಜೀವನ ಋತು ವೈವಿದ್ಯಕ್ಕೆ ಕೈಗನ್ನಡಿ. ನೆಲ ಉತ್ತು ಬೀಜ ಬಿತ್ತಿ, ನೀರುಣಿಸಿ ಬೆಳೆಸಿದ  ಪೈರಿನ ಕಟಾವು ಮಾಡಿ, ಧಾನ್ಯದ ದಾಸ್ತಾನು ಇಡುವ ತನಕ… ಎಲ್ಲ ಕೃಷಿ ಕಾರ್ಯಗಳಲ್ಲಿ ತಿಳಿದೋ ತಿಳಿಯದೆಯೋ ಋತುಗಳ ಪ್ರಭಾವ ಇದೆ.  ಹಾಗೆಯೇ ಹಬ್ಬ, ಹುಣ್ಣಿಮೆ, ಜಾತ್ರೆ, ದುಡಿಮೆಗಳಲ್ಲಿಯೂ.

ಋತು ವೈವಿದ್ಯಕ್ಕೆ ಕಾರಣವಾದ ಭೂಮಿಯ ವಾಲಿಕೊಂಡ ಆವರ್ತನೆಗೆ ಕಾರಣವೇನು? ಸರಿಯಾದ ವಿವರಣೆ ಇನ್ನೂ ಸಿಕ್ಕಿಲ್ಲ. ಕೆಲವು ಖಗೋಳ ವಿಜ್ಞಾನಿಗಳು ಹೇಳುವಂತೆ ಸುಮಾರು ೪೫೦ ಕೋಟಿ ವರ್ಷಗಳಷ್ಟು ಹಿಂದೆ, ಭೂಮಿ ಇನ್ನೂ ಶೈಶವಾವಸ್ಥೆಯಲ್ಲಿದ್ದ ಸಂದರ್ಭ. ಮಂಗಳ ಗ್ರಹದಷ್ಟು ದೊಡ್ಡದಾದ ಆಕಾಶಕಾಯ ಬಂದು ಭೂಮಿಗೆ ಡಿಕ್ಕಿ ಹೊಡೆಯಿತು. ಈ ಹರಾಕಿರಿಯಲ್ಲಿ ಭೂಮಿಯ ಆಕೃತಿ ಓರೆಯಾಗದೇ ಹೋದರೂ ಆವರ್ತನೆ ಮಾತ್ರ ಓರೆಯಾಯಿತು.  ಕಾರಣಗಳು ಏನೇ ಇರಲಿ. ಈ ಬಗೆಯ ಆವರ್ತನೆ ಇಲ್ಲದೇ ಹೋಗಿದ್ದರೆ ಋತು ವೈವಿದ್ಯತೆ ಇರುತ್ತಿರಲಿಲ್ಲ ಎನ್ನುವುದು ಸ್ಪಷ್ಟ. ಆಗ ಧ್ರುವ ಪ್ರದೇಶಗಳು ಸದಾ ಕತ್ತಲಲ್ಲಿ, ಇನ್ನಷ್ಟು ಕಡು ಚಳಿಯಲ್ಲಿ ಅಡಗಿರುತ್ತಿತ್ತು. ಸಮಭಾಜಕ ವೃತ್ತ ಭಾಗಗಳಲ್ಲಿ ಅಸಹನೀಯ ತಾಪದ ದಳ್ಳುರಿ ಇರುತ್ತಿತ್ತು.

ಭೂಮಿಯ ಆವರ್ತನೆಯ ವಾಲುವಿಕೆ ೨೩.೫ ಡಿಗ್ರಿಯ ಬದಲಿಗೆ ಮತ್ತಷ್ಟು ಹೆಚ್ಚಾಗಿದ್ದರೆ ಬೇರೆಯೇ ಸಮಸ್ಯೆ ಕಾಡುತ್ತಿತ್ತು. ಆಗ ಋತುಗಳು ಅತ್ಯಂತ ತೀವ್ರವಾಗುತ್ತಿದ್ದುವು – ಪ್ರಾಯಶ: ಯುರೇನಸ್ ಗ್ರಹದಂತೆ.  (ಇದರ ವಾಲುವಿಕೆ ೯೭.೭ ಡಿಗ್ರಿ! ). ಅಲ್ಲಿ ಒಮ್ಮೆ ಚಳಿಗಾಲ ಪ್ರಾರಂಭವಾದರೆ ನಲುವತ್ತೆರಡು ವರ್ಷಗಳ ಕಾಲವೂ ಕಡು ಚಳಿಗಾಲ !

Posted in ಖಗೋಳವಿಜ್ಞಾನ, ವಿಜ್ಞಾನ ಲೇಖನಗಳು

ಗುಳೇ ಹೊರಟ ಬಿಸಿಸಿಐ – ಮಾನ ಹರಾಜಿಗೆ
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೇಟ್  ಪಂದ್ಯಾಟ ನೂರಕ್ಕೆ ನೂರು ನಮ್ಮ ದೇಶದ ಉಸಾಬಾರಿ.  ಕಳೆದ ಬಾರಿ ಇದು ದೇಶದ ಉದ್ದಗಲಕ್ಕೆ ನಡೆದು ಅತ್ಯಂತ ಯಶಸ್ವಿಯಾಗಿ. ಹಣದ ಕೊಳ್ಳೆಯೇ ಹೊಡೆದುಕೊಂಡಿತು. ಆಟಗಾರರೆಲ್ಲರನ್ನು ಹರಾಜಿಗಿಡುವ ಹೊಸ ಬಗೆ ಆರಂಭವಾದದ್ದು ಎಲ್ಲರಿಗೂ ತಿಳಿದಿದೆ.

ಟೆಸ್ಟ್ ಕ್ರಿಕೇಟ್ ಮತ್ತು ಸೀಮಿತ ಓವರುಗಳ ಕ್ರಿಕೇಟಿನ ಹೊಸ ಅವತಾರವಾಗಿ ಉದಯಿಸಿದ ಈ ಇಪ್ಪತ್ತು ಓವರುಗಳ ಹೊಡಿ-ಬಡಿ ಹೋರಾಟದ ಕ್ರಿಕೇಟ್  ರೋಚಕವಾಗಿರುತ್ತವೆ  ಎನ್ನುವುದಕ್ಕೆ ಕಳೆದ ಬಾರಿಯ ಹಲವು ಪಂದ್ಯಗಳು ಸಾಕ್ಷಿಯಾದುವು. ಹಣದ ಬಲದ ಮಾಲಿಕತ್ವ,ಈಗಾಗಲೇ ಕ್ರಿಕೇಟಿನಲ್ಲಿ ಸ್ವಾಮ್ಯವನ್ನು ಸ್ಥಾಪಿಸಿದಂಥ ಅತಿರಥರು ಇರುವ ತಂಡ ಈ ಹೊಸ ಅವತರಣಿಕೆಯ ಕ್ರಿಕೇಟಿನಲ್ಲಿ ಗೆಲ್ಲಲೇಬೇಕೆನ್ನುವ ಖಾತರಿಯೇನೂ ಇಲ್ಲ – ಎನ್ನುವುದು ಪಂದ್ಯಗಳು ಸಾಗಿದಂತೇ ಸಾಬೀತಾಗುತ್ತ ಹೋದುವು.  ಇಂಥ ಇನ್ನಿಲ್ಲದಂಥ  ಅನಿಶ್ಚಿತತೆಯೇ ಪಂದ್ಯಾಟದ ಯಶಸ್ಸಿಗೆ ಕಾರಣವಾಯಿತು ಪ್ರಾಯಶ:!

ಇದರೊಡನೆ ಮದಿರೆ ಮತ್ತು ಮಾನಿನಿಯರ ಹುಚ್ಚು ಹಾರಾಟಗಳು ಕೂಡ ನಡೆದುವು.  ಅದರೊಡನೆ ತಳಕು ಹಾಕಿಕೊಂಡ ಜಾಹೀರಾತುಗಳ ಇನ್ನಿಲ್ಲದ ಭರಾಟೆ.    ಇವೆಲ್ಲ  – ಬೇಕೋ, ಬೇಡವೋ ಎನ್ನುವ ಆಯ್ಕೆ ನಮ್ಮ ನಿಮ್ಮದಲ್ಲ – ಅದೆಲ್ಲ ಈಗ ಬಿಸಿಸಿಐದ್ದು. ಅದು ಹೇಳುತ್ತದೆ ಪ್ರೇಕ್ಷಕರಿಗೆ ಇದು ಬೇಕೆಂದು – ಎಷ್ಟೋ ಬಾರಿ ಒಂದು ಪತ್ರಿಕೆ ಓದುಗರಿಗೆ ಇದುವೇ ಬೇಕೆಂದು ನಿರ್ಧರಿಸುವಂತೆ.

ಇನ್ನೇನು ಈ ಬಾರಿಯ ಪಂದ್ಯಾಟ ಪ್ರಾರಂಭವಾಗಬೇಕು ಎನ್ನುವಾಗ ಪಾಕಿಸ್ತಾನದಲ್ಲಿ ನಡೆದ ರಕ್ತಪಾತದ ಘಟನೆ ಎಚ್ಚರಿಕೆಯ  ಘಂಟೆ ಬಾರಿಸಿತು. ಲಂಕಾ ಆಟಗಾರರ ಮೇಲಣ ಆ ದಾಳಿಗೆ ಕ್ರಿಕೇಟ್ ಕಂಪಿಸಿತು. ಬಿಸಿಸಿಐ ಹಣದ ಸೂರೆ ಹೊಡೆಯುತ್ತ ದಿನೇ ದಿನೇ ಉಬ್ಬುತ್ತಿರುವಾಗ, ಎಲ್ಲವನ್ನು ಹದ್ದು ಬಸ್ತಿನಲ್ಲಿಡುವ ಅಂತಾರಾಷ್ತ್ರೀಯ ಕ್ರಿಕೇಟ್ ಮಂಡಳಿಗೆ ಕಣ್ಣು ಕೆಂಪಾದದ್ದು ಅಸಹಜವೇನೂ ಅಲ್ಲ. ಅದು ಸಮಯ ಕಾಯುತ್ತಿತ್ತು. ಅಂಥ ಸಮಯ ಇದೀಗ ಪ್ರಾಪ್ತವಾಯಿತು. ಅದು ಅಪಸ್ವರ ಪ್ರಾರಂಭಿಸಿತು. ಭಾರತದಲ್ಲಿ ಕ್ರಿಕೇಟ್ ಆಟ ನಡೆದರೆ ಕ್ರಿಕೇಟಿಗರಿಗೆ ರಕ್ಷಣೆ ನೀಡುವ ಬಗ್ಗೆ ಅದು ಧ್ವನಿ ಎತ್ತಿತು.

ಹಾಗೆ ನೋಡಿದರೆ ಇದು ಅಸಹಜವೇನೂ ಅಲ್ಲ. ಲಾಹೋರ್ ಘಟನೆಗಿಂತ ಮುಂಚೆ ಮುಂಬಯಿಯಲ್ಲಿ ನಡೆದ ಘಟನೆಯೂ ಭಾರತದಲ್ಲಿ ಕ್ರಿಕೇಟಿಗರಿಗೆ ಅಭಧ್ರತೆಯ ಭಾವ ಮೂಡಿಸುವುದಕ್ಕೆ ಕಾರಣವಾಗಿರಬಹುದು. ಆದರೆ ಪ್ರಶ್ನೆ ಇದಲ್ಲ. ಪ್ರಶ್ನೆ ಇರುವುದು ಬಿಸಿಸಿಐ ಭಾರತದಿಂದ ಹೊರಕ್ಕೆ ಈ ಪಂದ್ಯಗಳನ್ನು ಆಡುವುದಕ್ಕೆ ನಿಶ್ಚಯ ಮಾಡಿರುವುದು ಸರಿಯೇ ಎನ್ನುವುದು.

ಹೇಳಿ ಕೇಳಿ ಈ ಪಂದ್ಯಗಳು ಭಾರತದ್ದು. ಭಾರತದ ಕಂಪೆನಿಯ ಮಾಲಿಕರಾದ  ಮಲ್ಯ, ಅಂಬಂಬಾನಿಗಳು, ಬೆಳ್ಳಿ ತೆರೆಯ ನಟ ನಟಿಯರಾದ ಶಾರುಕ್ ಖಾನ್, ಪ್ರೀತಿ ಝಿಂಟಾ, ಶಿಲ್ಪಾಶೆಟ್ಟಿ ಮೊದಲಾದವರ ನೇತೃತ್ವ ವಹಿಸಿದ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಿವೆ. ರಾಜ್ಯಗಳನ್ನು ಅಥವಾ ಪ್ರಾಂತ್ಯಗಳನ್ನು ಸೂಚಿಸುವ ತಂಡಗಳಲ್ಲಿ ನಮ್ಮ ದೇಶದ ಹರಾಜಿನಲ್ಲಿ ಆಯ್ಕೆಯಾದ  ಆಟಗಾರರು ಮತ್ತು  ಒಂದಷ್ಟು ವಿದೇಶೀಯರು. ಹೀಗಿರುವಾಗ ಈ ಪಂದ್ಯಾಟವನ್ನು ಭಧ್ರತೆಯ ಕಾರಣ ಕೊಟ್ಟು ದಕ್ಷಿಣ ಆಫ್ರೀಕಕ್ಕೆ ಅಥವಾ ಇಂಗ್ಲೆಂಡಿಗೆ ಸ್ಥಾನಾಂತರಿಸಲು ಬಿಸಿಸಿಐ ಆಲೋಚಿಸಿದ್ದು ಎಷ್ಟು ಸರಿ? ಇಂಗ್ಲೆಂಡ್ ಪ್ರಾರಂಭದಲ್ಲಿ ಈ ಆಟಕ್ಕೆ ಎದುರು ಹೇಳಿತ್ತು. ತನ್ನ ಆಟಗಾರರಿಗೆ ಪಂದ್ಯಾಟದಲ್ಲಿ ಆಡದಂತೆ ತಾಕೀತೂ ಮಾಡಿತ್ತು. ಆದರೆ ಬಿಸಿಸಿಐಗೆ ಇದ್ಯಾವುದೂ ಬೇಕಾಗಿಲ್ಲ. ಟಿವಿ ಪ್ರಸಾರದ ಮೂಲಕ ತನ್ನ ತಿಜೋರಿ ತುಂಬಿಸುವ ಬಗ್ಗೆ ಮಾತ್ರ ಅದರ ಚಿಂತೆ, ಚಿಂತನೆ.

ಯಾವಾಗ ಭಾರತದಲ್ಲಿ ಚುನಾವಣೆಯ ದಿನಗಳು ಘೋಷಣೆಯಾದುವೋ ಈ ವರ್ಷದ ಐಪಿಎಲ್ ಪಂದ್ಯಾಟಕ್ಕೆ ಕಂಟಕ ಎದುರಾಯಿತು. ಚುನಾವಣೆಯನ್ನೇ ಆಟ ಮುಗಿದ ಮೇಲೆ – ಮಳೆಗಾಲದಲ್ಲಿ ಆದರೂ ಚಿಂತಿಲ್ಲ – ನಡೆಸುವಂತೆ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಬಿಸಿಸಿಐ ಪ್ರಾರಂಭದಲ್ಲಿ ಒತ್ತಡ ತಂದಿತು. ಆದರೆ ಅದಾಗಲಿಲ್ಲ. ಬೇರೆ ಬೇರೆ ರಾಜ್ಯಗಳ ಸರಕಾರಗಳೊಡನೆ, ಅಧಿಕಾರ ವರ್ಗದೊಡನೆ ಭಧ್ರತೆಯ ಕುರಿತಂತೆ ಸಾಕಷ್ಟು ಚರ್ಚೆ ನಡೆದುವು. ಇಲ್ಲೆಲ್ಲ ಎಷ್ಟು ಹಣದ ವ್ಯವಹಾರದ ಕುರಿತು ಬಿಸಿಸಿಐ ಮತ್ತು ಇವುಗಳ ನಡುವೆ ಚರ್ಚೆ ನಡೆದು ತೀರ್ಮಾನಗಳು ಮುರಿದು  ಬಿದ್ದುವೋ  ತಿಳಿಯದು. ಅಂತೂ ರಾಜ್ಯಗಳು ಚುನಾವಣೆಯ ಕಾರಣ ಕೊಟ್ಟು ಸಾಕಷ್ಟು ಭಧ್ರತೆ ಕೊಡಲು ನಿರಾಕರಿಸಿವೆ. ಇದು ಒಂದು ಬಗೆಯಲ್ಲಿ ನ್ಯಾಯವಾದದ್ದೇ.  ಬಿಸಿಸಿಐ ಪಂದ್ಯಾಟವನ್ನು ಬೇರೆಯೇ ಬಗೆಯಲ್ಲಿ – ಕೆಲವೇ ಪಂದ್ಯಗಳ ಮೂಲಕ – ನಡೆಸಬಹುದಾಗಿತ್ತು. ಅದೂ ಆಗದಿದ್ದರೆ ಪಂದ್ಯವನ್ನು ಈ ಬಾರಿ ನಡೆಸದೇ ಹೋಗಬಹುದಾಗಿತ್ತು. ಚಿಟ್ಟು ಹಿಡಿಯುವಷ್ಟು ಕ್ರಿಕೇಟ್ ಆಟಗಳು ಆಟಗಾರರಿಗೆ ಮತ್ತು ಅದಕ್ಕಿಂತ ಹೆಚ್ಚಿಗೆ ಕ್ರೀಂಡಾಂಗಣದಲ್ಲಿ ಹಾಗೂ  ಮನೆಯಲ್ಲೇ ಕುಳಿತು ಬಿಡುಗಣ್ಣರಾಗಿ ಟಿವಿಯ ಒಳಗೆ ನಿಟ್ಟಿಸುವ ಪ್ರೇಕ್ಷಕರ ಆರೋಗ್ಯಕ್ಕೂ ಒಳ್ಲೆಯದಲ್ಲ.

ಆದರೆ  ಬಿಸಿಸಿಐ ಇಡೀ ಪಂದ್ಯಾಟವನ್ನೇ ಬೇರೆ ದೇಶಕ್ಕೆ ಸ್ಥಾನಾಂತರಿಸುವ, ಗುಳೇ ಹೋಗುವ ಮಾನಗೇಡಿ ನಿರ್ಧಾರಕ್ಕೆ ಬರುವ ಮೂಲಕ ಭಾರತದ  ಅಸಾಮರ್ಥ್ಯವನ್ನು  ಜಗಜ್ಜಾಹೀರು ಮಾಡಿದೆ. ಕಾಂಚನದ ಹಿಂದೆ ಬಿದ್ದಿರುವ ಬಿಸಿಸಿಐ ಕುರುಡಾಗಿದೆ. ಆಟಕ್ಕಿಂತ ದುಡ್ಡು ಮಾತ್ರ ಅದಕ್ಕೆ ಮುಖ್ಯವಾಗುತ್ತಿದೆ. ಈ  ದೋಷಕ್ಕೆ ಸರಕಾರ ಚಿಕಿತ್ಸೆ  ಮಾಡಬೇಕಾಗಿದೆ. ಆದರೆ  ಸರಕಾರವೇ ಇಲ್ಲ.  ಇದ್ದರೂ ಅದು ಇರುತ್ತದೆ ಹಣದಲ್ಲಿ ಕೊಬ್ಬಿದ ಬಿಸಿಸಿಐಯ ಮುಷ್ಟಿಯಲ್ಲಿ.

ಅಂದ ಹಾಗೆ ರಕ್ಷಣೆಯ ಕಾರಣಕ್ಕೆ ಚುನಾವಣೆಯನ್ನೂ ದಕ್ಷಿಣ ಆಫ್ರೀಕಾದಲ್ಲಿ ನಡೆಸಿದರೆ ಹೇಗೆ?

Posted in ಸ್ವಗತಗಳು